Home ಕರಾವಳಿ Archive by category ಮೂಡಬಿದರೆ (Page 49)

ಪರೀಕ್ಷಾ ಪೇ ಚರ್ಚಾ ಸಂವಾದಕ್ಕೆ ಪ್ರಹ್ಲಾದ ಮೂರ್ತಿ ಆಯ್ಕೆ

ಮೂಡುಬಿದಿರೆ: ಗಣರಾಜ್ಯೋತ್ಸವ ಹಾಗೂ ಪ್ರಧಾನಿ ಜೊತೆಗಿನ ಪರೀಕ್ಷಾ ಪೇ ಚರ್ಚಾ ಸಂವಾದದಲ್ಲಿ ಭಾಗವಹಿಸಲು ಮೂಡುಬಿದಿರೆಯ ಹತ್ತನೇ ತರಗತಿ ವಿದ್ಯಾರ್ಥಿ ಪ್ರಹ್ಲಾದ ಮೂರ್ತಿ ಕಡಂದಲೆ ಆಯ್ಕೆಯಾಗಿದ್ದಾರೆ.ಜನವರಿ 26ರಂದು ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ. ಬಳಿಕ ಜನವರಿ 27ರಂದು ನಡೆಯುವ ಪ್ರಧಾನಿ ನರೇಂದ್ರ ಮೋದಿ

ಕಳವು ಪ್ರಕರಣದ ಆರೋಪಿಯ  ಬಂಧನ

ಮೂಡುಬಿದಿರೆ : ಇಲ್ಲಿನ ಸ್ವರಾಜ್ಯ ಮೈದಾನದ ಬಳಿ ಇರುವ ಮಾರಿಗುಡಿಗೆ ನುಗ್ಗಿ ಗದ್ದುಗೆ ಮಂಟಪದಲ್ಲಿದ್ದ ಮೂರು ಕಾಣಿಕೆ ಡಬ್ಬಗಳನ್ನು ಕಳವುಗೈದಿರುವ ಆರೋಪಿಯನ್ನು ಮೂಡುಬಿದಿರೆ ಪೊಲೀಸರು ಬಂಧಿಸಿ ಶನಿವಾರ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.  ಹೆಜಮಾಡಿಯ ಕೊಕ್ರಾಣಿ ಗ್ರಾಮದ ಕಕ್ವಾ ನಿವಾಸಿ ವಿಜಯ ಯಾನೆ ಕೊಕ್ರಾಣಿ ವಿಜಯ್ ಬಂಧಿತ ಆರೋಪಿ. ಈತ ಜ.15ರಂದು ರಾತ್ರಿ ಮೂಡುಬಿದಿರೆಯ ಮಾರಿಗುಡಿಗೆ ಪ್ರವೇಶಿಸಿ ಕಾಣಿಕೆ ಡಬ್ಬಿಗಳನ್ನು ಕಳವುಗೈದಿದ್ದ ಈ ಬಗ್ಗೆ ಮೂಡುಬಿದಿರೆ

ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆಂಬ ಆತ್ಮತೃಪ್ತಿ ಇದೆ : ಶಾಸಕ ಉಮಾನಾಥ್ ಕೋಟ್ಯಾನ್

ಪಡುಮಾರ್ನಾಡು ಗ್ರಾ.ಪಂ.ವ್ಯಾಪ್ತಿಯಲ್ಲಿ ರೂ 9ಕೋ.ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆಮೂಡುಬಿದಿರೆ:ಜನಸೇವಕನಾಗಿ ಆರಿಸಿ ಬಂದು ಸಿಕ್ಕಿದ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಕ್ಷೇತ್ರದಲ್ಲಿ ಉತ್ತಮ ಅಭಿವೃದ್ಧಿ ಕೆಲಸಗಳನ್ನು ಯಶಸ್ವಿಯಾಗಿ ಮಾಡಿಕೊಂಡು ಬಂದಿದ್ದೇನೆಂಬ ಆತ್ಮತೃಪ್ತಿ ನನಗಿದೆ ಎಂದು ಶಾಸಕ ಉಮಾನಾಥ್ ಕೋಟ್ಯಾನ್ ಹೇಳಿದರು.ಅವರು ಪಡುಮಾರ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ರೂ.9ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ

ಮದುವೆ ನಿಶ್ಚಯವಾಗಿದ್ದ ಯುವಕ ಆತ್ಮಹತ್ಯೆ

ಮೂಡುಬಿದಿರೆ: ಮದುವೆ ನಿಶ್ಚಯವಾಗಿದ್ದ ಯುವಕನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಶುಕ್ರವಾರ ಸಂಜೆ ಇರುವೈಲಿನಲ್ಲಿ ನಡೆದಿದೆ.ಇರುವೈಲು ಗುಂಡಾಲ ಮನೆಯ ಸದಾನಂದ ಶೆಟ್ಟಿ ಅವರ ಪುತ್ರ ಪ್ರತಾಪ್ ಶೆಟ್ಟಿ( 30)ಆತ್ಮಹತ್ಯೆ ಮಾಡಿಕೊಂಡ ಯುವಕ. ಕೃಷಿಕನಾಗಿದ್ದ ಈತ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ನೇಣು ಬಿಗಿದುಕೊಂಡಿದ್ದಾನೆ. ಜ.22ರಂದು ಮದುವೆ ನಿಶ್ಚಯವಾಗಿತ್ತು. ಸಾಧು ಸ್ವಭಾವದ ಯುವಕನಾಗಿದ್ದ ಈತನಿಗೆ ಆರ್ಥಿಕವಾಗಿ ತೊಂದರೆ ಇರಲಿಲ್ಲ.ಆದರೆ ವಿಡಿಯೋ

ಅಯ್ಯಪ್ಪ ವೃತದಾರಿ ಹೃದಯಾಘಾತದಿಂದ ನಿಧನ

ಮೂಡುಬಿದಿರೆ: ಅಯ್ಯಪ್ಪ ವೃತದಾರಿ ಮೂಡುಬಿದಿರೆ ಮಿಜಾರು ಸಮೀಪದ ಕೊಪ್ಪದ ಕುಮೇರು ಶೇಖರ ಪೂಜಾರಿ (74) ಅವರು ಶಬರಿಮಲೆಗೆ ಹೋಗಿದ್ದ ವೇಳೆ ಹೃದಯಾಘಾತದಿಂದ ಭಾನುವಾರ ನಿಧನರಾಗಿದ್ದಾರೆ. ಶೇಖರ ಪೂಜಾರಿ ಅವರು ಕಳೆದ 48 ವರ್ಷಗಳಿಂದ ಅಯ್ಯಪ್ಪ ಮಾಲಾಧಾರಿಯಾಗಿ ಶಬರಿಮಲೆಗೆ ಯಾತ್ರೆ ಹೋಗುತ್ತಿದ್ದರು. ಮೂಡುಬಿದಿರೆ ಪರಿಸರದಲ್ಲಿ ಹಿರಿಯ ಮಾಲಾಧಾರಿಯಾಗಿದ್ದ ಅವರು ಈ ವರ್ಷ 48 ನೇ ವರ್ಷದ ಮಾಲಾಧಾರಿಯಾಗಿದ್ದರು. ಯಾತ್ರೆ ಕೈಗೊಂಡಿದ್ದ ಅವರು ಭಾನುವಾರ ಇರುಮುಡಿ ಹೊತ್ತು

