ಸೆಪ್ಟೆಂಬರ್ 15 ರಂದು ಸಂತ ಅಲೋಶಿಯಸ್ ಕಾಲೇಜು ಸ್ವಾಯತ್ತ ಮಂಗಳೂರು, ತಮ್ಮ ಪತ್ರಿಕೋದ್ಯಮ ವಿಭಾಗದಲ್ಲಿನ ಹೊಚ್ಚ ಹೊಸ ಕೋರ್ಸ್ ಬಿ.ಎಸ್ಸಿ ವಿಶುವಲ್ ಕಮ್ಯುನಿಕೇಶನ್ ಅನ್ನ ಅಧಿಕೃತವಾಗಿ ಅಲೋಶಿಯಸ್ ವಿದ್ಯಾಸಂಸ್ಥೆಗಳ ರೆಕ್ಟರ್ ವಂ. ಫಾ ಮೆಲ್ವಿನ್ ಜೆ ಪಿಂಟೋ ರವರಿಂದ ಲೋಕಾರ್ಪಣೆಗೊಳಿಸಲಾಯಿತು. ಈ ಐತಿಹಾಸಿಕ ಕ್ಷಣದ ಉದ್ಘಾಟನಾ ಕಾರ್ಯಕ್ರಮ ಕಾಲೇಜಿನ ಎಲ್ ಎಫ್
ಮಂಗಳೂರು: ಪ್ರತಿ ಮನೆಯೂ ತುಳು ಅಧ್ಯಯನ ಕೇಂದ್ರಗಳಾದರೆ ಮಾತ್ರ ತುಳುವಿನ ರಕ್ಷಣೆ ಸಾಧ್ಯ. ತುಳು ಎಲ್ಲಾ ಜಾತಿ, ಧರ್ಮಗಳನ್ನು ಒಗ್ಗೂಡಿಸುವ ಒಂದು ವ್ಯಾವಹಾರಿಕ ಭಾಷೆ. ಅದಕ್ಕೆ ಯಾವುದೇ ಕಳಂಕ ಹಚ್ಚುವುದು ಬೇಡ, ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ಅಭಿಪ್ರಾಯಪಟ್ಟರು.ಅವರು ಶುಕ್ರವಾರ, ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜು ಹಂಪನಕಟ್ಟೆ, ಇಲ್ಲಿನ ತುಳು ಸ್ನಾತಕೋತ್ತರ ಅಧ್ಯಯನ ವಿಭಾಗ ಹಾಗೂ ಒಡಿಯೂರು ಶ್ರೀ
ಉಳ್ಳಾಲ: ಮೀನಿನ ಲಾರಿ ಬೈಕ್‍ನ ಹಿಂಬದಿಗೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಕಾಸರಗೋಡು ನಿವಾಸಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಮಂಗಳೂರು ಕಡೆಯಿಂದ ಕುಂಬಳೆ ಕಡೆಗೆ ಬೈಕಿನಲ್ಲಿ ತೆರಳುವ ಸಂದರ್ಭ, ಕುಂಪಲ ಬೈಪಾಸ್ ರಾ.ಹೆ.ಯಲ್ಲಿ ಇಡಲಾದ ಬ್ಯಾರಿಕೇಡ್ ತಪ್ಪಿಸುವ ವೇಳೆ ಹಿಂಬದಿಯಿಂದ ಮಲ್ಪೆಯಿಂದ ಕಾಸರಗೋಡಿನತ್ತ ತೆರಳುತ್ತಿದ್ದ ಮೀನಿನ ಲಾರಿ ಢಿಕ್ಕಿ ಹೊಡೆದು ಸ್ಥಳದಲ್ಲೇ ಯುವಕ ಸಾವನ್ನಪ್ಪಿದ್ದಾರೆ. ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಪೊಲೀಸರು
ಜೀವನದಲ್ಲಿ ಉತ್ತಮವಾದ ಆರೋಗ್ಯ ಎನ್ನುವುದು ಸಂತೋಷದಾಯಕ ಜೀವನದ ಮೂಲವಾಗಿದ್ದು ಅದಕ್ಕಾಗಿ ಉತ್ತಮ ಆಹಾರದೊಂದಿಗೆ ಯೋಗ ಧ್ಯಾನ, ವ್ಯಾಯಾಮ ಇತ್ಯಾದಿ ಪ್ರಯತ್ನಗಳನ್ನು ನಿರಂತರವಾಗಿ ಜೀವನದಲ್ಲಿ ಅಳವಡಿಸಿಕೊಂಡು ಸ್ಥಿರ ಮನಸ್ಸಿನೊಂದಿಗೆ ಶರೀರವನ್ನು ಚಲನಾತ್ಮಕವಾಗಿ ಇಟ್ಟುಕೊಳ್ಳಬೇಕಾಗುತ್ತದೆ ಎಂದು ಲಯನ್ಸ್ ಕ್ಲಬ್ ಆಶೋಕನಗರ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಡಾ. ನವೀನ್ ಶೆಟ್ಟಿ ಕೆ. ಹೇಳಿದರು. ಅವರು ಲಯನ್ಸ್ ಕ್ಲಬ್ ಅಶೋಕನಗರ, ಲಯನ್ಸ್ ಕ್ಲಬ್ ಬೆಂದೂರ್‍ವೆಲ್,
