Home ಕರಾವಳಿ Archive by category ಬಂಟ್ವಾಳ (Page 4)

ವಿಟ್ಲ: ಕೇಪುನಲ್ಲಿ ಸಿಡಿಲು ಬಡಿದು ಮನೆಗೆ ಹಾನಿ

ವಿಟ್ಲ: ರವಿವಾರ ಸಂಜೆ ಗುಡುಗು- ಗಾಳಿ ಸಹಿತ ಧಾರಾಕಾರ ಮಳೆಯಾಗಿದ್ದು, ಕೇಪುನಲ್ಲಿ ಮನೆಗೆ ಸಿಡಿಲು ಬಡಿದು ಹಾನಿಯಾಗಿರುವ ಜೊತೆಗೆ ನರಿಕೊಂಬುವಿನಲ್ಲಿ ಮನೆಯ ಮೇಲೆ ತೆಂಗಿನಮರ ಬಿದ್ದು ಹಾನಿಯಾಗಿದೆ. ಕೇಪು ಗ್ರಾಮದ ಕೋಡಂದೂರಿನಲ್ಲಿ ಜಯರಾಮ ನಾಯ್ಕ ಅವರ ಮನೆಗೆ ಸಿಡಿಲು ಬಡಿದು ಗೋಡೆ ಬಿರುಕು ಬಿಟ್ಟಿದ್ದು, ವಿದ್ಯುತ್ ಪರಿಕರಗಳಿಗೆ ಹಾನಿಯಾಗಿದೆ. ಅಳಿಕೆ ಗ್ರಾಮದ

ವಿಟ್ಲ: ನದಿಗೆ ಬಿದ್ದ ವ್ಯಕ್ತಿಯನ್ನು ರಕ್ಷಿಸಿದ ಯುವಕರು

ವಿಟ್ಲ : ಭಾನುವಾರ ವಿಟ್ಲ ಭಾಗದಲ್ಲಿ ವ್ಯಾಪಕ ಮಳೆಯಾಗಿದ್ದು, ಮಧ್ಯಾಹ್ನ ಶುರುವಾದ ಭಾರೀ ಮಳೆಯಿಂದ ನದಿಗಳು ಉಕ್ಕಿ ಹರಿದಿದೆ. ಈ ವೇಳೆ ಆಯತಪ್ಪಿ ನದಿಗೆ ಬಿದ್ದ ವ್ಯಕ್ತಿಯನ್ನು ಯುವಕರು ರಕ್ಷಿಸಿ ಮಾನವೀಯತೆ ಮೆರೆದಿದ್ದಾರೆ. ವಿಟ್ಲದ ಸುರಂಬಡ್ಕದ ಕಿಂಡಿ ಅಣೆಕಟ್ಟು ಸೇತುವೆ ಬಳಿ ಸಂಜೆ ವೇಳೆ ವ್ಯಕ್ತಿಯೊಬ್ಬರು ಸೇತುವೆಯಲ್ಲಿ ಹೋಗುತ್ತಿದ್ದಾಗ ಆಯತಪ್ಪಿ ನದಿಗೆ ಬಿದ್ದಿದ್ದಾರೆ. ಕೂಡಲೇ ಅಲ್ಲೇ‌ ಇದ್ದ ಯುವಕರು ನದಿಯ ಪ್ರವಾಹವನ್ನೂ ಲೆಕ್ಕಿಸದೆ ಹಾರಿ ಈಜಾಡಿಕೊಂಡು ಹೋಗಿ

