Home Archive by category ಕರಾವಳಿ (Page 64)

ಕದ್ರಿ ಭೌಧದಿಂದ ಮಾಧ್ವಕ್ಕೆ

ಸಂಕ್ರಾಂತಿಯೊಂದಿಗೆ ನಾನಾ ದೈವ ದೇವರುಗಳ ಉತ್ಸವ ಗರಿಗೆದರುತ್ತದೆ. ಮಂಗಳೂರಿನ ಕದ್ರಿ ಆಲಯದಲ್ಲೂ ಉತ್ಸವದ ರಂಗು ಎದ್ದಿದೆ. ಹಿಂದೆಲ್ಲ ದೈವ ದೇವರುಗಳ ಉತ್ಸವ ಎಂದರೆ ಕೆಂಪು ಬಿಳಿಯ ಬಟ್ಟೆಯ ಅಲಂಕಾರ ಇರುತ್ತಿತ್ತು. ಈಗೆಲ್ಲ ಕೇಸರಿ ವಿಜಯ; ಭಗವಾ ಬಾವುಟ. ಕದ್ರಿ ಮಂಜುನಾಥ ಎಂದಾಗ ಕದರಿಕಾ ವಿಹಾರ ಎನ್ನುವರು. ಈ ಕದ್ರ, ಕದ್ರಾ, ಕದರಿ ಎಂಬ ಸ್ಥಳನಾಮ ಉತ್ತರ ಕನ್ನಡ

ಸಂಗಬೆಟ್ಟು: ಸಾರ್ವಜನಿಕ ರಸ್ತೆ ಸಂಚಾರಕ್ಕೆ ತಡೆ

ಬಂಟ್ವಾಳ: ಸಾರ್ವಜನಿಕ ರಸ್ತೆಗೆ ತಡೆವೊಡ್ಡಿದ ಪ್ರಕರಣವೊಂದು ಸಂಗಬೆಟ್ಟು ಗ್ರಾಮದಲ್ಲಿ ನಡೆದಿದ್ದು ಆರೋಪಿತರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಪರಿಸರದ ನಿವಾಸಿಗಳು ಆಗ್ರಹಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಸಂಗಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಗಾಡಿ ಪಲ್ಕೆ ಮುಗೇರು ಎಂಬಲ್ಲಿ ನೂರಾರು ವರ್ಷಗಳ ಕಾಲದಿಂದ ಸಾರ್ವಜನಿಕರು, ಶಾಲಾ ಮಕ್ಕಳು, ನಿತ್ಯ ವ್ಯವಹಾರ ವಹಿವಾಟುಗಳಿಗೆ ಹೋಗುವವರು, ಸ್ಥಳೀಯ ವಿಷ್ಣುಮೂರ್ತಿ ದೇವಸ್ಥಾನಕ್ಕೆ

ಹೆಮ್ಮಾಡಿ: ಆರ್ಯ ಬಿಲ್ಡ್ ಕೇರ್ ಸಂಸ್ಥೆ ಉದ್ಘಾಟನೆ

ಕುಂದಾಪುರ ತಾಲೂಕಿನ ಹೆಮ್ಮಾಡಿಯಲ್ಲಿ ಆರ್ಯ ಬಿಲ್ಡ್ ಕೇರ್ ಸಂಸ್ಥೆಯ ಉದ್ಘಾಟನಾ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು. ಸಂಸ್ಥೆಯ ಉದ್ಘಾಟನಾ ಕಾರ್ಯಕ್ರಮದ ಅಂಗವಾಗಿ ವಿವಿಧ ರೀತಿಯ ಧಾರ್ಮಿಕ ಕಾರ್ಯಕ್ರಮಗಳು ಜರುಗಿತು. ಉತ್ತಮ ಗುಣಮಟ್ಟದ ಸೇವೆಯನ್ನು ನೀಡುವುದರ ಜತೆಗೆ ಯುವ ಜನತೆಗೆ ಉದ್ಯೋಗವಕಾಶವನ್ನು ಮಾಡಿಕೊಡುವುದು ಸಂಸ್ಥೆಯ ಮೂಲ ಉದ್ದೇಶವಾಗಿದೆ.ಎಮಿಯೆಂಟೆಕ್ ಸಿಎಂಡಿ ಸಿಜಿತ್ ಆರ್ಯ ಬಿಲ್ಡ್ ಕೇರ್ ಸಂಸ್ಥೆಯನ್ನು ಉದ್ಘಾಟಿಸಿ ಮಾತನಾಡಿ,ಸಾರ್ವಿನ್ ಪ್ಲಾಸ್ಟ್

