Home Archive by category ರಾಜ್ಯ (Page 23)

ಬಸವಣ್ಣ ಕರ್ನಾಟಕದ ಸಾಂಸ್ಕೃತಿಕ ನಾಯಕ : ಕರ್ನಾಟಕ ಸರಕಾರದ ಘೋಷಣೆ

ಕರ್ನಾಟಕ ಸರಕಾರವು ಶರಣ ಚಳವಳಿಯ ಹರಿಕಾರ ಬಸವಣ್ಣನವರನ್ನು ಕನ್ನಡ ನಾಡಿನ ಸಾಂಸ್ಕøತಿಕ ನಾಯಕ ಎಂದು ಘೋಷಿಸಿದ್ದಾರೆ. ಇದನ್ನು ರಾಜ್ಯದ ಜನತೆ ಅಮೋಘವಾಗಿ ಸ್ವಾಗತಿಸಿದೆ. ಕರ್ನಾಟಕ ಶರಣ ಪರಿಷತ್, ನಾನಾ ಮಠಾಧೀಶರುಗಳು ಇದನ್ನು ಸ್ವಾಗತಿಸಿ ಹೇಳಿದ್ದಾರೆ. ವೇದದ ಹೇರಿಕೆ, ಸಂಸ್ಕøತದ ಹೇರಿಕೆ, ವೈದಿಕ ಧರ್ಮದ ಹೇರಿಕೆ ಇವುಗಳನ್ನು ಅಲ್ಲಗಳೆದು ಕರುನಾಡಿನ ಕನ್ನಡ, ನೆಲ

ಹಾಸನ: ಗ್ರಾಮ ಒನ್ ಸಿಬ್ಬಂದಿಗೆ ತರಬೇತಿ ಕಾರ್ಯಾಗಾರ

ಹಾಸನದ ಅಂಬೇಡ್ಕರ್ ಭವನದಲ್ಲಿ ಹಾಸನ ಜಿಲ್ಲೆಯ ಗ್ರಾಮ ಒನ್‌ನ್ನ ಎಲ್ಲಾ ಸಿಬ್ಬಂದಿಯವರೆಗೆ ಒಂದು ದಿನದ ತರಬೇತಿ ಕಾರ್ಯಗಾರ ವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮವನ್ನು ಇ ಡಿ ಸಿ ಎಸ್ ನಿರ್ದೇಶನಾಲಯದ ಕರ್ನಾಟಕ ರಾಜ್ಯ ಯೋಜನಾ ನಿರ್ದೇಶಕರಾದ ಮದನ್ ಮೋಹನ್ ರವರು ಉದ್ಘಾಟನೆ ಮಾಡಿದರು. ತರಬೇತಿ ಕಾರ್ಯಗಾರದಲ್ಲಿ ಸರ್ಕಾರದಿಂದ ಗ್ರಾಮ ಒನ್ ಗಳಿಗೆ ಹೊಸದಾಗಿ ಸಿಗುತ್ತಿರುವ ಯೋಜನೆಗಳು ಮತ್ತು ನಾವು ಸಾರ್ವಜನಿಕರಿಗೆ ಯಾವ ಯಾವ ಯೋಜನೆಗಳನ್ನು ನೀಡಬೇಕು. ಸರ್ಕಾರದ

ಹಾಸನ: ಕಾಡಾನೆ ಸೆರೆಗೆ ಆಪರೇಷನ್ ಆರಂಭ

ಹಾಸನ ಜಿಲ್ಲೆಯಲ್ಲಿ ಉಪಟಳ ನೀಡುತ್ತಿರುವ ಕಾಡಾನೆಗಳ ಸೆರೆಗೆ ಆಪರೇಷನ್ ಆರಂಭವಾಗಿದೆ. 8 ಸಾಕು ಆನೆಗಳ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯುತ್ತಿದೆ. ಡಿಸೆಂಬರ್ 4ರಂದು ಕಾಡಾನೆ ಕಾರ್ಯಾಚರಣೆ ವೇಳೆ ಬಲಿಯಾಗಿದ್ದ ದಸರಾ ಆನೆ ಅರ್ಜುನ ಬಲಿ ಪಡೆದ ಆನೆಯನ್ನು ಸೆರೆ ಹಿಡಿಯಲು ಜನರು ಒತ್ತಾಯಿಸಿದ್ದಾರೆ. ಇಂದಿನಿಂದ ಅಭಿಮನ್ಯ ನೇತೃತ್ವದಲ್ಲಿ ಕಾರ್ಯಾಚರಣೆಯ ನಡೆಯಲಿದೆ. ಬೇಲೂರು ತಾಲೂಕಿನ ಬಿಕ್ಕೋಡು ಸಮೀಪದ ತಾತ್ಕಾಲಿಕ ಆನೆ ಶಿಬಿರಕ್ಕೆ ಸಾಕಾನೆಗಳನ್ನು ತರಲಾಗಿದೆ.

