Home Archive by category ರಾಜ್ಯ (Page 13)

ನಾಟಿ ಮಾಡುವ ವೇಳೆ ಕುಸಿದು ಬಿದ್ದು ಮಹಿಳೆ ಸಾವು

ಹೆಬ್ರಿ : ಮುದ್ರಾಡಿ ರಾಂಬೆಟ್ಟು ನಿವಾಸಿ ದಿ.ಉಪೇಂದ್ರ ಆಚಾರ್ಯ ಅವರ ಪತ್ನಿ ಕುಸುಮಾ ಆಚಾರ್ಯ ಎಂಬವರು ಶುಕ್ರವಾರ ಬೇಸಾಯದ ಗದ್ದೆಯಲ್ಲಿ ನೇಜಿ ನಾಟಿ ಮಾಡುವ ವೇಳೆ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಕುಸುಮಾ ಆಚಾರ್ಯ ಹೆಬ್ರಿ ವಿಶ್ವಕರ್ಮ ಸಮಾಜ ಸೇವಾ ಸಂಘದ ಕಾರ್ಯಕ್ರಮ ಮತ್ತು ಕಜ್ಕೆ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದ ಸೇವಾ ಕಾರ್ಯದಲ್ಲಿ ಸಕ್ರಿಯವಾಗಿ

ಜೆಸಿಬಿಗೆ ಬೈಕ್ ಡಿಕ್ಕಿ, ಸವಾರ ಸ್ಥಳದಲ್ಲೇ ಮೃತ್ಯು

ಉಡುಪಿ: ಜೆಸಿಬಿಗೆ ಬೈಕ್‌ವೊಂದು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಶುಕ್ರವಾರ ಸಂಭವಿಸಿದೆ.ಮೃತ ಸವಾರನನ್ನು ನಾಯರ್ ಕೋಡು ನಿವಾಸಿ ಪ್ರತ್ಯಕ್ಷ ಶೆಟ್ಟಿ (21 ) ಎಂದು ಗುರುತಿಸಲಾಗಿದೆ. ತಮ್ಮನನ್ನು ಶಾಲೆಗೆ ಬಿಡಲು ಹೋಗುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದ್ದು, ಹಿಂಬದಿ ಸವಾರ ಸಹೋದರ ಪ್ರೀತಿಶ್ ಸಣ್ಣ ಪುಟ್ಟ ಗಾಯದೊಂದಿಗೆ ಪಾರಾಗಿದ್ದಾನೆ. ಮೂರು ತಿಂಗಳ ಹಿಂದೆಯಷ್ಟೇ ತಂದೆಯನ್ನು ಕಳೆದುಕೊಂಡಿದ್ದ, ಪ್ರತ್ಯಕ್ಷ ಶೆಟ್ಟಿ ಮನೆಯ ಆದರ

ವಿದ್ಯುತ್ ಗೋಪುರ ಬಿದ್ದು ಸಾಣೂರು ಗ್ರಾಮ ಹೊತ್ತಿ ಉರಿಯುವ ಭೀತಿ

ಕಾರ್ಕಳ: ಸುಮಾರು ಒಂದು ವರ್ಷದಿಂದ ಕಾರ್ಕಳ ತಾಲೂಕಿನ ಸಾಣೂರು ಗ್ರಾಮದ ಮೂಲಕ 169 ಹೆದ್ದಾರಿ ಮಂಗಳೂರಿನ ನಂತೂರಿನಿಂದ ಕಾರ್ಕಳ ಬೈಪಾಸ್ ವರೆಗೆ ಬರುವ ಚತುಷ್ಟದ ರಸ್ತೆ ಕಾಮಗಾರಿ ಬಹಳ ವೇಗವಾಗಿ ನಡೆಯುತ್ತಿದ್ದು ಆದರೆ ಸಾಣೂರು ಗ್ರಾಮಸ್ಥರಿಗೆ ಈ ಹೆದ್ದಾರಿ ಕಾಮಗಾರಿಕೆ ಒಂದು ಶಾಪವಾಗಿ ಕಾಡುತ್ತಿದೆ. ಈ ಹೆದ್ದಾರಿ ಕಾಮಗಾರಿಗೆ ಪರಿಣಾಮವಾಗಿ ಸಾಣೂರುಪೇಟೆಯಲ್ಲಿ ಕೃತಕ ನೆರೆ ಶಾಲೆ ಬಳಿ ಇರುವ ಗುಡ್ಡ ಕುಸಿತ, ಶಾಲಾ ಆವರಣ ಗೋಡೆ ಕುಸಿತ ಬಸ್ ನಿಲ್ದಾಣ ಸ್ಥಳಾಂತರ, ನೂರಾರು

