Home Archive by category Fresh News (Page 198)

ಡ್ರಗ್ಸ್ ಜಾಗೃತಿಗಾಗಿ ಎಲ್ಲಾ ಇಲಾಖೆಗಳ ಸಹಯೋಗ ಅಗತ್ಯ : ಪುತ್ತೂರು ಎ.ಸಿ. ಗಿರೀಶ್ ನಂದನ್ ಹೇಳಿಕೆ

ಪುತ್ತೂರು: ಡ್ರಗ್ಸ್ ಚಟಗಳು ಯುವ ಸಮುದಾಯವನ್ನು ಹೆಚ್ಚಾಗಿ ಕಾಡುತ್ತಿದೆ. ಇಂತಹ ಪ್ರಕರಣಗಳನ್ನು ತಡೆಯುವ ನಿಟ್ಟಿನಲ್ಲಿ ಶಾಲಾ ಕಾಲೇಜುಗಳಲ್ಲಿ ನಿರಂತರವಾಗಿ ಜಾಗೃತಿ ಕಾರ್ಯಕ್ರಮ ನಡೆಯಬೇಕು. ಡ್ರಗ್ಸ್ ಕುರಿತ ಜನ ಜಾಗೃತಿಗಾಗಿ ಎಲ್ಲಾ ಇಲಾಖೆಗಳ ಸಹಯೋಗ ಅಗತ್ಯವಾಗಿದೆ ಎಂದು ಪುತ್ತೂರು ಉಪವಿಭಾಗದ ಸಹಾಯಕ ಕಮೀಷನರ್ ಗಿರೀಶ್ ನಂದನ್ ತಿಳಿಸಿದರು. ಅವರು ಮಂಗಳವಾರ

ಮುನ್ನೂರು ಗ್ರಾ.ಪಂ ಸದಸ್ಯ ಭುಜಂಗ ರೈ ನಿಧನ

ಉಳ್ಳಾಲ: ಸಿಪಿಎಂ ನೇತಾರ, ಮುನ್ನೂರು ಗ್ರಾ.ಪಂ. ಸದಸ್ಯ ಕುತ್ತಾರು ಮದಕ ನಿವಾಸಿ ಭುಜಂಗ ರೈ (74) ಇವರು ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು. ಮೂಲತ: ಕಾಸರಗೋಡು ನಿವಾಸಿಯಾಗಿರುವ ಇವರು ಕುತ್ತಾರು ಮದಕಕ್ಕೆ 30 ವರ್ಷಗಳ ಹಿಂದೆ ಬಂದಿದ್ದರು. ರಿಕ್ಷಾ ಚಾಲಕರಾಗಿ ವೃತ್ತಿ ನಿರ್ವಹಿಸುತ್ತಿದ್ದವರು. ಸಿಪಿಎಂ ಪಕ್ಷದ ಚಟುವಟಿಕೆಗಳು ಹಾಗೂ ಸಾಮಾಜಿಕ ಸೇವೆಯಲ್ಲಿ ಮುಂಚೂಣಿಯಲ್ಲಿದ್ದರು. ಯಕ್ಷಗಾನ ಕಲಾವಿದರೂ ಆಗಿದ್ದ ಇವರು ಆಂಗ್ಲ ಭಾಷೆಯಲ್ಲಿ

