Home Archive by category Fresh News (Page 203)

ಉಳ್ಳಾಲ : ಸಿಟಿ ಬಸ್ ಚಾಲಕನ ಬೇಜವಾಬ್ದಾರಿ ವರ್ತನೆ ವಿರುದ್ಧ ಆಕ್ರೋಶ

ಉಳ್ಳಾಲ : ಸ್ಟೇಟ್ ಬ್ಯಾಂಕ್ ತಲಪಾಡಿ ನಡುವೆ ಚಲಿಸುವ ಸಿಟಿ ಬಸ್ ಚಾಲಕ ಚಾಲನೆ ವೇಳೆ ಮೊಬೈಲ್ ಉಪಯೋಗಿಸುತ್ತಿರುವುದನ್ನು ಪ್ರಯಾಣಿಕರೊಬ್ಬರು ಸೆರೆಹಿಡಿದಿರುವುದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೀಡಿಯೋ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕ ವಲಯದಿಂದ ಚಾಲಕನ ವಿರುದ್ಧ ಕ್ರಮಕ್ಕಾಗಿ ಆಗ್ರಹ ವ್ಯಕ್ತವಾಗಿದೆ. ಖಾಸಗಿ ಬಸ್ ಚಾಲಕ ನಿರ್ಲಕ್ಷ್ಯರೀತಿಯಲ್ಲಿ

ಜಲಪಾತ ವೀಕ್ಷಣೆಗೆ ತೆರಳಿದ್ದ ಯುವಕ ನೀರು ಪಾಲು

ಯುವಕನೊಬ್ಬ ಜಲಪಾತದ ನೀರಿಗೆ ಕಾಲುಜಾರಿ ಬಿದ್ದು ನೀರುಪಾಲಾದ ಘಟನೆ ,ಕೊಲ್ಲೂರು ಬಳಿಯಿರುವ ಅರಶಿನಗುಂಡಿ ಜಲಪಾತದಲ್ಲಿ ಸಂಭವಿಸಿದೆ. ಭದ್ರಾವತಿ ಮೂಲದ ಶರತ್ ಕುಮಾರ್ (23) ಮೃತಪಟ್ಟ ಯುವಕ. ಈ ಯುವಕ ಬೀಳುತ್ತಿರುವ ದೃಶ್ಯ ಮತ್ತೋರ್ವ ಯುವಕನ ಮೊಬೈಲ್ ನಲ್ಲಿ ಸೆರೆಯಾಗಿದೆ. ಕೊಲ್ಲೂರಿಗೆ ಕಾರಿನಲ್ಲಿ ಬಂದಿದ್ದ ಯುವಕ, ಜಲಪಾತ ವೀಕ್ಷಣೆಗೆಂದು ತೆರಳಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಬಂಡೆಕಲ್ಲೊಂದರ ಮೇಲೆ ಯುವಕ ನಿಂತಿದ್ದಾಗ ,ಅಕಸ್ಮಾತ್ತಾಗಿ ಕಾಲುಜಾರಿ ಬಿದ್ದಿದ್ದಾನೆ.

ಬಂಟ್ವಾಳ ತಾಲೂಕಿನ ವಿವಿಧೆಡೆ ಪ್ರವಾಹ ಭೀತಿ: ನದಿ ತೀರದ ತಗ್ಗು ಪ್ರದೇಶಗಳು ಜಲಾವೃತ

ಬಂಟ್ವಾಳ ತಾಲೂಕು ವ್ಯಾಪ್ತಿಯಲ್ಲಿ ಭಾರೀ ಮಳೆಯಾಗುತ್ತಿದ್ದು ನದಿ ತೀರದ ತಗ್ಗು ಪ್ರದೇಶಗಳು ಜಲಾವೃತಗೊಂಡಿದೆ. ಪಾಣೆಮಂಗಳೂರು ಸಮೀಪದ ಆಲಡ್ಕ ಪರಿಸರದಲ್ಲಿ ಮನೆಗೆ ನೀರು ನುಗ್ಗಿದ್ದು ಮನೆ ಮಂದಿ ಹಾಗೂ ಸೊತ್ತುಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗುತ್ತಿದೆ. ಪೊಲೀಸರು ಈ ಮನೆಗಳಿಗೆ ತೆರಳಿ ಸ್ಥಳಾಂತರಗೊಳ್ಳುವಂತೆ ಸೂಚಿಸಿದರು. ನದಿಯಲ್ಲಿ ನೀರಿನ ಮಟ್ಟ ಕ್ಷಣದಿಂದ ಕ್ಷಣಕ್ಕೆ ಏರಿಕೆಯಾಗುತ್ತಿದ್ದು ಜನತೆಯಲ್ಲಿ ಆತಂಕ ಮೂಡಿಸಿದೆ.

