Home ಕರಾವಳಿ Archive by category ಉಳ್ಳಾಳ (Page 26)

ಮುಡಿಪು: “ವಿದ್ಯಾರ್ಥಿ-ಪೋಷಕ ವಿಜಯ ಪಥ” ಪುಸ್ತಕ ಬಿಡುಗಡೆ

ದ.ಕ ಜಿಲ್ಲಾ ಸಾಹಿತ್ಯ ಪರಿಷತ್, ಮಂಗಳೂರು ತಾಲೂಕು ಘಟಕದ ವತಿಯಿಂದ ಮುಡಿಪು ಸೂರಜ್ ಪಿ.ಯು ಕಾಲೇಜ್ ಆಶ್ರಯದಲ್ಲಿ ರೋಟರಿ ಮಂಗಳೂರು ಸೆಂಟ್ರಲ್ ಸಹಕಾರದೊಂದಿಗೆ “ವಿದ್ಯಾರ್ಥಿ -ಪೋಷಕ ವಿಜಯ ಪಥ” ಪುಸ್ತಕ ಬಿಡುಗಡೆ ಹಾಗೂ ಉಪನ್ಯಾಸ ಕಾರ್ಯಕ್ರಮ ಮುಡಿಪು ಪಿಯು ಕಾಲೇಜು ಸಭಾಂಗಣದಲ್ಲಿ  ನಡೆಯಿತು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ

ರಸ್ತೆ ಕಾಮಗಾರಿಗೆ ಊರಿನ ಜನ ಸಹಕರಿಸಿರಿ, ಗೊಂದಲಗಳಿದ್ದರೆ ಇಂಜಿನಿಯರನ್ನು ಸಂಪರ್ಕಿಸಿ : ಖಾದರ್ ಹೇಳಿಕೆ

ಉಳ್ಳಾಲ: ಇವತ್ತು ನಾವು ಇರಬಹುದು, ನಾಳೆ ಇಲ್ಲವಾಗಿರಬಹುದು. ಇದು ಊರವರ ರಸ್ತೆ, ಕಾಮಗಾರಿ ವೇಳೆ ಎಲ್ಲರೂ ಸಹಕರಿಸಿ ಗೊಂದಲಗಳಿದ್ದರೆ ಇಂಜಿನಿಯರನ್ನು ಸಂಪರ್ಕಿಸಿ ಬಗೆಹರಿಸಿಕೊಳ್ಳಿ ಎಂದು ವಿಪಕ್ಷ ಉಪನಾಯಕ ಯು.ಟಿ ಖಾದರ್ ಹೇಳಿದರು. ಅವರು ಕೋಟೆಕಾರು ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಬೀರಿ ಜಂಕ್ಷನ್ನಿನಿಂದ ಉಚ್ಚಿಲ ಬೀಚ್ ಸಂಪರ್ಕಿಸುವ ರಸ್ತೆ ಕಾಂಕ್ರೀಟಿಕರಣ ಕಾಮಗಾರಿಯ ಶಿಲನ್ಯಾಸ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ವಾಣಿಜ್ಯ, ವಸತಿ, ಶಾಲೆಗೆ ಸೇರಿದ ಅನೇಕ

