ನೆಲ್ಯಾಡಿ: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಕಡಬ ತಾಲೂಕಿನ ಕೌಕ್ರಾಡಿ ಗ್ರಾಮದ ಪೆರಿಯಶಾಂತಿ ಎಂಬಲ್ಲಿ ಚಲಿಸುತ್ತಿದ್ದ ಲಾರಿಗೆ ಹಿಂಬದಿಯಿಂದ ಬಂದ ಇನ್ನೊಂದು ಲಾರಿ ಡಿಕ್ಕಿಯಾಗಿ, ಚಾಲಕ ಗಾಯಗೊಂಡ ಘಟನೆ ಮಂಗಳವಾರದಂದು ರಾತ್ರಿ ನಡೆದಿದೆ. ಹಾಸನ ನಿವಾಸಿ ಹೆಚ್.ಎಸ್.ಪರಮೇಶ ಎಂಬವರು ಅಶೋಕ್ ಲೈಲೇಂಡ್ ಲಾರಿಯಲ್ಲಿ ಮಂಗಳೂರಿನ ಕಿನ್ನಿಗೋಳಿಯಿಂದ ಸುಣ್ಣ
ಬಂಟ್ವಾಳ: ಕರ್ತವ್ಯದ ವೇಳೆ ಮೆಸ್ಕಾಂನ ಮೀಟರ್ ರೀಡರ್ ಒಬ್ಬರಿಗೆ ಸಾಕು ನಾಯಿಯೊಂದು ಕಚ್ಚಿ ಗಂಭೀರ ಗಾಯಗೊಳಿಸಿದ ಘಟನೆ ರಾಯಿ ಗ್ರಾಮದ ಕೈತ್ರೋಡಿ ಕ್ವಾಟ್ರಸ್‌ನಲ್ಲಿ ಸೋಮವಾರ ಬೆಳಿಗ್ಗೆ ನಡೆದಿದೆ. ಇರಾ ಗ್ರಾಮದ ನಿವಾಸಿಯಾಗಿರುವ ಸಂಪತ್ ಆರ್. ಶೆಟ್ಟಿ ನಾಯಿ ಕಡಿತಕ್ಕೊಳಗಾಗಿದ್ದು ಕೈಗೆ ಗಂಭೀರ ಗಾಯಗೊಂಡ ಅವರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.ಸಂಪತ್ ಅವರು ಕೈತ್ರೋಡಿ ಕ್ವಾಟ್ರಸ್ ಬಳಿ ಮೀಟರ್ ರೀಡಿಂಗ್ ಮುಗಿಸಿ ಮುಖ್ಯ
ವಿಟ್ಲ: ಶಂಕಿತ ಬಾಂಗ್ಲಾ ಪ್ರಜೆಗೆ ಪಾಸ್ ಪೋರ್ಟ್ ಮಾಡಿಕೊಡಲು ಸಹಾಯ ಮಾಡಿದ ಆರೋಪದ ಮೇಲೆ ವಿಟ್ಲ ಪೋಲೀಸ್ ಠಾಣೆಯ ಸಿಬ್ಬಂದಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಂಧಿತನನ್ನು ಪೋಲೀಸ್ ಕಾನ್ಸ್ಟೇಬಲ್ ಪ್ರದೀಪ್ ಎಂದು ಗುರುತಿಸಲಾಗಿದೆ. ಶಂಕಿತ ಬಾಂಗ್ಲಾ ಪ್ರಜೆ ಶಕ್ತಿದಾಸ್ ಎಂಬಾತನಿಗೆ ಪಾಸ್ ಪೋರ್ಟ್ ಪಡೆಯಲು ಸಹಾಯ ಆರೋಪ ಇವರ ಮೇಲಿದೆ. ಅದೇ ವಿಟ್ಲ ಠಾಣೆಯ ಕಾನ್ಸ್ಟೇಬಲ್ ಸಾಬೀ ಮಿರ್ಜಿ ನೀಡಿದ ದೂರಿನ ಆದಾರದ ಮೇಲೆ ಕಾನ್ಸ್ಟೇಬಲ್ ಪ್ರದೀಪ್ ನನ್ನು ಅರೆಸ್ಟ್
ಡಿ. 13ರಂದು ಸಂಜೆ, ಬಂಟ್ವಾಳ, ತುಂಬೆ ಗ್ರಾಮದ ಹನಮನಗರ ಎಂಬಲ್ಲಿ, ರಾಷ್ಟ್ರೀಯ ಹೆದ್ದಾರಿ ಬಳಿ ಯಾರೋ ವ್ಯಕ್ತಿಗಳು ಅಕ್ರಮವಾಗಿ ನಿಷೇದಿತ ಮಾದಕ ವಸ್ತುವನ್ನು ಮಾರಾಟ ಮಾಡಲು ವಶದಲ್ಲಿಟ್ಟುಕೊಂಡಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ, ಮಂಜುನಾಥ ಟಿ, ಪೊಲೀಸ್ ಉಪ ನಿರೀಕ್ಷಕರು (ಕಾ&ಸು), ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ ರವರು, ಸಿಬ್ಬಂದಿಗಳೊಂದಿಗೆ ಸದ್ರಿ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ, ರಾಷ್ಟ್ರೀಯ ಹೆದ್ದಾರಿಯ ಪಕ್ಕ ನಿರ್ಜನ ಪ್ರದೇಶದಲ್ಲಿ ಇಬ್ಬರು
ವಿಟ್ಲ: ತೆಂಗಿನಕಾಯಿ ಕೀಳುತ್ತಿದ್ದಾಗ ಕರೆಂಟ್ ಶಾಕ್ ಹೊಡೆದು ಯುವಕ ಮೃತಪಟ್ಟ ಘಟನೆ ಅಳಿಕೆಯಲ್ಲಿ ನಡೆದಿದೆ. ಅಳಿಕೆ ಗ್ರಾಮದ ಇಬ್ರಾಹಿಂ ಉಸ್ತಾದ್ ಅವರ ಪುತ್ರ ಇಸ್ಮಾಯಿಲ್(37) ಮೃತಪಟ್ಟ ಯುವಕ. ತೆಂಗಿನ ಮರದಿಂದ ಕಬ್ಬಿಣದ ದೋಟಿ ಬಳಸಿ ಕಾಯಿ ಕೀಳುತ್ತಿದ್ದ ವೇಳೆ ವಿದ್ಯುತ್ ತಂತಿಗೆ ಸ್ಪರ್ಶಿಸಿ ಕರೆಂಟ್ ಶಾಕ್ ಹೊಡೆದಿದೆ. ತಕ್ಷಣವೇ ಆಸ್ಪತ್ರೆಗೆ ಸಾಗಿಸಿದರೂ ಬದುಕಿ ಉಳಿಯಲಿಲ್ಲ. ಮೃತರಿಗೆ ಪತ್ನಿ, ಪುತ್ರಿ, ಪುತ್ರ ಇದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕೇಪು ಗ್ರಾಮ ಪಂಚಾಯಿತಿಗೆ ಇಂದು ಭೇಟಿ ನೀಡಿ ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯ ರೊಂದಿಗೆ, ಕೇಂದ್ರ ಸರ್ಕಾರದ ಯೋಜನೆಗಳಾದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (MGNREGA), ಪ್ರಧಾನ ಮಂತ್ರಿ ಆವಾಸ್ ಯೋಜನೆ, 15 ನೇ ಹಣಕಾಸು ಅನುದಾನ, ಸ್ವಚ್ಛ ಭಾರತ ಮಿಷನ್ (SBM), ಜಲಜೀವನ್ ಮಿಷನ್ (JJM) ಮತ್ತು ರಾಜ್ಯ ಸರಕಾರದ ಯೋಜನೆಯಾದ ಬಸವ ವಸತಿ ಮತ್ತು ಡಾ. ಬಿ ಆರ್ ಅಂಬೇಡ್ಕರ್
ಬಂಟ್ವಾಳ: ಜಾತಿ ಗಣತಿ ಕಾರ್ಯಕ್ಕೆ ತೆರಳಿದ್ದ ಶಿಕ್ಷಕರೋರ್ವರು ಜೇನು ನೊಣದ ದಾಳಿಗೆ ಒಳಗಾಗಿ ಗಂಭೀರ ಗಾಯಗೊಂಡ ಘಟನೆ ಸಜೀಪಮುನ್ನೂರು ಗ್ರಾಮದ ಆಲಾಡಿ ಬಳಿ ಶನಿವಾರ ನಡೆದಿದೆ. ಸಜೀಪಮೂಡ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ವಿಜ್ಞಾನ ಶಿಕ್ಷಕ ವೆಂಕಟರಮಣ ಆಚಾರ್ ಜೇನು ನೊಣದ ದಾಳಿಗೊಳಗಾಗಿದ್ದು ಚೇತರಿಸಿಕೊಂಡಿದ್ದಾರೆ. ಶಿಕ್ಷಣ ವೆಂಕಟರಮಣ ಆಚಾರ್ ಅವರು ಸಜೀಪಮುನ್ನೂರು ಗ್ರಾಮದ ಆಲಾಡಿ, ಶಾರಾದನಗರದ ಬಳಿ ಗಣತಿ ಕಾರ್ಯಕ್ಕೆ ತೆರಳಿದ್ದ ವೇಳೆ ಅಲ್ಲಿನ
