ಮಂಗಳೂರು: ಶ್ರೀ ಅಂಬಿಕಾ ಅನ್ನಪೂರ್ಣೇಶ್ವರೀ ದಶಾವತಾರ ಯಕ್ಷಗಾನ ಮಂಡಳಿಯ ಮೇಳದಲ್ಲಿ ಯಕ್ಷಗಾನ ಕಥೆ ಬರಹಗಾರರಾದಯಕ್ಷಕಲಾ ವಿಭೂಷಣ ಜಿ.ಕೆ ಶ್ರೀನಿವಾಸ್ ಸಾಲ್ಯಾನ್ ರಾಷ್ಟ್ರೀಯ ರತ್ನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಸೆ.24ರಂದು ನವ ದೆಹಲಿಯ ಚಾಣಕ್ಯಪುರದ ಡಾ.ಶಿವರಾಮ ಕಾರಂತ ವೇದಿಕೆಯಲ್ಲಿ ನಡೆಯುವ 17ನೇ ರಾಷ್ಟ್ರೀಯ ಕನ್ನಡ ಸಂಸ್ಕ್ರತಿ ಸಮ್ಮೇಳನದಲ್ಲಿ ಭಾರತ ಸರಕಾರದ
ಬಹು ನಿರೀಕ್ಷೆಯ ಪುಳಿಮುಂಚಿ ತುಳು ಚಿತ್ರದ ಪ್ರೀಮಿಯರ್ ಪ್ರದರ್ಶನದ ಟಿಕೆಟ್ ಬಿಡುಗಡೆ ಕಾರ್ಯಕ್ರಮವು ಯುಎಇಯ ಅಜ್ಮಾನ್ ನ ಇಂಡಿಯನ್ ಅಸೋಸಿಯೇಷನ್ ಸಭಾಂಗಣದಲ್ಲಿ ಸಪ್ಟೆಂಬರ್ 24 ರಂದು ಜರಗಲಿದೆ. ಮಾರ್ಗದೀಪ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಯುಎಇಯ ವತಿಯಿಂದ ನಡೆಯುವ ಒಂಬತ್ತನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ವೇದಿಕೆಯಲ್ಲಿ ಮಧ್ಯಾಹ್ನ 12.30 ಕ್ಕೆ ಟಿಕೆಟ್ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ. ಫೆಮಿನಾ ಮಿಸ್ ಇಂಡಿಯಾ ಗೋವಾ 2019 ಶಾಸ್ತ್ರ ಶೆಟ್ಟಿ ಇವರು
ಮಂಗಳೂರಿನಿಂದ ಗೋವಾಗೆ ಹೊಸ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಸೇವೆ ನೀಡುವಂತೆ ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ರವರನ್ನು ಸಂಸದ ನಳಿನ್ ಕುಮಾರ್ ಕಟೀಲ್ ಅವರು ಭೇಟಿ ಹೊಸದಿಲ್ಲಿಯಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿದರು. ಅಕ್ಟೋಬರ್ ಅಂತ್ಯದೊಳಗೆ ಮಂಗಳೂರಿನಿಂದ ಗೋವಾಗೆ ಹೊಸ ವಂದೇ ಭಾರತ್ ಎಕ್ಸ್‍ಪ್ರೆಸ್ ರೈಲು ಸೇವೆ ನೀಡುವುದಾಗಿ ಸಚಿವರು ಭರವಸೆ ನೀಡಿದ್ದಾರೆ ಎಂದವರು ತಿಳಿಸಿದ್ದಾರೆ.ಬೆಂಗಳೂರು ಕಣ್ಣೂರು ರೈಲನ್ನು ಕೊಚ್ಚಿನ್‍ವರೆಗೆ
