ಪ್ರಕೃತಿಯೇ ವಿಶ್ವವಿದ್ಯಾನಿಲಯ. ಮರ, ನದಿ ಕೂಡಾ ಪರೋಪಕಾರ ಮನೋಭಾವವನ್ನು ಬೆಳೆಸುತ್ತದೆ. ಪ್ರಕೃತಿ ನಾಶವಾಗಬಾರದು. ಅದರ ಜತೆಗೆ ಬದುಕು ಸಾಗಬೇಕು. ಪ್ರಕೃತಿ ಸಮತೋಲನ ಕಾಪಾಡುತ್ತದೆ. ಪ್ರಕೃತಿಯನ್ನು ಸ್ವಚ್ಛವಾಗಿಡುವುದು ಕರ್ತವ್ಯ ಮತ್ತು ಪರಿಣಾಮವಾಗಿ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ. ಆಧ್ಯಾತ್ಮದ ಚಿಂತನೆ ಮೂಲಕ ಜೀವನ ಪಾವನವಾಗಬೇಕು ಎಂದು ಒಡಿಯೂರು ಶ್ರೀ
ಮಂಗಳೂರಿನ ಮಿಲಾಗ್ರಿಸ್ ಕಾಲೇಜಿನ ಪ್ರಾಂಶುಪಾಲರಾದ ಮತ್ತು ಕ್ಯಾಂಪಸ್ ನಿರ್ದೇಶಕರಾದ ರೆವರೆಂಡ್ ಫಾದರ್ ಮೈಕಲ್ ಎಲ್ ಸಾಂತುಮೇಯರ್ ಅವರಿಗೆ ಪಿಹೆಚ್‌ಡಿ ಪದವಿ ಪ್ರದಾನ ಮಾಡಲಾಯಿತು. ಮಂಗಳೂರಿನ ಶ್ರೀನಿವಾಸ ವಿಶ್ವವಿದ್ಯಾಲಯವು ಕೆಲಸದಲ್ಲಿ ತೊಡಗಿಕೊಳ್ಳುವುದರ ಕಣ್ಣೋಟಗಳು ಮತ್ತು ಅದು ಸಂಘಟಿತ ನಾಗರಿಕ ವರ್ತನೆಯ ಮೇಲೆ ಬೀರುವ ಪರಿಣಾಮಗಳು ಎಂಬ ಪ್ರಬಂಧಕ್ಕಾಗಿ ಡಾಕ್ಟರ್ ಆಫ್ ಫಿಲಾಸಫಿ ನೀಡಿ ಗೌರವಿಸಿದೆ. ಮಂಗಳೂರಿನ ಶ್ರೀನಿವಾಸ ವಿಶ್ವವಿದ್ಯಾನಿಲಯದ ಸಂಶೋಧನಾ
ಮಂಗಳೂರು: ನಗರದ ಉಳ್ಳಾಲ ಠಾಣಾ ವ್ಯಾಪ್ತಿಯ ಧರ್ಮನಗರದಲ್ಲಿ ಮನೆಯೊಂದರ ಗಾಡ್ರೆಜ್‌ನೊಳಗಿದ್ದ 15 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಬಾಲಕರು ಸೇರಿದಂತೆ ಐವರನ್ನು ಬಂಧಿಸಿದ್ದಾರೆ. ಬೆಳ್ತಂಗಡಿ ನಿವಾಸಿಗಳಾದ ಶ್ರೇಯಸ್, ತೌಸೀಫ್ ಹಾಗೂ ಉರ್ವ ನಿವಾಸಿ ಪೃಥ್ವಿರಾಜ್ ಬಂಧಿತ ಮೂವರು ಆರೋಪಿಗಳು. ಧರ್ಮನಗರ ನಿವಾಸಿ ಶ್ರೀಧರ್ ಎಂಬವರ ಮನೆಯಲ್ಲಿ ಜೂನ್ 8ರ ಬೆಳಗ್ಗೆ 8ರಿಂದ ಜೂ.16ರ ಮಧ್ಯಾಹ್ನ 12ರ ನಡುವೆ ನಡುವೆ 15
ಉಳ್ಳಾಲ: ಹಾಲಿನ ದರವನ್ನು ಏರಿಸುವ ಮೂಲಕ ರಾಜ್ಯದ ಮಕ್ಕಳಿಗೆ ಹಾಲು ಕುಡಿಯದಂತೆ ಮಾಡಿರುವ ರಾಜ್ಯ ಕಾಂಗ್ರೆಸ್ ಸರಕಾರದ ನೀತಿಯಿಂದಾಗಿ ಮಕ್ಕಳು ಪೌಷ್ಠಿಕಾಂಶದ ಕೊರತೆಯಿಂದ ಬಳಲಿದ್ದಾರೆ. ಹಿಂದೆ ಮಕ್ಕಳಲ್ಲಿ ಇದ್ದಂತಹ ನ್ಯೂನ್ಯತೆಗಳು ಮತ್ತೆ ಮರುಕಳಿಸಲಿದೆ ಎಂದು ಫಲಾನುಭವಿಗಳ ಪ್ರಕೋಷ್ಠದ ರಾಜ್ಯ ಸಮಿತಿ ಸದಸ್ಯೆ ಧನಲಕ್ಷ್ಮೀ ಗಟ್ಟಿ ಹೇಳಿದರು. ಬಿಜೆಪಿ ಮಂಗಳೂರು ವಿಧಾನಸಭಾ ಕ್ಷೇತ್ರದ ಮಹಿಳಾ ಮೋರ್ಚಾದ ವತಿಯಿಂದ ಹಾಲಿನ ದರ ಏರಿಕೆ ಖಂಡಿಸಿ ರಾಜ್ಯ ಸರಕಾರದ ವಿರುದ್ಧ
