Home ಕರಾವಳಿ Archive by category ಮಂಗಳೂರು (Page 165)

ಸಿ.ಎ. ಇಂಟರ್ ಮೀಡಿಯಟ್ ಪರೀಕ್ಷಾ ಫಲಿತಾಂಶ,ಆಳ್ವಾಸ್ ನ ಸಾಧನೆ.

ಮೂಡುಬಿದಿರೆ: ನವೆಂಬರ್ 2022 ರಲ್ಲಿ ನಡೆದ ಸಿ.ಎ. ಇಂಟರ್ ಮೀಡಿಯಟ್ ಪರೀಕ್ಷೆಯಲ್ಲಿ ಆಳ್ವಾಸ್ ಪದವಿ ಕಾಲೇಜಿನ 10 ಜನ ವಿದ್ಯಾರ್ಥಿಗಳು ಗ್ರೂಪ್ -01 ಮತ್ತು ಗ್ರೂಪ್-02 ವಿಭಾಗದಲ್ಲಿ ಉತ್ತೀರ್ಣರಾಗಿ, 32.25% ಫಲಿತಾಂಶ ಪಡೆದಿದ್ದಾರೆ. ಕಾಲೇಜಿನ ಬಿ.ಕಾಂ. ಪ್ರೊಫೆಶನಲ್ ವಿದ್ಯಾರ್ಥಿಗಳಾದ ಆರನ್ ರೇಗೋ(486), ಚೇತನಾ ಕೋಡಿಹಳ್ಳಿ(471), ತುಳಸಿ(446), ಲೋಹಿತ್ ಈಶ್ವರ್

ಮಂಗಳೂರಿನ ಖಾಸಗಿ ಮೆಡಿಕಲ್ ಕಾಲೇಜಿನಲ್ಲಿ ಭಾರೀ ಡ್ರಗ್ಸ್ ಜಾಲ

ಮಂಗಳೂರಲ್ಲಿ ಭಾರೀ ಡ್ರಗ್ಸ್ ಮಾಫಿಯಾ ಜಾಲವನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದಡಿ ಖಾಸಗಿ ವೈದ್ಯಕೀಯ ಕಾಲೇಜಿನ ವೈದ್ಯರು, ವೈದ್ಯಕೀಯ ವಿದ್ಯಾರ್ಥಿ ಸಹಿತ 10 ಮಂದಿಯನ್ನು ಬಂಧಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಖಾಸಗಿ ಕಾಲೇಜಿನ ಬಿಡಿಎಸ್ ವಿದ್ಯಾರ್ಥಿ, ವಿದೇಶಿ ಪ್ರಜೆ ನೀಲ್ ಕಿಶೋರಿಲಾಲ್ ರಾಮ್ ಜಿ ಶಾ , ಡಾ. ಸಮೀರ್ , ಡಾ. ಮಣಿಮಾರನ್ ಮುತ್ತು ,

ಜ.20ರಂದು ಬಹುನಿರೀಕ್ಷಿತ “ಶಕಲಕ ಬೂಮ್ ಬೂಮ್” ಚಿತ್ರ ತೆರೆಗೆ

ಯುಎನ್ ಸಿನೆಮಾಸ್ ಬ್ಯಾನರ್ ನಡಿ ನಿರ್ಮಾಣಗೊಂಡಿರುವ ಶಕಲಕ ಬೂಮ್ ಬೂಮ್ ತುಳು ಚಿತ್ರ ಇದೇ ಬರುವ ಜ.20ರಂದು ತುಳುನಾಡಿನಾದ್ಯಂತ ಬಿಡುಗಡೆಯಾಗಲಿದೆ. ಕಾಮಿಡಿ ಹಾಗೂ ಹಾರರ್ ವಿಭಿನ್ನ ಕಥಾಹಂದರದ ಹೊಂದಿರುವ ಶಕಲಕ ಬೂಮ್ ಬೂಮ್ ತುಳು ಚಿತ್ರ ಇದೇ ಬರುವ ಜ.20ರಂದು ತುಳುನಾಡಿನಾದ್ಯಂತ ತೆರೆ ಕಾಣಲಿದೆ. ಈ ಕುರಿತು ಮಂಗಳೂರಿನ ಪ್ರತಿಕಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಚಿತ್ರ ನಿರ್ಮಾಪಕರಾದ ನಿತ್ಯಾನಂದ ನಾಯಕ್ ನರಸಿಂಗೆ ಮಾತನಾಡಿದ ಈ ಚಲನಚಿತ್ರವನ್ನು ಶ್ರೀಶ ಎಳ್ಳಾರೆ

