Home ಕರಾವಳಿ Archive by category ಉಡುಪಿ (Page 62)

ಅಮೇರಿಕಾದಲ್ಲಿ ಕೋಟದ ಕುವರಿ ಅದಿತ್ರಿ ಪೈಯಿಂದ ಕಾಂತಾರ ಸಿನಿಮಾ ಹಾಡು

ಉಡುಪಿ ಜಿಲ್ಲೆ ಕೋಟ ಮೂಲದ 10 ವರ್ಷದ ಕುವರಿ ಅದಿತ್ರಿ ಪೈ ಅಮೇರಿಕಾದಲ್ಲಿ ಕಾರ್ಯಕ್ರಮವೊಂದರಲ್ಲಿ ಕಾಂತಾರ ಸಿನಿಮಾ ಹಾಡು ಹಾಡಿ ಜನಮೆಚ್ಚುಗೆ ಪಡೆದಿದ್ದಾಳೆ. ಅಮೇರಿಕಾದ ಒಹಾಯೋ ರಾಜ್ಯದ ಲೈಮಾದಲ್ಲಿ ಮಲ್ಟಿ ಕಲ್ಚರಲ್ ಎಕ್ಸ್ ಪೋದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಂತಾರಾ ಸಿನಿಮಾದ ವರಾಹ ರೂಪಂ ಹಾಡಿನ ಟ್ಯಾಕ್‍ಗೆ ಶಾಸ್ತ್ರೀಯ ರಾಗದ ಕನ್ನಡ ಗೀತೆಯೊಂದನ್ನು

ಬೈಂದೂರು: ವಿಹೆಚ್‍ಪಿ ಬಜರಂಗದಳದಿಂದ ಸರಣಿ ಗೋವುಗಳ ಹತ್ಯೆ ಖಂಡಿಸಿ ಪ್ರತಿಭಟನೆ

ಬೈಂದೂರು ತಾಲೂಕಿನ ಬೆಳ್ಳಾಲ ಗ್ರಾಮದಲ್ಲಿ ಗುಂಡೇಟಿನಿಂದ ಬಲಿಯಾದ ಸರಣಿ ಗೋ ಹತ್ಯೆಯನ್ನು ಖಂಡಿಸಿ ಹಾಗೂ ಆರೋಪಿಯಾದ ನರಸಿಂಹ ಕುಲಾಲ್‍ನನ್ನು ಶೀಘ್ರವೇ ಬಂಧಿಸುವಂತೆ ಆಗ್ರಹಿಸಿ ವಿಶ್ವ ಹಿಂದೂ ಪರಿಷತ್ ಬಜರಂಗದಳ ಬೈಂದೂರು ಪ್ರಖಂಡದ ವತಿಯಿಂದ ಪ್ರತಿಭಟನೆ ಕೊಲ್ಲೂರಿನಲ್ಲಿ ಪ್ರತಿಭಟನೆ ನಡೆಸಿದರು. ಕರ್ನಾಟಕ ದಕ್ಷಿಣ ಪ್ರಾಂತ ಸಹ ಕಾರ್ಯದರ್ಶಿಯಾದ ಶರಣ್ ಪಂಪ್ವೆಲ್ ಅವರು ಸಂತ್ರಸ್ತ ಕುಟುಂಬದ ಮನೆಗೆ ತೆರಳಿ ಸದಾಕಾಲ ವಿಶ್ವ ಹಿಂದು ಪರಿಷತ್ ನಿಮ್ಮೊಂದಿಗೆ

