Home Archive by category ವಿಶ್ವ

ವಿದೇಶದಲ್ಲಿ ಶ್ರೀ ಕ್ಷೇತ್ರ ಗೆಜ್ಜೆಗಿರಿ ಮೇಳದಿಂದ ಯಕ್ಷಗಾನ ಪ್ರದರ್ಶನ

ಯಕ್ಷಗಾನ ಇತಿಹಾಸದಲ್ಲೇ ಪರಿಪೂರ್ಣ ಮೇಳವೊಂದು ಪ್ರಪ್ರಥಮ ಬಾರಿಗೆ ವಿದೇಶಕ್ಕೆ ತೆರಳಿ ಯಕ್ಷಗಾನ ಪ್ರದರ್ಶನ ನೀಡಲು ಸಿದ್ಧವಾಗಿದೆ.ತೆಂಕುತಿಟ್ಟಿನ ಪ್ರಸಿದ್ಧ ಶ್ರೀ ಗೆಜ್ಜೆಗಿರಿ ಮೇಳವು ಮಸ್ಕತ್ ಮತ್ತು ದುಬೈ ಯಲ್ಲಿ ಆದಿ ಮಾಯೆ ಪರಾಶಕ್ತಿ ಧೂಮಾವತಿ ಮತ್ತು ಮಾತೆ ದೇಯಿ ಬೈದೆತಿ ಅಮ್ಮನವರ ಬೆಳಕಿನ ಯಕ್ಷಗಾನ ಗೆಜ್ಜೆಸೇವೆ ನೀಡಲಿದ್ದು ಪೂರ್ಣ ಪ್ರಮಾಣದ ಮೇಳವೊಂದು ವಿದೇಶಿ

ಉಳ್ಳಾಲದ ಮೊಗವೀರ ಬಾಲಕಿಯ ಮಹತ್ತರ ಸಾಧನೆ

ಉಳ್ಳಾಲ: 2024ರ ಮೇ, ತಿಂಗಳಲ್ಲಿ ಅಮರಿಕಾದ ನ್ಯೂಯಾರ್ಕ್‌ನಲ್ಲಿ ಜರಗುವ ವರ್ಲ್ಡ್ ಸೈನ್ಸ್ ಸ್ಕಾಲರ್ ಕಾರ್ಯಕ್ರಮಕ್ಕೆ ಉಳ್ಳಾಲದ ಮೊಗವೀರ ಸಮಾಜದ ಬಾಲಕಿ ಸಿಂಧೂರಳಿಗೆ ಆಹ್ವಾನ ಬಂದಿದ್ದು, ಮುಂದಿನ ತಿಂಗಳು ತಾಯಿ ಮಗಳು ಇಬ್ಬರು ಭಾಗಿಯಾಗಲಿದ್ದಾರೆ ಎಂದು ಬಾಲಕಿಯ ತಾಯಿ ಶಿಬಾನಿ ರಾಜಾ ಹೇಳಿದರು. ತೊಕ್ಕೊಟ್ಟು ಸೇವಾಸೌಧದಲ್ಲಿನ ಉಳ್ಳಾಲ ಪ್ರೆಸ್‌ಕ್ಲಬ್ ನಲ್ಲಿ ಹಮ್ಮಿಕೊಂಡಿದ್ದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿ, ನ್ಯೂಯಾರ್ಕ್‌ನಲ್ಲಿ ನಡೆಯುವ ವರ್ಲ್ಡ್ ಸೈನ್ಸ್ ಸ್ಕಾಲರ್