ಬೆಳುವಾಯಿ ನಿವಾಸಿ ಕುವೈಟ್‌ನಲ್ಲಿ ಸಾವು

ಮೂಡುಬಿದಿರೆ: ಪಡುಮಾರ್ನಾಡು ಗ್ರಾಮದ ಕೆಸರ್‌ಗದ್ದೆಯ ನಿವಾಸಿಯೊಬ್ಬರು ಕುವೈಟ್‌ನಲ್ಲಿ ಹೃದಯಾಘಾತಕ್ಕೊಳಗಾಗಿ ನಿಧನರಾದ ಘಟನೆ ಸೋಮವಾರ ನಡೆದಿದೆ. ಮೃತ ವ್ಯಕ್ತಿ ರೋಷನ್ ಹೆಗ್ಡೆ (46)ಎಂದು ತಿಳಿದುಬಂದಿದೆ. ಇವರು ನಿವೃತ್ತ ಶಿಕ್ಷಕಿ ಕೆಸರ್‌ಗದ್ದೆಯ ನಳಿನಿ ರಾಮಚಂದ್ರ ಹೆಗ್ಡೆ ಅವರ ಪುತ್ರ. ಕಳೆದ ತಿಂಗಳು ತನ್ನ ಮಾವನ ಮಗನ ಮದುವೆ ಕಾರ್ಯಕ್ರಮಕ್ಕೆ ಪತ್ನಿ ಹಾಗೂ ಮಗನೊಂದಿಗೆ ಊರಿಗೆ ಬಂದಿದ್ದ ಅವರು ಕಾರ್ಯಕ್ರಮ ಮುಗಿಸಿ ಕುವೈಟ್‌ಗೆ ವಾಪಾಸಾಗಿದ್ದರು. ಸೋಮವಾರ

ಕೆಲ್ಲಪುತ್ತಿಗೆ ಭೂತರಾಜ ಕ್ಷೇತ್ರದಲ್ಲಿ ಪುನರ್ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ

ಮೂಡುಬಿದಿರೆ: ದರೆಗುಡ್ಡೆ ಗ್ರಾಮದ ಕೆಲ್ಲಪುತ್ತಿಗೆ ಪುರಾತನ ಶ್ರೀ ಭೂತರಾಜ ಕ್ಷೇತ್ರದಲ್ಲಿ ಭೂತರಾಜ, ಬ್ರಹ್ಮದೇವರು ಧರ್ಮರಸು, ಕಕ್ಕಿನಂತಾಯ, ಕೊಡಮಣಿತ್ತಾಯ ಬ್ರಹ್ಮಬೈದರ್ಕಳ, ಮಾಯಂದಾಲೆ ಸಾನಿಧ್ಯ ದೇವತೆಗಳ ಗುಡಿಗಳನ್ನು ಜೀರ್ಣೋದ್ಧಾರಗೊಳಿಸಿದ್ದು, ಪುನರ್ ಪ್ರತಿಷ್ಠೆ-ಬ್ರಹ್ಮಕಲಶೋತ್ಸವ ಹಾಗೂ ವರ್ಷಾವಧಿ ರಂಗಪೂಜಾ ನೇಮೋತ್ಸವವು ಮಂಗಳವಾರ ನಡೆಯಿತು. ಬೆಳಿಗ್ಗೆ ಕೆಲ್ಲಪುತ್ತಿಗೆ ಪರಾಡಿಗುತ್ತಿನಿಂದ ಭೂತರಾಜ ಕ್ಷೇತ್ರಕ್ಕೆ ಸಕಾಲ ಬಿರುದಾವಳಿಗಳೊಂದಿಗೆ ದೈವಗಳ

ಬಳಕೆದಾರರ ಜಾಗೃತಿ ವೇದಿಕೆ-ಅಧ್ಯಕ್ಷರಾಗಿ ಅರುಣ್ ಪ್ರಕಾಶ್ ಶೆಟ್ಟಿ ಆಯ್ಕೆ

ಮೂಡುಬಿದಿರೆ: ಮೂಲ್ಕಿ ತಾಲೂಕು ಹಾಗೂ ಮೂಡುಬಿದಿರೆ ತಾಲೂಕುಗಳನ್ನು ಒಳಗೊಂಡ ಬಳಕೆದಾರರ ಜಾಗೃತಿ ವೇದಿಕೆಯ ಅಧ್ಯಕ್ಷರಾಗಿ ಮೂಡುಬಿದಿರೆಯ ಅರುಣ್ ಪ್ರಕಾಶ್ ಶೆಟ್ಟಿ, ಕಾರ್ಯದರ್ಶಿಯಾಗಿ ಡಾ.ಶಿವರಾಜ್ ಅರಸು ಆಯ್ಕೆಯಾಗಿದ್ದಾರೆ.ಪದಾಧಿಕಾರಿಗಳು: ಯು ಪದ್ಮನಾಭ ಶೆಟ್ಟಿ( ಗೌರವಾಧ್ಯಕ್ಷರು), ಕೆ.ವೇದವ್ಯಾಸ ಉಡುಪ, ಜೈಸನ್ ತಾಕೋಡೆ(ಉಪಾಧ್ಯಕ್ಷರು), ಡಾ.ರವೀಶ್ ಕುಮಾರ್ ಎಂ.( ಸಂಚಾಲಕರು), ದಯಾನಂದ ನಾಯ್ಕ್( ಜೊತೆ ಕಾರ್ಯದರ್ಶಿ), ಅಶೋಕ್ ಕಟೀಲ್( ಕೋಶಾಧಿಕಾರಿ) ಆಯ್ಕೆಯಾಗಿದ್ದಾರೆ.

