ಮಂಗಳೂರಿನಲ್ಲಿರುವ ದಾಸ್ ಪ್ರಮೋಷನ್ಸ್ ಹೋಮ್ ನರ್ಸಿಂಗ್ ಕೇರ್ ಸಂಸ್ಥೆಗೆ ಪ್ರತಿಷ್ಠಿತ ಭಾರತೀಯ ಉದ್ಯೋಗ ರತ್ನ ಪ್ರಶಸ್ತಿ ಲಭಿಸಿದೆ. ಸೇವಾ ಕ್ಷೇತ್ರದಲ್ಲಿನ ಸಾಧನೆಯ ಸಾರ್ಥಕತೆಯ 20 ವರ್ಷದ ಸೇವೆಯಲ್ಲಿ ಸಹಸ್ರಾರು ನಿರುದ್ಯೋಗಿಗಳ ಆಶಾಕಿರಣವಾಗಿ, ವೃದ್ಧರ ಅಸಕ್ತರ ಅದೆಷ್ಟೋ ರೋಗಿಗಳ ಆರೈಕೆ ಮಾಡುವ ಮೂಲಕ ಕರ್ನಾಟಕ ರಾಜ್ಯದಾದ್ಯಂತ ಶಾಖೆಗಳನ್ನು ಹೊಂದಿರುವ ದಾಸ್ ಸೇವಾ
ಲಂಗ್ಸ್ ಕ್ಯಾನ್ಸರ್ ನಿಂದ ಬಳಲುತ್ತಿರುವ ಮೂಡುಬಿದ್ರೆಯ ತೋಡಾರಿನ ಬೇಬಿ ಹಾಗೂ ಬ್ರೈನ್ ಟ್ಯೂಮರ್‌ನಿಂದ ಬಳಲುತ್ತಿರುವ ಬಂಟ್ವಾಳ ತಾಲೂಕಿನ ಬೆಂಜನಪದವು ನಿವಾಸಿ ಹರೀಶ್ ಕುಲಾಲ್ ಇವರ ಚಿಕಿತ್ಸೆಗೆ ತುಳುನಾಡ ಪೊರ್ಲು ಚಾರಿಟೇಬಲ್ ಟ್ರಸ್ಟ್ ಸಂಗ್ರಹಿಸಿದ ಧನ ಸಹಾಯವನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಿಪ್ಲಬೆಟ್ಟು ಒಕ್ಕೂಟದ ಸೇವಾ ಪ್ರತಿನಿಧಿ ಮಲ್ಲಿಕಾ ಶೆಟ್ಟಿ, ಚಂದ್ರಹಾಸ ಪೂಜಾರಿ ಕುಲತ್ತಕೋಡಿ ಕೃಷಿಕರು, ಪಧಾದಿಕಾರಿಗಳು ಹಾಗೂ ಸೇವಾಮಾಣಿಕ್ಯರ ಸಮ್ಮುಖದಲ್ಲಿ
ರೋಟರಿ ಕ್ಲಬ್ ಮತ್ತು ಇನ್ನರ್ ವೀಲ್ ಕ್ಲಬ್ ಪಡುಬಿದ್ರಿ ಇದರ ವತಿಯಿಂದ “ರಾಜ್ ಸೌಂಡ್ಸ್ ಮತ್ತು ಲ್ಯೆಟ್ಸ್” ತುಳು ಚಲನಚಿತ್ರದ ಶತದಿನೋತ್ಸವದ ಸಂಭ್ರಮ ವನ್ನು ಪಡುಬಿದ್ರಿ ಭಾರತ್ ಮಾಲ್ ಮುಂಭಾಗದಲ್ಲಿ ಕೇಕ್ ಕತ್ತರಿಸುವ ಮೂಲಕ ಆಚರಿಸಲಾಯಿತು. ಪಡುಬಿದ್ರಿ ಪೇಟೆಯಿಂದ ಭಾರತ್ ಮಾಲ್ ವರಗೆ ಕಾಲ್ನಡಿಗೆ ಜಾಥ ನಡೆಯಿತು..ಈ ಸಂದರ್ಭದಲ್ಲಿ ರೋಟರಿ ಅಧ್ಯಕ್ಷರಾದ ಗೀತಾ ಅರುಣ್ ಅಧ್ಯಕ್ಷತೆ ವಹಿಸಿದರು.. ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ವಿಮಲ ಕೆ ಸಾಲ್ಯಾನ್,
ಬೆಳಪು ಅಂಬೇಡ್ಕರ್ ಭವನದ ಬಳಿ ಸ್ಥಳೀಯರಲ್ಲಿ ಭಯ ಹುಟ್ಟಿಸಿದ ಬೃಹತ್ ಹೆಬ್ಬಾವನ್ನೂ ಶಿವಾನಂದ ಪೂಜಾರಿ ಹಾಗೂ ಪ್ರಶಾಂತ್ ಪೂಜಾರಿ ನೇತೃತ್ವದ ತಂಡ ಸೆರೆ ಹಿಡಿದು, ರಕ್ಷಿಸಿದ್ದಾರೆ.ಸ್ಥಳೀಯರ ಮಾಹಿತಿ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿ ಹೆಬ್ಬಾವನ್ನು ಸುರಕ್ಷಿತವಾಗಿ ಸೆರೆ ಹಿಡಿದು ಬಳಿಕ ಅರಣ್ಯ ಇಲಾಖೆಯ ಸಿಬಂದಿಗಳ ಸುಪರ್ದಿಗೆ ಒಪ್ಪಿಸಲಾಗಿದೆ.