ಗುಜರಾತ್ ಸೂಕ್ತ ಸರಕಾರ ಆಗಿರಲಿಲ್ಲ ಏಕೆ?

ಬಿಲ್ಕಿಸ್ ಬಾನೊ ಅತ್ಯಾಚಾರದ ಸಂಬಂಧ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದ 11 ಜನರ ಬಿಡುಗಡೆಗೆ ಗುಜರಾತ್ ಸೂಕ್ತ ಸರಕಾರ ಆಗಿರಲಿಲ್ಲ. ಕಪಟತನ, ನ್ಯಾಯ ವಂಚನೆ ಮೂಲಕ ಅವರನ್ನು ಗುಜರಾತ್ ಸರಕಾರ ಬಿಡಿಸಿಕೊಂಡಿದೆ ಮತ್ತೆ ಅವರು ಕೂಡಲೆ ಜೈಲಿಗೆ ಹೋಗಬೇಕು ಎಂದು ಸರ್ವೋಚ್ಚ ನ್ಯಾಯಾಲಯವು ನೀಡಿದ ತೀರ್ಪು ನ್ಯಾಯಾಂಗದ ಗೌರವ ಹೆಚ್ಚಿಸಿದೆ. ಗುಜರಾತ್ ಸರಕಾರದ ಮುಖವಾಡ ಕಳಚಿದೆ. 2002ರಲ್ಲಿ ಗುಜರಾತಿನಲ್ಲಿ ನಡೆದ ಅಮಾನವೀಯ ಧಾರ್ಮಿಕ ಕೊಲೆ, ಸುಲಿಗೆ, ಹಲ್ಲೆ, ದರೋಡೆ,

ಗುಜರಾತ್: ಅತ್ಯಾಚಾರಿಗಳಿಗೆ ಜೈಲು ಮುಕ್ತಿ ಇಲ್ಲ- ಸುಪ್ರೀಂ ಕೋರ್ಟ್

ಬಿಲ್ಕಿಸ್ ಬಾನು ಅತ್ಯಾಚಾರಕ್ಕೆ ಶಿಕ್ಷೆಗೆ ಒಳಗಾದವರನ್ನು ಬಿಜೆಪಿಯು ತಾನೇ ಬಿಡಿಸಿ ಸ್ವಾಗತ ಕಾರ್ಯಕ್ರಮ ಕೂಡ ನಡೆಸಿತ್ತು. ಸುಪ್ರೀಂ ಕೋರ್ಟು ಅವರನ್ನು ಮತ್ತೆ ಜೈಲಿಗೆ ಹೋಗಿ ಎಂದು ಬಿಜೆಪಿ ಮುಖಕ್ಕೆ ಮಂಗಳಾರತಿ ಮಾಡಿದೆ. ನ್ಯಾಯಾಂಗದ ಮೇಲಿನ ನಂಬಿಕೆ ಉಳಿಯುವಂತೆ ಮಾಡಿದೆ. ಬಿಲ್ಕಿಸ್ ಒಂದು ಪ್ರದೇಶ; ಗುಂಪು ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತೆಯನ್ನು ಆ ಹೆಸರಿನಿಂದಲೆ ಗುರುತಿಸಲಾಗಿದೆ. ಆಕೆಯ ಅತ್ಯಾಚಾರಕ್ಕೆ ಶಿಕ್ಷೆಗೊಳಗಾದ 11 ಜನರ ಬಿಡುಗಡೆ ಆಗಿತ್ತು. ಅದಕ್ಕೆ

ಅಯ್ಯಪ್ಪ‌… ಮಹಿಳೆಯೆಂದರೆ ನಿನಗ್ಯಾಕೆ ಮೈಲಿಗೆಯಪ್ಪ…??

