ಬ್ರಿಟನ್ನಿನಲ್ಲಿ ಆಳುವ ಕನ್ಸರ್ವೇಟಿವ್ ಪಕ್ಷವು 14 ವರುಷಗಳ ಬಳಿಕ ಅಧಿಕಾರ ಕಳೆದುಕೊಂಡುದಲ್ಲದೆ ಇತಿಹಾಸದಲ್ಲೇ ಅತಿ ಕಡಿಮೆ ಸ್ಥಾನಗಳನ್ನು ಪಡೆಯಿತು. ಲೇಬರ್ ಪಕ್ಷದ 61ರ ಕೀರ್ ಸ್ಟಾರ್ಮರ್ ಹೊಸ ಪ್ರಧಾನಿ. ಅವರು ಗೆಲುವಿನ ಬಳಿಕ ಕಿಂಗ್ ಚಾರ್ಲ್ಸ್ 3 ಅವರನ್ನು ಭೇಟಿಯಾಗಿ ಸರಕಾರ ರಚನೆಯ ಹಕ್ಕು ಮಂಡಿಸಿದರು. ಲೇಬರ್ ಪಕ್ಷವು 412, ಕನ್ಸರ್ವೇಟಿವ್ ಪಕ್ಷ 121, ಲಿಬರಲ್
ಮಂಗಳೂರು: ಖ್ಯಾತ ವಕೀಲರು ಮತ್ತು ನೋಟರಿ ಆಗಿರುವ ಮೂಡಬಿದಿರೆ ಚೌಟರ ಅರಮನೆಯ ಡಾ.ಅಕ್ಷತಾ ಆದರ್ಶ್ ಅವರು ಬರೆದ ಸರಳ ಕಾನೂನುಗಳ ಅರಿವಿಲ್ಲದೆ ಮೋಸ ಹೋಗದಿರಿ ಎಂಬ ಕಾನೂನು ಮಾಹಿತಿ ಪುಸ್ತಕದ ಲೋಕಾರ್ಪಣೆ ಕಾರ್ಯಕ್ರಮವು ಜುಲೈ 7ರಂದು ನಗರದ ಎಂ.ಜಿ ರಸ್ತೆಯಲ್ಲಿರುವ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಮಹಾವಿದ್ಯಾಲಯದ ಸಭಾಂಗಣದಲ್ಲಿ ನಡೆಯಲಿದೆ. ಜುಲೈ 7ರಂದು ಬೆಳಿಗ್ಗೆ 10.15ಕ್ಕೆ ಸರಿಯಾಗಿ ನಡೆಯಲಿರುವ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ
ಬ್ರಿಟನ್ನಿನ ಮಾರ್ಕ್ ಕ್ಯಾವೆಂಡಿಶ್ ಅವರು ಟೂರ್ ಡೆ ಫ್ರಾನ್ಸ್ ತುಳಿಬಂಡಿ ಸೈಕ್ಲಿಂಗ್‌ನಲ್ಲಿ 35ನೇ ಹಂತದ ಗೆಲುವು ಸಾಧಿಸಿ ದಾಖಲೆ ಬರೆದರು. 2021ರಲ್ಲಿ ಕ್ಯಾವೆಂಡಿಶ್ ಅವರು 34ನೇ ಹಂತ ಗೆಲುವು ಸಾಧಿಸಿ ಸೈಕ್ಲಿಂಗ್ ದಂತ ಕತೆ ಬೆಲ್ಜಿಯಂನ ಎಡ್ಡಿ ಮೆರೆಕ್ಸ್ ದಾಖಲೆ ಸರಿಗಟ್ಟಿದ್ದರು. ಈಗ ಮುರಿದು ದಾಖಲೆ ಬರೆದಿದ್ದಾರೆ. 5ನೇ ಹಂತದ ಸ್ಪ್ರಿಂಟ್ ಸೈಕ್ಲಿಂಗ್‌ನಲ್ಲಿ 69.4 ಕಿಲೋಮೀಟರ್ ವೇಗದಲ್ಲಿ ಬಂದ ಕ್ಯಾವೆಂಡಿಶ್ ಸೈಂಟ್ ವಲ್ಬಾಸ್‌ನಲ್ಲಿ ಕೈಯೆತ್ತಿ ತನ್ನ ದಾಖಲೆ
ಬೆಥನಿ ಆಂಗ್ಲ ಮಾಧ್ಯಮ ಶಾಲೆ ದರ್ಬೆ ಪುತ್ತೂರು ಇಲ್ಲಿ 2024 2025 ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಮಂತ್ರಿ ಮಂಡಲದ ಪ್ರಮಾಣ ವಚನ ಸ್ವೀಕಾರ ಮತ್ತು ಉದ್ಘಾಟನಾ ಸಮಾರಂಭವು ಶಾಲಾ ಸಭಾಂಗಣದಲ್ಲಿ ನೆರವೇರಿತು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಪುತ್ತೂರು ಲಿಟ್ಲ್ ಫ್ಲವರ್ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಾದ ಬಾಲಕೃಷ್ಣ ರೈ ಪೊರ್ದಾಲ್ ರವರು ಮಾತನಾಡಿ ಇಂದಿನ ಎಳೆಯರು ನಾಡಿನ ನಾಳಿನ ನಾಯಕರು. ಆ ನಿಟ್ಟಿನಲ್ಲಿ ಬಾಲ್ಯದಲ್ಲಿಯೇ ಅವರಿಗೆ ಪ್ರಜಾಪ್ರಭುತ್ವದ ನೈಜ
