Home Archive by category Fresh News (Page 200)

ವೆಸ್ಟ್ ಕೋಸ್ಟ್ ಶೋ ರೂಮ್ ನಲ್ಲಿ ದ್ವಿಚಕ್ರ ವಾಹನ ಸವಾರರ ಕನಸು ನನಸಾಗಿಸುವ ಅವಕಾಶ

ಮಂಗಳೂರಿನ ವೆಸ್ಟ್ ಕೋಸ್ಟ್ ಶೋರೂಮ್ ನಲ್ಲಿ ಅಮೇರಿಕಾ ಮೂಲದ ಜನಪ್ರಿಯ ದ್ವಿಚಕ್ರ ವಾಹನ ತಯಾರಾಕರದ ಹಾರ್ಲೆ ಡೇವಿಡ್ಸನ್ ನ ಹೊಸ ಹಾರ್ಲೆ ಡೇವಿಡ್ಸನ್ *440, ಹಾರ್ಲೆ ಎವಿಡ್ ಮತ್ತು ಎಸ್ ಡೇವಿಡ್ಸನ್ ಬಿಡುಗಡೆಯಾಗಿದ್ದು ಭಾರತೀಯ ಮಾರುಕಟ್ಟೆಗೆ ಹೊಸ ಸಂಚಲನ ಸೃಷ್ಟಿಸಿದೆ. ಈಗಾಗಲೇ ಉತ್ತಮ ಸ್ಪಂದನೆ ಸಿಗುತ್ತಿದ್ದೂ,ಆಗಸ್ಟ್ 15 ರ ಬಳಿಕ ಮಂಗಳೂರು ಸೇರಿದಂತೆ ದಕ್ಷಿಣ

ಪೊಲೀಸರಿಗೆ ಬಂದೂಕು ತೋರಿಸಿ ಆಕ್ರಮಣಕ್ಕೆ ಯತ್ನಿಸಿದ
ಆರೋಪಿಗಳು

ಪೊಲೀಸರಿಗೆ ಬಂದೂಕು ತೋರಿಸಿ ಆಕ್ರಮಣ ಗೈಯಲು ಯತ್ನಿಸಿದ ಹಾಗೂ ಲಾರಿಯೊಂದನ್ನು ಅಪಹರಣಗೈದ ಪ್ರಕರಣದ ಇಬ್ಬರು ಆರೋಪಿಗಳನ್ನು ಮಂಜೇಶ್ವರ ಹಾಗೂ ಕುಂಬಳೆ ಪೊಲೀಸರು ಬಂಧಿಸಿದ್ದಾರೆ. ಮೀಯಪದವು ನಿವಾಸಿಗಳಾದ ರಹಿಂ ಹಾಗೂ ಲತೀಫ್ ಬಂಧಿತ ಆರೋಪಿಗಳು. ರಹೀಂ ಎಂಬಾತನನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ. ಅದೇ ರೀತಿ ಲತೀಫ್ ಎಂಬಾತನನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ. ಇವರ ವಿರುದ್ಧ ಕೇರಳ ಹಾಗೂ ಕರ್ನಾಟಕದ ವಿವಿಧ ಪೊಲೀಸ್ ಠಾಣೆಗಳಲ್ಲಿ 14 ಪ್ರಕರಣಗಳು ಇರುವುದಾಗಿ