ಕಾರ್ಕಳ: ಯಕ್ಷಗಾನವೆಂಬುದು ಕರಾವಳಿಯ ಮಣ್ಣಿನ ಕಲೆಯಾಗಿದೆ ಈ ಕಲೆಯು ಸ್ವರ್ಗವನ್ನ ಭೂಮಿಯಲ್ಲಿ ಭಾಸವಾಗುವಂತೆ ಸ್ಪರ್ಶವಿಲ್ಲದೆ ನಿಭಾಯಿಸುವಂತೆ ಮಾಡುತ್ತದೆ ಕಲಾವಿದನ ಬದುಕಿಗೆ ಕಲಾ ಸಂಘಟಕರು ಕಲಾ ಕಲಾಭಿಮಾನಿಗಳು ಜೀವ ತುಂಬುವವರು ಆಗಿರುತ್ತಾರೆ. ಎಂದು ಕಟೀಲ್‍ನ ಹರಿನಾರಾಯಣ ಅಸ್ರಣ್ಣರು ಹೇಳಿದರು. ಅವರು ನಾರಾವಿಯ ಧರ್ಮ ಶ್ರೀ ಸಭಾಭವನದ ಬಲಿಪ ಪ್ರಸಾದ ಭಟ್ ವೇದಿಕೆಯಲ್ಲಿ ಜರುಗಿದ ಯಕ್ಷ ತೀರ್ಥ ಸಂಭ್ರಮ 2022ರ ಕಾರ್ಯಕ್ರಮವನ್ನು ಉದ್ಘಾಟಿಸಿ, ಉದ್ದೇಶಿಸಿ
ಕೊಂಕಣಿ ಭಾಶಾ ಮಂಡಲ್ ಕರ್ನಾಟಕ ಇದರ ಆಶ್ರಯದಲ್ಲಿ ಕೊಂಕಣಿಯನ್ನು ಸಂವಿಧಾನದ ಎಂಟನೆಯ ಪರಿಚ್ಛೇದದ ಅಡಿಯಲ್ಲಿ ಸೇರಿಸಿದ ಮೂವತ್ತು ವರ್ಷದ ಸಂಭ್ರಮಾಚರಣೆಯು ನಗರದ ಡೊನ್ ಬೊಸ್ಕೊಹಾಲ್ ನಲ್ಲಿ ನಡೆಯಿತು. ಕಾರ್ಯಕ್ರಮ ಉದ್ಘಾಟನೆ ಮಾಡಿದ ಸಿಎ ಎಸ್ ಎಸ್ ನಾಯಕ್ ಅವರು ಮಾತನಾಡುತ್ತಾ, ತಾಯಿಯ ಮಾತಿನ ಮಹತ್ವವು ಜೀವನದಲ್ಲಿ ಯಾವುದೇ ದಿನ ಕಡಿಮೆ ಆಗದು.ಹಾಗೆನೇ ಮಾತೃ ಭಾಷೆಯ ಮಹತ್ವ ಕೂಡಾ ಆಗಿದೆ. ಇತರ ಯಾವುದೇ ಭಾಷೆಗಳು ವ್ಯಾವಹಾರಿಕವಾಗಿ ಕಲಿತರೂ ಮಾತೃಭಾಷೆಯ ಜಾಗವು ನಮ್ಮ
ದಿನಾಂಕ 28-08-2022 ರ ಅದಿತ್ಯವಾರ ಬೆಳಗ್ಗೆ 10-30ಗಂಟೆಗೆ ಪುತ್ತೂರಿನ ಸೈನಿಕಭವನದಲ್ಲಿ ಒಂದು ದಿನದ ಪೂರ್ಣ ಜಿಲ್ಲಾ ಕಾರ್ಯಕಾರಿಣಿಯನ್ನು ಜಿಲ್ಲಾಧ್ಯಕ್ಷರಾದ ಓಸ್ವಾಲ್ಡ್ ಪ್ರಕಾಶ್ ಪೆರ್ನಾಂಡಿಸ್ ರವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು. ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕಿರಣ್ ಪುಣಚ ಸಮಸ್ಯೆಗಳನ್ನು ಎದುರಿಸಲು ಅನುಸರಿಸಬೇಕಾದ ಕ್ರಮಗಳು ಹಾಗೂ ಕಾರ್ಯಯೋಜನೆಗಳ ಕುರಿತು ಸಲಹೆ ಸೂಚನೆಗಳನ್ನು ನೀಡಿದರು. ಕಾರ್ಯಕಾರಿಣಿಯಲ್ಲಿ ಜಿಲ್ಲಾ ಉಪಾಧ್ಯಕ್ಷರುಗಳಾದ ದಿವಾಕರ ಪೈ
