Home Archive by category ರಾಜ್ಯ (Page 54)

ಮಂಜೆಶ್ವರ : ರಸ್ತೆ ಬದಿ ಕೂಲಿ ಕಾರ್ಮಿಕನ ಮೃತದೇಹ ಪತ್ತೆ

ಮಂಜೇಶ್ವರ: ಕರ್ನಾಟಕ ನಿವಾಸಿಯಾದ ಕೂಲಿ ಕಾರ್ಮಿಕನೊಬ್ಬನನ್ನು ರಸ್ತೆ ಬದಿಯಲ್ಲಿ ಗಾಯಗಳೊಂದಿಗೆ ರಕ್ತಸಿಕ್ತವಾದ ಸ್ಥಿತಿಯಲ್ಲಿ ಪತ್ತೆ ಹಚ್ಚಲಾಗಿದೆ. ಕರ್ನಾಟಕ ಬೆಳ್ಗಾಂ ನಿವಾಸಿ ಬಸಪ್ಪ ರಾಜು ಸಾವನ್ನಪ್ಪಿದ ದುರ್ದೈವಿ. ಮಂಜೇಶ್ವರ ಪಾವೂರು ಸೂಪಿ ನಗರ ರಸ್ತೆ ಬದಿಯಲ್ಲಿ ದಾರಿಹೋಕನೊಬ್ಬ ಈ ದೃಶ್ಯವನ್ನು ಕಂಡು ಮಾಹಿತಿ ನೀಡಿದ್ದಾನೆ.ಎರಡು ದಿವಸಕ್ಕೆ ಮೊದಲು ಸೂಪಿ ನಗರ

ನಮ್ಮ ಸರ್ಕಾರದಿಂದ ದೇವಸ್ಥಾನ ರಕ್ಷಣೆಗೆ ಆದ್ಯತೆ : ಸಂಸದ ಬಿ. ವೈ ರಾಘವೇಂದ್ರ

ಭದ್ರಾವತಿ : ಭದ್ರಾವತಿಯ ಐತಿಹಾಸಿಕ ಪ್ರಸಿದ್ಧ ಶ್ರೀ ಲಕ್ಷ್ಮಿ ನರಸಿಂಹ ದೇವಸ್ಥಾನವು ಕಾಲ ಕ್ರಮೇಣ ಶಿತಲಗೊಳ್ಳುತ್ತಿದ್ದು, ಇದನ್ನು ಸರಿಪಡಿಸಿ ಜೀರ್ಣೋದ್ಧಾರ ಗೊಳಿಸುವ ನಿಟ್ಟಿನಲ್ಲಿಸಂಸದರಾದ ಬಿ. ವೈ ರಾಘವೇಂದ್ರ ಅವರ ವಿಶೇಷ ಪ್ರಯತ್ನದಿಂದ ದೇವಸ್ಥಾನ ಅಭಿವೃದ್ಧಿ ಮತ್ತು ಇತರ ಕಾಮಗಾರಿಗೆ ಕೇಂದ್ರದ ಪುರಾತತ್ವ ಇಲಾಖೆಯಿಂದ ಸುಮಾರು 4 ಕೋಟಿ ಅನುದಾನವನ್ನು ಮನವಿ ಮಾಡಿದ್ದಾರೆ. ಇಂದು ಸಂಸದರಾದ ಶ್ರೀ ಲಕ್ಷ್ಮಿ ನರಸಿಂಹ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನವನ್ನು

ಬಿಜೆಪಿ,ಆರ್.ಎಸ್.ಎಸ್ ಸಂಘಟನೆಗೂ ISIS ಉಗ್ರ ಸಂಘಟನೆಗೂ ಯಾವುದೇ ವ್ಯತ್ಯಾಸವಿಲ್ಲ- ಬಿಕೆ ಇಮ್ತಿಯಾಜ್