ಧರ್ಮಸ್ಥಳದಲ್ಲಿ ಉಚಿತ ಸೌರ ವಿದ್ಯುತ್ ಘಟಕಕ್ಕೆ ಚಾಲನೆ

2011ನೇ ಇಸವಿಯಲ್ಲಿ ಇಡೀ ಕರ್ನಾಟಕದಲ್ಲಿ ಹಳ್ಳಿ ಹಳ್ಳಿಗೆ ಹೋಗಿ ಸುಮಾರು ಮೂರು ಲಕ್ಷ ಮನೆಗಳಿಗೆ ಸೋಲಾರ್ ದೀಪಗಳ ವ್ಯವಸ್ಥೆ ಮಾಡಿದ್ದೇವೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರು ಹೇಳಿದರು. ಅವರು ಧರ್ಮಸ್ಥಳದ ಅನ್ನಪೂರ್ಣ ಚಿತ್ರದಲ್ಲಿ ಸುಮಾರು ೫೦ ಲಕ್ಷ ವ್ಯತ್ಯಾಸದ ಸೆಲ್ಕ್ಕೋ ಫೌಂಡೇಶನ್ ಪ್ರಾಯೋಜತ್ವದಲ್ಲಿ ಅಳವಡಿಸಲಾದ ಉಚಿತ ಸೌರ ವಿದ್ಯುತ್ ಘಟಕದ ಚಾಲನಾ ಕಾರ್ಯಕ್ರಮದಲ್ಲಿ ಮಾತನಾಡಿ, ಸೋಲಾರ್ ಆಳವಡಿಕೆಯಲ್ಲಿ ಶ್ರೀ ಕ್ಷೇತ್ರಕ್ಕೆ

ದೆಹಲಿ:  ಸೇನಾಪಡೆ ಮತ್ತು ನೌಕಾಪಡೆಯ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಲಿರುವ ಇಬ್ಬರು ಸಹಪಾಠಿಗಳು

ದೇಶದ ಸೇನಾ ಇತಿಹಾಸದಲ್ಲೇ ಮೊದಲ ಬಾರಿಗೆ ಇಬ್ಬರು ಸಹಪಾಠಿಗಳು ಅಂದರೆ ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ ಮತ್ತು ಅಡ್ಮಿರಲ್ ದಿನೇಶ್ ತ್ರಿಪಾಠಿ ಕ್ರಮವಾಗಿ ಭಾರತದ ಸೇನಾಪಡೆ ಹಾಗೂ ನೌಕಾಪಡೆಯ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಲಿದ್ದಾರೆ. ನೌಕಾಪಡೆಯ ಮುಖ್ಯ ಅಡ್ಮಿರಲ್ ದಿನೇಶ್ ತ್ರಿಪಾಠಿ ಹಾಗೂ ಸೇನಾಪಡೆಯ ನಿಯೋಜಿತ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ ಮಧ್ಯಪ್ರದೇಶದ ರೇವಾ ಪಟ್ಟಣದ ಸೈನಿಕಶಾಲೆಯಲ್ಲಿ ಓದಿದ್ದರು. 1970ರ ದಶಕದಲ್ಲಿ ಇವರು ಆ

