Home ಕರಾವಳಿ Archive by category ಮಂಗಳೂರು (Page 167)

ಏಷ್ಯಾದ ಅತಿದೊಡ್ಡ ಕಲಾ ಸಂಭ್ರಮ, ಬಾಂಗ್ಲಾದೇಶದ 19ನೇ ಏಷ್ಯಾನ್ ಆರ್ಟ್ ಬಿಯೆನ್ನಲ್

ಡಿಸೆಂಬರ್ 8, 2022 ರಿಂದ ಜನವರಿ 7, 2023 ರವರೆಗೆ ಬಾಂಗ್ಲಾದೇಶ ರಾಜಧಾನಿ ಢಾಕಾದ ನ್ಯಾಷನಲ್ ಆರ್ಟ್ ಗ್ಯಾಲರಿಯಲ್ಲಿ ನಡೆಯುತ್ತಿರುವ ಪ್ರತಿಷ್ಠಿತ 19ನೇ ಏಷ್ಯನ್ ಆರ್ಟ್ ಬಿಯೆನ್ನಲ್‍ಗೆ ಮಂಗಳೂರಿನ ಕಲಾವಿದ ಸಂತೋಷ್ ಅಂದ್ರಾದೆ ಆಯ್ಕೆಯಾಗಿದ್ದಾರೆ.ಈ ಏμÁ್ಯದ ಅತಿದೊಡ್ಡ ಕಲಾ ಸಂಭ್ರಮದ 19ನೇ ಆವೃತ್ತಿಯನ್ನು ಮೂಲತಃ 2020ಕ್ಕೆ ನಿಗದಿಪಡಿಸಲಾಗಿತ್ತು ಆದರೆ

ದ.ಕ. ಜಿಲ್ಲೆಯ 8 ವಿಧಾನ ಸಭಾ ಕ್ಷೇತ್ರದಲ್ಲೂ ಜೆಡಿಎಸ್ ಸ್ಪರ್ಧೆ

ಮುಂದಿರುವ ವಿಧಾನ ಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಎಂಟು ವಿಧಾನ ಸಭಾ ಕ್ಷೇತ್ರದಲ್ಲೂ ಜೆಡಿಎಸ್ ತನ್ನ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಿದೆ. ಈಗಾಗಲೇ ಆಕಾಂಕ್ಷಿಗಳ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತಿದ್ದು, ಶೀಘ್ರದಲ್ಲಿಯೇ ಪಟ್ಟಿ ಬಿಡುಗಡೆ ಮಾಡಲಾಗುತ್ತದೆ ಎಂದು ಜಾತ್ಯಾತೀತ ಜನತಾ ದಳದ ದಕ ಜಿಲ್ಲಾಧ್ಯಕ್ಷ ಜಾಕೆ ಮಾಧವ ಗೌಡ ಹೇಳಿದರು. ಅವರು ಮಂಗಳೂರಿನ ಪ್ರೆಸ್‍ಕ್ಲಬ್‍ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈಗಾಗಲೇ ಎಲ್ಲ

