ಕೊಕ್ಕಡದ ಶಿಬಾಜೆ ಗ್ರಾಮದ ಅಜಿರಡ್ಕ ಶ್ರೀಧರ ರಾವ್ ರವರ ತೋಟಕ್ಕೆ ತಡರಾತ್ರಿ ಕಾಡಾನೆ ದಾಳಿ ಮಾಡಿ ಪಸಲಿಗೆ ಬರುವ ತೆಂಗಿನ ಗಿಡ, ಕೊಕ್ಕೋ ಗಿಡ, ಬಾಳೆಗಿಡ ಅಪಾರ ಪ್ರಮಾಣದಲ್ಲಿ ನಾಶ ಮಾಡಿದೆ. ಈ ಹಿಂದೆಯೂ ಇವರ ತೋಟಕ್ಕೆ ಧಾಳಿ ಮಾಡಿದ್ದು ಕೃಷಿ ಹಾನಿ ಉಂಟು ಮಾಡಿತ್ತು, ಮೇ 6ರಂದು ಶಿಶಿಲ ಗ್ರಾಮದ ಕಳ್ಳಾಜೆ ದಿವಾಕರ ಗೌಡ ಇವರ ತೋಟಕ್ಕೂ ಧಾಳಿ ಮಾಡಿರುವ ಬಗ್ಗೆ ಮಾಹಿತಿ
2023-24ನೇ ಪ್ರಸಕ್ತ ಸಾಲಿನ ಎಸೆಸೆಲ್ಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶವು ಮೇ 9ರಂದು ಪ್ರಕಟಗೊಳ್ಳಲಿದೆ. ಮಾರ್ಚ್ 25 ರಿಂದ ಎಪ್ರಿಲ್ 06ರವರೆಗೆ ಎಸೆಸೆಲ್ಸಿ ಪರೀಕ್ಷೆಯನ್ನು ನಡೆಸಲಾಗಿತ್ತು. ಈಗ ಎಲ್ಲ ವಿಷಯಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯವು ಮುಕ್ತಾಯಗೊಂಡಿದೆ. ಈ ಹಿನ್ನೆಲೆಯಲ್ಲಿ ಗುರುವಾರ ಫಲಿತಾಂಶವನ್ನು ಪ್ರಕಟಿಸಲಾಗುತ್ತಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ತಿಳಿಸಿದೆ.
ಅಶ್ಲೀಲ ವಿಡಿಯೋ ಪ್ರಕರಣ ಆರೋಪದ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಇಂದು ವಿದೇಶದಿಂದ ಭಾರತಕ್ಕೆ ವಾಪಸಾಗುವ ಸಾಧ್ಯತೆ ಇದ್ದು, ಭಾರತಕ್ಕೆ ಬಂದಿಳಿಯುತ್ತಿದ್ದಂತೆ ವಶಕ್ಕೆ ಪಡೆದುಕೊಳ್ಳಲು ಎಸ್‌ಐಟಿ ಸಿದ್ಧತೆ ಮಾಡಿಕೊಂಡಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು, ಮಂಗಳೂರು, ಗೋವಾ ಸೇರಿದಂತೆ ವಿವಿಧ ವಿಮಾನ ನಿಲ್ದಾಣಗಳಲ್ಲಿ ವಿಶೇಷ ಕಣ್ಣಾವಲಿರಿಸಲಾಗಿದೆ. ಪ್ರಜ್ವಲ್ ಪತ್ತೆಗಾಗಿ ಈಗಾಗಲೇ ಲುಕ್‌ಔಟ್ ನೋಟಿಸ್ ಕೂಡಾ ಜಾರಿಯಾಗಿರುವುದರಿಂದ ಪ್ರಜ್ವಲ್ ಭಾರತಕ್ಕೆ
ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವೀಡಿಯೋ ಪ್ರಕರಣದಲ್ಲಿ ಬಿಜೆಪಿಯ ಒಂದಿಬ್ಬರ ಕೈವಾಡವಿದೆ ಎಂದು ಮಾಜೀ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿಯವರು ಗಂಭೀರ ಆರೋಪ ಮಾಡಿದರು.ಬಿಜೆಪಿಗೆ ಹಾಸನದಲ್ಲಿ ಸ್ಥಳವಿಲ್ಲ ಮತ್ತು ಗೆಲುವು ಅಸಾಧ್ಯ ಎಂದು ತಿಳಿದ ಬಳಿಕ ಮಾಜೀ ಪ್ರಧಾನಿ ದೇವೇಗೌಡರ ಕುಟುಂಬದ ಹೆಸರನ್ನು ಕೆಡಿಸಲು ಈ ಸಂಚು ಮಾಡಲಾಗಿದೆ. ಪೆನ್ ಡ್ರಯ್ವ್ ತಯಾರಿಸಿ ಹಂಚುವ ಮೂಲಕ ದೇವೇಗೌಡರ ಕುಟುಂಬಕ್ಕೆ ಕಳಂಕ ಹಚ್ಚಲು ಭಾರೀ ತೆರೆಯ ಮರೆಯ ಸಂಚು ನಡೆದಿದೆ ಎಂದು
ಒಂದಾದರೂ ಸತ್ಯ ಹೇಳಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪ್ರಧಾನಿ ಮೋದಿಯವರಿಗೆ ಮನವಿ ಮಾಡಿದ್ದಾರೆ. ಆಳುವವರ ಸುಳ್ಳನ್ನು ಬಯಲು ಮಾಡುವುದು ಬುದ್ಧಿಜೀವಿಗಳ ಕರ್ತವ್ಯ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರಾದ ಡಿ. ವೈ. ಚಂದ್ರಚೂಡ್ ಕಳೆದ ವರುಷ ಹೇಳಿದ್ದರು. ಸರಕಾರಗಳು ಸುಳ್ಳು ಮತ್ತು ಸುಳ್ಳು ಸುದ್ದಿಗಳ ವಿರುದ್ಧ ಕಾವಲುಗಾರ ಆಗಿ ನಿಲ್ಲಬೇಕು ಎಂದೂ ಅವರು ಹೇಳಿದರು.ಪ್ರಜಾಪ್ರಭುತ್ವ ಮತ್ತು ಸತ್ಯ ಕೈ ಕೈ ಹಿಡಿದು ಸಾಗಬೇಕು. ಆದರೆ ನಿರಂಕುಶವಾದಿ
ಸಂಸದ ಪ್ರಜ್ವಲ್ ರೇವಣ್ಣರಿಂದ ಶೋಷಿತರಾದ ಹೆಣ್ಣುಮಕ್ಕಳು ಹಿಂದೂಗಳಲ್ಲವೆ? ವಿದೇಶಕ್ಕೆ ಪರಾರಿಯಾಗಲು ಬಿಜೆಪಿ ನೆರವು ನೀಡಿದ್ದೇಕೆ ಎಂದಿತ್ಯಾದಿಯಾಗಿ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದ ಕಾಂಗ್ರೆಸ್ಸಿನವರು ಪ್ರಶ್ನಿಸಿದರು. ಹೆಣ ಇಟ್ಟು ರಾಜಕೀಯ ಮಾಡುವ, ಹಿಂದೂ ಶಬ್ದದ ರಾಜಕೀಯ ಮಾಡುವ ಬಿಜೆಪಿಯವರಿಗೆ ಹಾಸನದಲ್ಲಿ ಅವರ ಮೈತ್ರಿ ಸಂಸದರಿಂದ ಅನ್ಯಾಯಕ್ಕೆ ಒಳಗಾದವರು ಹಿಂದೂ ಹೆಣ್ಣುಮಕ್ಕಳು ಎಂದು ತಿಳಿದಿಲ್ಲವೆ ಎಂದು ಪ್ರಶ್ನಿಸಿದರು. ಪ್ರಜ್ವಲ್ ರೇವಣ್ಣ ವಿದೇಶಕ್ಕೆ
ಬರ ಪರಿಹಾರ ನೀಡುವ ವಿಚಾರದಲ್ಲಿ ಕೇಂದ್ರ ಸರ್ಕಾರ ಕರ್ನಾಟಕ ರಾಜ್ಯಕ್ಕೆ ಅನ್ಯಾಯ ಮಾಡಿದೆ ಎಂದು ಆರೋಪಿಸಿ ವಿಧಾನಸೌಧ ಆವರಣದ ಮಹಾತ್ಮ ಗಾಂಧಿ ಪ್ರತಿಮೆಯ ಮುಂಭಾಗದಲ್ಲಿ ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸಿದರು. ರಾಜ್ಯದ 223 ತಾಲ್ಲೂಕುಗಳನ್ನು ಬರಪೀಡಿತ ಎಂದು 2023ರ ಸೆ. 13ರಂದೇ ಘೋಷಿಸಲಾಗಿದೆ. ಈಗ ಏಳು ತಿಂಗಳುಗಳಾಗುತ್ತಾ ಬಂತು. 48 ಲಕ್ಷ ಹೆಕ್ಟೇರ್ ನಲ್ಲಿ ಬೆಳೆ ಹಾನಿಯಾಗಿದೆ. ಇದರಿಂದಾಗಿ 35,162 ಕೋಟಿ ನಷ್ಟವಾಗಿದೆ. ಕೇಂದ್ರ ಸರ್ಕಾರದಿಂದ ಪರಿಹಾರ