ವಾಲ್‍ಮ್ಯಾನ್ ಕರ್ತವ್ಯ ನಿರ್ವಹಿಸುತ್ತಿದ್ದ ಗೋವಿಂದ ಅವರು ಮರುಸೇರ್ಪಡೆ

ಕಳೆದ ಹಲವಾರು ವರ್ಷಗಳಿಂದ ವಾಲ್ ಮ್ಯಾನ್ ಕರ್ತವ್ಯ ನಿರ್ವಹಿಸುತ್ತಿದ್ದ ಹಿರಿಯ ನೌಕರ ಗೋವಿಂದ ಅವರನ್ನ ಕರ್ತವ್ಯಕ್ಕೆ ಮರು ಸೇರ್ಪಡೆಗೊಳಿಸಲಾಗಿದೆ. ಅವರ ಕರ್ತವ್ಯದ ವಯಸ್ಸು ಮೀರಿದ್ದರೂ, ಅವರ ಕೌಟುಂಬಿಕ ಪರಿಸ್ಥಿತಿ ಹದಗೆಟ್ಟಿರುವ ಕಾರಣ ಮಾನವೀಯ ನೆಲೆಯಲ್ಲಿ ಮಂಗಳೂರು ಮಹಾನಗರ ಪಾಲಿಕೆಯು ಮತ್ತೆ ಸೇರ್ಪಡೆ ಮಾಡುವಂತೆ ಸೂಚಿಸಿದೆ. ಈ ಸಂಬಂಧ ಮೇಯರ್ ಜಯಾನಂದ ಅಂಚನ ಅವರು ಮಾಧ್ಯಮದೊಂದಿಗೆ ಮಾತನಾಡಿ ಗೋವಿಂದ ಅವರ ಕಷ್ಟದ ಪರಿಸ್ಥಿತಿಯನ್ನು ಕಂಡು ಮತ್ತೆ ವಾಲ್ಮ್ ಮ್ಯಾನ್

ಜುಗಾರಿ ಅಡ್ಡೆ, ಜೂಜು ಕೇಂದ್ರಗಳಿಗೆ ಡಿವೈಎಫ್ಐ ಮುತ್ತಿಗೆ.

ಮಂಗಳೂರು ಪೊಲೀಸ್ ಕಮೀಷನರೇಟ್ ವ್ಯಾಪ್ತಿಯೊಳಗೆ ದಿನೇ ದಿನೇ ಸ್ಕಿಲ್ ಗೇಮ್, ವಿಡಿಯೋ ಗೇಮ್, ಜುಗಾರಿ ಅಡ್ಡೆಗಳು ರಾಜಾರೋಷವಾಗಿ ಕಾರ್ಯಾಚರಿಸುತ್ತಿವೆ. ರಿಕ್ರಿಯೇಶನ್ ಕ್ಲಬ್ ನ ಹೆಸರಿನಲ್ಲಿ ಜೂಜು ಕೇಂದ್ರಗಳನ್ನು ನಡೆಸಿ ಮೋಸದಾಟಕ್ಕೆ ಜನರನ್ನು ಬಲಿಪಡೆಯುತ್ತಿದೆ. ನಗರದ ಸಣ್ಣ ವ್ಯಾಪಾರಿಗಳು , ಕಾರ್ಮಿಕರು ,ವಿದ್ಯಾರ್ಥಿಗಳನ್ನು ಒಳಗೊಂಡಂತೆ ಬಡ ಮಧ್ಯಮ ವರ್ಗದ ಕೂಲಿ ಕಾರ್ಮಿಕರನ್ನು ಈ ಅಡ್ಡೆ ಗುರಿಯಾಗಿಸಿ ಜನರ ದುಡಿಮೆಯ ಹಣವನ್ನು ದೋಚುವ ಕಾರ್ಯದಲ್ಲಿ ತೊಡಗಿದೆ. ಈ

ಮುಕ್ಕ ಶ್ರೀ ಸತ್ಯಧರ್ಮ ದೇವಿ ದೇವಸ್ಥಾನ- ಜ.14 ರಂದು ಸಾಮೂಹಿಕ ಶ್ರೀ ಶನಿಶಾಂತಿ ಹೋಮ ಶ್ರೀ ಶನೇಶ್ವರ ಪೂಜೆ

