Home ಕರಾವಳಿ Archive by category ಮೂಡಬಿದರೆ (Page 14)

ಮೂಡುಬಿದಿರೆ : ಮಹಿಳೆಯರ ಕುತ್ತಿಗೆಯಿಂದ ಚಿನ್ನಾಭರಣ ಎಳೆಯುತ್ತಿದ್ದವರು ಪೊಲೀಸರ ವಶಕ್ಕೆ

ಮೂಡುಬಿದಿರೆ : ಇಲ್ಲಿನ ಠಾಣಾ ವ್ಯಾಪ್ತಿಯಲ್ಲಿ ಆ.15 ಮತ್ತು ಸೆ. 2ರಂದು ನಡೆದ ಮಹಿಳೆಯರ ಚಿನ್ನಾಭರಣ ಎಳೆದೊಯ್ದು ಪರಾರಿಯಾಗಿದ್ದ ಈರ್ವರು ಖದೀಮರನ್ನು ಮೂಡುಬಿದಿರೆ ಪೊಲೀಸ್ ವೃತ್ತ ನಿರೀಕ್ಷಕ ಸಂದೇಶ್ ಪಿ.ಜಿ ಅವರ ತಂಡ ವಶಕ್ಕೆ ತೆಗೆದುಕೊಂಡಿದ್ದಾರೆಮಾರ್ಪಾಡಿ ಗ್ರಾಮದ ವಿವೇಕಾನಂದ ನಗರದ ಬಳಿ ನಿರ್ಮಲ ಪಂಡಿತ್(70 ವರ್ಷ) ಎಂಬವರ ಕುತ್ತಿಗೆಯಿಂದ ಸುಮಾರು 24 ಗ್ರಾಂ

ಮೂಡುಬಿದಿರೆ : ವಿಶ್ವಕರ್ಮ ಪೂಜೆ

ಮೂಡುಬಿದಿರೆ ಅಲಂಗಾರು ಅಯ್ಯ ಜಗದ್ಗುರು ಮಠದಲ್ಲಿ ವಿಶ್ವಕರ್ಮ ಯಜ್ಞ ಹಾಗೂ ಪೂಜೆಯು ವ್ಯವಸ್ಥಾಪಕ ವಿಶ್ವನಾಥ ಪುರೋಹಿತ್ ಆಚಾರ್ಯತ್ವದಲ್ಲಿ ನಡೆಯಿತು. ಮೂಡುಬಿದಿರೆ ಕಲ್ಲಬೆಟ್ಟು ವಿಶ್ವಕರ್ಮ ಸಮಾಜ ಸೇವಾ ಸಂಘದ ವತಿಯಿಂದ 48ನೇ ವರ್ಷದ ವಿಶ್ವಕರ್ಮ ಪೂಜೆಯು ಗಂಟಾಲ್‌ಕಟ್ಟೆ ಕಾಳಿಕಾಂಬಾ ನಿಲಯದಲ್ಲಿ ನಡೆಯಿತು. ಮೂಡುಬಿದಿರೆ ಪುತ್ತಿಗೆ ಗುಡ್ಡೆಯಂಗಡಿ ಪಾಲಡ್ಕ ವಿಶ್ವಕರ್ಮ ಸಮಾಜ ಸೇವಾ ಸಂಘದ ವತಿಯಿಂದ ವಿಶ್ವಕರ್ಮ ಪೂಜೆಯು ವಿಶ್ವಕರ್ಮ ಸಭಾಭವನದಲ್ಲಿ ನಡೆಯಿತು. ಬೆಳುವಾಯಿ

ಮೂಡುಬಿದಿರೆ : ಜಿಲ್ಲಾ ಮಟ್ಟದ ಭಾಷಣ ಸ್ಪರ್ಧೆ: ಜೈನ ಪ.ಪೂ.ಕಾಲೇಜಿನ ಕೃತಿ, ಸಮೀಕ್ಷಾ ಶೆಟ್ಟಿ ಆಯ್ಕೆ