ಮಾಸ್ಕೋದಲ್ಲಿ ಉಗ್ರ ದಾಳಿ : ಸಾವಿನ ಸಂಖ್ಯೆ 115ಕ್ಕೆ ಏರಿಕೆ

ರಶಿಯಾದ ರಾಜಧಾನಿ ಮಾಸ್ಕೋದ ಕನ್ಸರ್ಟ್ ಹಾಲಿನಲ್ಲಿ ನಾಲ್ವರು ಬಂದೂಕು ಹಿಡಿದವರು ನುಗ್ಗಿ ಹಲವು ಸ್ಫೋಟ ನಡೆಸಿ, ಮನ ಬಂದಂತೆ ಗುಂಡು ಹಾರಿಸಿದ್ದರಿಂದ ಸತ್ತವರ ಸಂಖ್ಯೆಯು 115ಕ್ಕೆ ಏರಿಕೆಯಾಗಿದೆ. ನಾಲ್ವರು ಗನ್‌ಮ್ಯಾನ್ ಸಹಿತ 11 ಜನರನ್ನು ಬಂಧಿಸಲಾಗಿದೆ. 145ಕ್ಕೂ ಹೆಚ್ಚು ಜನರು ಗಾಯಗೊಂಡರು. ಭಾರೀ ಹೊಗೆ ಆವರಿಸಿಕೊಂಡುದು ಮತ್ತು ಜನರ ಕಂಡತ್ತ ಓಡತೊಡಗಿದ್ದರಿಂದ ಏನು ನಡೆಯುತ್ತದೆ ಎಂಬುದೇ ತಿಳಿದು ಬಂದಿಲ್ಲ. ಸ್ಫೋಟಕ ಮತ್ತು ಗನ್ ಎರಡೂ ಬಳಸಿದ್ದರಿಂದ ಭಾರೀ

ಪುಷ್ಪಕ್ ಲ್ಯಾಂಡಿಂಗ್ ಪರೀಕ್ಷೆ ಯಶಸ್ವಿ..!

ಇಸ್ರೋದವರು ತಯಾರಿಸಿದ ಆರ್‌ಎಲ್‌ವಿ ಪುಷ್ಪಕ್ ಮರುಬಳಕೆ ಉಡ್ಡಯನ ವಾಹನದ ಪರೀಕ್ಷೆಯು ಶುಕ್ರವಾರ ಯಶಸ್ವಿಯಾಗಿ ನಡೆಯಿತು. ಇದು ಆರ್‌ಎಲ್‌ವಿ ಮೂರನೆಯ ಪ್ರಯೋಗ ವಾಹನವಾಗಿದೆ.ಚಳ್ಳಕೆರೆಯಲ್ಲಿರುವ ಪರೀಕ್ಷಾ ರನ್‌ವೇಯಿಂದ ಇಂದು ಪ್ರಯೋಗ ಪರೀಕ್ಷೆ ಯಶಸ್ಸು ಕಂಡಿತು. 2016ರಲ್ಲಿ ಮೊದಲ ಪ್ರಯೋಗ ನಡಸಲಾಗಿತ್ತು. 2023ರಲ್ಲಿ ಎರಡನೇ ಪ್ರಯೋಗ ಯಶಸ್ವಿಯಾದ ಬೆನ್ನಿಗೇ ಮೂರನೆಯ ಪ್ರಯೋಗಕ್ಕೆ ಕೈ ಹಾಕಲಾಗಿತ್ತು. ವಾಯು ಪಡೆಯ ಹೆಲಿಕಾಪ್ಟರ್ ಮೂಲಕ ಉಡ್ಡಯಣ ವಾಹನವನ್ನು ನಾಲ್ಕೂವರೆ

ದಿಲ್ಲಿ: ಮೈತ್ರಿ, ಸೀಟು ಹಂಚಿಕೆ ಬಗೆಗೆ ಸ್ಪಷ್ಟನೆ

ದಿಲ್ಲಿಯ ದಿಲ್ಲಿ ಪಶ್ಚಿಮ, ದಿಲ್ಲಿ ದಕ್ಷಿಣ, ದಿಲ್ಲಿ ಪೂರ್ವ ಮತ್ತು ನವದೆಹಲಿ ಈ ನಾಲ್ಕು ಕ್ಷೇತ್ರಗಳಲ್ಲಿ ಆಮ್ ಆದ್ಮಿ ಪಕ್ಷ ಸ್ಪರ್ಧಿಸಲಿದೆ. ಈಶಾನ್ಯ ದಿಲ್ಲಿ, ವಾಯುವ್ಯ ದಿಲ್ಲಿ ಮತ್ತು ಚಾಂದಿನಿ ಚೌಕ್ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸ್ಪರ್ಧಿಸಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಲಾಯಿತು.ಎಎಪಿಯವರೂ ಇದ್ದ ಮಾಧ್ಯಮ ಮಾತುಕತೆಯಲ್ಲಿ ಕಾಂಗ್ರೆಸ್ಸಿನ ಪ್ರಧಾನ ಕಾರ್ಯದರ್ಶಿ ಮುಕುಲ್ ವಾಸ್ನಿಕ್ ಮಾಹಿತಿ ನೀಡಿದರು.ಗುಜರಾತಿನ 26ರಲ್ಲಿ 24ಕಡೆ ಕಾಂಗ್ರೆಸ್

