ಸಮುದಾಯ ಭವನಗಳಿಗೆ ಅಂಬೇಡ್ಕರ್ ಅವರ ಹೆಸರಿಡುವುದು ಮಾತ್ರ ಅಲ್ಲ, ಅವರ ತತ್ವ, ಆದರ್ಶಗಳನ್ನ ಯುವ ಪೀಳಿಗೆಗೂ ವರ್ಗಾಯಿಸುವ ಕಾರ್ಯ ಇಲ್ಲಿ ನಡೆಯಬೇಕು.ಅವರ ಅರ್ಧದಷ್ಟು ವ್ಯಕ್ತಿತ್ವವನ್ನಾದರೂ ನಾವು ಮೈಗೂಡಿಸಿ ಕೊಳ್ಳಬೇಕೆಂದು ಕರ್ನಾಟಕ ವಿದಾನಸಭೆಯ ಸಭಾಧ್ಯಕ್ಷರಾದ ಯು.ಟಿ.ಖಾದರ್ ಹೇಳಿದರು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ,ದ.ಕ ಜಿಲ್ಲಾ ಪಂಚಾಯತ್
ಹೆದ್ದಾರಿ ದಾಟುತ್ತಿದ್ದ ವೇಳೆ ಬೈಕ್ ಢಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಪಾದಚಾರಿಯೋರ್ವರು ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟ ಘಟನೆ ತೊಕ್ಕೊಟ್ಟು ಸಮೀಪದ ಕಾಪಿಕಾಡು ಎಂಬಲ್ಲಿ ನಡೆದಿದೆ. ಕುಂಪಲ ಚೇತನ ನಗರ ನಿವಾಸಿ ಲೋಕೇಶ್ (48)ಮೃತ ವ್ಯಕ್ತಿ. ತೊಕ್ಕೊಟ್ಟಿನ ವಾಣಿಜ್ಯ ಸಂಕೀರ್ಣವೊಂದರಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಲೋಕೇಶ್ ಅವರು ಆ.15 ರ ಸಂಜೆ ರಾತ್ರಿ ಪಾಳಿ ಕೆಲಸಕ್ಕೆ ತೆರಳುವಾಗ ಕಾಪಿಕಾಡು ಎಂಬಲ್ಲಿ ಹೆದ್ದಾರಿ
ಮಂಗಳೂರು ನಗರದ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ದೇರಳಕಟ್ಟೆ ಪರಿಸರದ ಮುತ್ತೂಟ್ ಪೈನಾನ್ಸ್ ಬ್ಯಾಂಕ್ ಕಳ್ಳತನಕ್ಕೆ ಪ್ರಯತ್ನ ನಡೆಸಿದ ಪ್ರಕರಣದಲ್ಲಿ ದಸ್ತಗಿರಿಯಾಗದೇ ತಲೆಮರೆಸಿಕೊಂಡಿರುವ ಪ್ರಮುಖ ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿರುತ್ತಾರೆ. ದಿನಾಂಕ: 29-03-2025 ರಂದು ರಾತ್ರಿ ಸಮಯ ದೇರಳಕಟ್ಟೆ ಪರಿಸರದಲ್ಲಿರುವ ಹೆಚ್.ಎಮ್ ಕಾಂಪ್ಲೇಕ್ಸ್ ನ ಮುತ್ತೂಟ್ ಪೈನಾನ್ಸ್ ಕಚೇರಿಯ ಮುಂದಿನ ಬಾಗಿಲಿನ ಸೈರನ್ ಹೂಟರ್ ನ ಕೇಬಲ್