ಶಾಲೆಯ ಶೌಚಾಲಯವನ್ನು ವಿದ್ಯಾರ್ಥಿಗಳಿಂದ ದೈಹಿಕ ಶಿಕ್ಷಕರೋರ್ವರು ಸ್ವಚ್ಛಗೊಳಿಸಿದ ಘಟನೆ ಉಡುಪಿಯ ನಿಟ್ಟೂರಿನ ಅನುದಾನಿತ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ. ಈಗಾಗಲೇ ಸರಕಾರದಿಂದ ಈ ಕುರಿತಾಗಿ ಸುತ್ತೋಲೆ ಬಂದಿದ್ದು ಮಕ್ಕಳು ಶೌಚಾಲಯವನ್ನು ಸ್ವಚ್ಛಗೊಳಿಸಿದ್ದಲ್ಲಿ ಶಾಲೆಯ ಮುಖ್ಯ ಶಿಕ್ಷಕರು ಹಾಗೂ ಸಿಬ್ಬಂದಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳ ಲಾಗುವುದು ಎಂದು ಎಚ್ಚರಿಕೆ ನೀಡಲಾಗಿತ್ತು. ಎಸ್‌ಡಿಎಂಸಿ ಸಹಕಾರದೊಂದಿಗೆ ಸ್ಥಳೀಯವಾಗಿ ಲಭ್ಯ ಸಂಪನ್ಮೂಲ ಬಳಸಿಕೊಂಡು
ಸಾಮಾಜಿಕ ಜಾಲತಾಣಗಳಲ್ಲಿ ತನ್ನ ಗಾಯನದ ಮೂಲಕ ವೈರಲ್ ಆಗಿರುವ ಬಾಲಕಿ ಶಾಲ್ಮಿಲಿ ಶ್ರೀನಿವಾಸ ಉಡುಪಿಯ ಕೃಷ್ಣ ಮಠಕ್ಕೆ ಭೇಟಿ ನೀಡಿದಳು. ಡಿಡಿ ಆಡ್ಯಾನೆ ರಂಗ ಹಾಡನ್ನು ಹಾಡಿರುವ ಈ ಪುಟಾಣಿ ಮಗು, ಕೃಷ್ಣ ಸನ್ನಿಧಿಯಲ್ಲಿ ಸಂಗೀತ ಸೇವೆ ನಡೆಸಿದ್ದಾಳೆ. ಯೂಟ್ಯೂಬ್‌ನಲ್ಲಿ ಹತ್ತು ಮಿಲಿಯಕ್ಕೂ ಹೆಚ್ಚು ವೀಕ್ಷಣೆಗೊಂಡ ಡೀ ಡೀ ಆಡ್ಯಾನೇ ರಂಗ ಎಂಬ ದಾಸರಪದ ಎಲ್ಲರ ಮೆಚ್ಚುಗೆ ಗಳಿಸಿತ್ತು. ಈ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರಿಂದಲೂ ಪುಟ್ಟ ಬಾಲಕಿಗೆ ಪ್ರಶಂಸೆ
ಉಡುಪಿಯಲ್ಲಿ ಶ್ರೀಕೃಷ್ಣ ಮಠದ ರಾಜಾಂಗಣ ಯಾತ್ರಿಕರ ವಾಹನ ನಿಲುಗಡೆ ಸ್ಥಳದಲ್ಲಿ ಅಸಹಾಯಕ ಸ್ಥಿತಿಯಲ್ಲಿದ್ದ ಅಪರಿಚಿತ ಮಹಿಳೆಯನ್ನು ರಕ್ಷಿಸಿರುವ ಘಟನೆ ನಡೆದಿದೆ. ಮನನೊಂದು ಮನೆ ಬಿಟ್ಟ ಮಹಿಳೆಯು ಸರಕಾರಿ ಬಸ್ಸಿನಲ್ಲಿ ಉಚಿತ ಪ್ರಯಾಣದಿಂದ ಉಡುಪಿಗೆ ಬಂದಿದ್ದಳು. ಶ್ರೀಕೃಷ್ಣ ಮಠದಲ್ಲಿ ಅನ್ನಪ್ರಸಾದ ಸೇವಿಸಿ ಕೆಲವು ದಿನಗಳಿಂದ ದಿನಕಳೆಯುದಿದ್ದಳೆಂದು ತಿಳಿದುಬಂದಿದೆ. ಮಹಿಳೆಯ ಅಸಹಾಯಕತೆಯನ್ನು ಗಮನಿಸಿದ ಬೀದಿ ಕಾಮಣ್ಣರು,ಹಿಂಬಾಲಿಸುತ್ತಿದ್ದರಿಂದ, ಮಹಿಳೆ