ಜಮ್ಮು-ಕಾಶ್ಮೀರದ ಮಾಜೀ ರಾಜ್ಯಪಾಲ ಸತ್ಯಪಾಲ್ ಮಲಿಕ್ ಮನೆ ಮೇಲೆ ಸಿಬಿಐ ದಾಳಿ

ಜಮ್ಮು ಮತ್ತು ಕಾಶ್ಮೀರದ ಹೈಡಲ್ ಯೋಜನೆ ಗುತ್ತಿಗೆ ನೀಡುವುದರಲ್ಲಿ ಭಾರೀ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪದ ಮೇಲೆ ಜಮ್ಮು ಕಾಶ್ಮೀರದ ಮಾಜೀ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರ ಮನೆಯ ಮೇಲೆ ಸಿಬಿಐ ದಾಳಿ ನಡೆಸಿತು.ಸತ್ಯಪಾಲ್ ಮಲಿಕ್‌ರಿಗೆ ಸೇರಿದ ಮತ್ತು ಆ ಪ್ರಕರಣ ಸಂಬಂಧಿ 40 ಸ್ಥಳಗಳಲ್ಲಿ ಏಕ ಕಾಲದಲ್ಲಿ ದಾಳಿ ನಡೆಯಿತು. ಗುರುವಾರ ಮುಂಜಾನೆಯೇ ಸಿಬಿಐ ಅಧಿಕಾರಿಗಳ ತಂಡ ಮಾಜೀ ರಾಜ್ಯಪಾಲರ ಮನೆ ಹೊಕ್ಕಿತು.2200 ಕೋಟಿ ರೂಪಾಯಿ ಮೊತ್ತದ ಹಲವು ಕಿರು ಜಲವಿದ್ಯುತ್ ಯೋಜನೆ

ಬಹರೈನ್: “ಮೊಗವೀರ್ಸ್ ಬಹರೈನ್ ” ಸಂಘಟನೆಯಿಂದ “ಅಟಿಲ್” ಆಹಾರೋತ್ಸವ

ಬಹರೈನ್ ಅನಿವಾಸಿ ಮೊಗವೀರ ಸಮುದಾಯದ ಸಂಘಟನೆಯಾದ “ಮೊಗವೀರ್ಸ್ ಬಹರೈನ್ ” ಸಂಘಟನೆಯು “ಅಟಿಲ್” ಎನ್ನುವಂತಹ ವಿಶಿಷ್ಟ ಆಹಾರಗಳ ಮೇಳವನ್ನು ಬಹರೈನ್ ಪ್ಯಾಪಿಲಾನ್ ರೆಸ್ಟೋರೆಂಟಿನ ಸಭಾಂಗಣದಲ್ಲಿ ಆಯೋಜಿಸಿದ್ದರು. “ಮೊಗವೀರ್ಸ್ ಬಹರೈನ್ ” ಸಂಘಟೆನೆಯ ಸ್ಥಾಪಕ ಸದಸ್ಯರೂ, ಸಂಘಟೆನೆಯ ಉಪಾಧ್ಯಕ್ಷರೂ ಆಗಿ ಕಾರ್ಯನಿರ್ವಹಿಸಿ ಜನಾನುರಾಗಿಯಾಗಿ ಅಪಾರ ಮಿತ್ರ ಗೆಳೆಯರ ಬಳಗವನ್ನು ಹೊಂದಿ ಅಕಾಲಿಕ ನಿಧನ ಹೊಂದಿದ್ದ ದಿವಂಗತ ತೀರ್ಥ

ಕನ್ನಡ ಸಂಘ ಬಹರೈನ್ ವತಿಯಿಂದ, ಕರ್ನಾಟಕ ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಗೆ ಸಮ್ಮಾನ