ಮಂಗಳೂರು : ಕದ್ರಿ ಠಾಣೆಯಲ್ಲಿ ಹೆಡ್ ಕಾನ್ಸ್ಟೇಬಲ್ ಆಗಿದ್ದುಕೊಂಡು ಜಿಲ್ಲೆಯ ಗುಪ್ತವಾರ್ತೆ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕಾಸರಗೋಡು ಅಡೂರು ನಿವಾಸಿ ಚಂದ್ರ ಕೆ. (48) ತೀವ್ರ ಅಸೌಖ್ಯದಿಂದ ದೇರಳಕಟ್ಟೆ ಖಾಸಗಿ ಆಸ್ಪತ್ರೆಯಲ್ಲಿ ಇಂದು ನಿಧನರಾದರು. 1996 ರಲ್ಲಿ ಪೊಲೀಸ್ ಇಲಾಖೆಗೆ ಸೇರ್ಪಡೆಗೊಂಡಿದ್ದ ಇವರಿಗೆ ಸದ್ಯದಲ್ಲೇ ಎಎಸ್ ಐ ಹುದ್ದೆಗೆ ಭಡ್ತಿಯಾಗುವವರಿದ್ದರು. ಸಿಸಿಬಿ, ಪಾಂಡೇಶ್ವರ, ಸಿಸಿಅರ್ ಬಿ, ಡಿಸಿಐಬಿ, ಸೆನ್, ಕದ್ರಿ ಠಾಣೆ ಹಾಗೂ ಸದ್ಯ
ಮಂಗಳೂರಿನಲ್ಲಿ ರ್‍ಯಾಂಬೋ ಸರ್ಕಸ್ ಆರಂಭವಾಗಿದ್ದು, ನಗರದ ಡಾ.ಟಿ.ಎಂ.ಎ. ಪೈ ಸೆಂಟರ್ ನಲ್ಲಿ ಆರಂಭಗೊಂಡಿದೆ. ಹವಾನಿಯಂತ್ರಿತ ಆಡಿಟೋರಿಯಮ್‍ನಲ್ಲಿ ಮೊದಲ ಬಾರಿಗೆ ಸರ್ಕಸ್ ಪ್ರದರ್ಶನಗೊಳ್ಳುತ್ತಿದ್ದು, ಸೆ.24ರ ತನಕ ರ್‍ಯಾಂಬೋ ಸರ್ಕಸ್‍ನ ಬೆರಗುಗೊಳಿಸುವ ಪ್ರದರ್ಶನ ಇರಲಿದೆ. ಮಂಗಳೂರು ನಗರ ದಕ್ಷಿಣ ಕ್ಷೇತ್ರದ ಶಾಸಕ ಡಿ.ವೇದವ್ಯಾಸ ಕಾಮತ್ ಸರ್ಕಸ್‍ಗೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಮಂಗಳೂರಿನಲ್ಲಿ ಮೊದಲ
ಅರ್ನ ಕ್ರಿಯೇಷನ್ಸ್ ಸಂಸ್ಥೆಯ ‘ಅಂಬರ ಮರ್ಲೆರ್’ ಎಂಬ ತುಳು ಸಾಮಾಜಿಕ ಹಾಸ್ಯ ಧಾರಾವಾಹಿಯು ಚಂದನ ವಾಹಿನಿಯಲ್ಲಿ ಸೆ.24ರಿಂದ ಪ್ರತಿ ಭಾನುವಾರ ಪ್ರಸಾರವಾಗಲಿದೆ ಎಂದು ನಿರ್ಮಾಪಕ ಹಾಗೂ ಪ್ರಧಾನ ನಿರ್ದೇಶಕ ಸುಂದರ್ ರೈ ಮಂದಾರ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ‘ಪ್ರತಿ ಭಾನುವಾರ ಮಧ್ಯಾಹ್ನ 1.30ರಿಂದ 2 ಗಂಟೆಯವರೆಗೆ ಧಾರಾವಾಹಿ ಪ್ರಸಾರವಾಗಲಿದೆ. ನಟರಾದ ನವೀನ್ ಡಿ. ಪಡೀಲ್, ಅರವಿಂದ್ ಬೋಳಾರ್, ದೀಪಕ್ ರೈ ಪಾಣಾಜೆ, ಪುಷ್ಪರಾಜ್
ಕಾಪು ರೆಸಿಡೆನ್ಸಿ ಕಟ್ಟಡದ ಬಳಿ ನಿಲ್ಲಿಸಲಾಗಿದ್ದ ಬೈಕ್ ನಾಪತ್ತೆಯಾದ ಬಗ್ಗೆ ಉತ್ತರ ಪ್ರದೇಶ ಮೂಲದ ವ್ಯಕ್ತಿ ನೀಡಿದ ದೂರಿನನ್ವಯ ತನಿಖೆ ನಡೆಸಿದ ಕಾಪು ಪೊಲೀಸರು ಬೈಕ್ ಸಹಿತ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿ ಮೂಳೂರು ನಿವಾಸಿ ಹಳೆ ಆರೋಪಿ ಸೂರಜ್ ಕೋಟ್ಯಾನ್ (೩೧), ಉತ್ತರ ಪ್ರದೇಶ ಮೂಲದ ವ್ಯಕ್ತಿ ಶಾರುಖ್ ಹಸನ್ ಎಂಬವರು ಅನೂಪ್ ಕುಮಾರ್ ಎಂಬವರಿಗೆ ಸೇರಿದ ಪಲ್ಸರ್ ಬೈಕನ್ನು ಕಾಪು ರೆಸಿಡೆನ್ಸಿ ಬಳಿ ರಾತ್ರಿ ನಿಲ್ಲಿಸಿ ಹೋಗಿದ್ದು, ಮರುದಿನ ಬೆಳಗ್ಗೆ