ಅಡ್ಯಾರು: ಕಾಲೇಜು ಬಸ್ಸಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ನಿರ್ವಾಹಕ ಕರ್ತವ್ಯದಲ್ಲಿದ್ದಾಗಲೇ ಕುಸಿದುಬಿದ್ದು ಸಾವನ್ನಪ್ಪಿರುವ ಘಟನೆ ಅಡ್ಯಾರ್ ಸಮೀಪ ಇಂದು ಬೆಳಗ್ಗಿನ ವೇಳೆ ಸಂಭವಿಸಿದೆ.ಕುತ್ತಾರು ನಿವಾಸಿ ಸಂತೋಷ್ (40) ಮೃತರು. ನಿಟ್ಟೆ ಪರಿಗಣಿಸಲ್ಪಟ್ಟ ವಿಶ್ವವಿದ್ಯಾನಿಲಯಕ್ಕೆ ಸೇರಿದ ಬಸ್ಸಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅವರು ಬೆಳಗ್ಗಿನ ವೇಳೆ ಶಾಲಾ ವಿದ್ಯಾರ್ಥಿಗಳನ್ನು ಶಾಲೆಗೆ ಕರೆತರಲು ತೆರಳುವ ಟ್ರಿಪ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗ
ಉಳ್ಳಾಲ : ಸ್ಕಿಡ್ ಆಗಿ ನಿಯಂತ್ರಣ ತಪ್ಪಿದ ಸ್ಕೂಟರೊಂದು ರಸ್ತೆ ಬದಿಯ ಮನೆಯ ಆವರಣ ಗೋಡೆಗೆ ಢಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡ ಸವಾರ ದಾರುಣವಾಗಿ ಮೃತಪಟ್ಟ ಘಟನೆ ಮಂಗಳವಾರ ರಾತ್ರಿ ಸೋಮೇಶ್ವರ ಪುರಸಭಾ ವ್ಯಾಪ್ತಿಯ ಅಂಬಿಕಾ ರಸ್ತೆ ಎಂಬಲ್ಲಿ ನಡೆದಿದೆ. ಸೋಮೇಶ್ವರ ಪುರಸಭಾ ವ್ಯಾಪ್ತಿಯ ಪಿಲಾರು ಮಹಾಲಕ್ಷ್ಮೀ ಮಂದಿರ ಬಳಿಯ ನಿವಾಸಿ ರಾಘವೇಂದ್ರ ಸಾಲ್ಯಾನ್ (44)ಯಾನೆ ರಘು ಮೃತ ದುರ್ದೈವಿ. ಖಾಸಗಿ ಕಂಪನಿಯೊಂದರಲ್ಲಿ ಇಲೆಕ್ಟ್ರಿಕಲ್ ಗುತ್ತಿಗೆದಾರರಾಗಿದ್ದ
ಉಳ್ಳಾಲ: ಜು. 2 ರಂದು ರಾತ್ರಿ ಮಲಗುವ ಕೊಠಡಿ ಯಿಂದ ನಾಪತ್ತೆಯಾದ ಬೀರಿ ನಿವಾಸಿ ಯುವಕನ ಮೃತ ದೇಹ ಉಚ್ಚಿಲ ರೈಲ್ವೇ ಗೇಟ್ ಸಮೀಪ ಪತ್ತೆಯಾಗಿದೆ ಮೇಲ್ನೋಟಕ್ಕೆ ಇದೊಂದು ಆತ್ಮಹತ್ಯೆ ಪ್ರಕರಣ ಎಂದು ತಿಳಿದು ಬಂದಿದೆ.ಕೋಟೆಕಾರು ಬೀರಿ ನಿವಾಸಿ ಮೋಹದಾಸ್ ಅಮೀನ್ ಎಂಬವರ ಪುತ್ರ ತೇಜಸ್(25) ಜು.2ರಂದು ರಾತ್ರಿ ಮಲಗುವ ಕೋಣೆಯಿಂದ ನಾಪತ್ತೆಯಾಗಿದ್ದನುಈ ಕುರಿತು ತಂದೆಯವರು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ಇಂದು ಬೆಳಿಗ್ಗೆ ರೈಲ್ವೇ
ಉಳ್ಳಾಲ : ಯುವಕನೋರ್ವ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ದೇರಳಕಟ್ಟೆ ಕಾನೆಕೆರೆ ಎಂಬಲ್ಲಿ ಇಂದು ನಸುಕಿನ ಜಾವ ಸಂಭವಿಸಿದೆ. ದೇರಳಕಟ್ಟೆ ಕಾನೆಕೆರೆ ನಿವಾಸಿ ಶಿವಾನಂದ ರೆಡ್ಡಿ ಎಂಬವರ ಪುತ್ರ ವಿನಯ್ ಕುಮಾರ್ (25) ಹೃದಯಾಘಾತಕ್ಕೀಡಾಗಿ ಸಾವನ್ನಪ್ಪಿದವರು. ನಸುಕಿನ ಜಾವ ಹೃದಯ ಭಾಗದಲ್ಲಿ ನೋವುಂಟಾಗಿದ್ದು, ಕೆಲ ಕ್ಷಣಗಳಲ್ಲೇ ವಿನಯ್ ಸಾವನ್ನಪ್ಪಿದ್ದಾರೆ.ನಡುಪದವು ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ವಿನಯ್ ಉದ್ಯೋಗದಲ್ಲಿದ್ದರು. ಶಬರಿಮಲೆ ಯಾತ್ರೆಗೆ ತೆರಳುವ ಸಂದರ್ಭ
ಉಳ್ಳಾಲ: 12 ನೇ ಮಹಡಿಯಿಂದ ಬಿದ್ದು ಬಾಲಕಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕುತ್ತಾರು ಸಿಲಿಕೋನಿಯಾ ವಸತಿ ಸಂಕೀರ್ಣದಲ್ಲಿ ತಡರಾತ್ರಿ ವೇಳೆ ಸಂಭವಿಸಿದೆ.ವೈದ್ಯರಾಗಿರುವ ಡಾ. ಮಮ್ತಾಝ್ ಅಹಮ್ಮದ್ ಎಂಬವರ ಪುತ್ರಿ ಹಿಬಾ(15) ಸಾವನ್ನಪ್ಪಿರುವ ಬಾಲಕಿ. 18ನೇ ಮಹಡಿ ಹೊಂದಿರುವ ಸಿಲಿಕೋನಿಯಾ ವಸತಿ ಸಂಕೀರ್ಣದ 12 ಮಹಡಿಯಲ್ಲಿ ವೈದ್ಯ ದಂಪತಿ ವಾಸವಿದ್ದರು. ತಡರಾತ್ರಿ ಏಕಾಏಕಿ ಬಾಲಕಿ ಹಿಬಾ ಮೇಲಿಂದ ಕೆಳಬಿದ್ದು ಸಾವನ್ನಪ್ಪಿದ್ದಾಳೆ.
ಅಂತಾರಾಷ್ಟ್ರೀಯ ಸಮ್ಮೇಳನದ ಪ್ರಯೋಜನ ಯುವಜನತೆಗೆ ಆಗಲಿ. ಜಾಗತಿಕ ಮಟ್ಟದಲ್ಲಿ ವ್ಯಕ್ತಿತ್ವ ವಿಕಾಸವಾಗಲಿ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಣದೀಪ್ ಐಎಎಸ್ ಹೇಳಿದರು. ಅವರು ಯೆನೆಪೋಯ ಪರಿಗಣಿಸಲ್ಪಟ್ಟ ವಿಶ್ವವಿದ್ಯಾನಿಲಯದ ಸಹಯೋಗದಲ್ಲಿ ಯಿಂಡ್ಯೂರನ್ಸ್ ವಿಶ್ವವಿದ್ಯಾಲಯದ ಆವರಣದಲ್ಲಿ ಆಯೋಜಿಸಲಾದ ಎರಡು ದಿನಗಳ ಅಂತರರಾಷ್ಟ್ರೀಯ ಸಮ್ಮೇಳನ ಐಕಾನ್ ಯೂತ್-೨೦೨೫ರ ಸಮಾರೋಪದಲ್ಲಿ ಮಾತನಾಡಿದರು. ಈ ಸಂದರ್ಭದಲ್ಲಿ ಯುವ ಸಬಲೀಕರಣ
ಉಳ್ಳಾಲ: ಯುವತಿಯೋರ್ವಳು ಅರೆಪ್ರಜ್ಞಾವಸ್ಥೆ ಸ್ಥಿತಿಯಲ್ಲಿ ಉಳ್ಳಾಲ ಠಾಣಾ ವ್ಯಾಪ್ತಿಯ ಸರಹದ್ದಿನಲ್ಲಿ ಪತ್ತೆಯಾಗಿದ್ದು, ಮೈಪೂರ್ತಿ ಗಾಯದ ಗುರುತು ಪತ್ತೆ ಆಗಿದ್ದು, ಸಾಮೂಹಿಕ ಅತ್ಯಾಚಾರದ ಶಂಕೆ ಮೇಲೆ ಉಳ್ಳಾಲ ಠಾಣಾ ಪೊಲೀಸರು ತನಿಖೆ ಆರಂಭಿಸಿದ್ದಾರೆ.ತಡರಾತ್ರಿ ವೇಳೆ ಹೊರರಾಜ್ಯದ ಯುವತಿ ನಶೆಯಿಂದ ಸ್ಥಳೀಯ ಮನೆಬಾಗಿಲು ಬಡಿದಿದ್ದಾಳೆ. ನೀರು ಕೇಳುತ್ತಿದ್ದಂತೆ ಅಲ್ಲೇ ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ. ಈ ಕುರಿತು 112 ಗೆ ಮನೆಮಂದಿ ಫೋನಾಯಿಸಿ ಮಾಹಿತಿ