ಧರ್ಮಸ್ಥಳ ಕ್ಷೇತ್ರದ ಕುರಿತು ನಿರಂತರ ಅಪಪ್ರಚಾರ ಮಾಡಲಾಗುತ್ತಿದೆ ಎಂಬ ಹಿನ್ನೆಲೆ ರವಿವಾರ ಬೆಳಗ್ಗೆ ರಾಜ್ಯ ಬಿಜೆಪಿ ನಿಯೋಗ ಧರ್ಮಸ್ಥಳ ಕ್ಷೇತ್ರಕ್ಕೆ ಭೇಟಿ ದೇವರ ದರ್ಶನ ಪಡೆದಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ವಿಧಾನ ಪರಿಷತ್ ವಿಪಕ್ಷ ನಾಯಕರು, ಬಿಜೆಪಿಯ ಶಾಸಕರು, ಸಂಸದರು, ವಿಧಾನ ಪರಿಷತ್ ಸದಸ್ಯರು, ಪಕ್ಷದ ವಿವಿಧ ಪದಾಧಿಕಾರಿಗಳು ಭೇಟಿ ನೀಡಿ ದೇವರ ದರ್ಶನ ಪಡೆದು ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿಯಾಗಿ
ವಿಟ್ಲ: ಅಕ್ರಮವಾಗಿ ಕೆಂಪು ಕಲ್ಲು ಸಾಗಾಟ ಮಾಡುತ್ತಿದ್ದ ಲಾರಿ ಮತ್ತು ಇಬ್ಬರು ಚಾಲಕರನ್ನು ವಿಟ್ಲ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ವಿಟ್ಲ ಕಸಬಾ ಗ್ರಾಮದ ಕಾಶಿಮಠ ಎಂಬಲ್ಲಿ ವಿಟ್ಲ ಎಸೈ ರಾಮಕೃಷ್ಣ ಮತ್ತು ಸಿಬ್ಬಂದಿಗಳು ವಾಹನ ತಪಾಸಣೆ ಮಾಡುತ್ತಿದ್ದಾಗ ಕಡೆಯಿಂದ ವಿಟ್ಲ ಕಡೆಗೆ ಬರುತ್ತಿದ್ದ ಎರಡು ಲಾರಿಗಳು ನಿಲ್ಲಿಸಿ, ತಪಾಸಣೆ ನಡೆಸಿದಾಗ ಅದರಲ್ಲಿ ತಲಾ 500 ಕೆಂಪು ಕಲ್ಲುಗಳಿದ್ದು, ಅಕ್ರಮ ಸಾಗಾಟ ಎಂಬುದು ಬೆಳಕಿಗೆ ಬಂದಿದೆ. ಲಾರಿಗೆ ಕೇರಳ ರಾಜ್ಯದ ಪೆರ್ಲ
ಕರ್ನಾಟಕ ವಿಧಾನಸಭೆಯ ಸರ್ಕಾರಿ ಭರವಸೆಗಳ ಸಮಿತಿ ಸಭೆ ಬೆಂಗಳೂರಿನ ಶಾಸಕರ ಭವನದ ಸಮ್ಮೇಳನ ಸಭಾಂಗಣದಲ್ಲಿ ನಡೆಯಿತು. ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದ ಭರವಸೆಗಳ ಕುರಿತು ಸಭೆಯಲ್ಲಿ ಚರ್ಚೆಗಳು ನಡೆಯಿತು. ಸಭೆಯಲ್ಲಿ ಭಾಗವಹಿಸಿದ ಬಂಟ್ವಾಳ ಶಾಸಕರಾದ ಶ್ರೀ ರಾಜೇಶ್ ನಾಯ್ಕ್ ಉಳಿಪ್ಪಾಡಿ ಇವರು ಬಂಟ್ವಾಳ ಕ್ಷೇತ್ರದಲ್ಲಿ ಹಾದು ಹೋಗುವ ಲೋಕೋಪಯೋಗಿ ಇಲಾಖೆಯ ರಸ್ತೆಗಳ ಅಭಿವೃದ್ಧಿ ಕುರಿತು ಚರ್ಚಿಸಿದರು. ಬಾರಿ ಮಳೆಯಿಂದ ಪ್ರಮುಖ ರಸ್ತೆಗಳು ಹಾನಿಯಾಗೊಂಡು ವಾಹನ ಸಂಚಾರ ಕಷ್ಟ




























