Home ಕರಾವಳಿ Archive by category ಮೂಡಬಿದರೆ (Page 51)

ಜಾಂಬೂರಿ ಸ್ಟಾಲ್‍ಗಳು ಖಾಲಿ ಖಾಲಿ.. ಬಿಕೋ ಎನ್ನುತ್ತಿರುವ ವಿದ್ಯಾಗಿರಿ

ಮೂಡುಬಿದಿರೆ: ಸ್ಕೌಟ್ಸ್ ಗೈಡ್ಸ್ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಂಬೂರಿ ಕಾರ್ಯಕ್ರಮದಿಂದ ಕಳೆದ ಏಳು ದಿನಗಳಿಂದ ಜನಜಂಗುಳಿಯಿಂದ ತುಂಬಿಕೊಂಡಿದ್ದ ವಿದ್ಯಾಗಿರಿ ಜನ ಸಂದಣಿ ಇಲ್ಲದೆ ಬಿಕೋ ಎನ್ನುತ್ತಿರುವ ದೃಶ್ಯ ಕಂಡು ಬಂತು. ವಿದ್ಯಾಗಿರಿಯ ಆಳ್ವಾಸ್ ಕ್ಯಾಂಪಸ್ ನಲ್ಲಿ ಹಾಕಲಾಗಿದ್ದ ವಿವಿಧ ಸ್ಟಾಲ್ ಗಳು, ಕೃಷಿ ಮೇಳದ ವೇದಿಕೆ, ಕೃಷಿಸಿರಿ, ಪ್ರದರ್ಶನಕ್ಕಿಟ್ಟಿದ್ದ

ಮತಾಂತರಕ್ಕೆ ಯತ್ನಿಸುತ್ತಿದ್ದ ವ್ಯಕ್ತಿಯ ಬಂಧನ

ಮೂಡುಬಿದಿರೆ : ಹಿಂದೂ ದೇವರುಗಳನ್ನು ಅವಮಾನಿಸಿ ಮಕ್ಕಳನ್ನು ಬಲತ್ಕಾರದ ಮತಾಂತರಕ್ಕೆ ಯತ್ನಿಸುತ್ತಿದ್ದ ವ್ಯಕ್ತಿಯನ್ನು ಮೂಡುಬಿದಿರೆ ಪೊಲೀಸರು ಮಂಗಳವಾರ ವಿದ್ಯಾಗಿರಿಯಲ್ಲಿ ಬಂಧಿಸಿದ್ದಾರೆ. ಮೈಸೂರಿನ ನಿವಾಸಿ ಬೆಂಜಮಿನ್ ವಾಸ್ ಎಂಬಾತ ಬಂಧಿಸಲ್ಪಟ್ಟ ವ್ಯಕ್ತಿ. ವಿದ್ಯಾಗಿರಿಯಲ್ಲಿ ನಡೆಯುತ್ತಿದ್ದ ಸ್ಕೌಟ್ಸ್ ಗೈಡ್ಸ್ ಅಂತರಾಷ್ಟ್ರೀಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಮತ್ತು ಜನರು ಸೇರುತ್ತಿದ್ದ ಕಡೆಗೆ ಧಾವಿಸುತ್ತಿದ್ದ ಬೆಂಜಮಿನ್, ಹಿಂದುಗಳ

ಮೂಡುಬಿದಿರೆಯಲ್ಲಿ 20 ಅಕ್ರಮ ಕಸಾಯಿಖಾನೆಗಳು….!!ಮಕೈಗೊಳ್ಳದಿದ್ದರೆ ಉಗ್ರ ಹೋರಾಟ ಹಿಂಜಾವೇ ಎಚ್ಚರಿಕೆ

ಮೂಡುಬಿದಿರೆಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸುಮಾರು 20ಕ್ಕಿಂತಲೂ ಅಧಿಕ ಅಕ್ರಮ ಕಸಾಯಿಖಾನೆಗಳಿದ್ದು, ಪೊಲೀಸರು ಈ ಅಕ್ರಮ ಕಸಾಯಿಖಾನೆಯ ವಿರುದ್ಧ ಯಾವುದೇ ಕಾನೂನು ಕ್ರಮವನ್ನು ಜರಗಿಸದೆ ಅಕ್ರಮ ಗೋವುಗಳ ಕಸಾಯಿಖಾನೆಯನ್ನು ನಡೆಸುವವರಿಗೆ ಸಹಕಾರವನ್ನು ನೀಡುತ್ತಿದ್ದು ಈ ಬಗ್ಗೆ ಉಗ್ರ ಹೋರಾಟವನ್ನು ಮಾಡುವುದಾಗಿ ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಸಂಯೋಜಕ್ ಸಮಿತ್ ರಾಜ್ ದರೆಗುಡ್ಡೆ ಎಚ್ಚರಿಕೆ ನೀಡಿದ್ದಾರೆ. ಅವರು ಮೂಡುಬಿದಿರೆಯಲ್ಲಿ ನಿರಂತರವಾಗಿ ನಡೆಯುತ್ತಿರುವ

ಹಿರಿಯ ಯಕ್ಷಗಾನ ಕಲಾವಿದ ಕಟ್ಟಣಿಗೆ ಸಂಜೀವ ಪ್ರಭು ನಿಧನ

ಮೂಡುಬಿದಿರೆ: ಹಿರಿಯ ಯಕ್ಷಗಾನ ಕಲಾವಿದ ಪ್ರಸಂಗಕರ್ತ ಇರುವೈಲು ಕಟ್ಟಣಿಗೆ ಸಂಜೀವ ಪ್ರಭು(83) ಅವರು ಅಲ್ಪ ಕಾಲದ ಅನಾರೋಗ್ಯದಿಂದ ಭಾನುವಾರ ನಿಧನರಾಗಿದ್ದಾರೆ. ಇರುವೈಲು ಮೇಳವನ್ನು ಯಶಸ್ವಿಯಾಗಿ ಮುನ್ನಡೆಸಿ, ಸೇವಾ ರೂಪದಲ್ಲಿ ಕಟೀಲು ಮತ್ತು ಸುರತ್ಕಲ್ ಮೇಳಗಳಲ್ಲಿ ಸೇವೆ ಸಲ್ಲಿಸಿದ್ದರು. ಇರುವೈಲು ಕ್ಷೇತ್ರ ಮಹಾತ್ಮೆ, ನಾಗಲಿಂಗೇಶ್ವರ ಮಹಿಮೆ, ರಕ್ತೇಶ್ವರಿ ಕಾರ್ಣಿಕ ಸೇರಿದಂತೆ ಹಲವು ಯಕ್ಷಗಾನ ಪ್ರಸಂಗಗಳನ್ನು ರಚಿಸಿದ್ದ ಸಂಜೀವ ಪ್ರಭು ಅವರು ವೃತ್ತಿಯಲ್ಲಿ

ಜಾಂಬೂರಿಯಲ್ಲಿ ಜೀವನ್‍ರಾಂ ಸುಳ್ಯ ಅವರಿಂದ ರಂಗ ತರಬೇತಿ

ವಿದ್ಯಾಗಿರಿ ಮೂಡುಬಿದಿರೆಯಲ್ಲಿ ನಡೆಯುತ್ತಿರುವ ಭಾರತ್ ಸ್ಕೌಟ್ಸ್ ಮತ್ತು ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿ 2022 ಕಾರ್ಯಕ್ರಮದಲ್ಲಿ ಆಳ್ವಾಸ್ ರಂಗ ಅಧ್ಯಯನ ಕೇಂದ್ರ ನಿರ್ದೇಶಕ ಜೀವನ್ ರಾಂ ಸುಳ್ಯ ಅವರ ಸಾರಥ್ಯದಲ್ಲಿ ಕಳೆದ ನಾಲ್ಕು ದಿನಗಳಿಂದ 5 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ರಂಗ ತರಬೇತಿ ಶಿಬಿರ ಆಯೋಜಿಸಲಾಗುತ್ತಿದೆ. ಶ್ರೀಲಂಕಾ , ಕೊರಿಯಾ, ಸೇರಿದಂತೆ ದೇಶ ವಿದೇಶಗಳಿಂದ ಆಗಮಿಸಿದ ವಿದ್ಯಾರ್ಥಿಗಳಿಗೆ ರಂಗ ವ್ಯಾಯಾಮ, ಗೀತಾಭಿನಯ , ರಂಗ ಚಾಲನೆ ,