ಚಪ್ಪಲಿ ಕಳೆದುಕೊಂಡ ಯುವಕನಿಂದ 112ಕ್ಕೆ ಕರೆ

ನಗರದ ಸಭಾಂಗಣದಲ್ಲಿ ಯುವಕನೊಬ್ಬ ಹೊರಗೆ ಬಿಟ್ಟಿದ್ದ ಚಪ್ಪಲಿ ನಾಪತ್ತೆಯಾಗಿದ್ದು ಇದಕ್ಕಾಗಿ 112 ನಂಬರಿಗೆ ಕರೆ ಮಾಡಿ ಪೊಲೀಸರನ್ನು ಕರೆಸಿಯಿಸಿದ ಘಟನೆ ನಡೆದಿದೆ. ಶರವು ದೇವಸ್ಥಾನದ ಸಮೀಪದ ಸಭಾಂಗಣಕ್ಕೆ ಆಗಮಿಸಿದ್ದ ಯುವಕ ಚಪ್ಪಲಿಯನ್ನು ಹೊರಗೆ ಬಿಟ್ಟಿದ್ದು ವಾಪಾಸ್ ಬಂದಾಗ ಚಪ್ಪಲಿ ಇಲ್ಲದಿರುವುದನ್ನು ಕಂಡು 112 ನಂಬರಿಗೆ ಕರೆ ಮಾಡಿ ದೂರು ದಾಖಲಿಸಿದ್ದಾನೆ. ಈ ದೂರನ್ನು ಪರಿಶೀಲಿಸುವಂತೆ ಬಂದರು ಠಾಣೆಗೆ ಸಂದೇಶ ಬಂದಿತ್ತು. ಇದನ್ನು ನೋಡಿ ಪೊಲೀಸರೂ ಸುಸ್ತು

ಬೈಕ್ ಸ್ಕಿಡ್ ಆಗಿ ಬಿದ್ದು ಇಂಜಿನಿಯರಿಂಗ್ ವಿದ್ಯಾರ್ಥಿ ಸಾವು

ಮಂಗಳೂರಿನ ಅಡ್ಯಾರ್ ಬಳಿಯ ಸಹ್ಯಾದ್ರಿ ಕಾಲೇಜು ಮುಂಭಾಗದಲ್ಲಿ ಬೈಕ್ ಸ್ಕಿಡ್ ಆಗಿ ಬಿದ್ದು ಸವಾರ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.ವಳಚ್ಚಿಲ್ ಶ್ರೀನಿವಾಸ್ ಇಂಜಿನಿಯರಿಂಗ್ ಕಾಲೇಜ್ ವಿದ್ಯಾರ್ಥಿ, ಕೇರಳ ಮೂಲದ ಮಹಮ್ಮದ್ ನಶತ್ (21) ಮೃತ ವಿದ್ಯಾರ್ಥಿ.ಯುವಕ ಪಡೀಲ್ ಕಡೆಯಿಂದ ವಳಚ್ಚಿಲ್ ಕಾಲೇಜು ಕಡೆಗೆ ಬೈಕಿನಲ್ಲಿ ತೆರಳುತ್ತಿದ್ದಾಗ, ಸ್ಕಿಡ್ ಆಗಿದ್ದು ಡಿವೈಡರ್ ಬಡಿದು ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ತೀವ್ರ ಗಾಯಗೊಂಡು

ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಬೆಳ್ಳಿ ಹಬ್ಬ ಸಂಭ್ರಮದ ಉದ್ಘಾಟನೆ

ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಬೆಳ್ಳಿಹಬ್ಬ ಆಚರಣೆಯ ಸಂಭ್ರಮಕ್ಕೆ ಸುಳ್ಯ ಕೇರ್ಪಳದ ಭಂಟರ ಭವನದಲ್ಲಿ ಅದ್ದೂರಿಯಾಗಿ ಚಾಲನೆ ಸಿಕ್ಕಿತ್ತು. ಸುಳ್ಯದ ಶಾಸಕಿ ಭಾಗೀರಥಿ ಮುರುಳ್ಯ ಅವರು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು.ಬಳಿಕ ಮಾತನಾಡಿ ಅವರು, ಸುಳ್ಯದ ಕಾರ್ಯನಿರತ ಪತ್ರಕರ್ತರ ಸಂಘ ಬೆಳ್ಳಿ ಹಬ್ಬದ ಸಂಭ್ರಮದಲ್ಲಿದೆ. ಈ ಕಾರ್ಯಕ್ರಮ ಯಶಸ್ವಿಯಾಗಲಿ. ಮುಂದಿನ ದಿನಗಳಲ್ಲಿ ಇನ್ನಷ್ಟು ಕಾರ್ಯಕ್ರಮಗಳು ಮೂಡಿ ಬರಲಿ ಎಂದರು. ಆನಂತರ ಜಿಲ್ಲಾ

ಡ್ರಗ್ಸ್ ಜಾಗೃತಿಗಾಗಿ ಎಲ್ಲಾ ಇಲಾಖೆಗಳ ಸಹಯೋಗ ಅಗತ್ಯ : ಪುತ್ತೂರು ಎ.ಸಿ. ಗಿರೀಶ್ ನಂದನ್ ಹೇಳಿಕೆ

