ಪಡುಬಿದ್ರೆಯ ಸಾಂತೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಕಾಪು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗುರ್ವೆ ಸುರೇಶ್ ಶೆಟ್ಟಿ ಅವರು ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದ್ದಾರೆ.ಬಳಿಕ ಅವರು ಕಾರ್ಯಕರ್ತರೊಂದಿಗೆ ಸಭೆ ನಡೆಸಿದ್ರು. ಮುಂದಿನ ದಿನಗಳಲ್ಲಿ ಈ ಕ್ಷೇತ್ರದಲ್ಲಿ ಇನ್ನಷ್ಟು ಅಭಿವೃದ್ಧಿ ಆಗುವ ನಿಟ್ಟಿನಲ್ಲಿ ನನಗೆ ಅವಕಾಶ ನೀಡಿ ಎಂದು ಮನವಿ ಮಾಡಿದ್ರು.
ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಬಜರಂಗದಳ ನಿಷೇಧದ ಕುರಿತು ಕಾಪು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿ ಅವರು ಕಿಡಿಕಾರಿದರು. ಅವರು ವಿ4 ನ್ಯೂಸ್ ನೊಂದಿಗೆ ಮಾತನಾಡಿ, ಬಜರಂಗದಳ ಸಂಘಟನೆಯ ಮುಖಾಂತರ ಅಕ್ರಮ ದನ ಸಾಗಾಟ ಹಾಗೂ ಲವ್ ಜಿಹಾದ್ ವಿರುದ್ಧ ಹೋರಾಟ ಮಾಡಲಾಗುತ್ತಿದೆ. . ಇಂತಹ ಸಂಘಟನೆಯನ್ನು ನಿಷೇಧಕ್ಕೆ ಮುಂದಾಗುತ್ತಿರುವ ಸರಿಯಲ್ಲ.ಇದು ಕಾಂಗ್ರೆಸ್ ಅವನತಿ ಹೋಗುತ್ತದೆ ಎಂಬುದಕ್ಕೆ ಇದುವೇ ಸಾಕ್ಷಿಯಾಗಿದೆ ಎಂದು ಅವರು
ಚುನಾವಣಾ ಪ್ರಚಾರದ ಅಂಗವಾಗಿ ಬಿಜೆಪಿ ಅಭ್ಯರ್ಥಿ ಉಮಾನಾಥ ಕೋಟ್ಯಾನ್ ಅವರು ಗುರುವಾರದಂದು ಶಿರ್ತಾಡಿ ಜಿ.ಪಂ.ಕ್ಷೇತ್ರದ ಬೆಳುವಾಯಿ, ದರೆಗುಡ್ಡೆ ಮತ್ತು ಅಳಿಯೂರು ಪೇಟೆಗಳಲ್ಲಿ ಮತಯಾಚಿಸಿದರು. ಮಂಡಲ ಅಧ್ಯಕ್ಷರಾದ ಸುನೀಲ್ ಆಳ್ವ, ಪಂಚಾಯತ್ ಸದಸ್ಯರುಗಳು, ಕಾರ್ಯಕರ್ತರಾದ ಸುಕೇಶ್ ಶೆಟ್ಟಿ, ಅಶ್ವತ್ಥ್ ಪಣಪಿಲ, ಹಿಂದೂ ಜಾಗರಣ ವೇದಿಕೆಯ ಸಮಿತ್ ರಾಜ್ ದರೆಗುಡ್ಡೆ ಮತ್ತಿತರರು ಈ ಸಂದರ್ಭದಲ್ಲಿದ್ದರು.