ಬಂಟ್ವಾಳ : ಕ್ಷಯ ರೋಗಿಗಳಿಗೆ ಆಹಾರ ಸಾಮಾಗ್ರಿಗಳ ಕಿಟ್ ವಿತರಣೆ

ಬಂಟ್ವಾಳ: ಕೇಂದ್ರ ಸರಕಾರದ ನಿಕ್ಷಯ ಮಿತ್ರ ಯೋಜನೆಯಡಿ ಫರಂಗಿಪೇಟೆ ಸೇವಾಂಜಲಿ ಪ್ರತಿಷ್ಠಾನದ ವತಿಯಿಂದ ಕ್ಷಯ ರೋಗಿಗಳಿಗೆ ಧವಸ ಧಾನ್ಯಗಳನ್ನೊಳಗೊಂಡ ಆಹಾರ ಸಾಮಾಗ್ರಿಗಳ ಕಿಟ್ ವಿತರಣಾ ಸಮಾರಂಭ ಫರಂಗಿಪೇಟೆಯ ಸೇವಾಂಜಲಿ ಸಭಾಂಗಣದಲ್ಲಿ ನಡೆಯಿತು. ಆಹಾರ ಕಿಟ್ ವಿತರಿಸಿದ ಲಯನ್ಸ್ ಜಿಲ್ಲಾ ಮಾಜಿ ಗವರ್ನರ್ ಸಂಜಿತ್ ಎಸ್.ಶೆಟ್ಟಿ ಮಾತನಾಡಿ, ಸೇವಾ ಕಾರ್ಯಗಳಿಗೆ ಮನಸ್ಸು ಅತಿ ಮುಖ್ಯವಾಗಿದ್ದು, ಆಗ ನಾವು ನೀಡಿದ ಸೇವೆಯೂ ಸಾರ್ಥಕತೆಯನ್ನು ಪಡೆಯುತ್ತದೆ. ಸೇವಾ ಕಾರ್ಯಗಳಲ್ಲಿ

ಕರಾವಳಿಯಲ್ಲಿ ತೆನೆ ಹಬ್ಬದ ಸಂಭ್ರಮ..!

ಏಸು ಕ್ರಿಸ್ತರಿಗೆ ಜನ್ಮ ನೀಡಿದ ಮಹಾ ಮಾತೆ ಪವಿತ್ರ ಮೇರಿ ಮಾತೆಯ ಜನ್ಮ ದಿನವಾಗಿರೋ ಇಂದು ಕರಾವಳಿಯ ಕೊಂಕಣಿ ಕ್ರೈಸ್ತರಿಗೆ ವಿಶೇಷ ದಿನ. ಮೇರಿ ಮಾತೆಯ ಹುಟ್ಟು ಹಬ್ಬವನ್ನ ವಿಶೇಷ ರೀತಿಯಲ್ಲಿ ಆಚರಿಸೋ ಕ್ರೈಸ್ತರು ಇದನ್ನ ತೆನೆ ಹಬ್ಬ ಅಥವಾ ಬೆಳೆ ಹಬ್ಬ ಅಂತ ಆಚರಿಸ್ತಾರೆ. ಈ ಸಂಧರ್ಭದಲ್ಲಿ ವಿಶೇಷವಾಗಿ ಹೂವುಗಳನ್ನ ಎಸೆದು ಹೊಸ ಪೈರುಗಳನ್ನ ಹಿಡಿದು ಮೇರಿ ಮಾತೆಗೆ ಸ್ವಾಗತ ನೀಡ್ತಾರೆ. ಈ ಹಿನ್ನೆಲೆಯಲ್ಲಿ ಬಂಟ್ವಾಳ ತಾಲೂಕಿನ ಪೆರುವಾಯಿಯ ಫಾತಿಮಾ ಮಾತೆಯ ದೇವಾಲಯದಲ್ಲಿ

ಬಂಟ್ವಾಳ: ನವ ದಂಪತಿ ಪ್ರಯಾಣಿಸುತ್ತಿದ್ದ ಕಾರು ಅಪಘಾತ: ನವವಿವಾಹಿತೆ ಸಾವು

ಬಂಟ್ವಾಳ: ನವ ದಂಪತಿಗಳು ಇಬ್ಬರು ಪ್ರಯಾಣಿಸುತ್ತಿದ್ದ ಕಾರು ಬೀಕರ ಅಪಘಾತದಲ್ಲಿ ನವವಿವಾಹಿತೆ ಸಾವನ್ನಪ್ಪಿದ್ದು ಪತಿ ಗಂಭೀರವಾಗಿ ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ ಮಂಗಳೂರು ಬೆಂಗಳೂರು ರಸ್ತೆಯ ಬಂಟ್ವಾಳದ ತಲಪಾಡಿ ಎಂಬಲ್ಲಿ ನಡೆದಿದೆ. ಪೆರ್ನೆ ಸಮೀಪದ ಒಡ್ಯದಗಯ ನಿವಾಸಿ ಅನಿಶ್ ಕೃಷ್ಣ ಎಂಬವರ ಪತ್ನಿ ಮಾನಸ ಸಾವನ್ನಪ್ಪಿದ ನವವಿವಾಹಿತೆ. ಘಟನೆಯಿಂದ ಗಂಭೀರವಾಗಿ ಗಾಯಗೊಂಡ ಅನಿಶ್ ಕೃಷ್ಣ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ

ಪೊಳಲಿ, ಉಳಾಯಿಬೆಟ್ಟು ಸೇತುವೆ ಘನ ವಾಹನ ಸಂಚಾರ ನಿಷೇಧ – ತುರ್ತು ಓಡಾಟ ಅನುಮತಿಗೆ ಶಾಸಕರು ,ಸಂಸದರ ಸಲಹೆ

ಗುರುಪುರ : ಪೊಳಲಿ ಸೇತುವೆ, ಉಳಾಯಿಬೆಟ್ಟು ಸೇತುವೆ ಸಹಿತ ದಕ್ಷಿಣ ಕನ್ನಡ ಜಿಲ್ಲೆಯ ಒಟ್ಟು ಆರು ಹಳೆ ಸೇತುವೆಗಳ ದುರಸ್ತಿ ಅಥವಾ ಹೊಸ ಸೇತುವೆ ನಿರ್ಮಾಣ ಹಿನ್ನೆಲೆಯಲ್ಲಿ ಪೊಳಲಿ ಮತ್ತು ಉಳಾಯಿಬೆಟ್ಟು ಸೇತುವೆಯಲ್ಲಿ ಘನ ವಾಹನ ಸಂಚಾರ ನಿಷೇಧಗೊಳಿಸಿ ಆದೇಶ ಹೊರಡಿಸಿರುವ ದ.ಕ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಅವರೊಂದಿಗೆ ಮಂಗಳೂರು ಸಂಸದ ಕ್ಯಾ. ಬ್ರಿಜೇಶ್ ಚೌಟ, ಶಾಸಕರಾದ ಡಾ. ಭರತ್ ಶೆಟ್ಟಿ, ರಾಜೇಶ್ ನಾಯ್ಕ್ ಅವರು ಡೀಸಿ ಕಚೇರಿಯಲ್ಲಿ ತುರ್ತು ಸಭೆ ನಡೆಸಿ, ಪರ್ಯಾಯ

ಪ್ರವಾಹಪೀಡಿತ ಪ್ರದೇಶಗಳಿಗೆ ಪದ್ಮರಾಜ್ ಆರ್. ಪೂಜಾರಿ ಭೇಟಿ

ಬಂಟ್ವಾಳ ತಾಲೂಕಿನ ನಾವೂರು, ದೇವಸ್ಯಪಡೂರು, ಸರಪಾಡಿ ಗ್ರಾಮದಲ್ಲಿ ಮಳೆಹಾನಿ, ಪ್ರಾಕೃತಿಕ ವಿಕೋಪ, ಪ್ರವಾಹಪೀಡಿತ ಪ್ರದೇಶಗಳಿಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್. ಪೂಜಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಲ್ಲಿಪಾದೆ ಚರ್ಚ್ ಧರ್ಮಗುರುಗಳಾದ ಫಾ.ರೋಬರ್ಟ್ ಡಿಸೋಜ, ಚರ್ಚ್ ಉಪಾಧ್ಯಕ್ಷರಾದ. ನವೀನ್ ಮೊರಾಸ್, ಸರಪಾಡಿ ಗ್ರಾಮ ಪಂಚಾಯಿತಿ ಸದಸ್ಯರಾದ ವಿನ್ಸೆಂಟ್ ಪಿಂಟೋ, ಬಾಲಕೃಷ್ಣ ಪೂಜಾರಿ, ನಾವೂರು ಗ್ರಾಮ ಪಂಚಾಯಿತಿ ಸದಸ್ಯರಾದ ಲವೀನಾ ಮೊರಾಸ್,

ಬಂಟ್ವಾಳ: ಮತ್ತೆ ನೆರೆಯಾತಂಕ, ರಾತ್ರಿ ನಿದ್ದೆ ಬಿಟ್ಟು ಕಾರ್ಯ ನಿರ್ವಹಿಸಿದ ಪುರಸಭೆ ಸಿಬ್ಬಂದಿಗಳು

