ಮೂಡುಬಿದಿರೆ: ದ.ಕ ಜಿಲ್ಲೆಯ ರೈತರಿಗೆ ಕುಮ್ಕಿ ಹಕ್ಕಿಗೆ ಆತನೇ ಹಕ್ಕುದಾರನೆಂದು ಘೋಷಿಸಿ ಹಕ್ಕುಪತ್ರವನ್ನು ನೀಡಬೇಕು ಹಾಗೂ ರೈತರ ವಿವಿಧ ಬೇಡಿಕೆಗಳನ್ನು ಸರಕಾರವು ಈಡೇರಿಸಬೇಕೆಂದು ಒತ್ತಾಯಿಸಿ ನ.10 ರಂದು ಮೂಡುಬಿದಿರೆ ತಾಲೂಕಿನಾದ್ಯಾಂತ ರೈತರ ಬೃಹತ್ ಹಕ್ಕೊತ್ತಾಯ ಜಾಥವನ್ನು ಹಮ್ಮಿಕೊಳ್ಳಲಾಗಿದೆ ಎಂದು ದ.ಕ ಭಾರತೀಯ ಕಿಸಾನ್ ಸಂಘದ ಜಿಲ್ಲಾಧ್ಯಕ್ಷ
ಮೂಡುಬಿದಿರೆ: ಶೇಂದಿ ತೆಗೆಯುತ್ತಿದ್ದಾಗ ತಾಳೆ ಮರದಿಂದ ಬಿದ್ದು ಮೂರ್ತೆದಾರ ಮೃತಪಟ್ಟ ಘಟನೆ ಪಾಲಡ್ಕ ಗ್ರಾ.ಪಂ.ವ್ಯಾಪ್ತಿಯ ವರ್ಣಬೆಟ್ಟುವಿನಲ್ಲಿ ಶುಕ್ರವಾರ ಮಧ್ಯಾಹ್ನದ ವೇಳೆಗೆ ನಡೆದಿದೆ. ವರ್ಣಬೆಟ್ಟು ಪಂಜಿಗುರಿಯ ನಿವಾಸಿ ಸುರೇಶ್ ಪೂಜಾರಿ(42ವ) ಸಾವನ್ನಪ್ಪಿದ ವ್ಯಕ್ತಿ. ಇವರು ಮಧ್ಯಾಹ್ನದ ವೇಳೆಗೆ ಶೇಂದಿ ತೆಗೆಯಲೆಂದು ಮನೆಯ ಹಿಂಭಾಗದಲ್ಲಿದ್ದ ತಾಳೆ ಮರಕ್ಕೆ ಹೋಗಿದ್ದರು. ಆದರೆ ಎಷ್ಟು ಹೊತ್ತಾದರೂ ಮನೆಗೆ ಮರಳಿ ಬಾರದಿರುವುದರಿಂದ ಮನೆಯವರು ಹುಡುಕಿಕೊಂಡು
ಮೂಡುಬಿದಿರೆ: ಪುರಸಭೆಯ ಷರತ್ತು ಉಲ್ಲಂಘನೆ ಮಾಡಿ ಸರಕಾರದ ಯಾವುದೇ ಇಲಾಖೆಯಿಂದ ಪರವಾನಿಗೆಯನ್ನು ಪಡೆದುಕೊಳ್ಳದೇ ಕಾನೂನು ಬಾಹಿರವಾಗಿ ಜರಾತುಲ್ ಕುರಾನ್ ಕುರಾನಿಕ್ ಫ್ರೀ ಸ್ಕೂಲ್ ಮತ್ತು ಆಲ್ ಮಫಾಝ್ ವುಮೆನ್ಸ್ ಶೆರಿಯತ್ ಕಾಲೇಜನ್ನು ನಿರ್ಮಾಣ ಮಾಡಿ ಧಾರ್ಮಿಕ ಶಿಕ್ಷಣವನ್ನು ನೀಡುತ್ತಿದ್ದು ಈ ಬಗ್ಗೆ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಮೂಡುಬಿದಿರೆ ತಾಲೂಕು ಹಿಂದೂ ಜಾಗರಣ ವೇದಿಕೆಯು ಮೂಡುಬಿದಿರೆ ಪುರಸಭೆಗೆ ಮನವಿ ನೀಡಿದರು. ಹಿಂ.ಜಾ.ವೇದಿಕೆಯ ಜಿಲ್ಲಾ ಸಹ ಸಂಯೋಜಕ್
ಮೂಡುಬಿದಿರೆ: ಚಿರತೆಯೊಂದು ದನದ ಕರುವಿನ ಮೇಲೆರಗಿ ತಿಂದು ಸಾಯಿಸಿದ ಘಟನೆ ಬಡಗ ಮಿಜಾರಿನಲ್ಲಿ ನಡೆದಿದೆ.ತೆಂಕಮಿಜಾರು ಗ್ರಾ.ಪಂ.ವ್ಯಾಪ್ತಿಯ ಪಂಜುರ್ಲಿ ಗುಡ್ಡೆಯ ದಿನೇಶ್ ಅವರ ಮನೆಯ ಒಂದೂವರೆ ತಿಂಗಳಿನ ಕರುಇದಾಗಿದೆ. ಇವರು ತೋಟದಲ್ಲಿ ಕರು ಮೇಯಲು ಕಟ್ಟಿದ್ದು ಅಲ್ಲಿಯೆ ಚಿರತೆ ಕರುವಿನ ಮೇಲೆರಗಿ ತಿಂದಿದೆ.ಮೂಡುಬಿದಿರೆ ಅರಣ್ಯ ಇಲಾಖೆಯ ಉಪವಲಯಾರಣ್ಯಾಧಿಕಾರಿ ಅಶ್ವಿತ್ ಗಟ್ಟಿ ಸ್ಥಳಕ್ಕೆ ಭೇಟಿ ನೀಡಿ ಪರಿಹಾರ ಧನದ ಭರವಸೆಯನ್ನು ನೀಡಿದ್ದಾರೆ.