ಮೂಡುಬಿದಿರೆ : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕರ್ನಾಟಕ ಸರಕಾರದ ವತಿಯಿಂದ ಸುವರ್ಣ ಕರ್ನಾಟಕ ಸಂಭ್ರಮ 50ರ ಪ್ರಯುಕ್ತ ಮೂಡುಬಿದಿರೆ ತಾಲೂಕು ಮಟ್ಟದ ಭಾಷಣ ಸ್ಪರ್ಧೆಯಲ್ಲಿ ಜೈನ ಪದವಿಪೂರ್ವ ಕಾಲೇಜಿನ ಕೃತಿ ಮತ್ತು ಸಮೀಕ್ಷಾ ಶೆಟ್ಟಿ, ವಿಜೇತರಾಗಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. “ಕರ್ನಾಟಕದ ಬಹುತ್ವದ ಸಂಸ್ಕೃತಿಗೆ ಕರಾವಳಿ ಕರ್ನಾಟಕದ ಕೊಡುಗೆಗಳು ಮತ್ತು ಸವಾಲುಗಳು” ಎನ್ನುವ ವಿಚಾರದಲ್ಲಿ ನಡೆದ ಈ ಸ್ಪರ್ಧೆಯಲ್ಲಿ ಹಿರಿಯ ಸಾಹಿತಿ ಸದಾನಂದ

ಮೂಡುಬಿದಿರೆ :ಜೆ ಸಿ ಸಪ್ತಾಹ 2024: ಚಿತ್ರಕಲಾ ಸ್ಪರ್ಧೆ

ಮೂಡುಬಿದಿರೆ : ಜೇಸಿ ಸಪ್ತಾಹದಂಗವಾಗಿ ಜೆಸಿಐ ಮೂಡುಬಿದಿರೆ ತ್ರಿಭುವನ್ ಮತ್ತು ಇನ್ನರ್ ವೀಲ್ ಕ್ಲಬ್ ನ ಜಂಟಿ ಆಶ್ರಯದಲ್ಲಿ ಮಾಸ್ತಿಕಟ್ಟೆ ಅರ್ಹತಾ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ನ ಚಿತ್ರಕಲಾ ಸ್ಪರ್ಧೆ ನಡೆಯಿತು. ಎಲ್ ಕೆಜಿಯಿಂದ 7ನೇ ತರಗತಿಯವರೆಗೆ ವಿವಿಧ ವಿಭಾಗದಲ್ಲಿ ನಡೆದ ಸ್ಪರ್ಧೆಯನ್ನು ಇನ್ನರ್ ವೀಲ್ ಅಧ್ಯಕ್ಷೆ ಬಿಂದಿಯಾ ಎಸ್.ಶೆಟ್ಟಿ ಉದ್ಘಾಟಿಸಿದರು.ಜೆಸಿಐ ನ ಅಧ್ಯಕ್ಷ ಪ್ರದೀಪ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಜೆಸಿಐ ಸೀನಿಯರ್

ಮೂಡುಬಿದಿರೆ: ಮಹಿಳೆಯರಲ್ಲಿ ಮಾನಸಿಕ ಒತ್ತಡ- ಪರಿಹಾರೋಪಾಯಗಳು: ಮಾಹಿತಿ ಶಿಬಿರ

ಮೂಡುಬಿದಿರೆ: ಬಂಟರ ಸಂಘ ಮೂಡುಬಿದಿರೆ ಮತ್ತು ಬಂಟರ ಮಹಿಳಾ ಘಟಕದ ಆಶ್ರಯದಲ್ಲಿ ಮಕ್ಕಳು ಮತ್ತು ಮಹಿಳೆಯರಲ್ಲಿ ಮಾನಸಿಕ ಒತ್ತಡ – ಪರಿಹಾರೋಪಾಯಗಳು ಎಂಬ ವಿಷಯದ ಕುರಿತು ವಿಶೇಷ ಮಾಹಿತಿ ಶಿಬಿರವು ಇಲ್ಲಿನ ಖಾಸಗಿ ಹೊಟೇಲ್ ನಲ್ಲಿ ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಮಣಿಪಾಲ ಮಾಹೆ ಸಂಸ್ಥೆಯ ಸ್ಟುಡೆಂಟ್ ಕೌನ್ಸೆಲ್ಲರ್ ಡಾ. ರಾಯನ್ ಮಥಾಯಸ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.ನಂತರ ಮಾತನಾಡಿದ ಅವರು ಇಂದಿನ ಸಮಾಜದಲ್ಲಿ ಮಾನಸಿಕ ಒತ್ತಡಗಳಿಗೆ

