Home Archive by category Fresh News (Page 424)

ಮೂಡಬಿದರೆ ಅಂತರರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಗೆ ಸಿಎಂ ಬೊಮ್ಮಯಿ ಭೇಟಿ

ಅಂತರರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಯ ಐದನೇ ದಿನ ಶ್ರೀಮತಿ ವನಜಾಕ್ಷಿ ಕೆ.ಶ್ರೀಪತಿ ಭಟ್ ವೇದಿಕೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾನ್ಯ ಮುಖ್ಯಮಂತ್ರಿ ಬಸವರಾಜ್ ಬೊಮ್ಮಯಿ ಅವರು ಬಾಗವಹಿಸಿದರು ಬಳಿಕ ಮಾತನಾಡಿದ ಅವರು ಮೂಡುಬಿದಿರೆ: ವಿದ್ಯಾರ್ಥಿ ಜೀವನದಲ್ಲಿ ಶಿಸ್ತು ಮುಖ್ಯ. ಇದು ಮಗುವು ಉತ್ತಮ ಸಾಧಕನಾಗಲು ಎಡೆಮಾಡಿಕೊಡುತ್ತದೆ.ಭಾರತದ ಭವಿಷ್ಯ ಸಂಸ್ಕ್ರತಿಯ

ವಿದೇಶಗಳಲ್ಲಿಯೂ ಕಂಬಳ ನಡೆಯುವ ದಿನಗಳು ಬರಲಿದೆ – ಬೊಮ್ಮಯಿ

ಶಾಸಕ ಉಮಾನಾಥ್ ಕೋಟ್ಯಾನ್ ಅವರ ನೇತೃತ್ವದಲ್ಲಿ ಒಂಟಿಕಟ್ಟೆಯ ಕಡಲಕೆರೆ ನಿಸರ್ಗಧಾಮ, ವೀರರಾಣಿ ಅಬ್ಬಕ್ಕ ಸಂಸ್ಕೃತಿ ಗ್ರಾಮದಲ್ಲಿ ನಡೆಯುತ್ತಿರುವ 20 ನೇ ವರ್ಷದ ಮೂಡುಬಿದಿರೆಯ ಪ್ರತಿಷ್ಠಿತ ಹೊನಲು ಬೆಳಕಿನ ಕೋಟಿ-ಚೆನ್ನಯ ಕಂಬಳದಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಬ್ಬಯಿ ಯವರು ಭಾಗವಹಿಸಿ ಸುಶಾಸನ ದಿನಾಚರಣೆಯ ಅಂಗವಾಗಿ ವಾಜಿಪೇಯಿ ಅವರ ಭಾವಚಿತ್ರವನ್ನು ಅನಾವರಣಗೊಳಿಸಿ ಮಾತನಾಡಿದರು. ಗ್ರಾಮೀಣ ಸೊಗಡಿನ ಸಂಸ್ಕೃತಿಯನ್ನು ಬಿಂಬಿಸುವ ಕಂಬಳವು ಕ್ರೀಡೆ ಮಾತ್ರ ಅಲ್ಲ ಅದು

ತುಳುನಾಡ ಪೊರ್ಲು ಚಾರಿಟೇಬಲ್ ಟ್ರಸ್ಟ್. ಮಿಜಾರು, ದ. ಕ. : ಆರ್ಥಿಕ ನೆರವು – ಚೆಕ್ ಹಸ್ತಾಂತರ

ಮಂಗಳೂರು ತಾಲೂಕಿನ ಮುತ್ತೂರು ಗ್ರಾಮದ ನಿವಾಸಿಯಾಗಿರುವ ವೇದಾವತಿ ಇವರಿಗೆ ತಾರೇಮಾರ್ ಎಂಬಲ್ಲಿ ರಿಕ್ಷಾ ಅಪಘಾತವಾಗಿದ್ದು ಸೊಂಟಕ್ಕೆ ತ್ರೀವವಾದ ಪೆಟ್ಟಾಗಿದ್ದು ನಡೆದಾಡಲು ಆಗದೆ ಮಲಗಿದ್ದಲ್ಲಿದ್ದಾರೆ. ಬಡಕುಟುಂಬವಾಗಿರುವುದರಿಂದ ಆರ್ಥಿಕವಾಗಿ ತೀರಾ ಸಂಕಷ್ಟದಲ್ಲಿರುವ ಈ ಕುಟುಂಬಕ್ಕೆ 5 ಲಕ್ಷದ ಅವಶ್ಯಕತೆಯಿದ್ದು ಅವರ ಮನವಿ ನಮಗೆ ಬಂದಿದ್ದು, ಅವರ ಮನವಿಗೆ ಸ್ಪಂದಿಸಿದ ನಮ್ಮ ತಂಡ 20,000/- ಚೆಕ್ ನ್ನು ಹಾಗೂಮಂಗಳೂರು ತಾಲೂಕಿನ ಗುರುಪುರ ಕಿನ್ನಿಮಜಲು