ಭಾರತೀಯ ಜನತಾ ಪಾರ್ಟಿ ಮುಲ್ಕಿ ಮೂಡುಬಿದಿರೆ ಮಂಡಲ ವತಿಯಿಂದ ವಿಶೇಷ ಕಾರ್ಯಕಾರಿಣಿಯು ಕನ್ನಡ ಭವನದಲ್ಲಿ ಮಂಗಳವಾರ ನಡೆಯಿತು.ಮಂಡಲ ಅಧ್ಯಕ್ಷ ಸುನಿಲ್ ಆಳ್ವ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಶಾಸಕ ಉಮಾನಾಥ್ ಕೋಟ್ಯಾನ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ರಾಜ್ಯ ಕಾರ್ಯಕಾರಣಿ ಸದಸ್ಯರಾದ ಕೆ. ಆರ್ ಪಂಡಿತ್, ಜಿಲ್ಲಾ ಪ್ರಧಾನಕಾರ್ಯದರ್ಶಿ ಕಸ್ತೂರಿ ಪಂಜ, ವಿಭಾಗ ಸಂಘಟನಾ ಕಾರ್ಯದರ್ಶಿ ಪ್ರಸಾದ್ ಕುಮಾರ್, ಹಾಗೂ ವಿವಿಧ ಮೊರ್ಚಾ
ಮೂಡುಬಿದಿರೆ: ತಾನು ನೀಡಿದ ಅಭಿವೃದ್ಧಿ ಕಾಮಗಾರಿಯ ಅರ್ಜಿ ಅಜೆಂಡಾದಲ್ಲಿ ಬಂದಿಲ್ಲವೆಂದು ಆರೋಪಿಸಿ ಸದಸ್ಯ ಕೊರಗಪ್ಪ ಅವರು ಬಟ್ಟೆ ತೆಗೆದು ಅರೆನಗ್ನ ರೀತಿಯಲ್ಲಿ ಪ್ರತಿಭಟಿಸಿದ ಘಟನೆ ಸೋಮವಾರ ಪುರಸಭೆಯಲ್ಲಿ ನಡೆಯಿತು. ಪುರಸಭಾಧ್ಯಕ್ಷ ಪ್ರಸಾದ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕೊರಗಪ್ಪ ಅವರು ತಾನು ಅರ್ಜಿ ಕೊಟ್ಟಿರುವುದು ಅಜೆಂಡಾದಲ್ಲಿ ಬಂದಿಲ್ಲವೆಂದು ಆರೋಪಿಸಿದರು. ಅರೆನಗ್ನ ಸ್ಥಿತಿಯಲ್ಲಿ ಪ್ರತಿಭಟಿಸಿರುವುದನ್ನು ಆಡಳಿತ ಪಕ್ಷದ ಸದಸ್ಯರು ತೀವೃವಾಗಿ
ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಇಂಧನ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವ ವಿ. ಸುನಿಲ್ ಕುಮಾರ್ ನೇತೃತ್ವದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ರಾಜ್ಯಾದ್ಯಂತ ಹಮ್ಮಿಕೊಂಡಿರುವ ಕೋಟಿ ಕಂಠ ಗಾಯನ ಕಾರ್ಯಕ್ರಮವು ಕರಾವಳಿಯ ವಿವಿಧ ಭಾಗಗಳಲ್ಲಿ ಅತ್ಯುತ್ತಮವಾಗಿ ನಡೆದಿದೆ. ಇಂದು ಬೆಳಿಗ್ಗೆ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಕೋಟಿ ಕಂಠ ಗಾಯನ ‘ನನ್ನ ನಾಡು ನನ್ನ ಹಾಡು’ ಕಾರ್ಯಕ್ರಮ ಜರುಗಿತ್ತು. ಉಡುಪಿ ಅಪರ ಜಿಲ್ಲಾಧಿಕಾರಿಯಾದ ವೀಣಾ ಬಿ ಎಸ್,