ಮೂಡುಬಿದರೆ – ಮಾರ್ಕೆಟ್‍ನಲ್ಲಿ ರಾಶಿ ಹಾಕಿರುವ ಗುಜರಿ ವಸ್ತು ತೆರವುಗೊಳಿಸಲು ಕ್ರಮ : ಪುರಸಭಾ ಸದಸ್ಯ ರಾಜೇಶ್ ನಾಯ್ಕ್

ಮೂಡುಬಿದಿರೆ: ಸ್ವರಾಜ್ಯ ಮೈದಾನದ ಮಾರ್ಕೆಟ್ ನಲ್ಲಿ ಗುಜರಿ ಅಂಗಡಿಯಿದ್ದು ಸುತ್ತಮುತ್ತಲಿನ ಪ್ರದೇಶದಲ್ಲಿ ಗುಜರಿ ವಸ್ತುಗಳನ್ನು ರಾಶಿ ಹಾಕಿರುವುದರಿಂದ ಪರಿಸರ ಮಾಲಿನ್ಯವಾಗಿದೆ. ರಾಶಿ ಹಾಕಿರುವ ಗುಜರಿ ವಸ್ತುಗಳನ್ನು ತೆರವುಗೊಳಿಸುವಂತೆ ಸದಸ್ಯ ರಾಜೇಶ್ ನಾಯ್ಕ್ ಪುರಸಭಾ ಸಾಮಾನ್ಯ ಸಭೆಯಲ್ಲಿ ತಿಳಿಸಿದರು. ಪುರಸಭಾ ಅಧ್ಯಕ್ಷ ಪ್ರಸಾದ್ ಕುಮಾರ್ ಅಧ್ಯಕ್ಷತೆಯಲ್ಲಿ ಪುರಸಭಾ ಕಾರ್ಯಾಲಯದ ಸಭಾಭವನದಲ್ಲಿ ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ಗಮನ ಸೆಳೆದರು.

ಮಂಗಳೂರಿನಿಂದ ಬೆಂಗಳೂರಿಗೆ ಭಾವೈಕ್ಯತಾ ಜಾಥ

ಮೂಡುಬಿದಿರೆ: ಬಿ.ಜೆ.ಪಿ ಶಾಸಕರು, ಸಚಿವರುಗಳಿಗೆ ಈ ದೇಶದ, ರಾಜ್ಯದ, ಜಿಲ್ಲೆಯ ಮೂಲಭೂತ ಸಮಸ್ಯೆಗಳಾದ ಬೆಲೆ ಏರಿಕೆಯನ್ನು ತಡೆಯಲಾಗುತ್ತಿಲ್ಲ, ಕೋಟ್ಯಾಂತರ ರೂಪಾಯಿ ಕಾಮಗಾರಿ, ಭ್ರಷ್ಟಚಾರಗಳನ್ನು ಮಾಡುವ ಮೂಲಕ ಜನರ ಸಮಸ್ಯೆಯನ್ನು ಬಗೆಹರಿಸಲಾಗದೇ ಜನರ ನಡುವೆ ಭಾವನಾತ್ಮಕ ವಿಷಯಗಳಾದ ಲವ್ ಜಿಹಾದ್, ಗೋಹತ್ಯೆಯಂತಹ ವಿಷ ಬೀಜವನ್ನು ಬಿತ್ತುವ ಕೆಲಸ ಸ ಮಾಡುತ್ತಿದ್ದಾರೆಂದು ಪ್ರಾಂತ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಯಾದವ ಶೆಟ್ಟಿ ಕಿಡಿಕಾರಿದರು. ಅವರು ಜನಾಂದೋಲನಾಗಳ