ಮಂಗಳೂರಿನ ಮುಕ್ಕದಲ್ಲಿರುವ ಶ್ರೀ ಸತ್ಯಧರ್ಮ ದೇವಿ ದೇವಸ್ಥಾನದಲ್ಲಿ ಸಾಮೂಹಿಕ ಶ್ರೀ ಶನಿಶಾಂತಿ ಹೋಮ ಶ್ರೀ ಶನೇಶ್ವರ ಪೂಜೆ ಜ.೧೪ರಂದು ಹಮ್ಮಿಕೊಂಡಿದ್ದಾರೆ. ಶ್ರೀ ಕ್ಷೇತ್ರದಲ್ಲಿ ಬೆಳಿಗ್ಗೆ ೮ರಿಂದ ಸಾಮೂಹಿಕ ಶನಿಶಾಂತಿ ಹೋಮ ಪ್ರಾರಂಭಗೊಳ್ಳಲಿದೆ. ೧೧ ಗಂಟೆಗೆ ಪೂರ್ಣಾಹುತಿ , 11.30ಕ್ಕೆಸಭಾ ಕಾರ್ಯಕ್ರಮ ಜರುಗಲಿದೆ.12.30ಕ್ಕೆ ಮಹಾಪೂಜೆ, ಅನ್ನ ಸಂತರ್ಪಣೆ ನೆರವೇರಲಿದೆ. ಇನ್ನು ಇದೇ ವೇಳೆ ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವದ ವಿಜ್ಞಾಪನಾ ಪತ್ರ ಬಿಡುಗಡೆ

ಗೊನ್ಝಾಗ ಯುವಪ್ರತಿಭೆ ಸಾಹಿತ್ಯಿಕ ಅನಾವರಣ

ಸಂತ ಅಲೋಶಿಯಸ್ ಗೊನ್ಝಾಗ ಶಾಲೆಯ ದಶಮಾನೋತ್ಸವ ಸಂದರ್ಭದಲ್ಲಿ 15ರ ಹರೆಯದ ಬಾಲ ಸಾಹಿತಿ ಸಾಹಿತಿ ಶಿನೈದ್ ಫೆರ್ನಾಂಡಿಸ್ ಅವರ ಎರಡನೆಯ ಕೃತಿ ‘ದಿ ಸರ್ಚ್’ ಅನಾವರಣಗೊಳಿಸಲಾಯಿತು. ಮೊದಲ ಕೃತಿ ‘ದಿ ಇನ್ಸಿಡೆಂಟ್’ 2022 ರ ಫೆಬ್ರವರಿ ತಿಂಗಳಲ್ಲಿ ಬಿಡುಗಡೆಯಾಗಿತ್ತು. ಶಿನೈದ್ ಫೆರ್ನಾಂಡಿಸ್ ರವರು, ಶ್ರೀಮತಿ ಶರಲ್ ಮತ್ತು ಸಮಿತ್ ಫೆರ್ನಾಂಡಿಸ್ ಅವರ ಪುತ್ರಿಯಾಗಿದ್ದು, ಗೊನ್ಝಾಗ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿ. ಪುಸ್ತಕ ಬಿಡುಗಡೆಯ

ನಗರದ ಕದ್ರಿ ಫ್ಲ್ಯಾಟ್‍ನಲ್ಲಿ ಬೆಂಕಿ ಅವಘಡ

ಮಂಗಳೂರು: ಫ್ಲ್ಯಾಟ್ ನಲ್ಲಿ ಬೆಂಕಿ ಅವಘಡ ಸಂಭವಿಸಿರುವ ಘಟನೆ ನಗರದ ಜೈಲ್ ರಸ್ತೆ-ಕದ್ರಿ ಕಂಬಳದ ವಸತಿ ಸಮುಚ್ಚಯದ 2ನೆ ಅಂತಸ್ತಿನ ಫ್ಲ್ಯಾಟ್‍ನಲ್ಲಿ ನಡೆದಿದೆ. ಏಕಾಏಕಿ ಬೆಡ್‍ರೂಮ್‍ನಲ್ಲಿ ಹೊಗೆ ಕಾಣಿಸಿತು. ಮಾಹಿತಿ ಪಡೆದ ಪಾಂಡೇಶ್ವರ ಮತ್ತು ಕದ್ರಿಯ ಅಗ್ನಿಶಾಮ ದಳದ ಸಿಬ್ಬಂದಿ ವರ್ಗ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ಆರಂಭಿಸಿತು. ಫ್ಲ್ಯಾಟ್‍ನ ನಿವಾಸಿಗಳು ಅಪಾಯದಿಂದ ಪಾರಾಗಿದ್ದು, ಹಾಸಿಗೆ ಮತ್ತಿತರ ಪರಿಕರಗಳು