*ಬಂಟ್ವಾಳ: ತುಂಬೆಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ, ಆಮಂತ್ರಣ ಪತ್ರಿಕೆ ಬಿಡುಗಡೆ

ಬಂಟ್ವಾಳ: ತುಂಬೆ ನೇತ್ರಾವತಿ ನದಿ ತೀರದಲ್ಲಿ ಸುಮಾರು ೫ಕೋಟಿ ವೆಚ್ಚದಲ್ಲಿ ಪುನರ್ ನಿರ್ಮಾಣ ಗೊಂಡಿರುವ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಫೆ.೧೩ರಿಂದ ೨೩ರವರೆಗೆ ದೇವರ ಪುನರ್ ಪ್ರತಿಷ್ಠೆ, ಅಷ್ಟಬಂಧ ಬ್ರಹ್ಮಕಲಶೋತ್ಸವ, ಧ್ವಜಸ್ತಂಭ ಪ್ರತಿಷ್ಠೆ ಸಹಿತ ವಾರ್ಷಿಕ ಜಾತ್ರಾ ಮಹೋತ್ಸವವು ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿ ಮಾರ್ಗದರ್ಶನದಲ್ಲಿ ನಡೆಯಲಿದೆ ಎಂದು ಜೀರ್ಣೋದ್ದಾರ ಮತ್ತು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಚಂದ್ರಪ್ರಕಾಶ್ ಶೆಟ್ಟಿ ತುಂಬೆ ಹೇಳಿದರು.

ಮಂಗಳೂರು: ಆಶಾ ಕಿರಣ ಟ್ರಸ್ಟ್‌ನಿಂದ ನೀಡಲ್ಪಡುವ ಕೊಠಡಿಗೆ ಭೂಮಿ ಪೂಜೆ

ಆಶಾ ಕಿರಣ ಟ್ರಸ್ಟ್ ವತಿಯಿಂದ ಲೋಕನಾಥ್ ಮೆಂಡನ್ ಅವರು ನಿರ್ಮಿಸಿ ಕೊಡುವ ನೂತನ ಕೊಠಡಿಯ ಭೂಮಿ ಪೂಜೆ ಕಾರ್ಯಕ್ರಮವು ನೆರವೇರಿತು. ಈ ಕಾರ್ಯಕ್ರಮದಲ್ಲಿ ಲೋಕನಾಥ್ ಮೆಂಡನ್ ಹಾಗೂ ಅವರ ಕುಟುಂಬಸ್ಥರು, ಆಶಾ ಕಿರಣ್ ಟ್ರಸ್ಟ್ ನ ಕುಸುಮ್, ಕೇಶವ ಕರ್ಕೇರ ಬೆಂಗ್ರೆ, ಬೆಂಗ್ರೆ ಮಹಿಳಾ ಸಭಾ ಅಧ್ಯಕ್ಷರಾದ ತಿಲೋತ್ತಮ, ವೀರ ಭಾರತಿ ವ್ಯಾಯಾಮ ಶಾಲೆ ಅಧ್ಯಕ್ಷರಾದ ಉತ್ತಮ್ ಅಮೀನ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರು ಹಾಗೂ ಬೆಂಗ್ರೆ ವಿದ್ಯಾರ್ಥಿ ಸಂಘ ಹಾಗೂ ಯುವಕಮಂಡಲದ