ಪುತ್ತೂರು: ಡ್ರಗ್ಸ್ ಚಟಗಳು ಯುವ ಸಮುದಾಯವನ್ನು ಹೆಚ್ಚಾಗಿ ಕಾಡುತ್ತಿದೆ. ಇಂತಹ ಪ್ರಕರಣಗಳನ್ನು ತಡೆಯುವ ನಿಟ್ಟಿನಲ್ಲಿ ಶಾಲಾ ಕಾಲೇಜುಗಳಲ್ಲಿ ನಿರಂತರವಾಗಿ ಜಾಗೃತಿ ಕಾರ್ಯಕ್ರಮ ನಡೆಯಬೇಕು. ಡ್ರಗ್ಸ್ ಕುರಿತ ಜನ ಜಾಗೃತಿಗಾಗಿ ಎಲ್ಲಾ ಇಲಾಖೆಗಳ ಸಹಯೋಗ ಅಗತ್ಯವಾಗಿದೆ ಎಂದು ಪುತ್ತೂರು ಉಪವಿಭಾಗದ ಸಹಾಯಕ ಕಮೀಷನರ್ ಗಿರೀಶ್ ನಂದನ್ ತಿಳಿಸಿದರು. ಅವರು ಮಂಗಳವಾರ ಪುತ್ತೂರು ತಾಲೂಕು ಆಡಳಿತ ಸೌಧದ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ನಡೆದ ಮಾದಕ ವಸ್ತುಗಳ ದುರುಪಯೋಗ

ಮುನ್ನೂರು ಗ್ರಾ.ಪಂ ಸದಸ್ಯ ಭುಜಂಗ ರೈ ನಿಧನ

ಉಳ್ಳಾಲ: ಸಿಪಿಎಂ ನೇತಾರ, ಮುನ್ನೂರು ಗ್ರಾ.ಪಂ. ಸದಸ್ಯ ಕುತ್ತಾರು ಮದಕ ನಿವಾಸಿ ಭುಜಂಗ ರೈ (74) ಇವರು ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು. ಮೂಲತ: ಕಾಸರಗೋಡು ನಿವಾಸಿಯಾಗಿರುವ ಇವರು ಕುತ್ತಾರು ಮದಕಕ್ಕೆ 30 ವರ್ಷಗಳ ಹಿಂದೆ ಬಂದಿದ್ದರು. ರಿಕ್ಷಾ ಚಾಲಕರಾಗಿ ವೃತ್ತಿ ನಿರ್ವಹಿಸುತ್ತಿದ್ದವರು. ಸಿಪಿಎಂ ಪಕ್ಷದ ಚಟುವಟಿಕೆಗಳು ಹಾಗೂ ಸಾಮಾಜಿಕ ಸೇವೆಯಲ್ಲಿ ಮುಂಚೂಣಿಯಲ್ಲಿದ್ದರು. ಯಕ್ಷಗಾನ ಕಲಾವಿದರೂ ಆಗಿದ್ದ ಇವರು ಆಂಗ್ಲ ಭಾಷೆಯಲ್ಲಿ