ಮರವಂತೆ ತ್ರಾಸಿ ಬೀಚ್‍ನಲ್ಲಿ ಗದಗ ಮೂಲದ ಯುವಕ ಸಮುದ್ರಪಾಲು

ಬೈಂದೂರು: ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ ತ್ರಾಸಿ ಮರವಂತೆ ಬೀಚ್‍ನಲ್ಲಿ ಮಧ್ಯಾಹ್ನದ ವೇಳೆ ಗದಗ ಮೂಲದ ಮೂವರು ಯುವಕರು ಈಜಲು ಹೋಗಿದ್ದು ಈ ಪೈಕಿ ಗದಗ ಜಿಲ್ಲೆಯ ಮುಂಡ್ರಂಗಿ ತಾಲೂಕು ಮೇವಂಡಿ ಗ್ರಾಮದ ಪೀರ್ ನದಾಫ್ ನೀರುಪಾಲಾಗಿದ್ದಾರೆ. ಮಧ್ಯಾಹ್ನದ ವೇಳೆ ಸಮುದ್ರದ ನೀರಿಗೆ ಈಜಲು ಇಳಿದಿದ್ದು ಮೂವರು ಅಲೆಯ ರಭಸಕ್ಕೆ ಓರ್ವ ಯುವಕ ಕೊಚ್ಚಿಕೊಂಡು ಹೋಗಿದ್ದಾರೆ. ಸ್ಥಳೀಯ ಆಂಬುಲೆನ್ಸ್ ಡೈವರ್ ಸಮಾಜಸೇವಕ ಇಬ್ರಾಹಿಂ ಗಂಗೊಳ್ಳಿ

ಐಕಳ ಹರೀಶ್ ಶೆಟ್ಟಿ ಮನೆಯಲ್ಲಿ ಕಳವು ಪ್ರಕರಣ : ಇನ್ನೋರ್ವ ಆರೋಪಿಯ ಸೆರೆ

ಮಂಗಳೂರು :ನಗರದ ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಐಕಳದಲ್ಲಿ ನಡೆದ ಮನೆ ಕಳ್ಳತನ ಪ್ರಕರಣದಲ್ಲಿ ಭಾಗಿಯಾದ ಇನ್ನೋರ್ವ ಆರೋಪಿಯನ್ನು ಮಂಗಳೂರು ಸಿಸಿಬಿ ಪೊಲೀಸರು ದಸ್ತಗಿರಿ ಮಾಡಿರುತ್ತಾರೆ. ದಿನಾಂಕ: 15-01-2023 ರಂದು ಸಂಜೆ 18-30 ಗಂಟೆಯಿಂದ ದಿನಾಂಕ: 16-01-2023 ರಂದು ಬೆಳಿಗ್ಗೆ 09:00 ಗಂಟೆಯ ಮಧ್ಯಾವಧಿಯಲ್ಲಿ ಮಂಗಳೂರು ತಾಲೂಕು ತಾಳಿಪ್ಪಾಡಿ ಗ್ರಾಮದ ಗುತ್ತಕಾಡು ಎಂಬಲ್ಲಿರುವ ಐಕಳ ಹರೀಶ್ ಶೆಟ್ಟಿ ಎಂಬವರ ಚಂದ್ರಿಕಾ ಎಂಬ ಹೆಸರಿನ ಮನೆಯ ಎದುರಿನ ಬಾಗಿಲಿನ

ಸುಂಕದಕಟ್ಟೆ : ಕಾರ್ಪೊರೇಟರ್ ವಿರುದ್ಧ ಕಠಿಣ ಕ್ರಮಕೈಗೊಳ್ಳಲು DYFI ಒತ್ತಾಯ

ಉರ್ವಸ್ಟೋರ್ ಸುಂಕದಕಟ್ಟೆಯ ನಾಗರಿಕರು ಕುಡಿಯುವ ನೀರಿನ ಸಮಸ್ಯೆಯನ್ನು ಧೀರ್ಘ ಕಾಲದಿಂದ ಅನುಭವಿಸುತ್ತಿದ್ದು, ಅದನ್ನು ಪರಿಹರಿಸಬೇಕಾದ ಸ್ಥಳೀಯ ಕಾರ್ಪೊರೇಟರ್ ತನ್ನ ಜವಾಬ್ದಾರಿಯನ್ನು ಮರೆತು ನಾಗರಿಕರ ಮೇಲೆಯೇ ಎಗರಾಡಿ ಅಸಂಬದ್ಧ ಮಾತುಗಳನ್ನಾಡಿದ್ದು,ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯ ನಾಗರಿಕರು DYFI ನೇತೃತ್ವದಲ್ಲಿ ಮನಪಾ ಮೇಯರ್ ಆಯುಕ್ತರಿಗೆ ಮನವಿ ಸಲ್ಲಿಸಿದರು. ಉರ್ವಸ್ಟೋರ್ ಸುಂಕದಕಟ್ಟೆ ಪ್ರದೇಶದಲ್ಲಿ ತಲೆದೋರಿದ ಕುಡಿಯುವ ನೀರಿನ ಸಮಸ್ಯೆ

