Home ಕರಾವಳಿ Archive by category ಮಂಗಳೂರು (Page 86)

ಮಂಗಳೂರು: ಜಿಲ್ಲೆಯಲ್ಲಿ ಮರಳಿನ ಸಮಸ್ಯೆಗೆ ಬಿಜೆಪಿಯ ಮರಳು ನೀತಿಯೇ ಕಾರಣ: ಹರೀಶ್ ಕುಮಾರ್

ದ.ಕ. ಜಿಲ್ಲೆಯಲ್ಲಿ ಮರಳಿನ ಸಮಸ್ಯೆಗೆ ನಾಲ್ಕು ವರ್ಷ ಆಡಳಿತ ನಡೆಸಿದ ಬಿಜೆಪಿಯ ಮರಳು ನೀತಿಯೇ ಕಾರಣ ಹೊರತು ಕಾಂಗ್ರೆಸ್ ಸರಕಾರವಲ್ಲ. ಫೋನ್ ಮಾಡಿದರೆ ಸಾಕು, 2 ಸಾವಿರಕ್ಕೆ ಒಂದು ಲೋಡ್ ಮರಳು ಮನೆ ಬಾಗಿಲಿಗೆ ಬರಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷರು ಮಾಡಿದ್ದ ಘೋಷಣೆ ಅನುಷ್ಠಾನ ಆಗಿದೆಯೇ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಪ್ರಶ್ನಿಸಿದ್ದಾರೆ.

ಸುರತ್ಕಲ್: ನಿಲ್ಲಿಸಿದ್ದ ಲಾರಿ ಹಿಮ್ಮುಖವಾಗಿ ಚಲಿಸಿ ಐದು ವಾಹನಗಳು ಜಖಂ..!!

ಸುರತ್ಕಲ್‍ನ ಪೆಟ್ರೋಲ್ ಬಂಕ್ ರಸ್ತೆ ಬಳಿ ನಿಲ್ಲಿಸಿದ್ದ ಸಿಮೆಂಟ್ ತುಂಬಿದ ಲಾರಿಯೊಂದು ಆಕಸ್ಮಿಕವಾಗಿ ಹಿಂದಕ್ಕೆ ಚಲಿಸಿ, ನಿಲ್ಲಿಸಿದ್ದ ನಾಲ್ಕು ಕಾರು, ಒಂದು ಬೈಕ್‍ಗೆ ಗುದ್ದಿ ಹಾನಿ ಮಾಡಿದ ಘಟನೆ ನಡೆದಿದೆ. ಸಂಜೆ ವೇಳೆಗೆ ಈ ಘಟನೆ ಸಂಭವಿಸಿದ್ದು, ಚಾಲಕ ಲಾರಿಯನ್ನು ನಿಲ್ಲಿಸಿ ಹೊರಗೆ ತೆರಳಿದ್ದ. ಏಕಾಏಕಿ ಹಿಂದಕ್ಕೆ ಚಲಿಸಿದ ಲೋಡ್ ಲಾರಿ ಡಿವೈಡರ್ ಬಳಿ ತಿರುವು ತೆಗೆದುಕೊಂಡು ಬಂದಿದೆ. ಇದರಿಂದ ಮಾರ್ಕೆಟ್ ಅಂಗಡಿಗೆ ಬಂದಿದ್ದ ಗ್ರಾಹಕರ ನಾಲ್ಕು

ಅಲೆವೂರು: ಟೆಂಪೋ ಬೈಕ್ ಡಿಕ್ಕಿ ಯುವಕ ಸಾವು

ಅಲೆವೂರು: ಟೆಂಪೋ ಮತ್ತು ಬೈಕ್ ನಡುವೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತ ಪಟ್ಟ ಘಟನೆ ಅಲೆವೂರು ವಿಠಲ ಸಭಾಭವನದ ಬಳಿ ನಡೆದಿದೆ. ಘಟನೆಯಲ್ಲಿ ಪ್ರಗತಿ ನಗರದ ಮೊಹಮ್ಮದ್ ತನ್ಸಿಲ್ ( 28) ಮೃತ ದುರ್ದೈವಿಯಾಗಿದ್ದಾರೆ.