ಬೆಳ್ತಂಗಡಿ ತಾಲೂಕು ಕಚೇರಿಗೆ ಶಾಸಕ ಹರೀಶ್ ಪೂಂಜಾ ದಿಢೀರ್ ಭೇಟಿ ನೀಡಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ತಾಲೂಕು ಕಚೇರಿ ಅಧಿಕಾರಿಗಳು ಕಡತ ವಿಲೇವಾರಿ ಮಾಡಲು ಜನರನ್ನು ಸತಾಯಿಸುತ್ತಿದ್ದರು. ಆದ್ದರಿಂದ ಶಾಸಕರು ಕಚೇರಿ ದಿಢೀರ್ ಅಂತಾ ಭೇಟಿ ನೀಡಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದಾರೆ. ತಾಲೂಕು ಕಚೇರಿಗೆ ಆಗಮಿಸಿದ ಶಾಸಕ ಹರೀಶ್ ಪೂಂಜಾ, ಜನರ ಸಮಸ್ಯೆ ಆಲಿಸಿದ ಬಳಿಕ ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಂ ಸೇರಿದಂತೆ ಇತರೆ ಅಧಿಕಾರಿಗಳನ್ನ ತರಾಟೆಗೆ
ದುಬೈಯ ಯುವ ಗಾಯಕ, ಸಮಾಜ ಸೇವಕ ಯುವರಾಜ್ ಕೆ ದೇವಾಡಿಗ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಯುವರಾಜ್ ಕೆ ದೇವಾಡಿಗ ಅವರು ಮಂಗಳೂರಿನ ಮಂದಾರಬೈಲ್ ನ ನಿವಾಸಿಯಾಗಿದ್ದು ಶಾರ್ಜದ ಪ್ರತಿಷ್ಠಿತ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. 2 ವರ್ಷಗಳ ಹಿಂದೆ ಇವರ ವಿವಾಹವು ಬಿಜೈ ಕಾಪಿಕಾಡಿನ ಪ್ರತಿಮಾ ಎಂಬುವವರ ಜೊತೆ ನಡೆದಿತ್ತು. ಯೌಟ್ಯೂಬ್ ಮತ್ತು ಫೇಸ್ಬುಕ್‌ನಲ್ಲಿ ಸ್ವರಬ್ರಾಮ್ಹರೀ ಎಂಬ ಚಾನೆಲ್ ಮುಖಾಂತರ ತಮ್ಮ ಹಾಡುಗಾರಿಕೆಯಿಂದ ಹಲವಾರು ಅಭಿಮಾನಿಗಳನ್ನು
ಬೆಳ್ತಂಗಡಿಯಲ್ಲಿ ನಡೆದ ಅಕ್ರಮ ಗಣಿಗಾರಿಕೆಗೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಬೆಳ್ತಂಗಡಿ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಶಶಿಧರ ಶೆಟ್ಟಿ ಹೇಳಿದರು. ಅವರು ಬೆಳ್ತಂಗಡಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ನಾನು ಆ ದಿನ ಕಲೆಂಜದಲ್ಲಿ ಇದ್ದು ನಮ್ಮ ಮನೆಗೆ ಪೊಲೀಸರು ಬಂದಾಗಲೇ ವಿಷಯ ತಿಳಿದಿದ್ದು ಕೂಡಲೇ ಪೊಲೀಸರಿಗೆ ಹಾಗೂ ತಹಶೀಲ್ದಾರರಿಗೆ ವಿಷಯ ಮನದಟ್ಟು ಮಾಡಿದ್ದೇನೆ. ಆದರೂ ಕೂಡ ರಾಜಕೀಯ ಒತ್ತಡದಿಂದ ನನ್ನ ಮೇಲೆ ಸುಳ್ಳು ದೂರು ದಾಖಲು ಮಾಡಲಾಗಿದೆ. ಇದಕ್ಕೆಲ್ಲ