ಉಳ್ಳಾಲ – ಅಬ್ಬಕ್ಕನ ಭವನ ನಿರ್ಮಾಣಕ್ಕೆ ಪ್ರಥಮ ಆದ್ಯತೆ : ಮಾಜಿ ಸಚಿವ ಈಶ್ವರಪ್ಪ ಹೇಳಿಕೆ

ಉಳ್ಳಾಲ ಕ್ಷೇತ್ರದಲ್ಲಿ ಬಿಜೆಪಿ ಶಾಸಕರನ್ನು ಗೆಲ್ಲಿಸಿ ಅಬ್ಬಕ್ಕನ ಭವನ ನಿರ್ಮಾಣಕ್ಕೆ ಪ್ರಥಮ ಆದ್ಯತೆ ನೀಡಲಾಗುವುದು ಎಂದು ಮಾಜಿ ಸಚಿವ ಈಶ್ವರಪ್ಪ ಅಭಿಪ್ರಾಯಪಟ್ಡರು. ಮಂಗಳೂರು ವಿಧಾನ ಸಭಾ ಕ್ಷೇತ್ರದ ಕುತ್ತಾರು ರಾಜರಾಜೇಶ್ವರೀ ಸಿದ್ದಿವಿನಾಯಕ ದೇವಸ್ಥಾನದಿಂದ ತೊಕ್ಕುಟ್ಟು ಜಂಕ್ಷನ್‍ವರೆಗೆ ನಡೆದ ಬಿಜೆಪಿ ಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸಿ ತೊಕ್ಕೊಟ್ಟಿನ ಕೇಂದ್ರ ಬಸ್ ನಿಲ್ದಾಣದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದರು. ಉಳ್ಳಾಲ ಕ್ಷೇತ್ರದಲ್ಲಿ

ಮಾರ್ಚ್ 5 : ಪಿಲಾರ್ ಪಂಜಂದಾಯ ದೈವದ ನೇಮ

ಉಳ್ಳಾಲ ತಾಲೂಕಿನ ಪಿಲಾರ್ ದಾರಂದಬಾಗಿಲಿನಲ್ಲಿ ಮಾರ್ಚ್ 5 ರ ಭಾನುವಾರದಂದು ಪಂಜಂದಾಯ ದೈವದ ನೇಮ ನಡೆಲಿದೆ.ಕುತ್ತಾರ್ ಪಂಜಂದಾಯ ಮೂಲಸಾನದಿಂದ ಶನಿವಾರ ರಾತ್ರಿ ಭಂಡಾರ ಬಂದು ಭಾನುವಾರ ಬೆಳಗ್ಗಿನಿಂದ ಮಧ್ಯಾಹ್ನ ತನಕ ಪಿಲಾರ್ ದಾರಂದಬಾಗಿಲಿನಲ್ಲಿ ನೇಮ ನಡೆಯಲಿದೆ. ಪಿಲಾರ್ ನೇಮದ ಅಂಗವಾಗಿ ಶನಿವಾರ ರಾತ್ರಿ ಪಿಲಾರ್ ಯುವಕ ಮಂಡಲವು “ಶಿವದೂತೆ ಗುಳಿಗೆ” ನಾಟಕ ಪ್ರದರ್ಶನ ಆಯೋಜಿಸಿದೆ. ಕೊರಗ ತನಿಯನಿಗೆ ನೆಲೆ ನೀಡಿದ ದೈವವಾಗಿ ಪಂಜಂದಾಯ ದೈವದ ಕಾರ್ಣಿಕವು

ತಾಂಟ್ರೆ ಬಾ ತಾಂಟ್ರೆ ಖ್ಯಾತಿಯ ರಿಯಾಝ್ ಫರಂಗಿಪೇಟೆಗೆ ಉಳ್ಳಾಲದಲ್ಲಿ ಅದ್ಧೂರಿ ಸ್ವಾಗತ

ಉಳ್ಳಾಲ: ಎಸ್‍ಡಿಪಿಐ ಮಂಗಳೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ರಿಯಾಝ್ ಫರಂಗಿಪೇಟೆ ಘೋಷಣೆಯಾದ ಬಳಿಕ ಮೊದಲ ಬಾರಿಗೆ ಉಳ್ಳಾಲಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಕಾರ್ಯಕರ್ತರು ಹಾಗೂ ಮುಖಂಡರು ಸ್ವಾಗತ ಕಾರ್ಯಕ್ರಮ ಹಮ್ಮಿಕೊಂಡರು. ಉಳ್ಳಾಲ ನಗರಸಭೆ ಎದುರುಗಡೆಯಿರುವ ಪಕ್ಷದ ಕಚೇರಿ ಮುಂಭಾಗದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ರಿಯಾಝ್ ಫರಂಗಿಪೇಟೆ ಅವರು ಮಂಗಳೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಅವಕಾಶ ಕಲ್ಪಿಸಿದ ಪಕ್ಷದ ಎಲ್ಲಾ