ಅ.10ರಂದು ಉಡುಪಿಯಲ್ಲಿ ಹಿಂದೂ ಸಮಾಜೋತ್ಸವ – ಅನಧಿಕೃತ ಬ್ಯಾನರ್ ಗಳ ತೆರವು

ಶಿವಮೊಗ್ಗದ ಈದ್ ಮಿಲಾದ್ ಗಲಾಟೆ ಬಳಿಕ ಎಚ್ಚೆತ್ತಿರುವ ಉಡುಪಿ ನಗರಸಭೆ, ನಗರ ವ್ಯಾಪ್ತಿಯ ಅನಧಿಕೃತ ಬ್ಯಾನರ್ ಮತ್ತು ಕಟೌಟ್‍ಗಳನ್ನು ತೆರವುಗೊಳಿಸಿದೆ. ಉಡುಪಿಯಲ್ಲಿ ಅಕ್ಟೋಬರ್ ಹತ್ತರಂದು ಹಿಂದೂ ಸಮಾಜೋತ್ಸವ ಆಯೋಜನೆಗೊಂಡಿದ್ದು, ಹಿಂದೂ ಸಮಾಜೋತ್ಸವದ ಎಲ್ಲಾ ಬ್ಯಾನರ್ ಗಳನ್ನೂ ತೆರವುಗೊಳಿಸಲಾಗಿದೆ. ಉಡುಪಿ ನಗರ ಸುತ್ತಮುತ್ತ ಅಳವಡಿಸಿದ್ದ ಬ್ಯಾನರ್‍ಗಳ ತೆರವು ಹಿನ್ನೆಲೆಯಲ್ಲಿ ಉಡುಪಿ ಶಾಸಕ ಯಶ್ಪಾಲ್ ಸುವರ್ಣ, ಉಡುಪಿ ಎಸ್ಪಿ ಡಾ. ಅರುಣ್ ಅವರನ್ನು

ಉಡುಪಿ: ಅನಧಿಕೃತ ಬ್ಯಾನರ್ ಗಳ ತೆರವು ಕಾರ್ಯ

ಶಿವಮೊಗ್ಗ ಗಲಭೆಯ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯಾದ್ಯಂತ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಅನಧಿಕೃತವಾಗಿ ಹಾಗೂ ಅವಧಿ ಮೀರಿದ ಬ್ಯಾನರ್ ಮತ್ತು ಕಟೌಟ್‍ಗಳನ್ನು ತೆರವುಗೊಳಿಸುವ ಕಾರ್ಯಾಚರಣೆಯನ್ನು ನಗರಸಭೆಯ ಅಧಿಕಾರಿಗಳು ಪೆÇಲೀಸ್ ರಕ್ಷಣೆಯಲ್ಲಿ ನಡೆಸಿದರು. ನಗರಸಭೆಯಿಂದ ಅನುಮತಿ ಪಡೆಯದೆ ಉಡುಪಿ ನಗರ, ಸಂತೆಕಟ್ಟೆ ಹಾಗೂ ಮಣಿಪಾಲ ಸೇರಿದಂತೆ ನಗರ ಸಭೆ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಅಳವಡಿಸಲಾಗಿದ್ದ ಹಾಗೂ ಅವಧಿ ಮೀರಿದ ಒಟ್ಟು 85 ಅನಧಿಕೃತ ಬ್ಯಾನರ್ ಹಾಗೂ

ಕಾರ್ಕಳ: 6ನೇ ದಿನಕ್ಕೆ ಕಾಲಿಟ್ಟ ಕಟ್ಟಡ ಸಾಮಾಗ್ರಿ ವಾಹನ ಸಾಗಾಟ ಚಾಲಕರ ಮುಷ್ಕರ

ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಕಟ್ಟಡ ಸಾಮಾಗ್ರಿ ವಾಹನ ಸಾಗಾಟ ಚಾಲಕರು ಕಳೆದ ಆರು ದಿನಗಳಿಂದ ಮುಷ್ಕರ ನಡೆಸುತ್ತಿದ್ದು, ಇವರ ಸಮಸ್ಯೆಗಳಿಗೆ ಯಾರೂ ಸ್ಪಂದಿಸುತ್ತಿಲ್ಲ. ಕಟ್ಟಡ ಕಾರ್ಮಿಕರಿಗೆ ಕಟ್ಟಡ ಸಾಮಾಗ್ರಿಗಳನ್ನು ಸರಬರಾಜು ಮಾಡುತ್ತಿದ್ದ ವಾಹನಗಳು ರಸ್ತೆಗೆ ಇಳಿಯದೆ ಪ್ರತಿಭಟನೆಯಲ್ಲಿ ತೊಡಗಿವೆ. ಇದರಿಂದ ಕಟ್ಟಡ ಕೆಲಸವನ್ನು ನಂಬಿಕೊಂಡು ಬಂದಿರುವ ಕಾರ್ಮಿಕರು ಆರು ದಿನಗಳಿಂದ ಕೆಲಸವಿಲ್ಲದೆ ಆಲೆದಾಡುತ್ತಿದ್ದಾರೆ. ಇಡೀ ರಾಜ್ಯದಲ್ಲಿ ಇಲ್ಲದ

