‘ಉದ್ಯಮ ವಲಯ ಚೇತರಿಸುತ್ತಿದ್ದರೂ ಲಾರಿ ಮಾಲಕರು ಇನ್ನೂ ಸಂಕಷ್ಟದಲ್ಲಿಯೇ ಇರುವುದು ವಿಪರ್ಯಾಸ. ಲಾರಿ ವ್ಯವಹಾರ ನಷ್ಟದಲ್ಲಿಯೇ ಮುಂದುವರಿಯಬಾರದು. ಸರಕಾರ ಲಾರಿ ಮಾಲಕರ ಸಂಕಷ್ಟಗಳಿಗೆ ಸ್ಪಂದಿಸಬೇಕಿದೆ’ ಎಂದು ಶಾಸಕ ಡಾ| ವೈ. ಭರತ್ ಶೆಟ್ಟಿ ಹೇಳಿದರು. ಅವರು ಕುಳಾಯಿಯಲ್ಲಿ ದಕ್ಷಿಣ ಕನ್ನಡ ಟ್ರಕ್ ಓನರ್ಸ್ ಅಸೋಸಿಯೇಷನ್ (ರಿ.) ಇದರ ನೂತನ ಕಚೇರಿ
ಮಂಗಳೂರು ವಿಶ್ವ ವಿದ್ಯಾನಿಲಯದ ಮಾಜಿ ಉಪ ನೋಂದಣಾಧಿಕಾರಿ ಹಾಗೂ ಮ್ಯಾಪ್ಸ್ ಇವ್‌ನಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಪ್ರಭಾಕರ ನೀರ್‌ಮಾರ್ಗ ಅವರು ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ಈ ಬಾರಿಯ ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.ನಗರದ ನೆಹರೂ ಮೈದಾನದಲ್ಲಿ ಇಂದು ಬೆಳಗ್ಗೆ ನಡೆದ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಪ್ರಶಸ್ತಿ ಪ್ರದಾನ ಮಾಡಿದರು.
ಬೆಂಗಳೂರಿನ ಅರಮನೆ ಮೈದಾನದಲ್ಲಿ ನ. 25 ಮತ್ತು 26ರಂದು ನಡೆಯಲಿರುವ ‘ಬೆಂಗಳೂರು ಕಂಬಳ- ನಮ್ಮ ಕಂಬಳ’ಕ್ಕೆ ಸಕಲ ಸಿದ್ಧತೆಗಳು ನಡೆಯುತ್ತಿದ್ದು, ಈಗಾಗಲೇ ಒಂದು ಹಂತದ ಕಂಬಳ ಕರೆಗಳ ನಿರ್ಮಾಣವಾಗಿದ್ದು, ಅದನ್ನು ನೋಡಲೆಂದೇ ದಿನವೊಂದಕ್ಕೆ ಸಾವಿರಾರು ಜನ ಸೇರುತ್ತಿದ್ದಾರೆ ಎಂದು ಬೆಂಗಳೂರು ಕಂಬಳ ಸಮಿತಿಯ ಅಧ್ಯಕ್ಷ ಅಶೋಕ್ ಕುಮಾರ್ ರೈ ಹೇಳಿದ್ದಾರೆ. ಮಂಗಳೂರು ಪ್ರೆಸ್‍ಕ್ಲಬ್ ನ ಗೌರವ ಅತಿಥಿಯಾಗಿ ಭಾಗವಹಿಸಿ ಗೌರವ ಸ್ವೀಕರಿಸಿದ ಅವರು ಬೆಂಗಳೂರು
ರಾಜ್ಯಕ್ಕೆ ‘ಕರ್ನಾಟಕ’ ಎಂದು ಹೆಸರಿಟ್ಟು 50 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ವೈವಿಧ್ಯಮಯವಾಗಿ ನಾಡಹಬ್ಬ ಆಚರಣೆಗೆ ಸರ್ಕಾರ ನಿರ್ಧರಿಸಿದೆ. ಇದರಂತೆ ಮಂಗಳೂರು ಮಹಾನಗರ ಪಾಲಿಕೆ ಆವರಣ ಕನ್ನಡ ಬಾವುಟದ ಮುಖಾಂತರ ಶೃಂಗಾರಗೊಂಡಿದೆ. ಮಂಗಳೂರು ಪಾಲಿಕೆ ಕಚೇರಿಯ ಮುಖ್ಯ ಪ್ರವೇಶ ದ್ವಾರವನ್ನು ಕನ್ನಡ ಬಾವುಟದಿಂದಲೇ ವಿಶೇಷವಾಗಿ ಅಲಂಕರಿಸಲಾಗಿದೆ. ಪಾಲಿಕೆ ಕಚೇರಿ ಮುಂಭಾಗ ಕನ್ನಡ ಬಾವುಟದ ಸ್ವಾಗತ ಕಮಾನುಗಳು, ಶುಭಾಯ ಕೋರಿ ಹಾಕಿದ ನಾಮಫಲಕ, ನಾಡು ನುಡಿ