ಮೂಡುಬಿದಿರೆ ತಾಲೂಕು ಮಟ್ಟದ ಖೋ ಖೋ ಪಂದ್ಯಾಟ : ಆಳ್ವಾಸ್‌ಗೆ ಅವಳಿ ಪ್ರಶಸ್ತಿ

ಮೂಡುಬಿದಿರೆ: ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ದಕ್ಷಿಣ ಕನ್ನಡ ಹಾಗೂ ಆಳ್ವಾಸ್ ಪದವಿ ಪೂರ್ವ ಕಾಲೇಜು ಮೂಡುಬಿದಿರೆ ಇವುಗಳ ಸಂಯುಕ್ತ ಆಶ್ರಯದಲ್ಲಿ ವಿದ್ಯಾಗಿರಿಯಲ್ಲಿ ಜರುಗಿದ ಮೂಡುಬಿದಿರೆ ತಾಲೂಕು ಮಟ್ಟದ ಪದವಿಪೂರ್ವ ಕಾಲೇಜುಗಳ ಬಾಲಕರ ಖೋ-ಖೋ ಪಂದ್ಯಾಟದಲ್ಲಿ ಆಳ್ವಾಸ್ ಪದವಿಪೂರ್ವ ಕಾಲೇಜು, ಮಹಾವೀರ ಪದವಿ ಪೂರ್ವ ಕಾಲೇಜು ತಂಡವನ್ನು ಸೋಲಿಸಿ ಪ್ರಶಸ್ತಿಯನ್ನು ಪಡೆಯಿತು.ಬಾಲಕಿಯರ ಖೋ-ಖೋ ಪಂದ್ಯಾಟದಲ್ಲಿ ಆಳ್ವಾಸ್ ಪದವಿಪೂರ್ವ ಕಾಲೇಜು, ಮಹಾವೀರ ಪದವಿ ಪೂರ್ವ

ಸೋತವರೂ ಮುಖ್ಯಮಂತ್ರಿ ಪದವಿ ಆಕಾಂಕ್ಷಿಗಳಾಗಿದ್ದಾರೆ : ಅಭಯಚಂದ್ರ ಜೈನ್

ಮೂಡುಬಿದಿರೆ: ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸಿ ಹಲವು ಬಾರಿ ಸೋತವರೂ ತಾವು ಮುಖ್ಯಮಂತ್ರಿ ಪದವಿಗೆ ಆಕಾಂಕ್ಷಿ ಎಂದು ಹೇಳಿಕೆ ನೀಡುತ್ತಿರುವುದರಿಂದ ರಾಜಕೀಯ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎನ್ನುವುದಕ್ಕೆ ಸಾಕ್ಷಿ ಎಂದು ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅವರು ಮೂಡುಬಿದಿರೆ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.’ಪ್ರಾಸಿಕ್ಯೂಷನ್ ಆದೇಶದ ಸಂದರ್ಭದಲ್ಲಿ ಸಿದ್ಧರಾಮಯ್ಯ ಅವರ ಬೆಂಬಲಕ್ಕೆ

ಮೂಡುಬಿದಿರೆ: ಪೊಲೀಸ್ ವಸತಿಗೃಹಕ್ಕೆ ಶಾಸಕ ಉಮಾನಾಥ ಕೋಟ್ಯಾನ್ ಶಿಲಾನ್ಯಾಸ

ಮೂಡುಬಿದಿರೆ: ತಾಲೂಕಿನ ಪೊಲೀಸ್ ಠಾಣೆಯ ಆವರಣದಲ್ಲಿ ಸುಮಾರು ನಾಲ್ಕು ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣವಾಗಲಿರುವ ಪೊಲೀಸ್ ವಸತಿಗೃಹಕ್ಕೆ ಶಾಸಕ ಉಮಾನಾಥ ಕೋಟ್ಯಾನ್ ಅವರು ಶುಕ್ರವಾರ ಶಿಲಾನ್ಯಾಸ ನೆರವೇರಿಸಿದರು. ನಂತರ ಮಾಧ್ಯಮದೊಂದಿಗೆ ಮಾತನಾಡಿದ ಕೋಟ್ಯಾನ್ ಅವರು ನಾಲ್ಕು ಕೋ.ವೆಚ್ಚದ ಮೂರು ಅಂತಸ್ತಿನಲ್ಲಿ ಒಟ್ಟು 12 ವಸತಿಗೃಹಗಳು ನಿರ್ಮಾಣವಾಗಲಿದ್ದು ಪೊಲೀಸ್ ಕುಟುಂಬಕ್ಕೆ ಸಹಕಾರಿಯಾಗಲಿದೆ,ಮುಂದೆ ಹಂತಹಂತವಾಗಿ ಪೊಲೀಸರ ಬೇಡಿಕೆಯಂತೆ ವಸತಿಗೃಹಗಳಿಗೆ ಆದ್ಯತೆ