ಬೈಂದೂರು: ಕನ್ನಡ ಚಲನಚಿತ್ರ ಕ್ಷೇತ್ರ ನಟ ಪ್ರಮೋದ್ ಶೆಟ್ಟಿಯವರು ಬೈಂದೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗುರುರಾಜ ಘಂಟಿಹೊಳೆಯವರ ಪರವಾಗಿ ವಿವಿಧಡೆ ಕಾಲ್ನಡಿಗೆಯಲ್ಲಿ ಸಾಗಿ ಮತಯಾಚಿಸಿದರು. 2008 ರಿಂದ ಗುರುರಾಜ್ ಗಂಟೆ ಹೊಳೆಯವರ ಒಡನಾಡಿಯಾಗಿದ್ದ ಇವರು ಕಷ್ಟದ ದಿನಗಳಲ್ಲಿ ಒಬ್ಬರಿಗೊಬ್ಬರು ಜೊತೆಯಾಗಿದ್ದರು ಆ ಕಾರಣದಿಂದ ಅವರಿಬ್ಬರ ಸ್ನೇಹವೂ ಗಟ್ಟಿಯಾಗಿತ್ತು ಯಾವುದೇ ಪಕ್ಷದೊಂದಿಗೂ ಗುರುತಿಸಿಕೊಳ್ಳದ ಪ್ರಮೋಶೆಟ್ಟಿಯವರು ತನ್ನ ಸ್ನೇಹಿತನ ವ್ಯಕ್ತಿತ್ವ
ಆಲೂರು : ಕಳೆದ 40 ವರ್ಷಗಳಿಂದಲೂ ಸಹ ಬಿಜೆಪಿಯ ಕಾರ್ಯಕರ್ತನಾಗಿ ತಳಮಟ್ಟದಿಂದ ತಾಲೂಕಿನಲ್ಲಿ ಪಕ್ಷಕಟ್ಟಲು ಸಮವಹಿಸುತ್ತಿದ್ದ ಹಿರಿಯ ಮುಖಂಡರಾದ ಧರ್ಮರಾಜ್ ಬಿಜೆಪಿ ತೊರೆದು ಭವಾನಿ ರೇವಣ್ಣ ರವರ ಸಮ್ಮುಖದಲ್ಲಿ ಜೆಡಿಎಸ್ ಸೇರ್ಪಡೆಯಾದರು.ಆಲೂರಿನಲ್ಲಿ ಜೆಡಿಎಸ್ ಕಾರ್ಯಕರ್ತರು ಹಾಗೂ ಶಾಸಕರು ನಡೆಸಿದ ರೋಡ್ ಶೋನಲ್ಲಿ ಭಾಗವಹಿಸಿದ ಭವಾನಿ ರೇವಣ್ಣ ರವರ ಸಮ್ಮುಖದಲ್ಲಿ ಹಲವಾರು ಜೆಡಿಎಸ್ ಕಾರ್ಯಕರ್ತರ ಎದುರು ಧರ್ಮರಾಜ್ ರವರು ಬಿಜೆಪಿ ತೊರೆದು ಜೆಡಿಎಸ್ ಸೇರ್ಪಡೆಯಾದರು
ಮಂಗಳೂರು: ಸುಸ್ಥಿರ, ಸುವ್ಯವಸ್ಥಿತ ಮತ್ತು ಸಮನ್ವಯದ ಅಭಿವೃದ್ಧಿ ಕಾರ್ಯಗಳಿಗಾಗಿ ಕರ್ನಾಟಕದಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರಕಾರವನ್ನು ಪುನರಾಯ್ಕೆ ಮಾಡುವುದು ನಿಶ್ಚಿತವಾಗಿದೆ ಎಂದು ಬಿಜೆಪಿಯ ರಾಷ್ಟ್ರೀಯ ವಕ್ತಾರ ಗೋಪಾಲಕೃಷ್ಣ ಅಗರ್ವಾಲ್ ಪ್ರತಿಪಾದಿಸಿದರು. ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತವನ್ನು 5 ಟ್ರಿಲಿಯನ್ ಡಾಲರ್ ಗಾತ್ರದ ಅರ್ಥವ್ಯವಸ್ಥೆಯನ್ನಾಗಿ ಅಭಿವೃದ್ಧಿಪಡಿಸುವ ಪ್ರಧಾನಿ ನರೇಂದ್ರ ಮೋದಿ ಅವರ