ಗುಜರಾತಿನ ಬಿಲ್ಕಿಸ್ ಬಾನು ಮೇಲೆ ಅತ್ಯಾಚಾರ ನಡೆಸಿದ ಆರೋಪಿಗಳ ಬಿಡುಗಡೆಯನ್ನು ವಿರೋಧಿಸಿ., ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ ಕಿರುಕುಳದ ಆರೋಪಿ ಮುರುಘಾ ಮಠದ ಶಿವಮೂರ್ತಿಯವರ ಮೇಲೆ ಕಠಿಣ ಕ್ರಮಕ್ಕೆ ಒತ್ತಾಯಿಸಿ ಡಿವೈಎಫ್ಐ, ಜೆಎಮ್ಎಸ್, ಎಸ್ಎಫ್ಐ, ಡಿಎಚ್ಎಸ್ ಮತ್ತು ಸಮಾನ ಮನಸ್ಕ ಸಂಘಟನೆಗಳ ಜಂಟಿ ಆಶ್ರಯದಲ್ಲಿ ಇಂದು (7-09-2022) ಮಂಗಳೂರು ಮಿನಿವಿಧಾನಸೌಧದ ಮುಂಭಾಗ ಪ್ರತಿಭಟನಾ ಪ್ರದರ್ಶನ ನಡೆಯಿತು. ಪ್ರತಿಭಟನೆಯನ್ನು ಉದ್ದೇಶಿಸಿ ಡಿವೈಎಫ್ಐ ಜಿಲ್ಲಾ

ಸೇವಾ ಸಾಗರ ಟ್ರಸ್ಟ್ ನಿಂದ ನೂತನ ಕಟ್ಟಡ

ಸೇವಾಸಾಗರ ಟ್ರಸ್ಟ್ ಸಾಗರದ ನೂತನ ಕಟ್ಟಡದ ಶಿಲಾನ್ಯಾಸವನ್ನು ಸಂಸದರಾದ ಬಿ. ವೈ ರಾಘವೇಂದ್ರ ಅವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಜನರ ಸೇವೆಗಾಗಿ ಸೇವಸಾಗರ ಟ್ರಸ್ಟ್ ಮುಂದೆ ಬಂದಿದ್ದು, ಇದೀಗ ನೂತನ ಕಟ್ಟಡದ ಶಿಲಾನ್ಯಾಸವನ್ನು ನೆರವೇರಿಸಲಾಗಿದೆ ಎಂದರು. ಈ ಸಂದರ್ಭದಲ್ಲಿ ಶಾಸಕರಾದ ಹೆಚ್ ಹರತಾಳು ಹಾಲಪ್ಪ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದಕ್ಷಿಣ ಪ್ರಾಂತ ಸಹ ಕಾರ್ಯವಾಹರಾದ ಪಟ್ಟಾಭಿರಾಮ್, ಮಲೆನಾಡು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಕೆ ಎಸ್

ಓಷಿಯನ್ ಎಂಪೈರ್ ಫ್ಯಾಮಿಲಿ ರೆಸ್ಟೋರೆಂಟ್ ನಲ್ಲಿ ಓಣಂ ಹಬ್ಬವನ್ನು ಸಂಭ್ರಮಿಸಿ

ಓಣಂ ಹಬ್ಬ ಕೇರಳದ ಜನರ ಪ್ರೀತಿಯ ಹಬ್ಬ,ಎಲ್ಲೆಡೆಯು ಸಾಂಸ್ಕೃತಿಕ ಮತ್ತು ಸಾಂಪ್ರದಾಯಿಕತೆಯ ಎಳೆಗಳೊಂದಿಗೆ ಬೆಸೆದುಕೊಂಡಿದ್ದು, ಮಂಜೇಶ್ವರದಲ್ಲಿರುವ ಓಷಿಯನ್ ಎಂಪೈರ್ ಫ್ಯಾಮಿಲಿ ರೆಸ್ಟೋರೆಂಟ್ ನಲ್ಲಿ ಹಬ್ಬದ ವಾತಾವರಣ ಮನೆಮಾಡಿದೆ. ಸಂಸ್ಕೃತಿ, ಸಂಪ್ರದಾಯದ ಪ್ರತಿರೂಪವೇ ಓಣಂ ಹಬ್ಬ. ಕೇರಳದ ಜನತೆ ಬಹಳ ಸಂಭ್ರಮದಿಂದ ಈ ಹಬ್ಬವನ್ನು ಆಚರಿಸುತ್ತಾರೆ. ಓಣಂ ಅನೇಕ ಆಸಕ್ತಿದಾಯಕ ಆಚರಣೆಗಳನ್ನು ಹೊಂದಿದೆ. ಅತ್ಯಂತ ವರ್ಣರಂಜಿತ ಓಣಂ ಆಚರಣೆಗಳಲ್ಲಿ ಒಂದು ಹೂವಿನ ರಂಗೋಲಿಗಳು