ಪುತ್ತೂರು: ಈಶ್ವರಮಂಗಲದ ಮೇನಾಲ ದರ್ಗಾಗೆ ಶಾಸಕ ಅಶೋಕ್ ರೈ ಭೇಟಿ

ಪುತ್ತೂರು: ಈಶ್ವರಮಂಗಲ ಮೇನಾ ಮಖಾಂ ದರ್ಗಾ ಶರೀಫ್‌ಗೆ ಪುತ್ತೂರು ಶಾಸಕರಾದ ಅಶೋಕ್ ರೈ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ದರ್ಗಾದ ನೂತನ ಕಟ್ಟಡ ಉದ್ಘಾಟನಾ ಕಾರ್ಯಕ್ರಮ ಇತ್ತೀಚೆಗೆ ನಡೆದಿತ್ತು. ಈ ಸಂದರ್ಭದಲ್ಲಿ ಮಸೀದಿಯ ಧರ್ಮಗುರುಗಳಾದ ಜಮಾಲುದ್ದೀನ್ ತಂಙಳ್ ದುಗ್ಗಲಡ್ಕ, ನೆಟ್ಟಣಿಗೆ ಮುಡ್ನೂರು ವಲಯ ಕಾಂಗ್ರೆಸ್ ಅಧ್ಯಕ್ಷರಾದ ಮೂಸಾನ್, ನೆಟ್ಟನಿಗೆ ಮುಡ್ನೂರು ಗ್ರಾಪಂ ಸದಸ್ಯರಾದ ಶ್ರೀರಾಂ ಪಕ್ಕಳ, ಅಕ್ರಮಸಕ್ರಮ ಸಮಿತಿ ಸದಸ್ಯರಾದ ಮಹಮ್ಮದ್ ಬಡಗನ್ನೂರು

ಕಡಬ: ಕೋಡಿಂಬಾಳದಲ್ಲಿ ರೈಲ್ವೇ ಹಳಿ ಸಮೀಪ ಆತ್ಮಹತ್ಯೆಗೆ ಶರಣಾದ ನಿವೃತ್ತ ರೈಲ್ವೇ ಉದ್ಯೋಗಿ

ಕೋಡಿಂಬಾಳ ದಲ್ಲಿ ನಿವೃತ್ತ ರೈಲ್ವೇ ಉದ್ಯೋಗಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಕೋಡಿಂಬಾಳ ಗ್ರಾಮದ ಗುಂಡಿಮಜಲು‌ ನಿವಾಸಿ ಮಾಧವ ರೈ ( 62 ವ) ಆತ್ಮಹತ್ಯೆ ಮಾಡಿಕೊಂಡವರು. ಕೋಡಿಂಬಾಳದ ರೈಲು ಮಾರ್ಗದ ಸಮೀಪ ಗೇರು ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿ ಯಲ್ಲಿ ಪತ್ತೆಯಾಗಿದೆ .ಮೃತದೇಹವನ್ನು ಕಡಬ ಸರಕಾರಿ ಆಸ್ಪತ್ರೆಗೆ ಮರಣೊತ್ತರ ಪರೀಕ್ಷೆಗೆ ತರಲಾಗಿದೆ. ಮೃತರು ಕೋಡಿಂಬಾಳದ ಅಯಪ್ಪ ಭಜನಾ ಮಂದಿರದ ಸೇವಾ ಕಾರ್ಯದಲ್ಲಿಯೂ ಸಕ್ರಿಯವಾಗಿ

ನೆಲ್ಯಾಡಿ: ಸಂತ ಅಲ್ಫೋನ್ಸ ಚರ್ಚ್ ನಲ್ಲಿ ಟೀನ್ಸ್ ಹೀರೊ ಹದಿಹರೆಯದ ಮಕ್ಕಳ ಪಾಲನೆ ಬೆಳವಣಿಗೆ ಕಾರ್ಯಗಾರ