ಬೈಂದೂರು: ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ ರಾಘವೇಂದ್ರ ಗುರುವಾರ ನಾಮಪತ್ರ ಸಲ್ಲಿಸಿದರು.ಬಳಿಕ ಶಿವಮೊಗ್ಗ ಮುಂತಾದ ಕಡೆಗಳಲ್ಲಿ ಬ್ರಹತ್ ಮೆರವಣಿಗೆ ನಡೆಯಿತು.ನೂರಾರು ಬಿಜೆಪಿ ಕಾರ್ಯಕರ್ತರು ಹಾಜರಿದ್ದರು. ಈ ಸಂದರ್ಭದಲ್ಲಿ ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ,ತೀರ್ಥಹಳ್ಳಿ ಶಾಸಕ ಅರಗ ಜ್ಞಾನೇಂದ್ರ,ವಿಧಾನಪರಿಷತ್ ಸದಸ್ಯ ಎಸ್.ರುದ್ರೇಗೌಡ ಹಾಗೂ ಬಿಜೆಪಿ ಮುಖಂಡರು ಹಾಜರಿದ್ದರು.
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್ ಅವರು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಆಲಿ ಅವರ ನೇತೃತ್ವದಲ್ಲಿ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಸುರತ್ಕಲ್ ವ್ಯಾಪ್ತಿಯಲ್ಲಿ ರೋಡ್ ಶೋ ನಡೆಸಿದರು. ಕಾಂಗ್ರೆಸ್ ಕಾರ್ಯಕರ್ತರ ಜೊತೆಗೂಡಿ ಮುಕ್ಕ ಶ್ರೀರಾಮ ಭಜನಾ ಮಂದಿರದಿಂದ ಆರಂಭವಾದ ರೋಡ್ ಶೋ ಮುಕ್ಕ ಮಸ್ಜಿದ್, ಮುಕ್ಕ ಸ್ಯಾಕ್ರೆಡ್ ಹಾರ್ಟ್ ಚರ್ಚ್, ಮುಕ್ಕ ಭಂಡಾರ ಮನೆಗೆ ಭೇಟಿ, ಕಾಟಿಪಳ್ಳ ಜಂಕ್ಷನ್‌ನಲ್ಲಿ ಸಭೆ
ಸುರತ್ಕಲ್: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ) ಇದರ ಸುರತ್ಕಲ್ ಘಟಕದ ಚತುರ್ಥ ವಾರ್ಷಿಕೋತ್ಸವ ಕಾರ್ಯಕ್ರಮವು ಸುರತ್ಕಲ್ ಬಂಟರ ಭವನದಲ್ಲಿ ನಡೆಯಿತು.ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು. ದೀಪ ಪ್ರಜ್ವಲನೆಗೈದ ಯಕ್ಷಧ್ರುವ ಯಕ್ಷ ಶಿಕ್ಷಣ ಪ್ರಧಾನ ಸಂಚಾಲಕ ವಾಸುದೇವ ಐತಾಳ್ ಯುಎಸ್ ಎ ಮಾತನಾಡಿ, “ಅಮೇರಿಕದಲ್ಲಿ ಯಕ್ಷಗಾನ ಮಾಡಿಸುವ ಮೂಲಕ ಅಲ್ಲಿನ ಜನರಿಗೂ ನಮ್ಮ ಕರಾವಳಿಯ ಸಂಸ್ಕೃತಿಯ ಪರಿಚಯ ಮಾಡಿದ ಕೀರ್ತಿ ಪಟ್ಲ ಸತೀಶ್ ಶೆಟ್ಟಿ