ಬಂಟ್ವಾಳ: ರಾತ್ರಿ ಮತ್ತೆ ನೆರೆ ಭೀತಿ ಎದುರಾದ ಹಿನ್ನಲೆಯಲ್ಲಿ ಬಂಟ್ವಾಳ ಪುರಸಭೆಯ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ ಅವರು ತನ್ನ ಅಧಿಕಾರಿಗಳು ಹಾಗೂ ಪೌರಕಾರ್ಮಿಕರೊಂದಿಗೆ ಮಧ್ಯರಾತ್ರಿ 1.30 ರ ವೇಳೆಗೆ ನೆರೆಪೀಡಿತ ತಗ್ಗು ಪ್ರದೇಶಗಳಿಗೆ ದೌಡಾಯಿಸಿ ಜನರ ಸುರಕ್ಷತೆಯ ದೃಷ್ಟಿಯಿಂದ ಅಪಾಯಕಾರಿ ರಸ್ತೆಗಳಾದ ಗೂಡಿನಬಳಿ, ಕಂಚುಗಾರ ಪೇಟೆ, ಆಲಡ್ಕ, ನಂದಾವರ, ಬಡ್ಡಕಟ್ಟೆಯಲ್ಲಿ ಬ್ಯಾರಿಕೇಡ್ ಹಾಗೂ ರಿಬ್ಬನ್ ಗಳನ್ನು ಕಟ್ಟಿ ಮುಂಜಾಗೃತ ಕ್ರಮಗಳನ್ನು ಕೈಗೊಂಡರು.

ಕರಾವಳಿಯನ್ನು ನಡುಗಿಸಿದ್ದ ಭೀಕರ ಪ್ರವಾಹಕ್ಕೆ 50 ವರ್ಷ..!

ಬಂಟ್ವಾಳ: ಇಡೀ ಜಿಲ್ಲೆಯನ್ನು ತಲ್ಲಣಗೊಳಿಸಿದ್ದ 1923ರ ಮಾರಿಬೊಳ್ಳ (ಭೀಕರ ಪ್ರವಾಹ)ಕ್ಕೆ ಕಳೆದ ವರ್ಷ ನೂರು ವರ್ಷ ತುಂಬಿತ್ತು. ಇದೀಗ 1974ರಲ್ಲಿ ಕಾಣಿಸಿಕೊಂಡಿದ್ದ ಭೀಕರ ಪ್ರವಾಹಕ್ಕೆ ಈ ವರ್ಷ 50 ತುಂಬುತ್ತಿದೆ. ಅಂದು ಜುಲೈ 26ರಂದು ಶುಕ್ರವಾರ ಪ್ರವಾಹ ಕಾಣಿಸಿಕೊಂಡಿತ್ತು, ಇದೀಗ ಮತ್ತೆ ಜುಲೈ 26 ಕೂಡ ಶುಕ್ರವಾರವೇ ಬರುತ್ತಿರುವುದು ವಿಶೇಷ. 1923ರ ಪ್ರವಾಹದ ಕುರಿತು ಬಂಟ್ವಾಳ, ಪಾಣೆಮಂಗಳೂರು ಭಾಗದ ಕಟ್ಟಡಗಳಲ್ಲಿ ಮುಳುಗಿರುವ ಜಾಗಕ್ಕೆ ಹಾಕಿರುವ

ಬಂಟ್ವಾಳ : ನೇಣು ಬಿಗಿದು ಯುವಕ ಆತ್ಮಹತ್ಯೆ

ಬಂಟ್ವಾಳ : ಯುವಕನೋರ್ವ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಾಣಿ ಸಮೀಪದ ಬುಡೋಳಿ ಮಡಲ ಎಂಬಲ್ಲಿ ನಡೆದಿದೆ. ಬುಡೋಳಿ ಮಡಲ ನಿವಾಸಿ ಸುಶಾಂತ್ (25) ಮೃತ ಯುವಕ. ಸುಶಾಂತ್ ಮಿನಿ ಬಸ್ ಖರೀದಿಸಿ ಸ್ವಂತ ವಾಹನದಲ್ಲಿ ಚಾಲಕನಾಗಿ ದುಡಿಯುತ್ತಿದ್ದ. ಸಾಮಾಜಿಕವಾಗಿ ಸೇವಾಕಾರ್ಯಗಳನ್ನು ಸಂಘಟನೆಯ ಜೊತೆಗೆ ‌ಮಾಡಿಕೊಂಡಿದ್ದು, ಉತ್ತಮ ಯುವಕನಾಗಿ ಗುರುತಿಸಿಕೊಂಡಿದ್ದ. ವಿಟ್ಲ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಆತ್ಮಹತ್ಯೆಗೆ