ಕಟಪಾಡಿ ಕೊಲೆ ಪ್ರಕರಣ ಆರೋಪಿ ಸೆರೆ

ಕಟಪಾಡಿಯಲ್ಲಿ ನಡೆದ ಕೂಲಿ ಕಾರ್ಮಿಕನ ಬಲಿ ಪಡೆದ ವ್ಯಕ್ತಿಯನ್ನು ಕಾಪು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿ ಒರಿಸ್ಸಾ ಮೂಲದ ಆಕನ್. ಈತ ಹಾಗೂ ಗಣೇಶ್ ನಡುವೆ ಜಗಳ ನಡೆದು ಕಬ್ಬಿಣದ ಸಲಾಖೆಯಲ್ಲಿ ತಲೆ ಹೊಡೆದು ಕೊಲೆ ನಡೆಸಿ ಪರಾರಿಯಾಗಿದ್ದ ಆಕನ್ ನನ್ನು ರಾತ್ರಿ ಉಡುಪಿ ಬಸ್ ನಿಲ್ದಾಣದ ಬಳಿ ಕಾಪು ಪೊಲೀಸರು ಬಂಧಿಸಿದ್ದರು.

ಪುತ್ತೂರು : ಮಧುಮೇಹ ನಿಯಂತ್ರಣಕ್ಕಾಗಿ ಔಷಧಿಯ ಹಣ್ಣುಗಳ ಬೆಳೆ – ಪ್ರಫುಲ್ಲಾ ರೈ ಅವರ ಟಾರೇಸ್ ತೋಟವಿದು

ಸಾಕಷ್ಟು ಕೃಷಿ ಜಾಗವಿದ್ದರೂ ಕೃಷಿಯಲ್ಲಿ ತೊಡಗಿಕೊಳ್ಳಲು ಹಿಂದೇಟು ಹಾಕುವವರೇ ಹೆಚ್ಚು. ಆದರೆ ನಗರದ ಮಧ್ಯದಲ್ಲೇ ಇರುವ ಮಹಿಳೆ ಕೃಷಿ ಭೂಮಿ ಇಲ್ಲದಿದ್ದರೂ ತನ್ನ ಮನೆಯ ಟಾರೇಸ್ ನಲ್ಲಿ ಉತ್ತಮ ಕೃಷಿ ಬೆಳೆಸಿ ಸೈ ಎನಿಸಿಕೊಂಡಿದ್ದಾರೆ. ಅದರಲ್ಲೂ ಮಧುಮೇಹ ನಿಯಂತ್ರಣಕ್ಕೆ ಪರಿಣಾಮಕಾರಿಯಾದ ಔಷಧಿಯಂತೆ ಕೆಲಸ ಮಾಡುವ ಹಣ್ಣುಗಳ ಗಿಡಗಳ ಬೆಳೆಗೇ ಈಕೆ ಹೆಚ್ಚಿನ ಮಹತ್ವ ನೀಡುತ್ತಿದ್ದಾರೆ. ನೆಲದಲ್ಲೇ ಬೆಳೆಯಲು ಹರ ಸಾಹಸ ಪಡಬೇಕಾದ ಹಣ್ಣು ಮತ್ತು ತರಕಾರಿ ಬೆಳೆಗಳನ್ನು ಬೆಳೆಯುವ