ಹೆಬ್ರಿ : ಮುದ್ರಾಡಿ ರಾಂಬೆಟ್ಟು ನಿವಾಸಿ ದಿ.ಉಪೇಂದ್ರ ಆಚಾರ್ಯ ಅವರ ಪತ್ನಿ ಕುಸುಮಾ ಆಚಾರ್ಯ ಎಂಬವರು ಶುಕ್ರವಾರ ಬೇಸಾಯದ ಗದ್ದೆಯಲ್ಲಿ ನೇಜಿ ನಾಟಿ ಮಾಡುವ ವೇಳೆ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಕುಸುಮಾ ಆಚಾರ್ಯ ಹೆಬ್ರಿ ವಿಶ್ವಕರ್ಮ ಸಮಾಜ ಸೇವಾ ಸಂಘದ ಕಾರ್ಯಕ್ರಮ ಮತ್ತು ಕಜ್ಕೆ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದ ಸೇವಾ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಇವರು ಹೆಬ್ರಿ ವಿಶ್ವಕರ್ಮ ಮಹಿಳಾ ಮಂಡಳಿಯ ಸಕ್ರಿಯ ಸದಸ್ಯರಾಗಿದ್ದರು. ಮೃತರು
ಉಡುಪಿ: ಜೆಸಿಬಿಗೆ ಬೈಕ್‌ವೊಂದು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಶುಕ್ರವಾರ ಸಂಭವಿಸಿದೆ.ಮೃತ ಸವಾರನನ್ನು ನಾಯರ್ ಕೋಡು ನಿವಾಸಿ ಪ್ರತ್ಯಕ್ಷ ಶೆಟ್ಟಿ (21 ) ಎಂದು ಗುರುತಿಸಲಾಗಿದೆ. ತಮ್ಮನನ್ನು ಶಾಲೆಗೆ ಬಿಡಲು ಹೋಗುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದ್ದು, ಹಿಂಬದಿ ಸವಾರ ಸಹೋದರ ಪ್ರೀತಿಶ್ ಸಣ್ಣ ಪುಟ್ಟ ಗಾಯದೊಂದಿಗೆ ಪಾರಾಗಿದ್ದಾನೆ. ಮೂರು ತಿಂಗಳ ಹಿಂದೆಯಷ್ಟೇ ತಂದೆಯನ್ನು ಕಳೆದುಕೊಂಡಿದ್ದ, ಪ್ರತ್ಯಕ್ಷ ಶೆಟ್ಟಿ ಮನೆಯ ಆದರ
ಕಾರ್ಕಳ: ಸುಮಾರು ಒಂದು ವರ್ಷದಿಂದ ಕಾರ್ಕಳ ತಾಲೂಕಿನ ಸಾಣೂರು ಗ್ರಾಮದ ಮೂಲಕ 169 ಹೆದ್ದಾರಿ ಮಂಗಳೂರಿನ ನಂತೂರಿನಿಂದ ಕಾರ್ಕಳ ಬೈಪಾಸ್ ವರೆಗೆ ಬರುವ ಚತುಷ್ಟದ ರಸ್ತೆ ಕಾಮಗಾರಿ ಬಹಳ ವೇಗವಾಗಿ ನಡೆಯುತ್ತಿದ್ದು ಆದರೆ ಸಾಣೂರು ಗ್ರಾಮಸ್ಥರಿಗೆ ಈ ಹೆದ್ದಾರಿ ಕಾಮಗಾರಿಕೆ ಒಂದು ಶಾಪವಾಗಿ ಕಾಡುತ್ತಿದೆ. ಈ ಹೆದ್ದಾರಿ ಕಾಮಗಾರಿಗೆ ಪರಿಣಾಮವಾಗಿ ಸಾಣೂರುಪೇಟೆಯಲ್ಲಿ ಕೃತಕ ನೆರೆ ಶಾಲೆ ಬಳಿ ಇರುವ ಗುಡ್ಡ ಕುಸಿತ, ಶಾಲಾ ಆವರಣ ಗೋಡೆ ಕುಸಿತ ಬಸ್ ನಿಲ್ದಾಣ ಸ್ಥಳಾಂತರ, ನೂರಾರು




