ಪಡುಬಿದ್ರಿ: ಬೃಹತ್ತಾಕಾರದ ಮರ ಬಿದ್ದು ಕಾರ್ಮಿಕ ಸಾವು, ಇಬ್ಬರಿಗೆ ಗಾಯ

ನಾಗಬನ ಮತ್ತು ಮನೆಯ ಮೇಲೆ ಅಪಾಯಕಾರಿಯಾಗಿ ವಾಲಿದ್ದ ಮರವನ್ನು ಕಡಿಯುತ್ತಿದ್ದ ವೇಳೆ ಮರ ಉರುಳಿ ಬಿದ್ದು ಜಾರ್ಖಂಡ್ ಮೂಲದ ಕಾರ್ಮಿಕನೋರ್ವ ಸ್ಥಳದಲ್ಲೇ ಮೃತಪಟ್ಟು ಇಬ್ಬರು ಗಾಯಗೊಂಡ ಘಟನೆ ಮಜೂರು ಗ್ರಾಮದ ಕರಂದಾಡಿಯಲ್ಲಿ ನಡೆದಿದೆ. ಬಿಹಾರ -ಜಾರ್ಖಂಡ್ ಮೂಲದ ಸುಧೀರ್ ಪಾಂಜೆ ಮೃತ ಕೂಲಿ ಕಾರ್ಮಿಕ ಎಂದು ಗುರುತಿಸಲಾಗಿದೆ. ಕರಂದಾಡಿ ದೇವಸ್ಥಾನದ ಬಳಿ ಬೃಹತ್ ಗೋಳಿ ಮರವನ್ನು ಕಡಿಯುತ್ತಿದ್ದ ವೇಳೆ ಅದು ಕಾರ್ಮಿಕರ ಮೇಲೆ ಉರುಳಿ ಬಿದ್ದಿತ್ತು. ಇದರಿಂದಾಗಿ ಮೂವರು

ಕಾರ್ಕಳ: ಗಾಂಧಿ ಸ್ಮೃತಿ ಮತ್ತು ನವ ಜೀವನ ಸಮಿತಿ ಸದಸ್ಯರ ಸಮಾವೇಶ

ಗಾಂಧಿ ಜಯಂತಿ ಸಂಭ್ರಮಾಚರಣೆ ಪ್ರಯುಕ್ತ ಗಾಂಧಿ ಸ್ಮೃತಿ ಮತ್ತು ನವ ಜೀವನ ಸಮಿತಿ ಸದಸ್ಯರ ಸಮಾವೇಶವು ಕಾರ್ಕಳದ ಶ್ರೀ ಬಾಹುಬಲಿ ಪ್ರವಚನ ಮಂದಿರದಲ್ಲಿ ಜರುಗಿತು. ಕಾರ್ಯಕ್ರಮವನ್ನು ಮಾಜಿ ಸಚಿವ ಅಭಯ ಚಂದ್ರ ಜೈನ್ ದೀಪ ಬೆಳಗಿಸಿ ಉದ್ಘಾಟಿಸಿದರು. ನಂತರ ಗಾಂಧಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಇದೇ ವೇಳೆ ಮಾತನಾಡಿದ ಅಭಯಚಂದ್ರ ಜೈನ್ ಅವರು, ನಾವಿಂದು ಗಾಂಧಿ ಜಯಂತಿಯನ್ನು ಬಹು ವಿಜೃಂಭಣೆಯಿಂದ ಆಚರಿಸಿದ್ದೇವೆ. ಅದೇ ರೀತಿ ಮಹಾತ್ಮ ಗಾಂಧಿಯವರು ಭಾರತವನ್ನು

