Home ಕರಾವಳಿ Archive by category ಮಂಗಳೂರು (Page 105)

ಮಂಗಳೂರು: ಸೆ.17ರಂದು ಪುಣೆ ಕುಲಾಲ ಸುಧಾರಕ ಸಂಘದ 45ನೇ ವಾರ್ಷಿಕ ಮಹಾಸಭೆ- ಸಾಂಸ್ಕ್ರತಿಕ ಕಾರ್ಯಕ್ರಮ

ಮಂಗಳೂರು: ಸೆ.17ರಂದು ಪುಣೆ ಕುಲಾಲ ಸುಧಾರಕ ಸಂಘದ 45ನೇ ವಾರ್ಷಿಕ ಮಹಾಸಭೆ- ಸಾಂಸ್ಕ್ರತಿಕ ಕಾರ್ಯಕ್ರಮ ಮಂಗಳೂರು: ಪುಣೆ ಕುಲಾಲ ಸುಧಾರಕ ಸಂಘದ 45ನೇ ವಾರ್ಷಿಕ ಮಹಾಸಭೆಯು ಸೆ.17ರಂದು ಬೆಳಿಗ್ಗೆ 10ಗಂಟೆಗೆ ಪುಣೆಯ ಡಾ.ಶ್ಯಾಮ್‍ರಾವ್ ಕಲ್ಮಾಡಿ ಕನ್ನಡ ಹೈಸ್ಕೂಲ್‍ನಲ್ಲಿ ನಡೆಯಲಿದೆ. ಬೆಳಿಗ್ಗೆ ಸಾಂಸ್ಕ್ರತಿಕ ಕಾರ್ಯಕ್ರಮ, ಸಭಾ ಕಾರ್ಯಕ್ರಮ,

ಫಾದರ್ ಮುಲ್ಲರ್ ಚಾರಿಟೇಬಲ್ ಇನ್‌ಸ್ಟಿಟ್ಯೂಷನ್‌ನ ಮಾಜಿ ನಿರ್ದೇಶಕ ರೆ. ರೆವ್. ಬ್ಯಾಪ್ಟಿಸ್ಟ್ ಮೆನೆಜಸ್ ನಿಧನ

ಫಾದರ್ ಮುಲ್ಲರ್ ಚಾರಿಟೇಬಲ್ ಇನ್‌ಸ್ಟಿಟ್ಯೂಷನ್‌ನ ಮಾಜಿ ನಿರ್ದೇಶಕ ರೆ. ರೆವ್. ಬ್ಯಾಪ್ಟಿಸ್ಟ್ ಮೆನೆಜಸ್ ಅವರು ಬುಧವಾರ ನಿಧನರಾದರು. ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾಗಿ, ಅಗ್ರಾರ್‌ನ ಮೋಸ್ಟ್ ಹೋಲಿ ರಿಡೀಮರ್ ಚರ್ಚ್‌ನಲ್ಲಿ ಸಹಾಯಕ ಪ್ಯಾರಿಷ್ ಪಾದ್ರಿಯಾಗಿ, ಮಂಗಳೂರಿನ ಸೇಂಟ್ ಆಂಟೋನಿ ಚಾರಿಟೇಬಲ್ ಸಂಸ್ಥೆಗಳಲ್ಲಿ ಸಹಾಯಕ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದ ಬ್ಯಾಪ್ಟಿಸ್ಟ್ ಮೆನೆಜಸ್ ಅವರು ೧೯೭೭ರಲ್ಲಿ ರೋಮ್‌ನಲ್ಲಿ ನೈತಿಕ ಥಿಯಾಲಜಿ ಮತ್ತು 1982ರಲ್ಲಿ