ಮಣಿಪುರ ಹಿಂಸಾಚಾರ ಖಂಡಿಸಿ ಆಲಂಗಾರಿನಲ್ಲಿ ಪ್ರತಿಭಟನೆ 

ಮೂಡುಬಿದಿರೆ: ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ಖಂಡಿಸಿ ಅಲಂಗಾರು ಚಚ್ ೯ ಬಳಿ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ಮನವಿ ಸಲ್ಲಿಸಲಾಯಿತು. ಅಲಂಗಾರು ಚರ್ಚಿನ ಧರ್ಮಗುರು ರೇ.ಫಾ. ವಾಲ್ಟಾರ್ ಡಿಸೋಜಾ , ಸರ್ವ ಅಯೋಗದ ಸಂಚಾಲಕ ರಾಜೇಶ್ ಕಡಲಕೆರೆ , ಉಪಾಧ್ಯಕ್ಷ ಎಡ್ವಾರ್ಡ್ ಸೆರವೋ , ಕಾರ್ಯದರ್ಶಿ ಲಾರೆನ್ಸ್ , ಕಥೋಲಿಕ್ ಸಭಾ ಮುಖಂಡ ಅಲ್ವಿನ್ ಡಿಸೋಜಾ , ಜೇಸಿಂತ ಅರನ್ಹ , ಮೇಬಲ್ , ಅನಿಶ್ , ರಾಜ ಡಿಸೋಜಾ , ವಲೇರಿಯನ್ ಸಿಕ್ವೆರಾ , ಐವನ್ […]

ಮಣಿಪುರ ಹಿಂಸಾಚಾರ: ಕೆಥೋಲಿಕ್ ಸಭಾದಿಂದ ಮೌನ ಪ್ರತಿಭಟನೆ

ಕೆಥೋಲಿಕ್ ಸಭಾ ಮಂಗಳೂರು ಪ್ರದೇಶ ಮಂಗಳೂರು ಧರ್ಮಕ್ಷೇತ್ರ ವತಿಯಿಂದ ಮಣಿಪುರ ರಾಜ್ಯದಲ್ಲಿ ಭುಗಿಲೆದ್ದ ಹಿಂಸಾಚಾರ ಖಂಡಿಸಿ ಕೆಥೋಲಿಕ್ ಸಭಾ ಖಂಡನೆ ವ್ಯಕ್ತಪಡಿಸಿದರು.   124 ಚರ್ಚ್ ಗಳಲ್ಲಿಯೂ ಮೌನ ಪ್ರತಿಭಟನೆ ನಡೆಸಿದರು. ಸೈಂಟ್ ಪೌಲ್ ಚರ್ಚ್ ದೇಲಂತಬೆಟ್ಟು, ಅವರ್ ಲೇಡಿ ಆಫ್ ಫಾತಿಮಾ ಚರ್ಚ್ ಮತ್ತು ಮದರ್ ಆಫ್ ಗಾಡ್ ಚರ್ಚ್ ಮೊಗರ್ನಾಡು ಹಾಗೂ ವಿವಿಧ ಚರ್ಚ್ಗಳ ಮುಂಭಾಗದಲ್ಲಿ ಕ್ರೈಸ್ತ ಬಾಂಧವರು ಮೌನ ಪ್ರತಿಭಟನೆ ನಡೆಸಿದರು.  