ಬಂಟ್ವಾಳ : ಮತೀಯವಾದಿ, ಫ್ಯಾಸಿಸ್ಟರಿಂದ ದೇಶಕ್ಕೆ ಅಪಾಯವಿದೆ. ಒಂದೇ ದೇಶ, ಒಂದೇ ಪಕ್ಷ, ಒಂದೇ ನಾಯಕತ್ವ ಎಂಬರ್ಥದಲ್ಲಿ ಬಿಜೆಪಿಗರು ಮಾತನಾಡುತ್ತಿದ್ದಾರೆ. ಇದು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ ಮುನ್ಸೂಚನೆಯಾಗಿದೆ. ಹೀಗಾಗಿ ಸಮಾನ ಮನಸ್ಕರು ಒಂದಾಗಿ ಚುನಾವಣೆ ಎದುರಿಸಬೇಕು ಎಂದು ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದರು. ಅವರು ಬಂಟ್ವಾಳದಲ್ಲಿ ನಡೆದ ಸಿಪಿಐ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದರು. ಎಡಪಂಥಿಯ ಚಿಂತನೆಗಳು ಹಾಗೂ
ಉಳ್ಳಾಲ : ಮೇ 10 ರಂದು ನಡೆಯುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಎಸ್.ಡಿ.ಪಿ.ಐ ಪಕ್ಷಕ್ಕೆ ಕ್ಷೇತ್ರದಲ್ಲಿ ಅಭೂತಪೂರ್ವ ಜನಬೆಂಬಲ ದೊರೆಯುತ್ತಿದ್ದು, ಕಾಂಗ್ರೆಸ್ ಪಕ್ಷಕ್ಕೆ ಮತ ಯಾಚನೆ ಮಾಡಲು ಕಾರ್ಯಕರ್ತರು ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆಯಲ್ಲದೆ ಜನ ಸಾಮಾನ್ಯರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಎಂದು ಎಸ್.ಡಿ. ಪಿ.ಐ ಅಭ್ಯರ್ಥಿ ರಿಯಾಝ್ ಫರಂಗಿಪೇಟೆ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆಯನ್ನು ಬಿಡುಗಡೆಗೊಳಿಸಿರುವ ಅವರು,
ಬೆಂಗಳೂರು : ಕಾಂಗ್ರೆಸ್ ಅಭ್ಯರ್ಥಿ ಅನೂಪ್ ಅಯ್ಯಂಗಾರ್ ಪರ ಮಾಜಿ ಸಚಿವ ಎಂ.ಆರ್.ಸೀತಾರಾಂ ರೋಡ್ ಶೋ ಮೂಲಕ ಮತಯಾಚನೆ ಮಾಡಿದರು. ಸಹಸ್ರಾರು ಕಾಂಗ್ರೆಸ್ ಕಾರ್ಯಕರ್ತರು ಏರ್ ರ್ಪೋರ್ಸ್, ಅಶೋಕ್ ನಗರ, ರಾಮಯ್ಯ ರಸ್ತೆ, ಮತ್ತಿಕೆರೆ, ತ್ರಿವೇಣೆ ರಸ್ತೆ ಯಶವಂತಪುರ ಸರ್ಕಲ್, ಸುಬ್ರಮಣ್ಯನಗರ ,ಮಿಲ್ಕ್ ಕಾಲೋನಿ, ಗಾಯಿತ್ರಿನಗರ ಮೂಲಕ ಬೃಹತ್ ರೋಡ್ ಶೋ ಸಾಗಿತು. ನೂರಾರು ಬೈಕ್ ಗಳು, ಕಲಾತಂಡಗಳು ರೋಡ್ ಶೋಗೆ ಮೆರಗು ನೀಡಿತು. ಇದೇ ಸಂದರ್ಭದಲ್ಲಿ ಸೀತಾರಾಂ ಮಾತನಾಡಿ
ಕಾಪು ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿ ಶಾಸಕರಾದ ಲಾಲಾಜಿ ಆರ್ ಮೆಂಡನ್ ಅವರು ಕಟಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮತಯಾಚನೆ ಮಾಡಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಪಕ್ಷದ ಪ್ರಮುಖರು ಜೊತೆಗಿದ್ದರು.