ಮಂಗಳೂರು – ರಾ.ಹೆದ್ದಾರಿಗೆ ಸ್ವಾಧೀನಪಡಿಸಿದ ಭೂಮಿಗೆ ಪರಿಹಾರಕ್ಕೆ ಆಗ್ರಹ

ಮಂಗಳೂರಿನ ನಂತೂರಿನಿಂದ ಮೂಡುಬಿದರೆಯ ತನಕ ರಾಷ್ಟ್ರೀಯ ಹೆದ್ದಾರಿಗಾಗಿ ಸ್ವಾಧೀನಪಡಿಸಿದ ಭೂಮಿಗೆ ಸೂಕ್ತ ಪರಿಹಾರ ನೀಡುವಲ್ಲಿ ವಿಳಂಬ ಆರೋಪಿಸಿ ಎನ್.ಎಚ್. 169 ಭೂ ಮಾಲೀಕರ ಹೋರಾಟ ಸಮಿತಿ ವತಿಯಿಂದ ನಂತೂರಿನ ರಾಷ್ಟ್ರೀಯ ಹೆದ್ದಾರಿ ಯೋಜನಾ ನಿರ್ದೇಶಕರ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಭೂ ಮಾಲಕರ ಹೋರಾಟ ಸಮಿತಿ ಅಧ್ಯಕ್ಷೆ ಮರಿಯಮ್ಮ ಥಾಮಸ್ ಅವರು, ರಾ.ಹೆದ್ದಾರಿ 169ರ ಅಗಲೀಕರಣಕ್ಕಾಗಿ ಭೂಸ್ವಾಧೀನಗೊಂಡವರಿಗೆ

ಮಂಗಳೂರು: ಪೆಟ್ ಝೋನ್ ಸಾಕು ಪ್ರಾಣಿ ಪಕ್ಷಿಗಳ ಮಾರಾಟ ಮಳಿಗೆ ಶುಭಾರಂಭ

ಪೆಟ್ ಝೋನ್ ಸಾಕು ಪ್ರಾಣಿ ಪಕ್ಷಿಗಳ ಮಾರಾಟ ಮಳಿಗೆ ಮಂಗಳೂರು ನಗರದ ನೆಲ್ಲಿಕಾಯಿ ರಸ್ತೆಯಲ್ಲಿರುವ ಇಂಟರ್ ಸಿಟಿ ಕಟ್ಟಡಲ್ಲಿ ಶುಭಾರಂಭಗೊಂಡಿತು. ಇಬ್ರಾಹಿಂ ಶಕೀಲ್ ಇಸ್ಮಾಯಿಲ್ ಮತ್ತು ಸಫ್ವಾನ್ ಇಸ್ಮಾಯಿಲ್ ಮಾಲಕತ್ವ ಪೆಟ್ ಝೋನ್ ಮಳಿಗೆಯನ್ನು ಉದ್ಯಮಿ ಕೆ.ಇಸ್ಮಾಯಿಲ್ ಸಂತೋಷ ನಗರ ಉದ್ಘಾಟಿಸಿದರು. 6 ವರ್ಷಗಳಿಂದ ಗ್ರಾಹಕರಿಗೆ ಉತ್ತಮ ಸೇವೆ ನೀಡುವಲ್ಲಿ ಯಶಸ್ವಿಯಾಗಿದ್ಧೇವೆ. ನಮ್ಮಲ್ಲಿ ದೇಶ ವಿದೇಶಿದ ಸಾಕು ಪಕ್ಷಿ, ಬೆಕ್ಕು Tropical fish monster fish, exotic

ಮಂಗಳೂರು: ಅಶೋಕನಗರದ ಸ್ಪಂದನ ಫ್ರೆಂಡ್ಸ್ ವತಿಯಿಂದ ಸ್ವಾತಂತ್ರ್ಯೋತ್ಸವ ಆಚರಣೆ

ಸ್ಪಂದನ ಫ್ರೆಂಡ್ಸ್ ಅಶೋಕನಗರ ಮಂಗಳೂರು ಇದರ ವತಿಯಿಂದ 77ನೇ ಸ್ವಾತಂತ್ರ್ಯ ದಿನಾಚರಣೆಯನ್ನು ರಾಮ ಕಿರೋಡಿಯನ್ ರಸ್ತೆಯ ಮುಂಭಾಗದಲ್ಲಿ ಆಚರಿಸಲಾಯಿತು. ಸಂಸ್ಥೆಯ ಗೌರವ ಅಧ್ಯಕ್ಷರಾದ ಜೋಸ್ಸಿ ಸೋನ್ಸ್ ಅವರು ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಸದಸ್ಯರು, ಸಾರ್ವಜನಿಕರು ಭಾಗವಹಿಸಿ ಗೌರವ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ರಾಮ ಕಿರೋಡಿಯನ್ ರಸ್ತೆ ಅಶೋಕ ನಗರ ಇಲ್ಲಿಯ 2 ತಿರುವುಗಳಲ್ಲಿ ವಾಹನ ಚಾಲಕರ ಹಾಗೂ ಸಾರ್ವಜನಿಕರ