ಜೈನರಪವಿತ್ರ ಸ್ಥಳ ಸಮ್ಮೇದ ಶಿಖರ್ಜಿಯನ್ನು ಪ್ರವಾಸಿ ತಾಣ ಮಾಡದಂತೆ ಪ್ರಧಾನ ಮಂತ್ರಿಯವರಿಗೆ ಅಂತರ್ದೇಶೀಯ ಪತ್ರ ಬರೆಯುವ ಕಾರ್ಯಕ್ರಮ

ಜೈನರಿಗೆ ಅತ್ಯಂತ ಪವಿತ್ರ ಸ್ಥಳವಾದ ಸಮ್ಮೇದ ಶಿಖರ್ಜಿಯನ್ನು ಜಾರ್ಖಂಡ್ ರಾಜ್ಯ ಸರಕಾರ ಪವಾಸಿ ತಾಣ ಮಾಡಲು ಆದೇಶಿಸಿದ್ದು,ಇದು ಜೈನ ಪಾವಿತ್ಯಕ್ಕೆ ಧಕ್ಕೆ ತರುವ ಕೆಲಸ ಮಾಡಿರುವುದನ್ನ ಖಂಡಿಸಿ, ಡಿಸೆಂಬರ್ 28ರಂದು ಮೂಡಬಿದ್ರೆಯಲ್ಲಿ ಹಕ್ಕೋತ್ತಾಯ ಚಳುವಳಿಯನ್ನ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಸಚಿವ ಹಾಗೂ ಜೈನ ಸಮುದಾಯದ ಮುಖಂಡರಾದ ಕೆ.ಅಭಯಚಂದ್ರ ಜೈನ್ ಹೇಳಿದ್ದಾರೆ. ಮಂಗಳೂರಿನ ಪ್ರೆಸ್‍ಕ್ಲಬ್‍ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,

ಕುಂಬಾರ ಸಂಘದ ಅಕ್ರಮಗಳ ವಿರುದ್ಧ ಹೋರಾಡುತ್ತಿರುವರ ಮೇಲೆ ಆಡಳಿತ ಮಂಡಳಿಯ ಭ್ರಷ್ಟ ಪಟ್ಟ ಭದ್ರರರಿಂದ ಹಲ್ಲೆ: ತಪ್ಪಿತಸ್ಥರನ್ನು ಬಂಧಿಸದಿದ್ದರೆ ಕಲಾಸಿ ಪಾಳ್ಯ ಪೊಲೀಸ್ ಠಾಣೆ ಎದುರು ಬೃಹತ್ ಪ್ರತಿಭಟನೆಯ ಎಚ್ಚರಿಕೆ

ಬೆಂಗಳೂರು: ಕುಂಬಾರ ಸಂಘದ ಆಡಳಿತ ಮಂಡಳಿಯಲ್ಲಿ ನಡೆದ ಅವ್ಯವಹಾರದ ಬಗ್ಗೆ ಹೋರಾಟ ಮಾಡುತ್ತಿರುವ ಬಿ.ಎಸ್. ಬದ್ರಿ ಪ್ರಸಾದ್ ಎಂಬುವರ ಮೇಲೆ ಕುಂಬಾರ ಸಂಘದ ಕೆಲವು ಆಡಳಿತ ಮಂಡಳಿಯ ಪಟ್ಟಭದ್ರರು ಎರಡು ಬಾರಿ ಮಾರಣಾಂತಿಕ ಹಲ್ಲೆ ನಡೆಸಿದ್ದು, ತಪ್ಪಿತಸ್ಥರ ಮೇಲೆ ಕೂಡಲೇ ಕ್ರಮ ಜರುಗಿಸಬೇಕು. 48 ಗಂಟೆಗಳಲ್ಲಿ ಹಲ್ಲೆಕೋರರನ್ನು ಬಂಧನವಾಗದಿದ್ದರೆ ಕಲಾಸಿ ಪಾಳ್ಯ ಪೊಲೀಸ್ ಠಾಣೆ ಎದುರು ಉಗ್ರ ಪ್ರತಿಭನೆ ನಡೆಸುವುದಾಗಿ ಸಂಘದ ಮುಖಂಡರು ಎಚ್ಚರಿಕೆ ನೀಡಿದ್ದಾರೆ.

