Home Archive by category moodabidre (Page 9)

ಮೂಡುಬಿದಿರೆ: ಸಿಪಿಐಎಂನ ತಾಲೂಕು ಸಮ್ಮೇಳನ

ಮೂಡುಬಿದಿರೆ: ಕೇಂದ್ರದಲ್ಲಿರುವ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಅಮೆರಿಕ ಸಾಮ್ರಾಜ್ಯಶಾಹಿಯ ಅಡಿಯಾಳು ಆಗಬಾರದು ಎಂದು ಸಿಪಿಐಎಂನ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಕೆ ಯಾದವ್ ಶೆಟ್ಟಿ ಹೇಳಿದರು. ಅವರು ಭಾನುವಾರ ಸಮಾಜ ಮಂದಿರದಲ್ಲಿ ನಡೆದ ಸಿಪಿಐಎಂ ಮೂಡುಬಿದಿರೆ ತಾಲೂಕು ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.ಪ್ಯಾಲೆಸ್ತೀನ್ ನಾಗರಿಕರನ್ನು

ಮೂಡುಬಿದಿರೆ : ಮಹಿಳೆ ಆತ್ಮಹತ್ಯೆ

ಮೂಡುಬಿದಿರೆ : ಎರಡು ವರ್ಷಗಳ ಹಿಂದೆ ಪತಿಯನ್ನು ಕಳೆದುಕೊಂಡಿರುವ ಮಹಿಳೆಯೋರ್ವರು ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೇಮಾರಿನಲ್ಲಿ ಶುಕ್ರವಾರ ಬೆಳಿಗ್ಗೆ ತಿಳಿದು ಬಂದಿದೆ.ಪಾಲಡ್ಕ ಗ್ರಾ.ಪಂ.ವ್ಯಾಪ್ತಿಯ ಕೇಮಾರು ನಡಿಹಿಲ್ಲು ನಿವಾಸಿ ಪ್ರಮೀಳಾ (36ವ)ಅವರು ಮಾಡಿಕೊಂಡ ಮಹಿಳೆ. ಈಕೆ ಗಂಡನನ್ನು ಕಳೆದುಕೊಂಡ ಮೇಲೆ ಒಬ್ಬಂಟಿಯಾಗಿ ಜೀವನ ನಡೆಸುತ್ತಿದ್ದರು. ಕುಡಿತದ ಚಟವನ್ನು ಹೊಂದಿದ್ದ ಪ್ರಮೀಳಾ ಅವರು ಜೀವನದಲ್ಲಿ ಜಿಗುಪ್ಸೆಗೊಂಡು

ಪೂರ್ಣಿಮಾ ಸುರೇಶ್ ಉಡುಪಿ ಮತ್ತು ಕಾವ್ಯಶ್ರೀ ಮಹಾಗಾಂವಕರ ಕಲಬುರ್ಗಿ ಅವರಿಗೆ 2024ರ ಸಾಲಿನ ಮುದ್ದಣ ಕಾವ್ಯ ಪ್ರಶಸ್ತಿ

ಮೂಡುಬಿದಿರೆ : ಕಾಂತಾವರ ಕನ್ನಡ ಸಂಘದ ಪಠೇಲ್ ಪುನರೂರು ವಾಸುದೇವರಾವ್ ಟ್ರಸ್ಟ್ ಪ್ರಾಯೋಜಕತ್ವದ 2024ರ ಸಾಲಿನ ಪ್ರತಿಷ್ಠಿತ ಮುದ್ದಣ ಕಾವ್ಯ ಪ್ರಶಸ್ತಿಯನ್ನು ಉಡುಪಿಯ ಪೂರ್ಣಿಮ ಸುರೇಶ್ ಅವರ ‘ಸಂತೆಯೊಳಗಿನ ಏಕಾಂತ’ ಮತ್ತು ಕಲಬುರ್ಗಿಯ ಕಾವ್ಯಶ್ರೀ ಮಹಾಗಾಂವಕರ ಅವರ ‘ಒಲವ ಒರತೆಯ ಜಾಡಿನಲ್ಲಿ’ ಎಂಬ ಎರಡು ಹಸ್ತಪ್ರತಿಗಳು ಗೆದ್ದುಕೊಂಡಿವೆ. ಈ ಎರಡೂ ಹಸ್ತಪ್ರತಿಗಳು ತೀರ್ಪುಗಾರರಿಂದ ಸಮಾನ ಅಂಕಗಳನ್ನು ಪಡೆದಿರುವುದರಿಂದ ಎರಡು ಹಸ್ತಪ್ರತಿಗಳನ್ನು ಕೂಡಾ ಪ್ರಶಸ್ತಿಗೆ