ಆಟಿ ಆಚರಣೆ ಅಲ್ಲ, ಪ್ರಕೃತಿ ಸಹಜ ಬದುಕು-ಗೋಪಾಲ ಅಂಚನ್

ಮಂಗಳೂರು: ಆಟಿ ಆಚರಣೆಯಲ್ಲ, ಅದು ಪ್ರಕೃತಿ ಸಹಜ ಬದುಕು. ಅಂದಿನ ಬಡತನದ ಬದುಕನ್ನು ಇಂದು ಕೆಲವೆಡೆ ಆಚರಣೆಯ ಹೆಸರಿನಲ್ಲಿ ವೈಭವೀಕರಿಸಲಾಗುತ್ತಿದೆ. ಅಂದಿನ ಆಟಿಯ ಬಡತನದ ಬದುಕಿನ ಹಿಂದಿರುವ ವಾಸ್ತವಾಂಶವನ್ನು ಇಂದಿನ ಜನಾಂಗಕ್ಕೆ ತಿಳಿಯಪಡಿಸುವ ಹೊಣೆಗಾರಿಕೆ ನಮ್ಮ ಮೇಲಿದೆ. ಪ್ರಕೃತಿಯೆಡೆಗೆ ಮುಖ ಮಾಡಿ ಬದುಕಿದರೆ ಮಾತ್ರ ಮಾನವನ ಎಲ್ಲಾ ಸಮಸ್ಯೆಗಳಿಗೂ ಪ್ರಕೃತಿಯಲ್ಲೇ ಪರಿಹಾರ ಇದೆ ಎಂಬ ಸಂದೇಶವನ್ನು ಅಂದಿನ ಆಟಿಯ ಬದುಕು ನಮಗೆ ನೀಡುತ್ತದೆ ಎಂದು ಕರ್ನಾಟಕ ತುಳು

ಮಂಗಳೂರಿನಲ್ಲಿ ಕೇದಗೆ ಬದಲಿಗೆ ಮುಂಡೇವು ಮಾರಿದರು…!

ನಾಗನಿಗೆ ಪ್ರಿಯವಾದ ಕೇದಗೆಗೆ ನಾಗರ ಪಂಚಮಿಯಂದು ಭಾರೀ ಬೇಡಿಕೆಯಿದ್ದು ಇದೀಗ ಮಂಗಳೂರಿನ ಕಾರ್‍ಸ್ಟ್ರೀಟ್‍ನಲ್ಲಿ ಕೇದಗೆಯ ಬದಲಿಗೆ ಮುಂಡೇವು ಎಲೆಯನ್ನು ಭಕ್ತರಿಗೆ ಮಾರಾಟ ಮಾಡಿ ಯಾಮಾರಿಸಿದ ಕುರಿತ ವೀಡಿಯೋ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನಾಗರಪಂಚಮಿ ದಿನದಂದು ನಾಗಾರಾಧನೆಗೆ ಕೇದಗೆ ಎಂದು ಖರೀದಿಸಿ ತಂದ ಬಳಿಕ ಭಕ್ತರೊಬ್ಬರು ಇದನ್ನು ಮುಂಡೇವು ಎಲೆಯೆಂದು ಖಚಿತಪಡಿಸಿದ್ದು ಗ್ರಾಹಕರು ಜಾಗೃತರಾಗಿರುವಂತೆ