ತುಳು ಭಾಷೆಯ ಮೇಲೆ ಪ್ರೀತಿ ಇಟ್ಟು ಸಿನಿಮಾ ಮಾಡುತ್ತಿದ್ದೇವೆ. ಆದರೆ ಲಾಕ್‍ಡೌನ್ ಸಂದರ್ಭದಲ್ಲಿ ಬೊಳ್ಳಿ ಮೂವಿಸ್ ಬ್ಯಾನರ್ ಅಡಿಯಲ್ಲಿ ಅಬತರ ಸಿನಿಮಾವನ್ನು ಕಷ್ಟಪಟ್ಟು ಚಿತ್ರೀಕರಣ ಮಾಡಿದ್ದೇವೆ. ಇದೀಗ ಸಾಮಾಜಿಕ ಜಾಲತಾಣದ ಮೂಲಕ ಕೆಲವೊಬ್ಬರು ಬ್ಯಾಡ್ ಕಮೆಂಟ್‍ಗಳನ್ನು ಹಾಕಿ ಸಿನಿಮಾ ನೋಡದ ಹಾಗೆ ಮಾಡುತ್ತಿರುವುದು ಬೇಸರದ ಸಂಗತಿ ಎಂದು ನಟ ,ನಿರ್ದೇಶಕ ಅರ್ಜುನ್ ಕಾಪಿಕಾಡ್ ಹೇಳಿದರು.ಕಳೆದ ಕೋವಿಡ್ ಲಾಕ್‍ಡೌನ್ ಸಂದರ್ಭದಲ್ಲಿ ಕಲಾವಿದರು
ಎಲ್ಲೆಲ್ಲೋ ಸಾರ್ವಜನಿಕ ಗಣೇಶೋತ್ಸವ ಕಾರ್ಯಕ್ರಮಕ್ಕೆ ಸಿದ್ದತೆಗಳು ಆಗುತ್ತಿದಂತೆ, ಅಮಲು ಪದಾರ್ಥ ಸೇವಿಸುವವರಿಗೆ ಹಾಗೂ ಸಂಘಟಕರಿಗೆ ಪೊಲೀಸ್ ಎಚ್ಚರಿಕೆ ನೀಡಿದ್ದು, ಯಾವುದೇ ಸಂದರ್ಭದಲ್ಲಿ ಅಮಲು ಪದಾರ್ಥ ಸೇವಿಸಿ ಕಾರ್ಯಕ್ರಮಕ್ಕೆ ಭಾಗವಹಿಸುವಂತಿಲ್ಲ ಅಂಥವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವ ಎಚ್ಚರಿಕೆಯನ್ನು ಕಾಪು ಸರ್ಕಲ್ ಇನ್ಸ್ ಪೆಕ್ಟರ್ ಪೂವಯ್ಯ ನೀಡಿದ್ದಾರೆ. ಗಣೇಶೋತ್ಸವ ಹಿನ್ನಲೆಯಲ್ಲಿ ಪಡುಬಿದ್ರಿ ಠಾಣೆಯಲ್ಲಿ ಕರೆದ ಸರ್ವದರ್ಮಿಯರ ಸಭೆಯಲ್ಲಿ
ಮೂಡುಬಿದಿರೆ : ಗಣೇಶನ ಹಬ್ಬ ಹಾಗೂ ತೆನೆ ಹಬ್ಬದ ಸಂದರ್ಭಗಳಲ್ಲಿ ಕರಾವಳಿಯ ಉಭಯ ಜಿಲ್ಲೆಗಳಲ್ಲಿ ಕಬ್ಬಿಗೆ ಸಕತ್ ಬೇಡಿಕೆ ಇರುತ್ತದೆ. ಕಳೆದ ಎರಡು ವರ್ಷ ಕೋರೋನಾ ಕಾರಣದಿಂದ ಚೌತಿ ಮತ್ತು ತೆನೆ ಹಬ್ಬ ಸರಳವಾಗಿ ಆಚರಿಸಿದ ಕಾರಣ ಕಬ್ಬಿಗೆ ಬೇಡಿಕೆ ಇರಲಿಲ್ಲ. ಕೊರೋನಾ ಕಾರಣದಿಂದ ಸಂಕಷ್ಟಕೊಳಗಾದ ಕಬ್ಬು ಬೆಳೆದ ರೈತರ ಮೊಗದಲ್ಲಿ ಇದೀಗ ಈ ಬಾರಿ ಮಂದಹಾಸ ಮೂಡಿದೆ. ಕರಾವಳಿಯಲ್ಲಿ ಚೌತಿ ಹಬ್ಬಕ್ಕೆ ಪ್ರಮುಖವಾಗಿ ಕಬ್ಬು ಉಪಯೋಗಿಸುತ್ತಿದ್ದು ಮನೆ ಗಣಪನಿಗೆ ಅರ್ಪಿಸುವ




