ಉಳ್ಳಾಲ: ಯುವಕನ ಕೊಲೆಯತ್ನ

ಉಳ್ಳಾಲ: ಯುವಕನಿಗೆ ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿರುವ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕೋಟೆಪುರ ಆತನ ಮನೆ ಎದುರುಗಡೆಯೇ ನಿನ್ನೆ ತಡರಾತ್ರಿ ವೇಳೆ ಸಂಭವಿಸಿದೆ. ಕೋಟೆಪುರ ನಿವಾಸಿ ಸದಕತ್ತುಲ್ಲಾ (34) ಕೊಲೆಯತ್ನಕ್ಕೆ ಒಳಗಾದವರು. ಗಾಯಾಳುವನ್ನು ಗಂಭೀರ ಸ್ಥಿತಿಯಲ್ಲಿ ಇಂಡಿಯಾನ ಆಸ್ಪತ್ರೆಗೆ ದಾಖಲಿಸಲಾಗಿದೆ. ಛಬ್ಬಿ ಅಲಿಯಾಸ್ ಕಬೀರ್ ಮತ್ತು ರಾಝಿಕ್ ಎಂಬವರು ಇನ್ನಿಬ್ಬರನ್ನು ಸೇರಿಸಿಕೊಂಡು ಕೃತ್ಯ ಎಸಗಿರುವುದಾಗಿ ತಿಳಿದುಬಂದಿದೆ. ಇಬ್ಬರಿಗಾಗಿ

ಸೋಮೇಶ್ವರ : ದೋಣಿ ಮತ್ತು ಮೀನಿನ ಬಲೆ ಬೆಂಕಿಗಾಹುತಿ

ಉಳ್ಳಾಲ: ಸೋಮೇಶ್ವರ ಕಡಲ ಕಿನಾರೆಯಲ್ಲಿಟ್ಟಿದ್ದ ಎರಡು ದೋಣಿಗಳಿಗೆ ಬೆಂಕಿ ತಗುಲಿದ್ದು ದೋಣಿ ಮತ್ತು ಮೀನಿನ ಬಲೆ ಸುಟ್ಟು ಕರಕಲಾಗಿದ್ದು ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದ್ದು, ಕಿಡಿಗೇಡಿಗಳ ಕೃತ್ಯವೆಂದು ಶಂಕಿಸಲಾಗಿದೆ. ಸೋಮೇಶ್ವರದ ಮೀನುಗಾರರಾದ ಅನಿಲ್ ಮತ್ತು ಶೇಖರ್ ಎಂಬವರಿಗೆ ಸೇರಿದ ನಾಡ ದೋಣಿಗೆ ಗುರುವಾರ ಮದ್ಯಾಹ್ನ ಬೆಂಕಿ ತಗುಲಿದೆ. ಸೋಮೇಶ್ವರ ಬಾಸಿತ್ತಾಯರ ಬೈಲಿನ ಸಮುದ್ರ ಕಿನಾರೆಯಲ್ಲಿ ಮೀನುಗಾರರು ನಾಡ ದೋಣಿಯನ್ನ ನಿಲ್ಲಿಸಿದ್ದರು.ಗುರುವಾರ ಮದ್ಯಾಹ್ನ

ಬಗಂಬಿಲ : ಬಿಜೆಪಿ-ಕಾಂಗ್ರೆಸ್ ಪಕ್ಷಗಳಿಂದ ಒಂದೇ ರಸ್ತೆಯ ಎರಡೆರಡು ಉದ್ಘಾಟನೆ

ಉಳ್ಳಾಲ: ಒಂದು ರಸ್ತೆ, ಒಂದೇ ಅನುದಾನ, ಆದರೆ ಉದ್ಘಾ ಟನೆ ಮಾತ್ರ ಎರಡು ದಿನ! ಹೀಗೊಂದು ವಿಲಕ್ಷಣ ಪ್ರಕರಣ ಕೋಟೆಕಾರ್ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದ್ದು, ಬಿಜೆಪಿ-ಕಾಂಗ್ರೆಸ್ ನಡುವಿನ ರಸ್ತೆ ರಾಜಕೀಯಕ್ಕೆ ಸಾಕ್ಷಿಯಾಗಿದೆ. ಕೋಟೆಕಾರ್ ಪಟ್ಟಣ ಪಂಚಾ ಯತ್ ವ್ಯಾಪ್ತಿಯಲ್ಲಿರುವ ಕುಂಪಲ ಬೈಪಾಸ್‌ನಿಂದ ಬಗಂಬಿಲ ಮೂಲಕ ಯೇನಪೋಯ ಆಸ್ಪತ್ರೆಯನ್ನು ಸಂಪರ್ಕಿಸುವ ರಸ್ತೆ ಬಹುತೇಕ ಕಾಂಕ್ರೀಟ್‌ನಿಂದ ಕೂಡಿದೆ. ಈ ರಸ್ತೆಗೆ ವಿವಿಧ ಹಂತದಲ್ಲಿ ಸರಕಾರದಿಂದ