ಮಂಗಳೂರಿನ ಕಂಕನಾಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರಂಜಿ ಇನ್ಪೋಟೆಕ್ ಪ್ರೈವೆಟ್ ಲಿಮಿಟೆಡ್ ಸಂಸ್ಥೆ ಮಂಗಳೂರು ಹಾಗೂ ದೇಶಾದ್ಯಂತ ಸುಮಾರು ನೂರಾ ಐವತ್ತಕ್ಕೂ ಹೆಚ್ಚು ಉದ್ಯೋಗಿಗಳಿಗೆ ಉದ್ಯೋಗವಕಾಶವನ್ನು ಕಲ್ಪಿಸಿದ್ದು, ಇದೀಗ 15ನೇ ವರ್ಷದ ವಾರ್ಷಿಕೋತ್ಸವದ ಸಂಭ್ರಮದಲ್ಲಿದೆ ಎಂದು ಗ್ಲೋಬಲ್ ಡೆಲಿವರಿ ಮ್ಯಾನೇಜರ್ ವಿಕ್ರಮ್ ಕೆಮ್ಮಾಯಿ ತಿಳಿಸಿದ್ದಾರೆ. ಅವರು ನಗರದ ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ, ಕಾರಂಜಿ ಇನ್ಪೋಟೆಕ್
ಕಟ್ಟಡ ಕಾರ್ಮಿಕರ ಹಾಗೂ ಇತರ ನಿರ್ಮಾಣ ಕಾರ್ಮಿಕರ ವಿವಿಧ ಸಮಸ್ಯೆಗಳನ್ನು ಸರ್ಕಾರ ಶೀಘ್ರದಲ್ಲೇ ಬಗೆಹರಿಸಬೇಕೆಂದು ಭಾರತೀಯ ಮಜ್ದೂರು ಸಂಘ ಒತ್ತಾಯಿಸಿದೆ. ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಕೆ.ವಿ. ವಿಶ್ವನಾಥ್ ಶೆಟ್ಟಿ ಅವರು, ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಆಸ್ಪತ್ರೆಯಲ್ಲಿ ನಗದು ರಹಿತ ಚಿಕಿತ್ಸೆ ದೊರಕಬೇಕು. ಇಎಸ್‍ಐ ವ್ಯಾಪ್ತಿಗೆ ತರಬೇಕು ಹಾಗೂ ಪಿಎಫ್ ವ್ಯವಸ್ಥೆ ಜಾರಿಗೊಳಿಸಬೇಕು. ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಮನೆ ಹಾಗೂ
ಲೇಡಿಹಿಲ್ ನಗರ ಆರೋಗ್ಯ ಕೇಂದ್ರದಲ್ಲಿ ಸಣ್ಣ ಪುಟ್ಟ ರೋಗಗಳಿಗೂ ಚಿಕಿತ್ಸೆ ಸಿಗುತ್ತಿಲ್ಲ. ಅಗತ್ಯ ಜ್ವರಗಳಿಗೆ ನೀಡುವಂತಹ ಮಾತ್ರೆಗಳು ಕೂಡಾ ಕಳೆದ ಎರಡು ತಿಂಗಳುಗಳಿಂದ ಸರಬರಾಜು ಮಾಡದ ಮಂಗಳೂರು ಮಹಾನಗರ ಪಾಲಿಕೆಯ ಬಿಜೆಪಿ ಆಡಳಿತ ನಗರದ ಜನರ ಆರೋಗ್ಯ ಕಾಳಜಿಯನ್ನು ಸಂಪೂರ್ಣವಾಗಿ ಕಡೆಗಣಿಸಿವೆ. ಇಂತಹ ಸಮಸ್ಯೆಗಳನ್ನು ಬಗೆಹರಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಮೇಯರ್ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಸಿಪಿಐಎಂ ಪಕ್ಷದ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ
ಮೂಡುಬಿದಿರೆ ತಾಲೂಕಿನ ಅಶ್ವಥಪುರದ ಬೇರಿಂಜೆ ಗುಡ್ಡ ಎಂಬಲ್ಲಿ ಒಂಟಿ ಮಹಿಳೆ ಕಮಲ ಅವರ ಮನೆಗೆ ಕಳೆದ 15 ದಿನಗಳ ಹಿಂದೆ ನುಗ್ಗಿ ಕುತ್ತಿಗೆ ಹಿಡಿದು ಚಿನ್ನಾಭರಣ ಕಳವು ಮಾಡಿದ ಮೂವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಅಶ್ವತ್ಥಪುರದ ನಿವಾಸಿಗಳಾದ ದಿನೇಶ್ ಪೂಜಾರಿ, ಸುಕೇಶ್ ಪೂಜಾರಿ ಹಾಗೂ ಹರೀಶ್ ಪೂಜಾರಿ ಬಂಧಿತ ಆರೋಪಿಗಳು. ಅಂಗನವಾಡಿ ಸಹಾಯಕಿಯಾಗಿ ದುಡಿಯುತ್ತಿದ್ದ ಕಮಲ ಒಂಟಿಯಾಗಿ ವಾಸವಿದ್ದು. ಇದರ ಮಾಹಿತಿ ಇದ್ದ ಆರೋಪಿಗಳು ಕಳೆದ ತಿಂಗಳು 2 ಜನ
ಮಂಗಳೂರು: ಸುರತ್ಕಲ್ ಟೋಲ್‍ಗೇಟ್ ತೆರವಿಗೆ ಹಲವು ವರ್ಷಗಳಿಂದ ಪ್ರತಿಭಟನೆ, ಹೋರಾಟ ನಡೆಯುತ್ತಿದ್ದು, ನೂರಾರು ಸಮಾನಮನಸ್ಕ ಸಂಘಟನೆಗಳು, ವಿವಿಧ ರಾಜಕೀಯ ಪಕ್ಷಗಳು ಜೊತೆ ಸೇರಿ ಸ್ಥಾಪಿಸಿರುವ ಟೋಲ್ ಗೇಟ್ ವಿರೋಧಿ ಸಮಿತಿ ನಡೆಸಿರುವ ಹೋರಾಟಕ್ಕೆ ಸದ್ಯದಲ್ಲೇ ಗೆಲುವು ಸಿಗಲಿದೆ. ಕೆಲವೇ ಸಮಯದಲ್ಲಿ ಟೋಲ್ ಅಲ್ಲಿಂದ ಎತ್ತಂಗಡಿ ಆಗುವುದು ನಿಶ್ಚಿತ. ಟೋಲ್ ಗೇಟ್ ನಲ್ಲಿ 31ಕ್ಕೂ ಹೆಚ್ಚು ಮಂದಿ ಯುವಕ-ಯುವತಿಯರು ಕೆಲಸ ಮಾಡುತ್ತಿದ್ದು ಟೋಲ್ ತೆರವುಗೊಂಡರೆ ಅವರ
ಬಂಟರ ಯಾನೆ ನಾಡವರ ಮಾತೃ ಸಂಘ ಮತ್ತು ಶ್ರೀ ರಾಮಕೃಷ್ಣ ವಿದ್ಯಾರ್ಥಿನಿ ಭವನದ ಅಮೃತ ಮಹೋತ್ಸವ ದ ಉದ್ಘಾಟನಾ ಸಮಾರಂಭದ ಆಹ್ವಾನ ಪತ್ರಿಕೆ ಮತ್ತು ವಿಶ್ವ ಬಂಟರ ಮಾಹಿತಿ ಕೋಶದ ಮಾಹಿತಿ ಸಂಗ್ರಹ ಯೋಜನೆಯ ಉದ್ಘಾಟನಾ ಸಮಾರಂಭದ ಆಮಂತ್ರಣ ಪತ್ರಿಕೆಯ ಬಿಡುಗಡೆ ಸಮಾರಂಭ ಜರುಗಿತ್ತು. ಮಂಗಳೂರಲ್ಲಿ ಸೆ.23 ಮತ್ತು 24ರಂದು ನಡೆಯಲಿರುವ ಬಂಟರ ಯಾನೆ ನಾಡವರ ಮಾತೃ ಸಂಘ ಮತ್ತು ಶ್ರೀ ರಾಮಕೃಷ್ಣ ವಿದ್ಯಾರ್ಥಿನಿ ಭವನದ ಅಮೃತ ಮಹೋತ್ಸವ ದ ಉದ್ಘಾಟನಾ ಸಮಾರಂಭದ ಆಹ್ವಾನ ಪತ್ರಿಕೆ ಮತ್ತು




