ಬಹರೈನ್ ಕನ್ನಡ ಸಂಘ ಕೇವಲ ಕನ್ನಡಿಗರ ಸಂಘಟನೆಯಲ್ಲ ಇದು ಕನ್ನಡ ಕಲೆ, ಸಂಸ್ಕ್ರತಿ ,ಭಾಷೆಯನ್ನು ಮುಂದಿನ ಪೀಳಿಗೆಗೆ ತಲುಪಿಸುವಂತಹ ಒಂದು ಪರಿಣಾಮಕಾರಿಯಾದ ಮಾಧ್ಯಮ. ಇಲ್ಲಿರುವ ನಮ್ಮ ಸಂಸ್ಕ್ರತಿಯ ಅಧ್ಯಯನ ಕೇಂದ್ರಗಳು ನಿಜವಾಗಿಯೂ ಕನ್ನಡ ಭಾಷೆ, ಕಲೆ, ಸಂಸ್ಕ್ರತಿಯ ಮೇಲೆ ಬಹರೈನ್ ಕನ್ನಡಿಗರಿಗಿರುವ ಅನನ್ಯ ಪ್ರೀತಿಗೆ ಸಾಕ್ಷಿಯಾಗಿದೆ ” ಎಂದು ಕರ್ನಾಟಕ ವಿಧಾನಸಭಾ ಅಧ್ಯಕ್ಷರಾದ ಯು.ಟಿ. ಖಾದರ್ ಹೇಳಿದರು. ಅವರು, ಕನ್ನಡ ಸಂಘವು ಸಭಾಧ್ಯಕ್ಷರ ಬಹರೈನ್ ಭೇಟಿಯ

ನೆರೆಯ ಕುಳ್ಳ ಗೆಲಾಕ್ಸಿಯಲ್ಲಿ ಹೊಸ ನಕ್ಷತ್ರ ಪ್ರಸವ

ದೂರ ಇಣುಕುವ ಬಹು ಘಟಕ ಅಲೆಪಟ್ಟಿ ಪರಿಶೋಧಕವು ದೊಡ್ಡ ಸಾಧನೆ ಮಾಡಿದೆ. ಮೊದಲ ಬಾರಿಗೆ ನಕ್ಷತ್ರ ಹುಟ್ಟುವುದನ್ನು ನೇರ ನೋಡಲು ಸಾಧ್ಯವಾಗಿದೆ. ಇವೆಲ್ಲ ತಿಳಿದಿರುವ ಕ್ರಿಯೆಗಳು. ಆದರೆ ಸಾಕ್ಷ್ಯ ಸಮೇತ ಮೊದಲ ಬಾರಿಗೆ ನೋಡಲು ಸಾಧ್ಯವಾಗಿದೆ ಎಂದು ಬ್ರಿಟನ್ನಿನ ಡುರ್ರಾಮ್ ವಿಶ್ವವಿದ್ಯಾನಿಲಯದ ಖಗೋಳ ವಿಜ್ಞಾನಿ ಅನ್ನಾ ಮೆಕ್ಲೀಡ್ ಹೇಳಿದ್ದಾರೆ. ನಕ್ಷತ್ರಗಳು ದಟ್ಟ ಬಹುಕಣ ಗೊಂಚಲುಗಳಿಂದ ಹುಟ್ಟುತ್ತವೆ ಎಂದು ಆ ವಿಜ್ಞಾನಿಗಳ ತಂಡ ಹೇಳಿದೆ. ನಮ್ಮ ಹಾಲುಹಾದಿ ಮಿಲ್ಕೀವೇ

ಬಾಂಗ್ಲಾದೇಶದಲ್ಲಿ ತೀವ್ರ ನಡುಕದ ಭೂಕಂಪ

ಬಾಂಗ್ಲಾದೇಶದ ಚಿತ್ತಗಾಂಗ್ ಪ್ರಾಂತ್ಯದ ರಾಮ್‍ಗಂಜ್‍ನಿಂದ ಹತ್ತು ಕಿಲೋಮೀಟರ್ ದೂರವನ್ನು ಕೇಂದ್ರವಾಗಿಟ್ಟುಕೊಂಡು ಶನಿವಾರ ಒಂದಷ್ಟು ಹಾನಿ ಉಂಟು ಮಾಡಿದ ನೆಲನಡುಕ ನಡೆದಿದೆ.ರಿಕ್ಟರ್ ಮಾಪಕದಲ್ಲಿ ಈ ಭೂಕಂಪವು 5.8 ತೀವ್ರತೆಯದಾಗಿತ್ತು. ಒಂದು ಕಡೆ ನೆಲ ಜರಿದ ಮತ್ತು ಸಣ್ಣ ಪ್ರಮಾಣದಲ್ಲಿ ಹಾನಿ ಎನ್ನಬಹುದಾದ ಪ್ರಮಾದವಲ್ಲದ ಭೂಕಂಪವಿದು ಎಂದು ಹವಾಮಾನ ಇಲಾಖೆ ಹೇಳಿದೆ