ಮಂಗಳೂರು: ಶಬರಿಮಲೆ ಯಾತ್ರೆಯ ಗೌಜಿ. ಎಲ್ಲೆಲ್ಲಿಂದಲೋ ಶಬರಿಮಾಲೆಗೆ ಆಗಮಿಸುತ್ತಿರುವ ಅಪಾರ ಸಂಖ್ಯೆಯ ಭಕ್ತರು. ಊರೂರಲ್ಲಿ, ಮಂದಿರ, ಗುಡಿ, ಬೀರಿಗಳಲ್ಲಿ ಭಜನೆ, ದೀಪೋತ್ಸವ, ಇರುಮುಡಿ ಕಟ್ಟುವಿಕೆ ಇತ್ಯಾದಿ ಇತ್ಯಾದಿ. ಅಂತೂ ಎಲ್ಲೆಲ್ಲೂ ಅಯ್ಯಪ್ಪ ವೃತದಾರಿಗಳು…ಇವೆಲ್ಲವೂ ಕಣ್ಣಿಗೆ ಈಗ ನಿತ್ಯ ಕಾಣುವ ದೃಶ್ಯಗಳಾದರೆ ಅಯ್ಯಪ್ಪ ಮಾಲಾಧಾರಣೆಯ ಹಿಂದೆ ಮಹಿಳೆಯರನ್ನು ಮೈಲಿಗೆಯ ನೆಪದಲ್ಲಿ ತೆರೆಮರೆಗೆ ಸರಿಸುವ ವ್ಯವಸ್ಥೆಯೊಂದು ಅಂದಿನಿಂದ ಇಂದಿನವರೆಗೂ ಸದ್ದಿಲ್ಲದೆ

ತಮಿಳು ನಟ ವಿಜಯಕಾಂತ್ ನಿಧನ

ತಮಿಳಿನ ಖ್ಯಾತ ನಾಯಕ ನಟರಾಗಿದ್ದ ವಿಜಯಕಾಂತ್ ಅವರು ಗುರುವಾರ ಬೆಳಿಗ್ಗೆ ವಿಧಿವಶರಾದರು. ಅವರು ನ್ಯುಮೋನಿಯಾದಿಂದ ಬಳಲುತ್ತಿದ್ದರು.ಅವರು ನ್ಯುಮೋನಿಯಾದ ಜೊತೆಗೆ ಕೋವಿಡ್ ಸೋಂಕಿಗೆ ಒಳಗಾಗುತ್ತಲೇ ಸಾವಿಗೆ ಸೆರೆಯಾದರು ಎಂದೂ ವರದಿಯಾಗಿದೆ. 1979ರಲ್ಲಿ ನಾಯಕ ನಟನಾಗಿ ಚಿತ್ರರಂಗ ಪ್ರವೇಶಿಸಿದ ಅವರು 2005ರವರೆಗೂ ನಟನೆಯಲ್ಲಿ ಸಕ್ರಿಯರಾಗಿದ್ದರು. ಆಗ ಡಿಎಂಡಿಕೆ- ದೇಸೀಯ ಮುರ್ಪೋಕು ದ್ರಾವಿಡ ಕಳಗಂ ಸ್ಥಾಪನೆ ಮಾಡಿ ರಾಜಕೀಯದಲ್ಲಿ ಈಡುಗೊಂಡರು. ಅವರ ಪಕ್ಷವು ಮೂರನೆಯ

ಪಡುವಣ ಬಂಗಾಳದ ಬಿಜೆಪಿ ಮುಖಂಡ ಅನುಪಮ್ ಹಜ್ರಾ ಕೇಂದ್ರೀಯ ಸ್ಥಾನದಿಂದ ವಜಾ

ಕೊಲ್ಕತ್ತಾದಲ್ಲಿ ಒಂದು ಲಕ್ಷ ನಾಗರಿಕರನ್ನು ಸೇರಿಸಿ ನಡೆದ ಗೀತಾ ಮಂತ್ರ ಪಠಣ ಕಾರ್ಯಕ್ರಮದಲ್ಲಿ ಬಿಜೆಪಿ ನಾಯಕರು ಹಣ ಬಾಚಿದ್ದಾರೆ ಎಂದು ಆರೋಪ ಮಾಡಿದ್ದ ಪಡುವಣ ಬಂಗಾಳದ ಬಿಜೆಪಿ ಮುಖಂಡ ಅನುಪಮ್ ಹಜ್ರಾ ಅವರನ್ನು ಕೇಂದ್ರೀಯ ಸ್ಥಾನದಿಂದ ವಜಾ ಮಾಡಲಾಗಿದೆ.ಗೀತಾ ಮಂತ್ರ ಪಠಣ ಕಾರ್ಯಕ್ರಮಕ್ಕೆ ಬಿಜೆಪಿಯ ಕೆಲವರು ಹಣವಂತರಿಗೆ ದೊಡ್ಡ ಮೊತ್ತದ ಹಣಕ್ಕೆ ವಿಶೇಷ ಪಾಸ್ ಮಾರಾಟ ಮಾಡಿದ್ದರು. ಅಕ್ರಮ ಹಣ ಮಾಡಿಕೊಂಡಿದ್ದರು ಎಂದು ಅನುಪಮ್ ಆರೋಪ ಮಾಡಿದ್ದರು. ಕೆಲವು ಬಿಜೆಪಿ