Mangaluru : ವಿದ್ಯುತ್ ಖಾಸಗೀಕರಣದ ವಿರುದ್ದ ಮೆಸ್ಕಾಂ ಕಚೇರಿಯೆದುರು ಪ್ರತಿಭಟನೆ

ಆಧುನಿಕ ನಾಗರಿಕ ಸಮಾಜದ ಕೇಂದ್ರ ನರಮಂಡಲದಂತೆ ಕಾರ್ಯನಿರ್ವಹಿಸುವ ಹಾಗೂ ಎಲ್ಲಾ ಕೈಗಾರಿಕೆಗಳ ತಾಯಿಯಂತಿರುವ ಅತ್ಯಂತ ಪ್ರಮುಖ ಸೇವೆಯಾದ ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣ ಮಾಡಲು ಹೊರಟಿರುವ ನರೇಂದ್ರ ಮೋದಿ ಸರಕಾರದ ಕಾರ್ಪೊರೇಟ್ ಪರ ನೀತಿಯನ್ನು ವಿರೋಧಿಸಿ ದೇಶಾದ್ಯಂತ ನಡೆದ ಹೋರಾಟದ ಭಾಗವಾಗಿ ಮಂಗಳೂರಿನ ಬಿಜೈಯಲ್ಲಿರುವ ಮೆಸ್ಕಾಂ ಪ್ರಧಾನ ಕಚೇರಿ,ತೊಕ್ಕೋಟು ಹಾಗೂ ಗುರುಪುರ ಕೈಕಂಬ ಮೆಸ್ಕಾಂ ಕಚೇರಿಯೆದುರು ರೈತ ಕಾರ್ಮಿಕ ಹಾಗೂ ಜನಪರ ಸಂಘಟನೆಗಳ ಜಂಟಿ

ಮಂಗಳೂರು: ಶ್ರೀರಾಮ್ ಫೈನಾನ್ಸ್ ಲಿಮಿಟೆಡ್‌ನ ಪ್ರಾಯೋಜಕತ್ವದಲ್ಲಿ ನ.10 ರಂದು ವಿದ್ಯಾರ್ಥಿ ನಿಧಿ ವಿತರಣಾ ಕಾರ್ಯಕ್ರಮ

ಮಂಗಳೂರು ಎ.ಬಿ.ಶೆಟ್ಟಿ ಸರ್ಕಲ್‌ನ ಪಾರಡಿಗಂ ಪ್ಲಾಜಾದಲ್ಲಿರುವ ಶ್ರೀರಾಮ್ ಫೈನಾನ್ಸ್ ಲಿಮಿಟೆಡ್‌ನ ಪ್ರಾಯೋಜಕತ್ವದಲ್ಲಿ ವಿದ್ಯಾರ್ಥಿ ನಿಧಿ ವಿತರಣಾ ಕಾರ್ಯಕ್ರಮವು ನ.10 ರಂದು ನಗರದ ಪುರಭವನದಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನು ಕರ್ನಾಟಕ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಉದ್ಘಾಟಿಸಲಿದ್ದು, ಶಾಸಕ ಡಿ.ವೇದವ್ಯಾಸ್ ಕಾಮತ್ ವಿದ್ಯಾರ್ಥಿ ವೇತನ ವಿತರಿಸಲಿದ್ದಾರೆ. ಶ್ರೀರಾಮ್ ಫೈನಾನ್ಸ್ ಲಿಮಿಟೆಡ್‌ನ ಜಂಟಿ ನಿದೇರ್ಶಕರಾಧ ಸುದರ್ಶನ್ ಬಿ ಹೊಳ್ಳ ಅವರು