ಮೂಡಬಿದರೆ ಅಂತರರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಗೆ ಸಿಎಂ ಬೊಮ್ಮಯಿ ಭೇಟಿ

ಅಂತರರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಯ ಐದನೇ ದಿನ ಶ್ರೀಮತಿ ವನಜಾಕ್ಷಿ ಕೆ.ಶ್ರೀಪತಿ ಭಟ್ ವೇದಿಕೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾನ್ಯ ಮುಖ್ಯಮಂತ್ರಿ ಬಸವರಾಜ್ ಬೊಮ್ಮಯಿ ಅವರು ಬಾಗವಹಿಸಿದರು ಬಳಿಕ ಮಾತನಾಡಿದ ಅವರು ಮೂಡುಬಿದಿರೆ: ವಿದ್ಯಾರ್ಥಿ ಜೀವನದಲ್ಲಿ ಶಿಸ್ತು ಮುಖ್ಯ. ಇದು ಮಗುವು ಉತ್ತಮ ಸಾಧಕನಾಗಲು ಎಡೆಮಾಡಿಕೊಡುತ್ತದೆ.ಭಾರತದ ಭವಿಷ್ಯ ಸಂಸ್ಕ್ರತಿಯ ಉಳಿವಿಕೆಯ ಮೇಲೆ ನಿರ್ಧರಿತವಾಗಿದೆ. ಸೌಟ್ಸ್- ಗೈಡ್ಸ್ ಸಂಸ್ಥೆ ಸದಾ ಸಂಸ್ಕೃತಿಯ ಉಳಿವಿಗೆ

ವಿದೇಶಗಳಲ್ಲಿಯೂ ಕಂಬಳ ನಡೆಯುವ ದಿನಗಳು ಬರಲಿದೆ – ಬೊಮ್ಮಯಿ

ಶಾಸಕ ಉಮಾನಾಥ್ ಕೋಟ್ಯಾನ್ ಅವರ ನೇತೃತ್ವದಲ್ಲಿ ಒಂಟಿಕಟ್ಟೆಯ ಕಡಲಕೆರೆ ನಿಸರ್ಗಧಾಮ, ವೀರರಾಣಿ ಅಬ್ಬಕ್ಕ ಸಂಸ್ಕೃತಿ ಗ್ರಾಮದಲ್ಲಿ ನಡೆಯುತ್ತಿರುವ 20 ನೇ ವರ್ಷದ ಮೂಡುಬಿದಿರೆಯ ಪ್ರತಿಷ್ಠಿತ ಹೊನಲು ಬೆಳಕಿನ ಕೋಟಿ-ಚೆನ್ನಯ ಕಂಬಳದಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಬ್ಬಯಿ ಯವರು ಭಾಗವಹಿಸಿ ಸುಶಾಸನ ದಿನಾಚರಣೆಯ ಅಂಗವಾಗಿ ವಾಜಿಪೇಯಿ ಅವರ ಭಾವಚಿತ್ರವನ್ನು ಅನಾವರಣಗೊಳಿಸಿ ಮಾತನಾಡಿದರು. ಗ್ರಾಮೀಣ ಸೊಗಡಿನ ಸಂಸ್ಕೃತಿಯನ್ನು ಬಿಂಬಿಸುವ ಕಂಬಳವು ಕ್ರೀಡೆ ಮಾತ್ರ ಅಲ್ಲ ಅದು