ತಮಿಳುನಾಡು ಮಂತ್ರಿ ಪೊನ್ಮುಡಿಯವರಿಗೆ ಶಿಕ್ಷೆ

ತಮಿಳುನಾಡಿನ ಉನ್ನತ ಶಿಕ್ಷಣ ಸಚಿವ ಪೊನ್ಮುಡಿಯವರಿಗೆ ಆದಾಯಕ್ಕಿಂತ ಹೆಚ್ಚು ಸಂಪತ್ತು ಹೊಂದಿದ ಭ್ರಷ್ಟಾಚಾರ ಆರೋಪದ ಕಾರಣಕ್ಕೆ ಮದರಾಸು ಹೈಕೋರ್ಟು ಮೂರು ವರುಷಗಳ ಸಾದಾ ಶಿಕ್ಷೆಯನ್ನು ಗುರುವಾರ ಬೆಳಿಗ್ಗೆ ವಿಧಿಸದೆ. ಮೊನ್ನೆ ಅಪರಾಧ ಸಾಬೀತು ಎಂದು ಸಾರಿದ ಉಚ್ಚ ನ್ಯಾಯಾಲಯವು ಇಂದು ಶಿಕ್ಷೆ ಎಷ್ಟೆಂದು ಸಾರಿತು. ಪೊನ್ಮುಡಿ ಮತ್ತು ಅವರ ಹೆಂಡತಿಯ ಹೆಸರಿನಲ್ಲಿ ರೂ. 1.75 ಕೋಟಿ ರೂಪಾಯಿಯ ಸಂಪತ್ತು ಇದ್ದು, ಅದು ಅವರ ಆದಾಯಕ್ಕಿಂತ 65.99% ಹೆಚ್ಚು ಎಂದು ಕೋರ್ಟು

ಕುಪ್ಪಳ್ಳಿ:ಮಲೆನಾಡು ಕರಾವಳಿ ಜನಪರ  ಒಕ್ಕೂಟ ಎರಡು ದಿನಗಳ ಶಿಬಿರ ಯಶಸ್ವಿ

ಕುಪ್ಪಳ್ಳಿ: ಮಲೆನಾಡು ಕರಾವಳಿ ಜನಪರ ಒಕ್ಕೂಟ ಹಮ್ಮಿಕೊಂಡಿದ್ದ  ಎರಡು ದಿನಗಳ ನಾಯಕತ್ವ ಶಿಬಿರ ಯಶಸ್ವಿಯಾಗಿ ಅಂತ್ಯಗೊಂಡಿತ್ತು.ಸುಧೀರ್ ಕುಮಾರ್ ಮುರೊಳ್ಳಿ ಹಾಗೂ ಅನಿಲ್ ಹೊಸಕೊಪ್ಪ ಇವರ ತಂಡ ಕುಪ್ಪಳ್ಳಿಯ ಹೇಮಾಂಗಣದಲ್ಲಿ ಎರಡು ದಿನಗ ನಾಯಕತ್ವ ಶಿಬಿರವನ್ನು‌ ಹಮ್ಮಿಕೊಂಡಿತ್ತು. ಶಿಬಿರಕ್ಕೆ ಚಿಕ್ಕಮಂಗಳೂರು, ಉಡುಪಿ, ಶಿವಮೊಗ್ಗ ದಕ್ಷಿಣಕನ್ನಡ, ಉತ್ತರಕನ್ನಡ, ಕೊಡಗು, ಹಾಸನ ಜಿಲ್ಲೆ ಗಳಿಂದ ನೂರಾರು ಮಂದಿ‌ ಶಿಬಿರಾರ್ಥಿಗಳು ಪಾಲ್ಗೊಂಡಿದ್ದರು. ಶಿಬಿರದಲ್ಲಿ