ಕೂಳೂರು ರಾ.ಹೆ. ಅವ್ಯವಸ್ಥೆ ಖಂಡಿಸಿ ನಾಗರಿಕ ಹಿತರಕ್ಷಣಾ ಸಮಿತಿಯಿಂದ ಪ್ರತಿಭಟನೆ

ನಾಗರಿಕ ಹಿತರಕ್ಷಣಾ ಸಮಿತಿ ಕೂಳೂರು ಇದರ ವತಿಯಿಂದ ಹೊಂಡ ಗುಂಡಿ ತಕ್ಷಣ ಮುಚ್ಚಿ ಹಾಗೂ 2 ವರ್ಷದಿಂದ ಅರ್ಧಕ್ಕೆ ನಿಂತಿರುವ ಕೂಳೂರು ಹೊಸ ಸೇತುವೆ ಕಾಮಗಾರಿ ಶೀಘ್ರದಲ್ಲಿ ಪೂರ್ಣಗೊಳಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು. ಈ ಬಗ್ಗೆ ನಾಗರೀಕ ಹಿತರಕ್ಷಣಾ ಸಮಿತಿಯ ಕೂಳೂರಿನ ಅಧ್ಯಕ್ಷರಾದ ವಿಜಿ ಗುರುಚಂದ್ರ ಹೆಗ್ಡೆ ಅವರು ಮಾತನಾಡಿ, ಎನ್‍ಹೆಚ್ 66ಲ್ಲಿ ಅವೈಜ್ಞಾನಿ ಕಾಮಗಾರಿ ಹಾಗೂ ಕೂಳೂರು ಹೊಸ ಸೇತುವೆ ಕಾಮಗಾರಿಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.

ಉದ್ಯಾವರ : ರೈಲ್ವೇ ಕ್ರಾಸಿಂಗ್ ಗೇಟ್‍ನಿಂದ ಪ್ರಯಾಣಿಕರಿಗೆ ತೊಂದರೆ

ಮಂಜೇಶ್ವರ : ಮಂಜೇಶ್ವರ ರೈಲ್ವೇ ನಿಲ್ದಾಣಕ್ಕೆ ಸಮೀಪವಿರುವ ಉದ್ಯಾವರ ರೈಲ್ವೇ ಕ್ರಾಸಿಂಗ್ ಗೇಟ್ ಮೂಲಕ ಹಾದು ಹೋಗುವ ಪ್ರಯಾಣಿಕರಿಗೆ ನಿರಂತರ ಅಡಚಣೆಯಾಗಿದೆ. ಶಾಲಾ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು, ಕಚೇರಿಗೆ ಹೋಗುವವರು ಹಾಗೂ ಜನ ಸಾಮಾನ್ಯರು ಹೆಚ್ಚು ತೊಂದರೆ ಅನುಭವಿಸುತ್ತಿದ್ದಾರೆ. ಯಾವುದೇ ಮುನ್ಸೂಚನೆ ಕೂಡ ನೀಡದೆ ರೈಲ್ವೇ ಗೇಟ್‍ನ್ನು ಇಲ್ಲಿ ಬಂದ್ ಮಾಡುತ್ತಾರೆ ಎಂದು ಸ್ಥಳೀಯರು ಆರೋಪಿಸುತಿದ್ದಾರೆ. ಮಂಜೇಶ್ವರ ರಥಬೀದಿ ಅಥವಾ ಹೊಸಂಗಡಿ ಭಾಗದಿಂದ

ಪಡುಬಿದ್ರಿ : ಗೃಹಜ್ಯೋತಿ ಹೆಸರಲ್ಲಿ ಹಣ ಪಡೆಯುತ್ತಿದ್ದ ಸೈಬರ್ ಮಾಲಕ

ಗೃಹಜ್ಯೋತಿ ಯೋಜನೆಯ ನೋಂದಾಣಿಗೆ ಪಡುಬಿದ್ರಿ ಸೈಬರ್ ಒಂದರಲ್ಲಿ 100 ರೂಪಾಯಿ ಪಡೆಯುತ್ತಿರುವುದನ್ನು ಗ್ರಾಮಸ್ಥರು ವಿರೋಧಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರ ವಿರುದ್ಧ ಗ್ರಾ.ಪಂ.ಸದಸ್ಯರ ದೂರಿನನ್ವಯ ಕಾಪು ತಹಶಿಲ್ದಾರ್ ಅಂಥಹ ಸೈಬರ್‍ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ಈ ಬಗ್ಗೆ ಮಾತನಾಡಿದ ಪಡುಬಿದ್ರಿ ಗ್ರಾ.ಪಂ. ಸದಸ್ಯೆ ಜ್ಯೋತಿ ಮೆನನ್ ಅವರು, “ಗೃಹಜ್ಯೋತಿ” ಯೋಜನೆಯನ್ನು ದುರುಪಯೋಗ ಮಾಡಿಕೊಂಡ