ಮರವಂತೆ ತ್ರಾಸಿ ಬೀಚ್‍ನಲ್ಲಿ ಗದಗ ಮೂಲದ ಯುವಕ ಸಮುದ್ರಪಾಲು

ಬೈಂದೂರು: ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ ತ್ರಾಸಿ ಮರವಂತೆ ಬೀಚ್‍ನಲ್ಲಿ ಮಧ್ಯಾಹ್ನದ ವೇಳೆ ಗದಗ ಮೂಲದ ಮೂವರು ಯುವಕರು ಈಜಲು ಹೋಗಿದ್ದು ಈ ಪೈಕಿ ಗದಗ ಜಿಲ್ಲೆಯ ಮುಂಡ್ರಂಗಿ ತಾಲೂಕು ಮೇವಂಡಿ ಗ್ರಾಮದ ಪೀರ್ ನದಾಫ್ ನೀರುಪಾಲಾಗಿದ್ದಾರೆ. ಮಧ್ಯಾಹ್ನದ ವೇಳೆ ಸಮುದ್ರದ ನೀರಿಗೆ ಈಜಲು ಇಳಿದಿದ್ದು ಮೂವರು ಅಲೆಯ ರಭಸಕ್ಕೆ ಓರ್ವ ಯುವಕ ಕೊಚ್ಚಿಕೊಂಡು ಹೋಗಿದ್ದಾರೆ. ಸ್ಥಳೀಯ ಆಂಬುಲೆನ್ಸ್ ಡೈವರ್ ಸಮಾಜಸೇವಕ ಇಬ್ರಾಹಿಂ ಗಂಗೊಳ್ಳಿ

ಐಕಳ ಹರೀಶ್ ಶೆಟ್ಟಿ ಮನೆಯಲ್ಲಿ ಕಳವು ಪ್ರಕರಣ : ಇನ್ನೋರ್ವ ಆರೋಪಿಯ ಸೆರೆ

ಮಂಗಳೂರು :ನಗರದ ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಐಕಳದಲ್ಲಿ ನಡೆದ ಮನೆ ಕಳ್ಳತನ ಪ್ರಕರಣದಲ್ಲಿ ಭಾಗಿಯಾದ ಇನ್ನೋರ್ವ ಆರೋಪಿಯನ್ನು ಮಂಗಳೂರು ಸಿಸಿಬಿ ಪೊಲೀಸರು ದಸ್ತಗಿರಿ ಮಾಡಿರುತ್ತಾರೆ. ದಿನಾಂಕ: 15-01-2023 ರಂದು ಸಂಜೆ 18-30 ಗಂಟೆಯಿಂದ ದಿನಾಂಕ: 16-01-2023 ರಂದು ಬೆಳಿಗ್ಗೆ 09:00 ಗಂಟೆಯ ಮಧ್ಯಾವಧಿಯಲ್ಲಿ ಮಂಗಳೂರು ತಾಲೂಕು ತಾಳಿಪ್ಪಾಡಿ ಗ್ರಾಮದ ಗುತ್ತಕಾಡು ಎಂಬಲ್ಲಿರುವ ಐಕಳ ಹರೀಶ್ ಶೆಟ್ಟಿ ಎಂಬವರ ಚಂದ್ರಿಕಾ ಎಂಬ ಹೆಸರಿನ ಮನೆಯ ಎದುರಿನ ಬಾಗಿಲಿನ

ಸುಂಕದಕಟ್ಟೆ : ಕಾರ್ಪೊರೇಟರ್ ವಿರುದ್ಧ ಕಠಿಣ ಕ್ರಮಕೈಗೊಳ್ಳಲು DYFI ಒತ್ತಾಯ

ಉರ್ವಸ್ಟೋರ್ ಸುಂಕದಕಟ್ಟೆಯ ನಾಗರಿಕರು ಕುಡಿಯುವ ನೀರಿನ ಸಮಸ್ಯೆಯನ್ನು ಧೀರ್ಘ ಕಾಲದಿಂದ ಅನುಭವಿಸುತ್ತಿದ್ದು, ಅದನ್ನು ಪರಿಹರಿಸಬೇಕಾದ ಸ್ಥಳೀಯ ಕಾರ್ಪೊರೇಟರ್ ತನ್ನ ಜವಾಬ್ದಾರಿಯನ್ನು ಮರೆತು ನಾಗರಿಕರ ಮೇಲೆಯೇ ಎಗರಾಡಿ ಅಸಂಬದ್ಧ ಮಾತುಗಳನ್ನಾಡಿದ್ದು,ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯ ನಾಗರಿಕರು DYFI ನೇತೃತ್ವದಲ್ಲಿ ಮನಪಾ ಮೇಯರ್ ಆಯುಕ್ತರಿಗೆ ಮನವಿ ಸಲ್ಲಿಸಿದರು. ಉರ್ವಸ್ಟೋರ್ ಸುಂಕದಕಟ್ಟೆ ಪ್ರದೇಶದಲ್ಲಿ ತಲೆದೋರಿದ ಕುಡಿಯುವ ನೀರಿನ ಸಮಸ್ಯೆ