ಕೊಣಾಜೆ ಗ್ರಾ.ಪಂ ಮಾಜಿ ಅಧ್ಯಕ್ಷ ದೇವಪ್ಪ ಗಟ್ಟಿ ನಿಧನ

ಉಳ್ಳಾಲ: ಕೊಣಾಜೆ ಗ್ರಾಮ ಪಂಚಾಯತ್‍ನ ಮಾಜಿ ಅಧ್ಯಕ್ಷ ಬೆಳ್ಮ ಕಟ್ಟಪುಣಿ ನಿವಾಸಿ ದೇವಪ್ಪ ಗಟ್ಟಿ (90) ಅಲ್ಪಕಾಲದ ಅಸೌಖ್ಯದಿಂದ ಜು.22ರಂದು ಶನಿವಾರ ನಿಧನ ಹೊಂದಿದರು. ಮೃತರು ಪತ್ನಿ, ಇಬ್ಬರು ಪುತ್ರಿಯರು, ಮೂವರು ಪುತ್ರರನ್ನು ಅಗಲಿದ್ದಾರೆ. ಸೋಮೇಶ್ವರ ಸೋಮನಾಥ ದೇವಸ್ಥಾನದ ಬೃಹ್ಮಕಲಶೋತ್ಸವ, ಸಮಿತಿ ಉಪಾಧ್ಯಕ್ಷರಾಗಿ, ಗಟ್ಟಿ ಸಮಾಜ ಶ್ರೀ ಸೋಮನಾಥ ಸೇವಾ ಸಮಿತಿ ಅಧ್ಯಕ್ಷರಾಗಿ, ಮುಲಾರ ಶ್ರೀ ಗೋಪಾಲಕೃಷ್ಣ ಭಜನಾ ಮಂದಿರದ ಅಧ್ಯಕ್ಷರಾಗಿ, ಗೌರವಾಧ್ಯಕ್ಷರಾಗಿ,

ಉಳ್ಳಾಲ : ಮಟ್ಕಾ ಅಡ್ಡೆಗೆ ದಾಳಿ: ಐವರ ಬಂಧನ 

ಉಳ್ಳಾಲ ಠಾಣಾ ವ್ಯಾಪ್ತಿಯ ತೊಕ್ಕೊಟ್ಟು ಓಳಪೇಟೆ ಬಳಿ ಖಾಸಗಿ ಜಾಗದಲ್ಲಿ ಮಟ್ಕಾ ಅಡ್ಡೆಗೆ ದಾಳಿ ನಡೆಸಿದ ಉಳ್ಳಾಲ ಠಾಣಾ ಪೊಲೀಸರು ಐವರನ್ನು ಬಂಧಿಸಿದ್ದಾರೆ. ಬಂಧಿತರನ್ನು ಲ್ಯಾನ್ಸಿ ವೇಗಸ್, ನವಾಝ್ , ಸತೀಶ್ ಗಟ್ಟಿ, ನಾಸೀರ್ ಮತ್ತು ಮಧು ಯಾನೆ ಮನು ಎಂದು ಗುರುತಿಸಲಾಗಿದೆ. ಬಂಧಿತರಿಂದ 7040ರೂ .ನಗದು, ಐದು ಮೊಬೈಲ್ ಹಾಗೂ ಜೂಜಾಟಕ್ಕೆ ಬಳಸಿದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಉಳ್ಳಾಲದಲ್ಲಿ ಮಟ್ಕಾ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಪೊಲೀಸ್ ಆಯುಕ್ತ