ಬ್ರಹ್ಮಾವರ : 7ನೇ ದಿನಕ್ಕೆ ಕಾಲಿಟ್ಟ ಕಟ್ಟಡ ಸಾಮಾಗ್ರಿಗಳ ಸಾಗಾಟ ವಾಹನದ ಮಾಲಕರ ಮುಷ್ಕರ

ಉಡುಪಿ ಜಿಲ್ಲೆಯ ಕಟ್ಟಡ ಸಾಮಗ್ರಿಗಳ ಸಾಗಾಟ ವಾಹನಗಳ ಮಾಲಕರು ಮತ್ತು ಕಾರ್ಮಿಕರು ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಮುಷ್ಕರ ನಡೆಸುತ್ತಿದ್ದು, 7ನೇ ದಿನವೂ ಮುಷ್ಕರವನ್ನು ಮುಂದುವರಿಸಿದ್ದಾರೆ. ಮುಷ್ಕರ ನಿರತರು ಮಹಾತ್ಮಾ ಗಾಂಧಿ ಮತ್ತು ಲಾಲ್ ಬಹುದ್ದೂರು ಶಾಸ್ತ್ರಿ ಅವರ ಜಯಂತಿ ಪ್ರಯುಕ್ತ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಬಳಿಕ ಕೋಟದಲ್ಲಿ ಜಿಲ್ಲಾ ಮಟ್ಟದ ಸಭೆ ನಡೆಸಿ ಮುಂದಿನ ಹೋರಾಟದ ಮಾತುಕತೆ ನಡೆಸಿದರು. ಟಿಪ್ಪರ್ ಮಾಲಕರ ಸಂಘದ ವಿಜಯ ಕುಮಾರ್,

ಕುಂದಾಪುರ: ಚೂರಿ ಇರಿತಕ್ಕೊಳಗಾದ ವ್ಯಕ್ತಿ ಆಸ್ಪತ್ರೆಯಲ್ಲಿ ಮೃತ್ಯು

ಕುಂದಾಪುರದಲ್ಲಿ ರವಿವಾರ ಸಂಜೆ ವೇಳೆ ಚೂರಿ ಇರಿತಕ್ಕೊಳಗಾಗಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಕುಂದಾಪುರದ ರಾಘವೇಂದ್ರ (42) ರಾಘು ಸೋಮವಾರ ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಕುಂದಾಪುರದ ಖಾರ್ವಿಕೇರಿ ನಿವಾಸಿ ರಾಘವೇಂದ್ರ ಶೇರುಗಾರ್ ರವಿವಾರ ರಾತ್ರಿ ಚಿಕ್ಕಮ್ಮನಸಾಲು ರಸ್ತೆಯ ಪೋಸ್ಟ್ ಆಫೀಸ್ ಬಳಿ ತಮ್ಮ ಕಾರಿನಲ್ಲಿ ಸಂಚರಿಸುತ್ತಿದ್ದ ವೇಳೆ ಕಾರಿಗೆ ಸೈಡ್ ಕೊಡುವ ವಿಚಾರದಲ್ಲಿ ಗಲಾಟೆಯಾಗಿತ್ತು. ಗಲಾಟೆ

ಪಡುಬಿದ್ರಿ: ಬೀಚ್‌ನಲ್ಲಿ ಸ್ವಚ್ಚತಾ ಪಕ್ವಾಡ ಅಭಿಯಾನ ಕಾರ್ಯಕ್ರಮ

ಪಡುಬಿದ್ರಿಯ ಮುಖ್ಯ ಬೀಚ್‌ನಲ್ಲಿ ವಿಶ್ರುದ್ ಕೋಸ್ಟಲ್ ಡೆವಲಪರ್ಸ್ ವತಿಯಿಂದ  ಸ್ವಚ್ಚತಾ ಪಕ್ವಾಡ್ ಅಭಿಯಾನ ಕಾರ್ಯಕ್ರಮ ನಡೆಯಿತು. ಪಡುಬಿದ್ರಿ ಸರ್ಕಾರಿ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳು, ಸಿ.ಎಸ್.ಬಿ ಸಿಬ್ಬಂದಿಗಳು ಸಹಿತ ಸಾರ್ವಜನಿಕರ ಸಹಕಾರದಿಂದ ಕಾರ್ಯಕ್ರಮ ಉತ್ತಮವಾಗಿ ನಡೆಯಿತು. ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅಥಿತಿಯಾಗಿ ಭಾಗವಹಿಸಿ ಮಾತನಾಡಿದ ಪ್ರವಾಸೋದ್ಯಮ ಇಲಾಖಾ ಸಹಾಯಕ ನಿರ್ದೇಶಕ ಕುಮಾರ ಪಿ.ಯು., ಸ್ವಚ್ಚತೆ ಎಂಬುದು ನಮ್ಮೆಲ್ಲಾರ ಜವಾಬ್ದಾರಿ,