ಸರಕಾರದ ಸವಲತ್ತುಗಳಿಂದ ವಂಚಿತರಾಗಿದ್ದಾರೆ ಗ್ರಾ.ಪಂ.ನೌಕರರು:ಅಧಿಕಾರಿಗಳು ಮೌನ

ಆರೋಗ್ಯ ಭದ್ರತೆಯಿಲ್ಲ, ಭವಿಷ್ಯನಿಧಿಯಿಲ್ಲ, ನಿವೃತ್ತಿಯ ನಂತರ ಆರ್ಥಿಕ ಭದ್ರತೆ ಸಹಿತ ಸರಕಾರದ ಹಲವಾರು ಸವಲತ್ತುಗಳಿಂದ ಗ್ರಾ.ಪಂಚಾಯತ್ ನೌಕರರು ವಂಚಿತರಾಗಿದ್ದು ಇವರ ಈ ಸಮಸ್ಯೆಗಳನ್ನು ಬಗೆ ಹರಿಸದೆ ಅಧಿಕಾರಿಗಳು ಮೌನ ವಹಿಸಿದ್ದಾರೆ. ತಮ್ಮ ಮನೆಗಳಿಗೆ ಆಧಾರ ಸ್ಥಂಭವಾಗಿರುವ ಗ್ರಾ.ಪಂ. ನೌಕರರು ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆಗೆ ದಾಖಲಾದರೆ ಅವರಿಗೆ ಇಎಸ್ ಐ ಇರಲ್ಲ ಅಲ್ಲದೆ ಪಂಚಾಯತ್ ನಿಂದ ಬರಬೇಕಾಗಿರುವ ತಿಂಗಳ ಸಂಬಳವೂ ಬರಲ್ಲ ಇದರಿಂದಾಗಿ ಆರ್ಥಿಕವಾಗಿ

ಪ್ರಖರ ಎಲ್‌ಇಡಿ ಬೆಳಕು ಹಾಕಿ ದಂಡಕ್ಕೆ ಸಿಗಬೇಡಿ: ಪೋ.ಮ.ನಿ.ಅಲೋಕ್‌ಕುಮಾರ್ ಎಚ್ಚರಿಕೆ

ಇತ್ತೀಚಿನ ದಿನಗಳಲ್ಲಿ ಹೆಚ್ಚು ಬೆಳಕು ಚೆಲ್ಲುವ ಎಲ್‌ಇಡಿ ಬೆಳಕುಗಳೊಡನೆ ವಾಹನಗಳು ಸಂಚರಿಸುತ್ತಿದ್ದು, ಇದು ಎದುರು ಬದಿಯ ವಾಹನಗಳವರನ್ನು ಕಕ್ಕಾಬಿಕ್ಕಿ ಮಾಡಿ ಅಪಘಾತಕ್ಕೆ ಕಾರಣ ಆಗುತ್ತಿವೆ. ಇದನ್ನು ಮುಂದುವರಿಸಿದರೆ ದಂಡ ವಿಧಿಸಲಾಗುವುದು ಎಂದು ಅಲೋಕ್ ಕುಮಾರ್ ಎಚ್ಚರಿಕೆ ನೀಡಿದರು. ಕರ್ನಾಟಕದ ಸಂಚಾರ ಮತ್ತು ರಸ್ತೆ ಸುರಕ್ಷತಾ ವ್ಯವಸ್ಥೆಯ ಹೆಚ್ಚುವರಿ ಪೋಲೀಸು ಮಹಾನಿರ್ದೇಶಕ ಅಲೋಕ್ ಕುಮಾರ್ ಅವರು ಎಲ್ಲ ಪೋಲೀಸು ಇಲಾಖೆಯವರಿಗೆ ಮತ್ತು ವಾಹನ ಹೊಂದಿರುವವರಿಗೆ

ಪೊಲೀಸರ ಅಂತರ್ ಜಿಲ್ಲಾ ವರ್ಗಾವಣೆಗೆ ಪಾರದರ್ಶಕತೆಯ ಕೊರತೆ: 7 ವರ್ಷಗಳ ಸೇವೆಯನ್ನು ಕಡೆಗಣಿಸಿದ ಮೇಲಾಧಿಕಾರಿಗಳು