ನೆಲ್ಯಾಡಿ: ನೆಲ್ಯಾಡಿ ಸಂತ ಅಲ್ಫೋನ್ಸ ಚರ್ಚ್ ನಲ್ಲಿ ಸಮಕಾಲಿನ ಪ್ರಪಂಚದಲ್ಲಿ ಹದಿ ಹರೆಯದ ತರುಣ ತರುಣಿಯರು ಎದುರಿಸುವ ಸಮಸ್ಯೆಗಳು ಮಕ್ಕಳ ಪಾಲನೆ ಮತ್ತು ಲಾಲಾನೇಯಲ್ಲಿ ಪೋಷಕರ ಪಾಡು ಈ ವಿಷಯದಲ್ಲಿ ಒಂದು ದಿನದ ಸೈಕಲಾಜಿಕಲ್ ಕಾರ್ಯಗಾರವನ್ನು ಆಯೋಜಿಸಲಾಯಿತು. ಸುಮಾರು ನೂರ ಐವತ್ತು ಟೀನ್ಸ್ ಮತ್ತು ಅವರ ತಾಯಂದಿರು ಈ ಶಿಬಿರದಲ್ಲಿ ಬಾಗವಹಿಸಿ ಮಾಹಿತಿ ಪಡೆದು ಕೊಂಡರು. ಹದಿಹರೆಯದ ತರುಣ ತರುಣಿಯರ ಮಾನಸಿಕ ಹಾಗೂ ವ್ಯಕ್ತಿತ್ವದ ಆರೋಗ್ಯ ಪರಿಪಾಲನೆ, ಹೊಂದಾಣಿಕೆ ಮತ್ತು

ನೆಲ್ಯಾಡಿ:ಸೌತಡ್ಕ ಮಹಾಗಣಪತಿ ಕ್ಷೇತ್ರಕ್ಕೆ ಕ್ರಿಕೆಟಿಗ ಕೆ.ಎಲ್.ರಾಹುಲ್ ಭೇಟಿ

ನೆಲ್ಯಾಡಿ: ಬಯಲು ಆಲಯ ಎಂದೇ ಪ್ರಖ್ಯಾತಿ ಪಡೆದಿರುವ ಕೊಕ್ಕಡ ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತಕ್ಕೆ ಭಾರತ ಕ್ರಿಕೆಟ್ ತಂಡದ ಆಟಗಾರ ಕೆ.ಎಲ್.ರಾಹುಲ್ ಭೇಟಿ ನೀಡಿ ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ರಾಹುಲ್ ಅವರನ್ನು ಕ್ಷೇತ್ರದ ವತಿಯಿಂದ ಗೌರವಿಸಲಾಯಿತು. ದೇವಸ್ಥಾನದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶ್ರೀನಿವಾಸ ಹಾಗೂ ಅರ್ಚಕರು ಉಪಸ್ಥಿತರಿದ್ದರು.

ಮೂಡುಬಿದಿರೆ : ಕ್ಯಾನ್ಸರ್ ಜಾಗೃತಿ ಕಾರ್ಯಾಗಾರ, ಐವರು ನಾಟಿ ವೈದ್ಯರಿಗೆ ಸಮ್ಮಾನ

ಮೂಡುಬಿದಿರೆ : ಇಲ್ಲಿನ ಕೃಷಿ ವಿಚಾರ ವಿನಿಮಯ ಕೇಂದ್ರ ಹಾಗೂ ಮೂಡುಬಿದಿರೆ ಕೋ-ಆಪರೇಟಿವ್ ಸರ್ವಿಸ್ ಸೊಸೈಟಿ ಇವುಗಳ ಆಶ್ರಯದಲ್ಲಿ ಸೊಸೈಟಿಯ ಕಲ್ಪವೃಕ್ಷ ಸಭಾಭವನದಲ್ಲಿ ‘ಕ್ಯಾನ್ಸರ್ ಜಾಗೃತಿ’ ಕಾರ್ಯಾಗಾರ ನಡೆಯಿತು.ವಿದ್ಯಾಗಿರಿಯ ಆಳ್ವಾಸ್ ನಿರಾಮಯ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕಿ ಡಾ| ಸುರೇಖಾ ಪೈ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿಸಕಾಲದಲ್ಲಿ ಹಿತ ಮಿತ ಆಹಾರ ಸೇವನೆ, ಮುಂಜಾನೆ ಸಂಜೆ ವಿಹಾರ, ವ್ಯಾಯಾಮ, ಮಾನಸಿಕ