ಜಲೀಲ್ ಹತ್ಯೆ ಪ್ರಕರಣ: ಆರೋಪಿಗಳ ಪತ್ತೆಗಾಗಿ 8ಅಧಿಕಾರಿಗಳ ತಂಡ ರಚನೆ

ಕಾಟಿಪಳ್ಳ ನಿವಾಸಿ ಜಲೀಲ್ ಹತ್ಯೆ ಪ್ರಕರಣದಲ್ಲಿ ಆರೋಪಿಗಳ ಪತ್ತೆಗೆ 8 ಅಧಿಕಾರಿಗಳಿರುವ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದ್ದು, ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ನಗರ ಪೊಲೀಸ್ ಆಯುಕ್ತರಾದ ಶಶಿಕುಮಾರ್ ಹೇಳಿದ್ದಾರೆ. ಜಲೀಲ್ ಹತ್ಯೆಗೆ ಸಂಬಂಧಿಸಿ ಎಲ್ಲ ಆಯಾಮಗಳಿಂದಲೂ ತನಿಖೆ ನಡೆಸಲಾಗುತ್ತಿದೆ. ಹತ್ಯೆ ಮಾಡಿರುವ ನೈಜ ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಲಾಗುತ್ತದೆ. ಸಾರ್ವಜನಿಕರು ಯಾವುದೇ ಊಹಾಪೋಹಗಳಿಗೆ ಕಿವಿಕೊಡಬಾರದು ಎಂದು ಹೇಳಿದರು. ಜಲೀಲ್

ಕರಾವಳಿಯಾದ್ಯಂತ ಕ್ರಿಸ್ಮಸ್ ಹಬ್ಬದ ಸಂಭ್ರಮ, ಸಡಗರ

ಕರಾವಳಿಯಾದ್ಯಂತ ಕ್ರಿಸ್ಮಸ್ ಹಬ್ಬದ ಸಡಗರ ಸಂಭ್ರಮ ಮನೆಮಾಡಿದೆ. ನಗರದ ಪ್ರಮುಖ ಚರ್ಚ್‌ಗಳಲ್ಲಿ ಹಬ್ಬದ ಪ್ರಯುಕ್ತ ಬಲಿಪೂಜೆ ನಡೆಯಿತು.  ದೀಪಾಲಂಕಾರಗೊಂಡ ಚರ್ಚ್‌ಗಳು ಮನೆಮನೆಯಲ್ಲಿ ನಕ್ಷತ್ರಗಳು, ಪ್ರಾರ್ಥನಾ ಮಂದಿರ, ಮನೆ ಮುಂಭಾಗ ಆಕರ್ಷಣೀಯ ಗೋದಲಿಗಳು, ಕ್ರಿಸ್ಮಸ್ ಟ್ರಿ, ಅದರಲ್ಲೂ ಕತ್ತಲಾಗುತ್ತಿದ್ದಂತೆ ಝಗಮಗಿಸುವ ಬೆಳಕಿನ ಮಧ್ಯೆ ಕ್ರಿಸ್ಮಸ್ ವೈಭವವನ್ನು ಕಣ್ತುಂಬಿಕೊಳ್ಳುವುದೇ ಎಲ್ಲಿಲ್ಲದ ಸಂಭ್ರಮ. ಶನಿವಾರ ಸಂಜೆ 7ರಿಂದ ನಗರದ ಮಿಲಾಗ್ರಿಸ್,