ಮೂಡುಬಿದಿರೆ: ನಾಡಪ್ರಭು ಕೆಂಪೇಗೌಡರ 108 ಅಡಿ ಕಂಚಿನ ಪ್ರತಿಮೆ ಉದ್ಘಾಟನಾ ಕಾರ್ಯಕ್ರಮದ ಅಂಗವಾಗಿ ಪ್ರಗತಿ ಪ್ರತಿಮೆ ಎಂದು ನಾಮಕರಣ ಮಾಡಲು ರಾಜ್ಯದೆಲ್ಲೆಡೆಯಲ್ಲಿ ಪವಿತ್ರ ಮಣ್ಣು ಮತ್ತು ಜಲ ಸಂಗ್ರಹಣೆ ವಿಶಿಷ್ಟ ಅಭಿಯಾನವನ್ನು “ಬನ್ನಿ ನಾಡ ಕಟ್ಟೋಣ” ಎಂಬ ಘೋಷ ವಾಕ್ಯದೊಂದಿಗೆ 15 ದಿನಗಳ ವರೆಗೆ ಹಮ್ಮಿಕೊಂಡ ರಥಯಾತ್ರೆಯು ಜೈನಕಾಶಿ ಮೂಡುಬಿದಿರೆಗೆ ಆಗಮಿಸಿತು. ಮೂಡುಬಿದಿರೆ ಜೈನ ಮಠದ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ, ತಾಲೂಕು
ಮೂಡುಬಿದಿರೆ : ಭಾರತೀಯ ಜನತಾ ಪಾರ್ಟಿ ಮೂಡುಬಿದಿರೆ ಮಂಡಲ ಇದರ ವತಿಯಿಂದ ಒಂಟಿಕಟ್ಟೆಯ ಕಡಲಕೆರೆಯಲ್ಲಿರುವ ಕೋಟಿ-ಚೆನ್ನಯ ಗುತ್ತಿಗೆ ಮನೆಯ ಶೈಲಿಯ ವೇದಿಕೆಯಲ್ಲಿ ಕೋಟಿ ಕಂಠ ಗಾಯನ ನಡೆಯಿತು. ಕಡಲಕೆರೆ ಶಾಲೆಯ ವಿದ್ಯಾರ್ಥಿಗಳು ಮತ್ತು ಬಿಜೆಪಿ ಪಕ್ಷದ ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ 5 ಹಾಡುಗಳನ್ನು ಹಾಡಿದರು. ಬಿಜೆಪಿಯ ಜಿಲ್ಲಾ ಉಪಾಧ್ಯಕ್ಷ ಈಶ್ವರ ಕಟೀಲ್ , ಜಿಲ್ಲಾ ಜಿಲ್ಲಾ ಕಾರ್ಯದರ್ಶಿ ಕಸ್ತೂರಿ ಪಂಜ, ಬಿಜೆಪಿ ಮಂಡಲದ ಅಧ್ಯಕ್ಷ ಸುನೀಲ್ ಆಳ್ವ,
ವಿಶ್ವ ಹಿಂದೂ ಪರಿಷತ್ ಬಜರಂಗದಳ ಮೂಡುಬಿದಿರೆ ಪ್ರಖಂಡ ಶ್ರೀ ಬ್ರಹ್ಮ ಘಟಕ ಜೋಗೊಟ್ಟು- ಆನೆಗುಡ್ಡೆ ಇವರ ವತಿಯಿಂದ ದೀಪಾವಳಿ ಪ್ರಯುಕ್ತ ಗೋ ಪೂಜೆ ನಡೆಯಿತು. ಈ ಸಂದರ್ಭದಲ್ಲಿ ವಾಲ್ಪಾಡಿ ಗ್ರಾ.ಪಂ.ಅಧ್ಯಕ್ಷರಾದ ಪ್ರದೀಪ್ ಕುಮಾರ್, ಸದಸ್ಯೆ ಭವಾನಿ ಜೆ.ಸಾಲ್ಯಾನ್, ಜೋಗೊಟ್ಟು- ಆನೆಗುಡ್ಡೆ ಶ್ರೀ ಬ್ರಹ್ಮ ಘಟಕದ ಕಾರ್ಯದರ್ಶಿ ಅಭಿಷೇಕ್, ಸಂಯೋಜಕರಾದ ಶರತ್, ಸಹ ಸಂಯೋಜಕರಾದ ದಯಾನಂದ ಶೆಟ್ಟಿ, ಗೋರಕ್ಷ ಪ್ರಮುಖರಾದ ಕೌಶಿಕ್ ಮತ್ತು ಉದಯ ಶೆಟ್ಟಿ ಈ ಸಂದರ್ಭದಲ್ಲಿ