ಜ. 13- 17ರ ವರೆಗೆ ಉಪ್ಪಿನಂಗಡಿಯಲ್ಲಿ ರಾಷ್ಟ್ರೀಯ ಮಟ್ಟದ ಬಾಲ್ ಬ್ಯಾಡ್ಮಿಂಟನ್

ಮಂಗಳೂರು ವಿಶ್ವವಿದ್ಯಾನಿಲಯ ಹಾಗೂ ಸರಕಾರಿ ಪ್ರಥಮ ದರ್ಜೆ ಕಾಲೇಜು ಉಪ್ಪಿನಂಗಡಿ ಇವುಗಳ ಆಶಯದಲ್ಲಿ ಅಖಿಲ ಭಾರತ ಅಂತರ ವಿಶ್ವವಿದ್ಯಾನಿಲಯ ಪುರುಷರ ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್‍ಶಿಪ್ ಜನವರಿ 13ರಿಂದ 17ರ ವರೆಗೆ ಉಪ್ಪಿನಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯಲಿದ್ದು, ವಿಶಾಲವಾದ ಕ್ರೀಡಾಂಗಣದ ಕೆಲಸ ಕಾರ್ಯಗಳು ನಡೆಯುತ್ತಿದ್ದು, ಬಹುತೇಕ ಕೆಲಸ ಪೂರ್ಣಗೊಂಡಿದೆ. ರಾಷ್ಟ್ರಮಟ್ಟದ ಬಾಲ್ ಬ್ಯಾಡ್ಮಿಂಟನ್ ಟೂರ್ನಿಗೆ ಸಕಲ ಸಿದ್ಧತೆಗಳು

ಮೆಸ್ಕಾಂ ನೂತನ ಎಂ. ಡಿ ಮಂಜಪ್ಪರವರಿಗೆ ಗೌರವ

.ದ.ಕಜಿಲ್ಲಾ ವಿದ್ಯುತ್ ಗುತ್ತಿಗೆದಾರರ ವತಿಯಿಂದ ನೂತನವಾಗಿ ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡ ಮಂಜಪ್ಪರವರನು ಮೆಸ್ಕಾಂ ಕಚೇರಿಯಲ್ಲಿ ವಿದ್ಯುತ್ ಗುತ್ತಿಗೆದಾರರ ರಾಜ್ಯ ಉಪಾಧ್ಯಕ್ಷರಾದ ಶ್ರೀ ಉರ್ಬನ್ ಪಿಂಟೊ ಶಾಲು ಹೊದಿಸಿ ಗೌರವಿಸಿ ಮಾತನಾಡಿ ಇಡೀ ಮೆಸ್ಕಾಂ ಜನಸಾಮಾನ್ಯರಿಗೆ ಹಾಗೂ ವಿದ್ಯುತ್ ಗುತ್ತಿಗೆದಾರರಿಗೆ ಬಹಳ ಸಂತೋಷ ತಂದಿದೆ. ತಮಿಂದ ಇಡೀ ಮೆಸ್ಕಾಂ ವ್ಯಾಪ್ತಿಯಲ್ಲಿ ಒಳ್ಳೆಯದಾಗಲಿ.ಎಂದು ಶುಭಹಾರೈಸಿದರು ಜಿಲ್ಲಾಧ್ಯಕ್ಷರಾದ ಕುಶಾಲ್

ಮೂಡುಬಿದರೆ : ಸಾಹಿತ್ಯ ಸಂಜೆಯ ಕವಿಗೋಷ್ಟಿ

ಕಾವ್ಯ ಹುಟ್ಡುವದಾ ಕಟ್ಟುವುದು ಎಂಬ ಪ್ರಶ್ನೆ ಇದೆ.ಹುಟ್ಟಿದ ಕಾವ್ಯ, ಬೇರೆ ಕಟ್ಟಿದ ಕಾವ್ಯ ಬೇರೆ.ಕಟ್ಟಿದ ಕಾವ್ಯವು ಕಾವುಗೊಳ್ಳಬೇಕು.ಅದಕ್ಕಿಷ್ಟು ಉಪಮೇ,ಅಲಂಕಾರ, ಲಯ,ರೂಪಕಗಳು ಇರಬೇಕು,ಎಂದು ಖ್ಯಾತ ಹಿರಿಯ ಸಾಹಿತಿ ಬಿ ಎಂ ರೋಹಿಣಿ ಅವರು ನುಡಿದರು. ಅವರು ಮೂಡುಬಿದಿರೆಯಲ್ಲಿ ಅರವಿಂದ ಚೊಕ್ಕಾಡಿ ಅವರ ಮನೆಯಲ್ಲಿ ರೇಮಂಡ್ ಡಿಕೂನಾ ತಾಕೊಡೆ ಸಾರಥ್ಯದಲ್ಲಿ ಪಿಂಗಾರ ಸಾಹಿತ್ಯ ಬಳಗದಿಂದ ಹಮ್ಮಿಕೊಂಡ ಸಾಹಿತ್ಯ ಸಂಜೆಯ ಕವಿಗೋಷ್ಟಿಯ ಅದ್ಯಕ್ಷತೆ ವಹಿಸಿ ಮಾತನಾಡಿದರು.