ಹೃದಯಾಘಾತದಿಂದ ಸಚಿವ ಉಮೇಶ್ ಕತ್ತಿ ನಿಧನ

ಬೆಂಗಳೂರು: ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಸಚಿವ ಉಮೇಶ್ ಕತ್ತಿಯವರು ನಿನ್ನೆ ರಾತ್ರಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ದಿನ ಪೂರ್ತಿ ಚೆನ್ನಾಗಿಯೇ ಇದ್ದ ಉಮೇಶ್ ಕತ್ತಿ, ಬೆಂಗಳೂರಿನ ಡಾಲರ್ಸ್ ಕಾಲನಿಯ ತಮ್ಮ ನಿವಾಸದಲ್ಲಿ ವಿಶ್ರಾಂತಿ ಪಡೆದಿದ್ದರು. ಆದರೆ ರಾತ್ರಿ 11 ಗಂಟೆ ಸುಮಾರಿಗೆ ಅವರಿಗೆ ಎದೆನೋವು ಕಾಣಿಸಿಕೊಂಡಿತ್ತು. ಕೂಡಲೇ ಅವರನ್ನು ಅಲ್ಲಿಯೇ ಹತ್ತಿರದಲ್ಲಿದ್ದ ಎಂಎಸ್ ರಾಮಯ್ಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು.

ಬಂದರು ಮೂಲಕ ರಫ್ತು ಮತ್ತು ಪ್ರವಾಸೋದ್ಯಮಕ್ಕೆ ಆದ್ಯತೆ : ಪ್ರಧಾನಿ ಮೋದಿ

ಬಂದರು ಮೂಲಕ ಪ್ರವಾಸೋದ್ಯಮ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಲಾಗುವುದು. ಸಾಗರ ಪ್ರವಾಸೋದ್ಯಮಕ್ಕೆ ಮಂಗಳೂರು ಬಂದರು ಅತ್ಯುತ್ತಮ ಕೊಡುಗೆಯನ್ನು ನೀಡುತ್ತಿದೆ. ಕಳೆದ ವರ್ಷದಲ್ಲಿ 15 ಸಾವಿರ ವಿದೇಶಿ ಪ್ರವಾಸಿಗರು ಮಂಗಳೂರು ಬಂದರು ಮೂಲಕ ಬಂದಿರುತ್ತಾರೆ. ಸಾಗರ ಪ್ರವಾಸೋದ್ಯಮದ ಪ್ರಯೋಜನ ಹಾಗೂ ಲಾಭವನ್ನು ಟ್ಯಾಕ್ಸಿ, ಆಟೋ ಚಾಲಕರು ಸಣ್ಣ ವ್ಯಾಪಾರಿಗಳು ಪಡೆಯುತ್ತಿದ್ದಾರೆ ಎಂದು ಪ್ರಧಾನಿ ಮೋದಿ ಉಲ್ಲೇಖಿಸಿದರು. ವಿಸ್ತಾರವಾದ ಕರಾವಳಿಯನ್ನು ಹೊಂದಿರುವ ನಮ್ಮ