ರಾಷ್ಟ್ರೀಯ ಕ್ಯಾನ್ಸರ್ ಜಾಗೃತಿ ದಿನ – ನವೆಂಬರ್ 7

ರಾಷ್ಟ್ರೀಯ ಕ್ಯಾನ್ಸರ್ ಜಾಗೃತಿ ದಿನ – ಪ್ರತಿ ವರ್ಷ ಭಾರತದಾದ್ಯಂತ ನವಂಬರ್ 7 ರಂದು ರಾಷ್ಟ್ರೀಯ ಕ್ಯಾನ್ಸರ್ ಜಾಗೃತಿ ದಿನ ಎಂದು ಆಚರಿಸಿ ಕ್ಯಾನ್ಸರ್ ರೋಗದ ಬಗ್ಗೆ ಜಾಗೃತಿ, ಆರಂಭಿಕ ಹಂತದಲ್ಲಿ ಗುರುತಿಸುವುದರ ಮಹತ್ವ ಮತ್ತು ಸಕಾಲದಲ್ಲಿ ಸೂಕ್ತ ಚಿಕಿತ್ಸೆ ಬಗ್ಗೆ ಮಾರ್ಗದರ್ಶನ ಮಾಡುವ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕಾರ್ಯವನ್ನು ಮಾಡಲಾಗುತ್ತದೆ. ರಾಷ್ಟ್ರೀಯ ಕ್ಯಾನ್ಸರ್ ನಿಯಂತ್ರಣ ಕಾರ್ಯಕ್ರಮ ಭಾರತದಲ್ಲಿ 1975 ರಲ್ಲಿ ಆರಂಭವಾಯಿತು. ಆದರೆ

ಮತ್ತೆ ಮರುಕಳಿಸುತ್ತಿರುವ ಝಿಕಾ ಜ್ವರ

ಆಧುನಿಕ ಸಂಶೋಧನೆಗಳು, ಆವಿಷ್ಕಾರಗಳು ಹೆಚ್ಚಿದಂತೆ, ವೈದ್ಯರಿಗೆ ಹೊಸ ರೋಗಗಳನ್ನು ಗುರುತಿಸುವಲ್ಲಿ ಮತ್ತು ಚಿಕಿತ್ಸೆಯನ್ನು ನೀಡುವಲ್ಲಿ ಹೆಚ್ಚಿನ ಅನುಕೂಲ ಉಂಟಾಗಿದೆ ಎನ್ನುವುದು ಸತ್ಯವಾದ ವಿಚಾರ. ಅದರ ಜೊತೆಗೆ ಕೆಲವೊಂದು ರೋಗಾಣುಗಳು ತಮ್ಮ ದೇಹದ ರಚನೆಯನ್ನು ಪರಿಸ್ಥಿತಿಗೆ ಪೂರಕವಾಗಿ ಮಾರ್ಪಾಡುಗೊಳಿಸಿಕೊಂಡು, ಹೊಸ ಹೊಸ ರೋಗಗಳಿಗೆ ಕಾರಣವಾಗಿ ವೈದ್ಯಲೋಕಕ್ಕೆ ಸವಾಲಾಗಿ ನಿಲ್ಲತೊಡಗಿರುವುದು ವಿಪರ್ಯಾಸವಾದರೂ ಸತ್ಯ. ಅಂತಹ ರೋಗಾಣು ಮತ್ತು ರೋಗಗಳ ಸಾಲಿಗೆ ಸೇರುವ

ಮುಲ್ಕಿ : ಪೇಜಾವರ ಸ್ವಾಮಿಗಳಿಗೆ ಪಿತೃ ವಿಯೋಗ

ಪೇಜಾವರ ಸ್ವಾಮೀಜಿಗಳ ಪೂರ್ವಶ್ರಮದ ತೀರ್ಥ ರೂಪರಾದ ಶತಾಯುಷಿ ಪಕ್ಷಿಕೆರೆ ಸಮೀಪದ ಅಂಗಡಿಮಾರು ಕೃಷ್ಣ ಭಟ್ಟರು ಭಾನುವಾರ ತಡರಾತ್ರಿ ನಿಧನ ರಾದರು.ಅವರಿಗೆ 103 ವರ್ಷ ವಯಸ್ಸಾಗಿತ್ತು. ಕೃಷ್ಣ ಭಟ್ಟರು ಪೇಜಾವರ ವಿಶ್ವಪ್ರಸನ್ನ ಸ್ವಾಮೀಜಿ ಸಹಿತ 5 ಪುತ್ರರು ಹಾಗೂ 6 ಪುತ್ರಿಯರನ್ನು ಅಗಲಿದ್ದಾರೆ. ಪಕ್ಷಿಕೆರೆ ಸಮೀಪದ ಅಂಗಡಿಮಾರು ಬಳಿ ಹಿರಿಯ ಕೃಷಿಕರಾಗಿದ್ದ ಅವರು ಕಳೆದ ಹಲವಾರು ವರುಷಗಳಿಂದ ಪುರೋಹಿತ ವೃತ್ತಿ ಜತೆಗೆ ತುಳುನಾಡ ಪಂಚಾಗ ರಚಿಸಿದ್ದರು.ತಮ್ಮ ಮನೆಯಲ್ಲಿ