ಕಾರ್ಕಳದಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಉದ್ಯಾನವನ ಲೋಕಾರ್ಪಣೆ

ಕಾರ್ಕಳ: ರಾಷ್ಟ್ರೀಯ ನಾಯಕರೆನಿಸಿಕೊಂಡವರು ತಾಲೂಕು ಕೇಂದ್ರಗಳಿಗೆ ಭೇಟಿ ನೀಡಿದ್ದರೆ ಅದು ಮಾಜಿ ಉಪ ಪ್ರಧಾನಿ ಎಲ್ ಕೆ. ಅಡ್ವಾಣಿ ಮತ್ತು ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಇವರಿಬ್ಬರು ಮಾತ್ರ. ಅಜಾತಶತ್ರು ಆಗಿ ದಕ್ಷ ಆಡಳಿತ ನೀಡಿ ಶುಶಾಸನ ಆಡಳಿತ ನೀಡಿದ ಅಟಲ್  ಹೆಸರಿನಲ್ಲಿ ಪಾರ್ಕ್ ಸ್ಥಾಪಿಸುವ ಮೂಲಕ ಜ್ಞಾನಿಯ ಸ್ಮರಣೆ ಜೊತೆಗೆ ಅವರ ಆಡಳಿತ ಅನುಸರಿಸಿ ಕ್ಷೇತ್ರ ಅಭಿವೃದ್ಧಿ ಪಡಿಸಲಾಗುತ್ತದೆ ಎಂದು ಸಚಿವ ವಿ ಸುನಿಲ್ ಕುಮಾರ್ ಹೇಳಿದರು. ತಾಲೂಕು ಕಚೇರಿ

ಮೂಡುಬಿದಿರೆ: ಜಾಂಬೂರಿಯಲ್ಲಿ ನರೇಗಾ ಯೋಜನೆಯ ಮಾದರಿಯ ಪ್ರದರ್ಶನ

ಮೂಡುಬಿದಿರೆಯ ಆಳ್ವಾಸ್ ವಿದ್ಯಾಸಂಸ್ಥೆಯಲ್ಲಿ ನಡೆಯುತ್ತಿರುವ ಸ್ಕೌಟ್ಸ್-ಗೈಡ್ಸ್ ನ ಅಂತರಾಷ್ಟ್ರೀಯ  ಸಾಂಸ್ಕೃತಿಕ ಜಾಂಬೂರಿಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ವತಿಯಿಂದ  ವಿಜ್ಞಾನ ಮೇಳದ ಮಳಿಗೆಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಮಾಹಿತಿ ಕೇಂದ್ರಕ್ಕೆ ಭೇಟಿ ನೀಡುವವರಿಗೆ ಮಾಹಿತಿಯನ್ನು ನೀಡಲಾಗುತ್ತಿದೆ. ನರೇಗಾ ಯೋಜನೆಯ ಮಾದರಿಯನ್ನು ತಯಾರಿಸಿ ಪ್ರದರ್ಶನಕ್ಕಿಟ್ಟಿರುವುದು ಅತ್ಯಾಕರ್ಷಕವಾಗಿದೆ. ಟಿ.ವಿ. ಮೂಲಕ

ಮೂಡುಬಿದಿರೆ: ಭಾಷೆ, ಪರಂಪರೆಯನ್ನು ತುಳುನಾಡಿನ ಜನತೆ ಮರೆತಿಲ್ಲ: ಅರಗ ಜ್ಞಾನೇಂದ್ರ

ಮೂಡುಬಿದಿರೆ:  ಕಂಬಳವು ಕರಾವಳಿ ಭಾಗದ ಜನರ ಜನಪದ ಕಲೆಯಾಗಿದೆ. ಈ ಭಾಗದ ಜನರು ಪ್ರಪಂಚದ ಯಾವ ಮೂಲೆಗೆ ಹೋದರೂ  ಇಲ್ಲಿನ ಭಾಷೆ, ಆಚರಣೆ, ಸಾವಿರಾರು ವರ್ಷಗಳ ಪರಂಪರೆಗಳನ್ನು ತುಳುನಾಡಿನ ಜನತೆ ಮರೆತಿಲ್ಲ ಎಂದು ರಾಜ್ಯದ ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದರು. ಅವರು ಮೂಡುಬಿದಿರೆ ಶಾಸಕ ಉಮಾನಾಥ್ ಕೋಟ್ಯಾನ್ ಅವರ ನೇತೃತ್ವದಲ್ಲಿ ಒಂಟಿಕಟ್ಟೆಯ ಕಡಲಕೆರೆ ನಿಸರ್ಗಧಾಮ, ವೀರರಾಣಿ ಅಬ್ಬಕ್ಕ ಸಂಸ್ಕೃತಿ ಗ್ರಾಮದಲ್ಲಿ ನಡೆಯುತ್ತಿರುವ  ೨೦ ನೇ ವರ್ಷದ