ಸುರತ್ಕಲ್‍ : ಎಟಿಎಂ ಮೆಷಿನ್ ಕಳವು ಯತ್ನ ಪ್ರಕರಣ – ನಾಲ್ವರ ಬಂಧನ

ಸುರತ್ಕಲ್ ಬಳಿಯ ಇಡ್ಯಾ ಎಂಬಲ್ಲಿ ಜೆಸಿಬಿ ಮೂಲಕ ಎಟಿಎಂ ಒಡೆದು ಹಣ ದೋಚುವ ಯತ್ನ ನಡೆದಿತ್ತು. ಪ್ರಕರಣದ ಬೆನ್ನತ್ತಿದ ಸುರತ್ಕಲ್ ಪೊಲೀಸರು ಶಿವಮೊಗ್ಗ ಮೂಲದ ನಾಲ್ವರನ್ನು ಬಂಧಿಸಿದ್ದಾರೆ. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಬೇಗೂರು ಗ್ರಾಮದ ದೇವರಾಜ್ (24), ಭರತ್ (20), ನಾಗರಾಜ ನಾಯ್ಕ (21), ಕೃತ್ಯಕ್ಕೆ ಧನಸಹಾಯ ಮಾಡಿದ್ದ ಧನರಾಜ್ ನಾಯ್ಕ (26) ಬಂಧಿತರು. ಇವರಿಂದ ಹೀರೊ ಹೊಂಡಾ ಸ್ಪ್ಲೆಂಡರ್ ಬೈಕ್ ಮತ್ತು ಎರಡು ಮೊಬೈಲ್ ಗಳನ್ನು ಪೆÇಲೀಸರು ವಶಕ್ಕೆ

ಮಂಗಳೂರು: ಕ್ಯಾನ್ಸರ್ ಪೀಡಿತ ರೋಗಿಗಳಿಗೆ ಕೇಶದಾನ ಮಾಡಿ ಮೆಚ್ಚುಗೆಗೆ ಪಾತ್ರರಾದ ಚಿನ್ನು ಕೊಟ್ಟಾರಿ

ತುಳುನಾಡ ಭಾರ್ಗವ ಎಂದು ಬಿರುದು ಪಡೆದ ಚಿನ್ನು ಕೊಟ್ಟಾರಿಯವರು ತುಳು ಚಿತ್ರರಂಗ ಹಾಗೂ ಡ್ಯಾನ್ಸ್ ಕೊರಿಯೋಗ್ರಾಫರ್ ಆಗಿ ಹೆಸರುವಾಸಿಯಾಗಿದ್ದು, ತನ್ನದೇ ಆದ ವಿಶಿಷ್ಟ ಕೇಶವಿನ್ಯಾಸದಿಂದ ಗುರುತಿಸಲ್ಪಟ್ಟಿದ್ದ ಚಿನ್ನು ಕೊಟ್ಟಾರಿ ಅವರು, 2018 ಮಿಸ್ಟರ್ ಬಿಯಾರ್ಡ್ ಟೈಟಲ್‍ನ್ನು ಮುಡಿಗೇರಿಸಿಕೊಂಡಿದ್ದರು. ಸರಿಸುಮಾರು 10 ವರ್ಷಗಳಿಂದ ತಾನು ಬಿಟ್ಟ ಕೇಶವನ್ನು ಕ್ಯಾನ್ಸರ್ ಪೀಡಿತ ರೋಗಿಗಳಿಗೆ ವಿಶ್ವಹಿಂದೂ ಪರಿಷತ್ ಮುಖಾಂತರ ಕೇಶದಾನ ಮಾಡಿ ಮೆಚ್ಚುಗೆಗೆ

ಪಾದೆಬೆಟ್ಟು ಸುಬ್ರಹ್ಮಣ್ಯ ದೇವಳದಲ್ಲಿ ನಾಗರ ಪಂಚಮಿ

ಪಡುಬಿದ್ರಿಯ ಪುರಾತನ ದೇವಳಗಳಲ್ಲಿ ಒಂದಾದ ಪಾದೆಬೆಟ್ಟು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಾಗರ ಪಂಚಮಿ ಆಚರಣೆ ಬಹಳ ವಿಜೃಂಭಣೆಯಿಂದ ನಡೆಯಿತು. ಸಹಸ್ರಾರು ಭಕ್ತಾದಿಗಳು ಶ್ರೀ ನಾಗದೇವರಿಗೆ ತನು ತಂಬಿಲ ಸೇವೆ ನೀಡಿದರು.