ತೊಕ್ಕೊಟ್ಟು: ಕೊಚ್ಚಿನ್ ಬೇಕರಿಯ ಮಳಿಗೆ ಶುಭಾರಂಭ

ತನ್ನದೇ ಆದ ರುಚಿ, ಗುಣಮಟ್ಟಕ್ಕೆ ಪ್ರಸಿದ್ಧಿಯನ್ನು ಪಡೆದ ಕೇಕ್ ಮತ್ತು ಸ್ವೀಟ್‍ನ ಕೊಚ್ಚಿನ್ ಬೇಕರಿಯ ಮತ್ತೊಂದು ಮಳಿಗೆ ತೊಕ್ಕೊಟ್ಟು ಸಮೀಪದ ಕಲ್ಲಾಪುವಿನಲ್ಲಿ ಶುಭಾರಂಭಗೊಂಡಿತು. ಉತ್ತಮ ಆಹಾರಕ್ಕಿಂತ ಹೆಚ್ಚಿನ ಸಂತೋಷವನ್ನು ಬೇರೆ ಯಾವುದೂ ಜನರಿಗೆ ತರುವುದಿಲ್ಲ.ಕೇಕ್‍ಗಳು, ಸಿಹಿತಿಂಡಿಗಳು ಮತ್ತು ಬೇಕರಿ ವಸ್ತುಗಳ ಎಲ್ಲಾ ಆಹಾರ ಉತ್ಪನ್ನಗಳಲ್ಲಿ ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡಿದೆ. ದಕ್ಷಿಣ ಭಾರತದ ಅತ್ಯುತ್ತಮ ಬೇಕರಿ ಉತ್ಪನ್ನಗಳ

ಮಂಗಳೂರು: ವಿದ್ಯುತ್ ಖಾಸಗೀಕರಣದ ಮೂಲಕ ದೇಶವನ್ನೇ ಕತ್ತಲು ಮಾಡುವ ಹುನ್ನಾರ – ಸುನಿಲ್ ಕುಮಾರ್ ಬಜಾಲ್

ವಿದ್ಯುತ್ ಕ್ಷೇತ್ರದಲ್ಲಿನ ಉತ್ಪಾದನೆ,ವಿತರಣೆ ಹಾಗೂ ಕಂದಾಯ ಆಕರಣೆ ಇದ್ಯಾವುದನ್ನೂ ಸರಕಾರ ಮಾಡಬಾರದು. ಅವೆಲ್ಲವನ್ನೂ ಖಾಸಗೀಯವರಿಗೆ ವಹಿಸಿ ಸರಕಾರ ತನ್ನ ಜವಾಬ್ದಾರಿಯಿಂದ ಮುಕ್ತವಾಗಬೇಕು ಎಂದು ಕೇಂದ್ರ ಸರಕಾರದ ಅಡಿಯಲ್ಲಿರುವ ನೀತಿ ಆಯೋಗ ಅತ್ಯಂತ ಸ್ಪಷ್ಟವಾಗಿ ಹೇಳಿರುವುದು, ದೇಶದ ಸಂಪತ್ತನ್ನು ಮಾರಲು ಹೊರಟ ಕೇಂದ್ರ ಸರಕಾರದ ಧೋರಣೆ ಏನೆಂಬುದು ಜಗಜ್ಜಾಹೀರಾಗಿದೆ.ವಿದ್ಯುತ್ ಕ್ಷೇತ್ರವನ್ನು ಸಂಪೂರ್ಣ ಖಾಸಗೀಕರಣಗೊಳಿಸುವ ಮೂಲಕ ಇಡೀ ದೇಶವನ್ನೇ ಕತ್ತಲು ಮಾಡಲು