ಮಂಗಳೂರು ರಿಫೈನರಿ & ಪೆಟ್ರೋಕೆಮಿಕಲ್ಸ್ ಲಿಮಿಟೆಡ್ ಸಂಸ್ಥೆಯಿಂದ ಜೈಪುರ್ ಪುಟ್ಸ್ ಸಹಯೋಗದೊಂದಿಗೆ ಉಚಿತ ಕೃತಕ ಕೈ ಮತ್ತು ಕಾಲು ಜೋಡಣಾ ಶಿಬಿರವನ್ನು ಹಮ್ಮಿಕೊಂಡಿದ್ದಾರೆ. ಎಂಆರ್‍ಪಿಎಲ್ ಸಂಸ್ಥೆಯ ಉದ್ದಿಮೆಗಳ ಸಾಮಾಜಿಕ ಜವಾಬ್ದಾರಿ ವಿಭಾಗದಿಂದ ಉಚಿತ ಕೃತಕ ಕೈ ಮತ್ತು ಕಾಲು ಜೋಡಣಾ ಶಿಬಿರವನ್ನು ಜೈಪುರ್ ಫುಟ್ಸ್‍ನ ನುರಿತ ತಂತ್ರಜ್ಞರ ನೇತೃತ್ವದಲ್ಲಿ ಅಕ್ಟೋಬರ್ ತಿಂಗಳಲ್ಲಿ ಶಿಬಿರವನ್ನು ಆಯೋಜಿಸಿದ್ದಾರೆ. ಈ ಶಿಬಿರದಲ್ಲಿ ಪಾಲ್ಗೊಳ್ಳಲು
ದ.ಕ. ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಷನ್ ಲಿ.ಗೆ ಮಂಜುನಾಥ ಖಾರ್ವಿ ಅವರು ನೀಡಿದ ಮೂರು ಚೆಕ್‌ಗಳು ಬೌನ್ಸ್ ಆದ ಹಿನ್ನೆಲೆಯಲ್ಲಿ ಒಟ್ಟು 88 ಲ.ರೂ. ಪಾವತಿಸುವಂತೆ ನ್ಯಾಯಾಲಯದ ತೀರ್ಪಿನಂತೆ ಹಣ ಮರುಪಾವತಿ ಮಾಡಲು ವಿಫಲನಾದ ಮಂಜುನಾಥ್ ಖಾರ್ವಿ ವಿರುದ್ಧ ವಾರಂಟ್ ಜಾರಿ ಮಾಡಿದ್ದ ಹಿನ್ನೆಲೆಯಲ್ಲಿ ಕುಂದಾಪುರ ಪೊಲೀಸರು ಉಪ್ಪುಂದದ ಮನೆಯಲ್ಲಿ ಬಂಧಿಸಿ 5ನೇ ಜೆ ಎಂ ಎಫ್ ಸಿ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಸೆಪ್ಟೆಂಬರ್ 20 ರಂದು ಹಾಜರು ಪಡಿಸಿದ
ರಾಜ್ಯದಲ್ಲಿ ಹುಕ್ಕಾ ಬಾರ್‍ಗಳಿಂದ ತೊಂದರೆ ಆಗುತ್ತಿದೆ. ಸಾರ್ವಜನಿಕರಿಗೆ ಆನಾರೋಗ್ಯ ಕಾಡುತ್ತಿದೆ. ಕಾಯ್ದೆಗೆ ತಿದ್ದುಪಡಿ ಮಾಡಿ ಬದಲಾವಣೆ ತರಲು ಚಿಂತನೆ ನಡೆಸಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು. ಅವರು ಮಂಗಳೂರಿನಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದರು. ರಾಜ್ಯದಲ್ಲಿ ಹುಕ್ಕಾ ಬಾರ್ ನಿಷೇಧದ ಬಗ್ಗೆ ಚಿಂತನೆ ನಡೆಸಲಾಗಿದೆ. ಹುಕ್ಕಾ ಬಾರ್‍ಗಳಿಂದ ಬೇರೆ ಬೇರೆ ದುಷ್ಪಾರಿಣಾಮಗಳು ಉಂಟಾಗುತ್ತಿದೆ. ಸಾರ್ವಜನಿಕ




