ಲೋಕ ಸಭೆಯಲ್ಲಿ ರಾಹುಲ್ ಗಾಂಧಿ ಏನು ಮಾತಾಡಬೇಕು ಅದನ್ನು ಮಾತನಾಡದೆ ಸಮಸ್ತ ಹಿಂದೂ ಸಮಾಜವನ್ನು ಅಪಮಾನ ಮಾಡಿದ್ದಾರೆ ಎಂದು ದಕ್ಷಿಣ ಕನ್ನಡ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಹೇಳಿದರು. ಅವರು ಬೆಳ್ತಂಗಡಿಯಲ್ಲಿ ರಾಜ್ಯ ಸರ್ಕಾರದ ಬೆಲೆ ಏರಿಕೆ ಬಗ್ಗೆ ನಡೆದ ಬೃಹತ್ ಪ್ರತಿಭಟನೆಯಲ್ಲಿ ಮಾತನಾಡಿ, ರಾಜ್ಯದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗಿದೆ ಹಾಲಿನ ದರ ಏರಿಕೆಯಾಗಿದ್ದು, ಬಡವರ ಮಕ್ಕಳ ಹೊಟ್ಟೆಗೆ ಹೊಡೆದಿದ್ದಾರೆ, ಇಡೀ ಕಾಂಗ್ರೆಸ್ ಪಕ್ಷದ ಶಾಸಕರು ಕಮಿಷನ್
ಮಂಗಳೂರು : ರಾಜ್ಯ ಸರಕಾರ ಡಿಸೇಲ್ ಬೆಲೆ ಏರಿಸಿರುವುದರಿಂದ ಲಾರಿ ಉದ್ಯಮಕ್ಕೆ ಅತ್ಯಂತ ಹೆಚ್ಚು ನಷ್ಟವಾಗಲಿದ್ದು, ಮಾಲಕರು ಸಂಕಷ್ಟಕ್ಕೆ ಒಳಗಾಗುತ್ತಾರೆ’ ಎಂದು ದಕ್ಷಿಣ ಕನ್ನಡ ಟ್ರಕ್ ಓನರ್ಸ್ ಅಸೋಸಿಯೇಷನ್ ಹೇಳಿದ್ದಾರೆ. ಡಿಸೇಲ್ ಬೆಲೆ ಏರಿಕೆಯಾದರೂ ಲಾರಿ ಬಾಡಿಗೆ ದರ ಏರಿಸಲಾಗುತ್ತಿಲ್ಲ. ಸರಕಾರ ಸ್ವಾಮ್ಯದ ಬಂದರು, ಕಚ್ಚಾ ತೈಲ, ಆಹಾರ ಸಾಮಾಗ್ರಿ ಸರಕು ನಿರ್ವಹಣೆಗೆ ಬಳಸಲಾಗುವ ಲಾರಿಗಳ ಬಾಡಿಗೆಯನ್ನು ಸರಕಾರ ನಿಯಂತ್ರಿಸುತ್ತಿಲ್ಲ. ಲಾರಿಗಳಿಗೆ ಟನ್ /
ಬ್ರಹ್ಮಾವರ: ಕಟೀಲು ಶ್ರೀ ದುರ್ಗಾ ಪರಮೇಶ್ವರೀ ಪದವಿ ಪೂರ್ವಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ 96.5 ಅಂಕ ಪಡೆದು ಶಿಕ್ಷಣದಲ್ಲಿ ಟೋಪರ್ ಆಗಿ ಚಿತ್ರ ರಚನೆ ಕಲೆಯಲ್ಲಿ ಸೂಪರ್ ಎನಿಸಿಕೊಂಡ ಬಜ್ಪೆಯ ಸಮ್ಯತ ಆಚಾರ್ಯ ಸಂಸದ ಕೋಟ ಶ್ರೀನಿವಾಸ ಪೂಜಾರಿಯವರ ಚಿತ್ರವನ್ನು ರಚಿಸಿ ಕಾರ್ಯಕ್ರಮವೊಂದರಲ್ಲಿ ನೀಡಿ ಬೇಷ್ ಎನಿಸಿಕೊಂಡಿದ್ದಾಳೆ. ಕೋಟೇಶ್ವರದ ಕಾರ್ಯಕ್ರಮವೊಂದರಲ್ಲಿ ಪ್ರತಿಭಾಪುರಸ್ಕಾರಕ್ಕೆ ಬಂದ ಸಮ್ಯತ ಆಚಾರ್ಯ ಉದ್ಘಾಟಕರಾದ ಕೋಟ ಶ್ರೀನಿವಾಸ ಪೂಜಾರಿಯವರಿಗೆ




