ಮಾರ್ಚ್ 17 ರಂದು ಉಳ್ಳಾಲ ತಾಲೂಕು ಸಾಹಿತ್ಯ ಸಮ್ಮೇಳನ : ಶ್ಯಾಮಲಾ ಮಾಧವ ಸೋಮೇಶ್ವರ ಅಧ್ಯಕ್ಷರಾಗಿ ಆಯ್ಕೆ

ಮುಡಿಪು: ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಉಳ್ಳಾಲ ತಾಲೂಕು ಘಟಕವು ಮಂಗಳೂರು ವಿಶ್ವವಿದ್ಯಾನಿಲಯದ ಸಹಯೋಗದೊಂದಿಗೆ ಮಾರ್ಚ್ 17 ರಂದು ಉಳ್ಳಾಲ ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮಂಗಳಗಂಗೋತ್ರಿಯ ಮಂಗಳ ಸಭಾಂಗಣದಲ್ಲಿ ನಡೆಸಲಾಗುವುದು ಎಂದು ಉಳ್ಳಾಲ ಘಟಕದ ಅಧ್ಯಕ್ಷರಾಗಿರುವ ಡಾ. ಧನಂಜಯ ಕುಂಬ್ಳೆ ತಿಳಿಸಿದ್ದಾರೆ. ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಎಂ. ಪಿ. ಶ್ರೀನಾಥ್ ಮತ್ತು ತಜ್ಞರ ಸಮಿತಿಯು ಉಳ್ಳಾಲ ತಾಲೂಕಿನ

ಉಳ್ಳಾಲ ನಗರಸಭೆ ಭ್ರಷ್ಟಾಚಾರ ಲೋಕಾಯುಕ್ತ ತನಿಖೆಗೆ ಎಸ್‍ಡಿಪಿಐ ಆಗ್ರಹ

ಉಳ್ಳಾಲ: ಉಳ್ಳಾಲ ನಗರಸಭೆಯಲ್ಲಿ ಕಾಂಗ್ರೆಸ್ ನೇತೃತ್ವದ ಆಡಳಿತದಲ್ಲಿ ಮೂಲಭೂತ ಸೌಕರ್ಯ ಅಭಿವೃದ್ಧಿ ಕುಂಠಿತಗೊಂಡಿದ್ದು, ಉಳ್ಳಾಲ ನಗರಸಭೆಯ ಪೌರಾಯುಕ್ತೆ ತಕ್ಷಣ ಉಳ್ಳಾಲದ ಮೂಲಭೂತ ಸೌಕರ್ಯದ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು ಮತ್ತು ಕಳೆದ ಎರಡು ವರ್ಷದ ಅವಧಿಯಲ್ಲಿ ನಡೆದ ಭೃಷ್ಟಾಚಾರದ ವಿಚಾರದಲ್ಲಿ ಕೂಲಂಕುಷ ಪರಿಶೀಲನೆ ನಡೆಸಿ ಲೋಕಾಯುಕ್ತ ತನಿಖೆಗೆ ವಹಿಸಿಕೊಡಬೇಕು ಎಂದು ನಗರಸಭೆಯ ಎಸ್‍ಡಿಪಿಐ ಸದಸ್ಯ ರಮೀಝ್ ನಗರಸಭಾ ಪೌರಾಯುಕ್ತೆಯನ್ನು ಆಗ್ರಹಿಸಿದ್ದು,