ಮಂಗಳೂರು: ಭಾರತೀಯ ಚುನಾವಣಾ ಆಯೋಗದಿಂದ ಮತದಾರರ ಪಟ್ಟಿ ಪರಿಷ್ಕೃತ ಕರಡು ಪ್ರತಿ ಬಿಡುಗಡೆ ಮಾಡಿದೆ. ಡಿಸೆಂಬರ್ 09ರ ವರೆಗೆ ಹಕ್ಕು – ಆಕ್ಷೇಪಣೆಗೆ ಅವಕಾಶ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಹೇಳಿದರು. ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾಹಿತಿ ನೀಡಿದರು. ಮತದಾರರ ಪಟ್ಟಿಗೆ ವಿಶೇಷ ನೋಂದಣಿ ಅಭಿಯಾನಕ್ಕೆ ಎರಡು ಶನಿವಾರ ಮತ್ತು ಎರಡು ಭಾನುವಾರ ದಿನ ನಿಗದಿ ಪಡಿಸಿದೆ. ನವೆಂಬರ್ 18 ಮತ್ತು19, ಡಿಸೆಂಬರ್ 2 ಮತ್ತು 3
ಒಳ್ಳೆಯ ದಿನಗಳು ಬರಲಿದೆ ಎಂದು ದೇಶದ ಜನತೆಗೆ ಮಂಕುಬೂದಿ ಎರಚಿ ಅಧಿಕಾರದ ಗದ್ದುಗೆಯೇರಿ ಕಳೆದ 9 ವರ್ಷಗಳಿಂದ ಜನಸಾಮಾನ್ಯರ ಬದುಕನ್ನು ಸರ್ವನಾಶಗೊಳಿಸಿದ ಕೇಂದ್ರದ ನರೇಂದ್ರ ಮೋದಿ ಸರಕಾರವು ನಿತ್ಯ ನಿರಂತರವಾಗಿ ಕಾರ್ಪೊರೇಟ್ ಪರ ನೀತಿಗಳನ್ನು ಹಾಗೂ ರೈತ ಕಾರ್ಮಿಕ ಜನವಿರೋಧಿ ನೀತಿಗಳನ್ನು ಜಾರಿಗೊಳಿಸುವ ಮೂಲಕ ಕಾರ್ಪೊರೇಟ್ ಕಂಪನಿಗಳ ಹಿತಾಸಕ್ತಿಗಳನ್ನು ಕಾಪಾಡುತ್ತಿದೆ.ಎಲ್ಲಾ ಕೈಗಾರಿಕೆಗಳ ತಾಯಿ ಹಾಗೂ ಆಧುನಿಕ ನಾಗರಿಕ ಸಮಾಜದ ಕೇಂದ್ರ ನರಮಂಡಲದಂತೆ
ಪ್ರತಿಷ್ಟಿತ ಜಿ.ಎಲ್ ಆಚಾರ್ಯ ಜ್ಯುವೆಲ್ಲರ್ಸ್ ನ ‘ಪಾರ್ಥ’ ಪುರುಷರ ಆಭರಣಗಳ ಅತೀ ದೊಡ್ಡ ಹಾಗೂ ವಿಶೇಷ ಸಂಗ್ರಹವನ್ನು ನಾಯರ್ ಕನ್ಸ್ಟ್ರಕ್ಷನ್ ಮಾಲಕರಾದ ಸೂರಜ್ ನಾಯರ್ ಅವರು ಅನಾವರಣಗೊಳಿಸಿದರು. ಬಳಿಕ ಮಾತನಾಡಿ ಜಿಎಲ್ ಆಚಾರ್ಯ ಜ್ಯುವೆಲ್ಲರ್ಸ್ ನಲ್ಲಿ ಉತ್ತಮ ಸೇವೆ ಹಾಗೂ ವಿಫುಲವಾದ ಸಂಗ್ರಹ ಇದೆ. ನಾನು ಇಲ್ಲಿನ ಸಂತೃಪ್ತ ಗ್ರಾಹಕನಾಗಿದ್ದೇನೆ. ‘ಪಾರ್ಥ ಸಂಗ್ರಹದಿಂದ ಜಿಎಲ್ ಸಂಸ್ಥೆಯು ಯಶಸ್ವಿಯಾಗಲಿ ಎಂದು ಶುಭಹಾರೈಸಿದ್ರು. ಈ ವೇಳೆ ಜಿಎಲ್