ಮೂಡುಬಿದಿರೆ : ರಾಜ್ಯ ಉತ್ತಮ ಶಿಕ್ಷಕಿ ಪ್ರಶಸ್ತಿಗೆ ನೀರ್ಕೆರೆ ಶಾಲೆಯ ಮುಖ್ಯ ಶಿಕ್ಷಕಿ ಯಮುನಾ ಆಯ್ಕೆ

ಮೂಡುಬಿದಿರೆ : ಪ್ರಸಕ್ತ ಸಾಲಿನ ರಾಜ್ಯ ಉತ್ತಮ ಶಿಕ್ಷಕಿ ಪ್ರಶಸ್ತಿಗೆ ಮೂಡುಬಿದಿರೆ ತಾಲೂಕಿನ ತೆಂಕಮಿಜಾರು ಗ್ರಾಪಂ ವ್ಯಾಪ್ತಿಯ ನಿರ್ಕೇರೆ ದ.ಕ ಜಿಲ್ಲಾ ಪಂಚಾಯತ್ ಹಿರಿಯ ಶಾಲೆಯ ಮುಖ್ಯ ಶಿಕ್ಷಕಿ ಯಮುನಾ.ಕೆ ಅವರು ಆಯ್ಕೆಯಾಗಿದ್ದಾರೆ. ಮೂಡುಬಿದಿರೆ : ಪ್ರಸಕ್ತ ಸಾಲಿನ ರಾಜ್ಯ ಉತ್ತಮ ಶಿಕ್ಷಕಿ ಪ್ರಶಸ್ತಿಗೆ ಮೂಡುಬಿದಿರೆ ತಾಲೂಕಿನ ತೆಂಕಮಿಜಾರು ಗ್ರಾಪಂ ವ್ಯಾಪ್ತಿಯ ನಿರ್ಕೇರೆ ದ.ಕ ಜಿಲ್ಲಾ ಪಂಚಾಯತ್ ಹಿರಿಯ ಶಾಲೆಯ ಮುಖ್ಯ ಶಿಕ್ಷಕಿ ಯಮುನಾ.ಕೆ ಅವರು

ಮೂಡುಬಿದಿರೆ: ಶ್ರೀ ಮಹಾವೀರ ಕಾಲೇಜು ಗ್ರಂಥಾಲಯ ಸಹಾಯಕಿಯಾಗಿದ್ದ ಹೇಮಲತಾ ನಿಧನ

ಮೂಡುಬಿದಿರೆ: ಇಲ್ಲಿನ ಶ್ರೀ ಮಹಾವೀರ ಕಾಲೇಜು, ಗ್ರಂಥಾಲಯ ಸಹಾಯಕಿಯಾಗಿದ್ದ ಶ್ರೀಮತಿ ಹೇಮಲತಾ (49) ಅಲ್ಪ ಕಾಲದ ಅಸ್ವಾಸ್ಥ್ಯದಿಂದ ಸೆ 2ರಂದು ನಿಧನ ಹೊಂದಿದರು. ಅವರು ಪತಿಯನ್ನು ಅಗಲಿದ್ದಾರೆ. ಕಳೆದ 10 ವರ್ಷಗಳಿಂದ ಅವರು ಕಾಲೇಜಿನ ಗ್ರಂಥಾಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಅವರ ನಿಧನಕ್ಕೆ ಮಹಾವೀರ ಕಾಲೇಜು ಆಡಳಿತ ಮಂಡಳಿ ಸಂತಾಪ ವ್ಯಕ್ತಪಡಿಸಿದೆ.