ತುಳುನಾಡ ಪೊರ್ಲು ಚಾರಿಟೇಬಲ್ ಟ್ರಸ್ಟ್. ಮಿಜಾರು, ದ. ಕ. : ಆರ್ಥಿಕ ನೆರವು – ಚೆಕ್ ಹಸ್ತಾಂತರ

ಮಂಗಳೂರು ತಾಲೂಕಿನ ಮುತ್ತೂರು ಗ್ರಾಮದ ನಿವಾಸಿಯಾಗಿರುವ ವೇದಾವತಿ ಇವರಿಗೆ ತಾರೇಮಾರ್ ಎಂಬಲ್ಲಿ ರಿಕ್ಷಾ ಅಪಘಾತವಾಗಿದ್ದು ಸೊಂಟಕ್ಕೆ ತ್ರೀವವಾದ ಪೆಟ್ಟಾಗಿದ್ದು ನಡೆದಾಡಲು ಆಗದೆ ಮಲಗಿದ್ದಲ್ಲಿದ್ದಾರೆ. ಬಡಕುಟುಂಬವಾಗಿರುವುದರಿಂದ ಆರ್ಥಿಕವಾಗಿ ತೀರಾ ಸಂಕಷ್ಟದಲ್ಲಿರುವ ಈ ಕುಟುಂಬಕ್ಕೆ 5 ಲಕ್ಷದ ಅವಶ್ಯಕತೆಯಿದ್ದು ಅವರ ಮನವಿ ನಮಗೆ ಬಂದಿದ್ದು, ಅವರ ಮನವಿಗೆ ಸ್ಪಂದಿಸಿದ ನಮ್ಮ ತಂಡ 20,000/- ಚೆಕ್ ನ್ನು ಹಾಗೂಮಂಗಳೂರು ತಾಲೂಕಿನ ಗುರುಪುರ ಕಿನ್ನಿಮಜಲು

ಜೈನರಪವಿತ್ರ ಸ್ಥಳ ಸಮ್ಮೇದ ಶಿಖರ್ಜಿಯನ್ನು ಪ್ರವಾಸಿ ತಾಣ ಮಾಡದಂತೆ ಪ್ರಧಾನ ಮಂತ್ರಿಯವರಿಗೆ ಅಂತರ್ದೇಶೀಯ ಪತ್ರ ಬರೆಯುವ ಕಾರ್ಯಕ್ರಮ

ಜೈನರಿಗೆ ಅತ್ಯಂತ ಪವಿತ್ರ ಸ್ಥಳವಾದ ಸಮ್ಮೇದ ಶಿಖರ್ಜಿಯನ್ನು ಜಾರ್ಖಂಡ್ ರಾಜ್ಯ ಸರಕಾರ ಪವಾಸಿ ತಾಣ ಮಾಡಲು ಆದೇಶಿಸಿದ್ದು,ಇದು ಜೈನ ಪಾವಿತ್ಯಕ್ಕೆ ಧಕ್ಕೆ ತರುವ ಕೆಲಸ ಮಾಡಿರುವುದನ್ನ ಖಂಡಿಸಿ, ಡಿಸೆಂಬರ್ 28ರಂದು ಮೂಡಬಿದ್ರೆಯಲ್ಲಿ ಹಕ್ಕೋತ್ತಾಯ ಚಳುವಳಿಯನ್ನ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಸಚಿವ ಹಾಗೂ ಜೈನ ಸಮುದಾಯದ ಮುಖಂಡರಾದ ಕೆ.ಅಭಯಚಂದ್ರ ಜೈನ್ ಹೇಳಿದ್ದಾರೆ. ಮಂಗಳೂರಿನ ಪ್ರೆಸ್‍ಕ್ಲಬ್‍ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,

ಮೂಡುಬಿದಿರೆ: ಜಾಂಬೂರಿಯಲ್ಲಿ ನರೇಗಾ ಯೋಜನೆಯ ಮಾದರಿಯ ಪ್ರದರ್ಶನ

ಮೂಡುಬಿದಿರೆಯ ಆಳ್ವಾಸ್ ವಿದ್ಯಾಸಂಸ್ಥೆಯಲ್ಲಿ ನಡೆಯುತ್ತಿರುವ ಸ್ಕೌಟ್ಸ್-ಗೈಡ್ಸ್ ನ ಅಂತರಾಷ್ಟ್ರೀಯ  ಸಾಂಸ್ಕೃತಿಕ ಜಾಂಬೂರಿಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ವತಿಯಿಂದ  ವಿಜ್ಞಾನ ಮೇಳದ ಮಳಿಗೆಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಮಾಹಿತಿ ಕೇಂದ್ರಕ್ಕೆ ಭೇಟಿ ನೀಡುವವರಿಗೆ ಮಾಹಿತಿಯನ್ನು ನೀಡಲಾಗುತ್ತಿದೆ. ನರೇಗಾ ಯೋಜನೆಯ ಮಾದರಿಯನ್ನು ತಯಾರಿಸಿ ಪ್ರದರ್ಶನಕ್ಕಿಟ್ಟಿರುವುದು ಅತ್ಯಾಕರ್ಷಕವಾಗಿದೆ. ಟಿ.ವಿ. ಮೂಲಕ