ಯಕ್ಷಸಂಭ್ರಮ: ರೆಂಜಾಳ ರಾಮಕೃಷ್ಣ ರಾವ್, ಪೆರುವಾಯಿ ನಾರಾಯಣ ಶೆಟ್ಟಿಗೆ ‘ಯಕ್ಷದೇವ’ ಪ್ರಶಸ್ತಿ  

ಮೂಡುಬಿದಿರೆ: ಬೆಳುವಾಯಿ ಶ್ರೀ ಯಕ್ಷದೇವ ಮಿತ್ರಕಲಾ ಮಂಡಳಿ ವತಿಯಿಂದ 26ನೇ ವರ್ಷದ ಯಕ್ಷಸಂಭ್ರಮ-2023ರ ಕಾಯಕ್ರಮ ಜುಲೈ 30 ರಂದು ಕನ್ನಡ ಭವನದಲ್ಲಿ ದಿನಪೂರ್ತಿ ನಡೆಯಲಿದೆ ಎಂದು ಯಕ್ಷದೇವ ಮಿತ್ರಕಲಾ ಮಂಡಳಿಯ ಸ್ಥಾಪಕ ಅಧ್ಯಕ್ಷ ಎಂ.ದೇವಾನಂದ ಭಟ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಕಾರ್ಯಕ್ರಮದಲ್ಲಿ ಹಿರಿಯ ಯಕ್ಷಗಾನ ವೇಷಧಾರಿಗಳಾದ ರೆಂಜಾಳ ರಾಮಕೃಷ್ಣ ರಾವ್ ಮತ್ತು ಪೆರುವಾಯಿ ನಾರಾಯಣ ಶೆಟ್ಟಿ ಅವರಿಗೆ ತಲಾ 10 ಸಾವಿರ ರೂ.ನಗದಿನೊಂದಿಗೆ ‘ಯಕ್ಷದೇವ’ ಪ್ರಶಸ್ತಿ

ಕರಾವಳಿಯಲ್ಲಿ ಭಾರೀ ಮಳೆ- ಕುಮಾರಧಾರ ಸ್ನಾನಘಟ್ಟ ಮುಳುಗಡೆ

ಸುಬ್ರಹ್ಮಣ್ಯ: ಸುಬ್ರಹ್ಮಣ್ಯ ಪರಿಸರದಲ್ಲಿ ಹಾಗೂ ಘಟ್ಟ ಪ್ರದೇಶದಲ್ಲಿ ಬಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಸುಬ್ರಹ್ಮಣ್ಯದ ಕುಮಾರಧಾರ ನದಿ ತುಂಬಿ ಹರಿಯುತ್ತಿದ್ದು, ಪ್ರವಾಹದ ನೀರು ಹೆದ್ದಾರಿಗೆ ನುಗ್ಗಿ ಸಂಚಾರಕ್ಕೆ ಅಡಚನೆ ಉಂಟಾಯಿತು.      ಕುಮಾರಧಾರ ನದಿಯಲ್ಲಿ ಭಾರೀ ನೀರು ಹೆಚ್ಚಳದಿಂದ ಕುಮಾರಧಾರ ಸ್ನಾನಘಟ್ಟ ಸಂಪೂರ್ಣ ಮುಳುಗಡೆಯಾಗಿದೆ. ಇಲ್ಲಿನ ಲಗೇಜ್ ಕೊಠಡಿ, ಶೌಚಾಲಯ ಎಲ್ಲವೂ ಮುಳುಗಡೆಯಾಗಿದೆ.  ಮಂಜೇಶ್ವರ – ಸುಬ್ರಹ್ಮಣ್ಯ ರಾಜ್ಯ

ಉರ್ವಾ ಜಿಲ್ಲಾ ಡಾ. ಅಂಬೇಡ್ಕರ್ ಭವನದಲ್ಲಿ ಬ್ಯಾಂಕ್ ಆಫ್ ಬರೋಡಾದ 116ನೇ ಸಂಸ್ಥಾಪನಾ ದಿನಾಚರಣೆ

ಭಾರತದ ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ ಒಂದಾದ ಬ್ಯಾಂಕ್ ಆಫ್ ಬರೋಡಾದ 116ನೇ ಸಂಸ್ಥಾಪನಾ ದಿನದ ಕಾರ್ಯಕ್ರಮವು ಮಂಗಳೂರಿನ ಉರ್ವಾ ಜಿಲ್ಲಾ ಡಾ. ಅಂಬೇಡ್ಕರ್ ಭವನದಲ್ಲಿ ನಡೆಯಿತು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕಾರಿ ನಿರ್ದೇಶಕ ಡಾ.ಎಲ್.ಎಚ್.ಮಂಜುನಾಥ್ ಅವರು ಮಾತನಾಡಿ, ಬ್ಯಾಂಕ್ ಸ್ವ ಸಹಾಯ ಸಂಘಗಳ ಮೂಲಕ ಗ್ರಾಹಕರ ಮನೆ ಬಾಗಿಲಿಗೆ ತಲುಪಿದೆ. ಉತ್ತಮ ಮನೆ, ಉತ್ತಮ ಆಸ್ಪತ್ರೆಗಳ ಸೇವೆ ಈ ಎಲ್ಲಾ