ಬಿಕರ್ನಕಟ್ಟೆಯ ಬಾಲಯೇಸುವಿನ ಚರ್ಚ್‍ಗೆ ಸಿದ್ದರಾಮಯ್ಯ ಭೇಟಿ

ಮಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳೂರು ಪ್ರವಾಸದಲ್ಲಿದ್ದು, ಕುದ್ರೋಳಿ ಕ್ಷೇತ್ರಕ್ಕೆ ಭೇಟಿ ನೀಡಿದರು. ಬಳಿಕ ಮಂಗಳೂರಿನ ಬಿಕರ್ನಕಟ್ಟೆಯ ಬಾಲ ಯೇಸು ಚರ್ಚ್‍ಗೆ ಭೇಟಿ ನೀಡಿ, ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ವಿಧಾನಸಭೆಯ ಪ್ರತಿಪಕ್ಷ ಉಪ ನಾಯಕ ಯು.ಟಿ. ಖಾದರ್, ಮಾಜಿ ಸಚಿವ ಅಭಯಚಂದ್ರ ಜೈನ್, ಮಾಜಿ ಶಾಸಕ ಐವಾನ್ ಡಿಸೋಜಾ ಇದ್ದರು.

ಯೆಯ್ಯಾಡಿ :ಏಸ್ ಫುಡ್ಸ್ ಪ್ರೈವೇಟ್ ಲಿ. ಚಿಪ್ಸ್ ತಯಾರಿಕಾ ಕಾರ್ಖಾನೆಯಲ್ಲಿ ಆಕಸ್ಮಿಕ ಬೆಂಕಿ

ಮಂಗಳೂರಿನ ಯೆಯ್ಯಾಡಿಯಲ್ಲಿರುವ ಕೈಗಾರಿಕಾ ಸಂಕೀರ್ಣದಲ್ಲಿ ಚಿಪ್ಸ್ ತಯಾರಿಕಾ ಕಾರ್ಖಾನೆಯಲ್ಲಿ ಆಕಸ್ಮಿಕವಾಗಿ ಬೆಂಕಿ ಅವಘಡ ಸಂಭವಿಸಿದೆ. ನೋಡ ನೋಡುತ್ತಿದ್ದಂತೆಯೇ ಧಗಧಗನೆ ಫ್ಯಾಕ್ಟರಿ ಹೊತ್ತಿ ಉರಿದಿದೆ. ಚಿಫ್ಸ್ ತಯಾರಿಕಾ ಫ್ಯಾಕ್ಟರಿಯಾದ ಏಸ್ ಫುಡ್ ಪ್ರೈವೆಟ್ ಲಿಮಿಟೆಡ್‍ನ ಎಂಬ ಹೆಸರಿನ ಫ್ಯಾಕ್ಟರಿಗೆ ಶಾರ್ಟ್ ಸರ್ಕ್ಯೂಟ್‌ನಿಂದಾಗಿಬೆಂಕಿ ತಗುಲಿದೆ. ಸ್ಥಳಕ್ಕೆ ಕದ್ರಿ ಹಾಗೂ ಪಾಂಡೇಶ್ವರ ಅಗ್ನಿಶಾಮಕ ದಳದ ಸಿಬ್ಬಂದಿಗಳು ಧಾವಿಸಿ ಬೆಂಕಿ ನಂದಿಸುವ