ಕೇರಳ ಎರ್ನಾಕುಲಂನ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆದ ಸ್ಪೋಟ ಹಿನ್ನೆಲೆಯಲ್ಲಿ ಕರ್ನಾಟಕ ಗಡಿಭಾಗದಲ್ಲಿ ಅಲರ್ಟ್ ಆಗಿರಲು ಸೂಚನೆ ನೀಡಲಾಗಿದೆ. ಈ ಬಗ್ಗೆ ಗಡಿಭಾಗದಲ್ಲಿ ಅಲರ್ಟ್ ಇರುವಂತೆ ಡಿಜಿ, ಐಜಿಯವರಿಗೆ ಸೂಚನೆ ನೀಡಲಾಗಿದೆ. ಅಲ್ಲದೆ ಕೇರಳ ಗಡಿ ಭಾಗದಲ್ಲಿ ಭದ್ರತೆ, ನಿಗಾ ಹೆಚ್ಚಿಸಲಾಗುವುದು ಎಂದು ಮಂಗಳೂರಿನಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು. ಅವರು ಮಂಗಳೂರಿನಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದರು. ದಸರಾ ಸಂದರ್ಭದಲ್ಲಿ ಮೈಸೂರು, ಕೊಡಗು
ಬಜ್ಪೆ ಪೊಲೀಸ್ ಠಾಣೆಯ ನೂತನ ಕಟ್ಟಡವನ್ನು ರಾಜ್ಯ ಗೃಹ ಸಚಿವ ಡಾ.ಜಿ.ಪರಮೇಶ್ವರ ಉದ್ಘಾಟಿಸಿದರು. ಈ ಸಂದರ್ಭ ಮಾಜಿ ಸಚಿವ ಬಿ.ರಮಾನಾಥ ರೈ, ಶಾಸಕ ಉಮಾನಾಥ ಕೋಟ್ಯಾನ್, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಮಾಜಿ ಶಾಸಕ ಜೆ.ಆರ್.ಲೋಬೊ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಇನಾಯತ್ ಅಲಿ, ಮಿಥುನ್ ರೈ, ಡಿಐಜಿ ಡಾ. ಚಂದ್ರಗುಪ್ತ, ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್, ಡಿಸಿಪಿ ದಿನೇಶ್ ಕುಮಾರ್, ಮನೋಜ್ ಕುಮಾರ್, ನಿರೀಕ್ಷಕ ಸಂದೀಪ್ ಮತ್ತಿತರರು
ಮಂಗಳೂರಿನ ಕೊಟ್ಟಾರದಲ್ಲಿರುವ ಶ್ರೀ ವಿದ್ಯಾ ಸರಸ್ವತಿ ಕ್ಷೇತ್ರದಲ್ಲಿ ನವರಾತ್ರಿ ಪೂಜೆ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನೆರವೇರಿತು. ಶ್ರೀ ವಿದ್ಯಾ ಸರಸ್ವತಿ ಕ್ಷೇತ್ರದಲ್ಲಿ ನವರಾತ್ರಿ ಪೂಜೆ, ಅಭಿಷೇಕ, ಅಲಂಕಾರ ಪೂಜೆ, ಹೂವಿನ ಪೂಜಾ, ಅಕ್ಷರಭ್ಯಾಸ ಪೂಜೆ, ಮಹಿಳಾ ಬೃಂದದಿಂದ ಸರಸ್ವತಿ ಕೀರ್ತನೆ, ಮೃತ್ಯುಂಜಯ ಶಾಂತಿ ಹೋಮ, ನವಗ್ರಹ ಶಾಂತಿ ಹೋಮ, ಮಹಿಳಾ ವೃಂದದಿಂದ ಕುಂಕುಮರ್ಚನೆ ಸೇವೆ ಹಾಗೂ ಸಪ್ತಸ್ವರ ಬಳಗದವರಿಂದ ಭಕ್ತಿಗೀತೆ, ರಾತ್ರಿ ದಿನ ಅನ್ನ ಸಂತರ್ಪಣೆ ಬಹಳ




