ಪೊಲೀಸರ ಅಂತರ್ ಜಿಲ್ಲಾ ವರ್ಗಾವಣೆ ದಿನೇ ದಿನೇ ಕಗ್ಗಂಟಾಗಿ ಪರಿವರ್ತನೆಯಾಗುತ್ತಿದ್ದು, ಪೊಲೀಸ್ ಇಲಾಖೆಯ ಕೆಳಮಟ್ಟದ ಪೊಲೀಸ್ ಕಾನ್ಸ್ ಸ್ಟೇಬಲ್‌ಗಳ ಅಂತರ ಜಿಲ್ಲಾ ವರ್ಗಾವಣೆಗೆ ಗೃಹ ಸಚಿವರ ಒಪ್ಪಿಗೆಯಿದ್ದರೂ ಇಲಾಖಾ ಮೇಲಾಧಿಕಾರಿಗಳು ಸಮ್ಮತಿ ಸೂಚಿಸದೇ ಪದೇ ಪದೇ ವಿಳಂಭ ನೀತಿ ಅನುಸರಿಸುತ್ತಿರುವುದು ಪೊಲೀಸರ ಗೋಳು ಕೇಳೋರ್‍ಯಾರು ಎಂಬಂತಹ ಪರಿಸ್ಥಿತಿಗೆ ಬಂದು ತಲುಪಿದೆ. ಪೊಲೀಸ್ ಇಲಾಖೆಯಲ್ಲಿ ಪ್ರತಿಭಟನೆ ಮಾಡಲು ಅವಕಾಶವಿಲ್ಲವೆನ್ನುವುದನ್ನೇ ಗುರಿಯಾಗಿಸಿಕೊಂಡು

ಸುಳ್ಯ : ಬಿಎಸ್‌ಎನ್‌ಎಲ್ ನೆಟ್‌ವರ್ಕ್ ಸಮಸ್ಯೆ- ಪರಿಹಾರ ಕುರಿತು ಜಿಲ್ಲಾಧಿಕಾರಿಗಳ ಜೊತೆ ಚರ್ಚೆ ನಡೆಸಿದ ಸಂಸದರು

ಮಂಗಳೂರು : ಸುಳ್ಯ ತಾಲೂಕಿನ ಗ್ರಾಮೀಣ ಭಾಗದಲ್ಲಿ ಬಿಎಸ್‌ಎನ್‌ಎಲ್ ನೆಟ್ ವರ್ಕ್ ಸಮಸ್ಯೆ ತೀವ್ರಗೊಂಡಿರುವ ಹಿನ್ನಲೆಯಲ್ಲಿ ಪರಿಹಾರದ ಕುರಿತು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ದ.ಕ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದರು.ಜಿಲ್ಲಾಧಿಕಾರಿ ಕಚೇರಿಯಲ್ಲಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಭೇಟಿ ಮಾಡಿ ಚರ್ಚಿಸಿದರು. ಸುಳ್ಯ ತಾಲೂಕಿನ ತೊಡಿಕಾನದ ಬಿಎಸ್‌ಎನ್‌ಎಲ್ ನೆಟ್‌ವರ್ಕ್ ಸಮಸ್ಯೆ ಸೇರಿದಂತೆ ಸುಳ್ಯ ತಾಲೂಕಿನ ವಿವಿಧ ಕಡೆ ನೆಟ್‌ವರ್ಕ್

ಬಿ.ಎಸ್. ಯಡಿಯೂರಪ್ಪಗೆ ‘ಕೆಂಗಲ್ ಹನುಮಂತಯ್ಯ ದತ್ತಿ ಪ್ರಶಸ್ತಿ’

ಕನ್ನಡ ಸಾಹಿತ್ಯ ಪರಿಷತ್ತು (ಕಸಾಪ) ನೀಡುವ ‘ಕೆಂಗಲ್ ಹನುಮಂತಯ್ಯ ದತ್ತಿ ಪ್ರಶಸ್ತಿ’ಗೆ ಬಿಜೆಪಿಯ ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಅವರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು ₹ 25 ಸಾವಿರ ನಗದು ಒಳಗೊಂಡಿದೆ. ನಾಡಿನ ಸಂಸ್ಕೃತಿ, ಸಾಹಿತ್ಯ, ಕಲೆ, ಪರಂಪರೆಯ ಪೋಷಕರು ಅಥವಾ ಈ ಕ್ಷೇತ್ರಗಳಲ್ಲಿ ಕನಿಷ್ಠ 25 ವರ್ಷಗಳು ಸೇವೆ ಸಲ್ಲಿಸಿದವರನ್ನು ಆಯ್ಕೆ ಮಾಡುವುದು ಈ ದತ್ತಿಯ ಆಶಯವಾಗಿದೆ.  ಮುಖ್ಯಮಂತ್ರಿಯಾಗಿ, ವಿರೋಧ ಪಕ್ಷದ ನಾಯಕರಾಗಿ