ಮಂಗಳೂರಿನ ಬಾಲಯೇಸುವಿನ ವಾರ್ಷಿಕ ಮಹೋತ್ಸವ -2023

ಮಂಗಳೂರಿನ ಬಿಕರ್ನಕಟ್ಟೆಯ ಕಾರ್ಮೇಲ್ ಹಿಲ್‍ನ ಬಾಲಯೇಸುವಿನ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವ ಪ್ರಯುಕ್ತ ಹೊರಕಾಣಿಕೆ ಮತ್ತು ಧ್ವಜಾರೋಹಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಮಂಗಳೂರಿನ ಬಿಕರ್ನಕಟ್ಟೆಯ ಕಾರ್ಮೇಲ್‍ನ ಹಿಲ್‍ನ ಬಾಲಯೇಸುವಿನ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವೂ ಜನವರಿ 14 ರಿಂದ 16ರ ವರೆಗೆ ನಡೆಯಲಿದ್ದು, ಈ ಪ್ರಯುಕ್ತ ಹೊರೆಕಾಣಿಕೆ ಮೆರವಣಿಗೆ ಮಂಗಳೂರಿನ ಕುಲಶೇಖರ ಕೈಕಂಬದಿಂದ ಬಾಲ ಯೇಸು ಪುಣ್ಯಕ್ಷೇತ್ರದ ವರೆಗೆ

ರಾಜ್ಯಕ್ಕೆ ಬರಬೇಕಾದ ಅನುದಾನ ತರಬೇಕು, ನಾಯಿಮರಿ ತರ ಇರಬಾರದು : ಸಿದ್ದರಾಮಯ್ಯ

ರಾಜ್ಯದ ಸಮಸ್ಯೆಗಳ ಬಗ್ಗೆ ಕೇಂದ್ರ ಸರಕಾರದ ಜೊತೆ ಮಾತನಾಡುವ ಧೈರ್ಯ ರಾಜ್ಯದ ಮುಖ್ಯಮಂತ್ರಿಗೆ ಇರಬೇಕು. ರಾಜ್ಯಕ್ಕೆ ಬರಬೇಕಾದ ಅನುದಾನ ತರಬೇಕು, ನಾಯಿಮರಿ ತರ ಇರಬಾರದೆಂದು ಹೇಳಿದ್ದೇನಷ್ಟೇ ಎಂದು ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ. ಅವರು ನಗರದ ಶ್ರೀ ಕುದ್ರೋಳಿ ಕ್ಷೇತ್ರ ಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ನನ್ನನ್ನು ಹಲವು ಬಾರಿ ಹುಲಿಯಾ ಅನ್ನುತ್ತಾರೆ. ಯಡಿಯೂರಪ್ಪರನ್ನು ರಾಜಾ ಹುಲಿ

ನಳಿನ್ ಕುಮಾರ್ ಕಟೀಲ್ ಹೇಳಿಕೆ ಸಮರ್ಥಿಸಿದ ಶಾಸಕ ಭರತ್ ಶೆಟ್ಟಿ 

ಬಿಜೆಪಿ ರಾಜ್ಯಾದ್ಯಕ್ಷರು ಕಾರ್ಯಕರ್ತರಿಗೆ ರಸ್ತೆ ವಿಚಾರ ಬಿಡಿ ಅಂತ ಹೇಳಿದ್ದಾರೆ, ರಸ್ತೆ ಮಾಡುವುದು ಚುನಾಯಿತ ಜನ ಪ್ರತಿನಿಧಿಗಳ ಕೆಲಸ, ಸಮಾಜದಲ್ಲಿ ವಿಷದ ವಾತಾವರಣ ನಿರ್ಮೂಲನೆ ಕೆಲಸ ಮಾಡಿ ಎಂದು ಕಾರ್ಯಕರ್ತರಿಗೆ ಹೇಳಿದ್ದಾರೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿಕೆಯನ್ನು ಶಾಸಕ ಡಾ. ವೈ ಭರತ್ ಶೆಟ್ಟಿ ಸಮರ್ಥಿಸಿಕೊಂಡಿದ್ದಾರೆ. ಅವರು ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದರು. ನಮ್ಮ ಅವಧಿಯಲ್ಲಿ ಗೋ ಹತ್ಯೆ ಕಡಿಮೆ ಆಗಿದೆ. ಕಾಂಗ್ರೆಸ್ ಕೂಡಾ ಇದಕ್ಕೆ