ಬಿಲ್ಲವ ಸಮಾಜದ ದಾರಿ ತಪ್ಪಿಸುತ್ತಿರುವ ಸರ್ಕಾರ

ಸರ್ಕಾರ ಸ್ಥಾಪಿಸಿದ ಬ್ರಹ್ಮಶ್ರೀ ನಾರಾಯಣಗುರು ಅಭಿವೃದ್ಧಿ ಕೋಶಕ್ಕೆ ಬಿಲ್ಲವ ಸಮಾಜ ವಿರೋಧ ವ್ಯಕ್ತಪಡಿಸಿ ಬ್ರಹ್ಮಶ್ರೀ ನಾರಾಯಣಗುರು ಅಭಿವೃದ್ಧಿ ನಿಗಮವೇ ಬೇಕು ಎಂದು ಆಗ್ರಹಿಸಿ ಸರ್ಕಾರಕ್ಕೆ ಮನವಿ ಮಾಡಲಾಗಿತ್ತು. ಕಳೆದ ಜ.5ರಂದು ಸಚಿವ ಸುನೀಲ್‌ಕುಮಾರ್ ನೇತೃತ್ವದಲ್ಲಿ ಬಿಲ್ಲವರ ನಿಯೋಗ ಕೋಶದ ಬದಲು ನಿಗಮ ಸ್ಥಾಪನೆ ಮಾಡಬೇಕು ಎಂದು ಮುಖ್ಯಮಂತ್ರಿಗೆ ಮನವಿಯನ್ನು ಸಲ್ಲಿಸಿತ್ತು. ಈ ಸಂದರ್ಭ ನಾರಾಯಣಗುರು ಅಭಿವೃದ್ಧಿ ಕೋಶಕ್ಕೆ ವಿರೋಧ ಇರುವುದು ಸರ್ಕಾರಕ್ಕೆ

ಮಂಗಳೂರು: ಪಚ್ಚನಾಡಿ ತ್ಯಾಜ್ಯ ವಿಲೇವಾರಿ ಘಟಕದಿಂದ ನಗರಕ್ಕೂ ವ್ಯಾಪಿಸಿದ ಹೊಗೆ- ದುರ್ವಾಸನೆ

ಪಚ್ಚನಾಡಿ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಕಾಣಿಸಿಕೊಂಡಿರುವ ಬೆಂಕಿಯಿಂದ ಉಂಟಾದ ಹೊಗೆ ಮಂಗಳೂರು ನಗರದವರೆಗೂ ವ್ಯಾಪಿಸಿದೆ. ಮಂಗಳವಾರ ರಾತ್ರಿ ನಗರದ ವಿವಿಧೆಡೆ ಮಂಜು ಕವಿದಂತೆ ಹೊಗೆ ಆವರಿಸಿದ್ದು, ಘಾಟು ವಾಸನೆಯೂ ಇತ್ತು. ಕುಂಟಿಕಾನ, ದೇರೆಬೈಲ್, ಕೊಂಚಾಡಿ, ಕೆಪಿಟಿ ಮೊದಲಾದ ಕಡೆ ಹೊಗೆ ವಾತಾವರಣ, ವಾಸನೆ ಹೆಚ್ಚಿದ್ದು ಸಾರ್ವಜನಿಕರು ಕೆಲ ಕಾಲ ಆತಂಕಕ್ಕೆ ಒಳಗಾಗಿದ್ದರು. ಅಗ್ನಿ ಶಾಮಕ ಠಾಣೆಗೂ ಕರೆ ಮಾಡಿ ವಿಚಾರಿಸಿದ್ದಾರೆ.ಈ ಕುರಿತು ಪ್ರತಿಕ್ರಿಯೆ ನೀಡಿರುವ