ರೈತರಿಗೆ ಮತ್ತು ಮೀನುಗಾರರಿಗೆ ಸೌಲಭ್ಯ ವಿತರಿಸಿದ ಪ್ರಧಾನಿ

ಪ್ರಧಾನಿ ನರೇಂದ್ರ ಮೋದಿಯವರಿಂದ ಕಿಸಾನ್ ಕ್ರೆಡಿಟ್ ಕಾರ್ಡ್ ಹಾಗೂ ಮತ್ಸ್ಯಾ ಸಂಪಾದನಾ ಯೋಜನೆಯ ಆಳ ಸಮುದ್ರ ಮೀನುಗಾರಿಕೆಯ ಬೋಟ್ ಫಲಾನುಭವಿಗಳಿಗೆ ಆದೇಶ ಪತ್ರವನ್ನು ವೇದಿಕೆಯಲ್ಲಿ ವಿತರಿಸಿದರು.

ಮಂಗಳೂರು ಮಲ್ಲಿಗೆ, ಪರಶುರಾಮನ ಸ್ಮರಣಿಕೆಯೊಂದಿಗೆ ಸ್ವಾಗತ

ಬಂಗ್ರಕೂಳೂರಿನಲ್ಲಿ ಕಾಯ್ದಿರಿಸಲಾದ ಬೃಹತ್ ಸಮಾವೇಶದಲ್ಲಿ ಭಾಗಿಯಾದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೇಂದ್ರ ಬಂದರು ಇಲಾಖೆ ಸಚಿವ ಸರ್ಬಾನಂದ್ ಸೊನೊವಾಲ್ ಅವರು ಮೈಸೂರು ಪೇಟ ಹಾಗೂ ರತ್ನ ಮಾಲೆ ಮತ್ತು ಉಡುಪಿ ಶ್ರೀಕೃಷ್ಣನ ಸ್ಮರಣಿಕೆ ನೀಡಿ ಸ್ವಾಗತಿಸಿದರು. ಸಂಸದ ನಳಿನ್ ಕುಮಾರ್ ಕಟೀಲ್ ಅವರು ಮಂಗಳೂರು ಮಲ್ಲಿಗೆ ಮಾಲಾರ್ಪಣೆ ಮಾಡಿದರೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಉಸ್ತುವಾರಿ ಸಚಿವ ಸುನೀಲ್ ಕುಮಾರ್ ಅವರು ಪರಶುರಾಮನ ಸ್ಮರಣಿಕೆಯನ್ನು ನೀಡಿ

ಕರಾವಳಿಗೆ ಅಭಿವೃದ್ಧಿ ಪೂರಕ ಯೋಜನೆಗೆ ಮೋದಿ ಚಾಲನೆ : ಸಿಎಂ ಬೊಮ್ಮಾಯಿ

ಬಹಳ ಸಮಯದ ಬಳಿಕ ಪ್ರಧಾನಿ ಕರಾವಳಿಗೆ ಬರುತ್ತಿದ್ದಾರೆ. ಸುಮಾರು 3800ಕೋಟಿಯ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ಇಡೀ ಕರಾವಳಿಗೆ ಅಭಿವೃದ್ಧಿಗೆ ಈ ಯೋಜನೆಗಳು ಪೂರಕ. ಉದ್ಯೋಗವಕಾಶಗಳನ್ನೂ ಇದು ನೀಡಬಲ್ಲದು. ಮೀನುಗಾರರಿಗೆ ಅನುಕೂಲ ಆಗುವ ಯೋಜನೆಗಳನ್ನು ನೀಡಲಾಗಿದೆ. ಕರಾವಳಿ ಅಭಿವೃದ್ಧಿಗೆ ಈ ಯೋಜನೆಗಳು ಪೂರಕ ಎಂದ ಸಿಎಂಮುರುಘ ಶ್ರೀಗಳ ಬಗ್ಗೆ ಮಾತಾನಾಡುವ ಪೂರಕ ಸಂದರ್ಭ ಇದಲ್ಲ. ಪೊಲೀಸರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ ತನಿಖೆ ನಡೆಸುತ್ತಿದ್ದಾರೆ.