ಮಂಗಳೂರು ವಿ.ವಿ. ಬ್ಯಾಡ್ಮಿಂಟನ್: 16ನೇ ಬಾರಿ ಆಳ್ವಾಸ್ ಚಾಂಪಿಯನ್

ಮೂಡುಬಿದಿರೆ: ಮಂಗಳೂರು ವಿಶ್ವವಿದ್ಯಾಲಯ ಮಟ್ಟದ ಅಂತರಕಾಲೇಜು ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ವಿಭಾಗದಲ್ಲಿ ಸತತ 16ನೇ ಬಾರಿ ಚಾಂಪಿಯನ್ ಆಗಿರುವ ಆಳ್ವಾಸ್ ಕಾಲೇಜು ತಂಡವು ‘ಶ್ರೀ ಕೆಮ್ಮಾರು ಬಾಲಕೃಷ್ಣ ಗೌಡ ಸ್ಮರಣಾರ್ಥ ಟ್ರೋಫಿ’ಯನ್ನು ಎತ್ತಿ ಹಿಡಿದಿದೆ. ಮಹಿಳಾ ವಿಭಾಗದಲ್ಲಿ ಆಳ್ವಾಸ್ ಕಾಲೇಜು ತೃತೀಯ ಸ್ಥಾನ ಪಡೆದಿದೆ.ಮಂಗಳೂರಿನ ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು ಆಶ್ರಯದಲ್ಲಿ ನಡೆದ ಟೂರ್ನಿಯ ಪುರುಷರ ವಿಭಾಗದ ಫೈನಲ್‌ನಲ್ಲಿ ಆಳ್ವಾಸ್ ಕಾಲೇಜು ತಂಡವು ೩-೦

ರಾಜ್ಯಮಟ್ಟದ ಪ.ಪೂ. ಕಾಲೇಜುಗಳ ಕುಸ್ತಿ ಪಂದ್ಯಾಟ – ಆಳ್ವಾಸ್ ಪದವಿಪೂರ್ವ ಕಾಲೇಜಿಗೆ 5 ಪದಕ

ಮೂಡಬಿದಿರೆ: ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಬೆಳಗಾವಿ ಜಿಲ್ಲೆ ಮತ್ತು ಶಾಂತಿನಿಕೇತನ ಪದವಿಪೂರ್ವ ಕಾಲೇಜು ಕುಪ್ಪಟಗೇರಿ ಇವರ ಆಶ್ರಯದಲ್ಲಿ ಜರುಗಿದ ರಾಜ್ಯ ಮಟ್ಟದ ಕುಸ್ತಿ ಪಂದ್ಯಾಟದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸಿದ ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಹುಡುಗರ ಮತ್ತು ಹುಡುಗಿಯರ ವಿಭಾಗದಲ್ಲಿ 1 ಚಿನ್ನ, 2 ಬೆಳ್ಳಿ ಹಾಗೂ 2 ಕಂಚು ಒಟ್ಟು 5 ಪದಕ ಪಡೆದುಕೊಂಡರು.ಫಲಿತಾಂಶ : ಟೆನ್ನಿ ಕೃಷ್ಣ – 120ಕೆಜಿ ವಿಭಾಗದಲ್ಲಿ (ಪ್ರಥಮ), ಕೃಷ್ಣ –

ಮೂಡುಬಿದಿರೆ: ವಿದ್ಯುತ್ ಗುತ್ತಿಗೆದಾರ ಗಣೇಶ್ ರಾವ್ ನಿಧನ

ಮೂಡುಬಿದಿರೆ: ಇಲ್ಲಿನ ಶ್ರೀ ಕೃಷ್ಣ ಫ್ರೆಂಡ್ಸ್ ಸರ್ಕಲ್ ನ ಗೌರವಾಧ್ಯಕ್ಷ, ವಿದ್ಯುತ್ ಗುತ್ತಿಗೆದಾರ ಗಣೇಶ್ ರಾವ್ (57ವ) ಅವರು ಹೃದಯಾಘಾತಕ್ಕೊಳಗಾಗಿ ಶನಿವಾರ ರಾತ್ರಿ ನಿಧನ ಹೊಂದಿದರು. ಪ್ರಾಂತ್ಯ ಗಾಮದ ವಿಶಾಲ್ ನಗರ ನಿವಾಸಿಯಾಗಿರುವ ಗಣೇಶ್ ರಾವ್ ಅವರು ಮೂಡುಬಿದಿರೆಯಲ್ಲಿ ಹಲವು ವರ್ಷಗಳಿಂದ ವಿದ್ಯುತ್ ಗುತ್ತಿಗೆದಾರರಾಗಿ ದುಡಿಯುತ್ತಿದ್ದರು. ಅಲ್ಲದೆ ಶ್ರೀ ಕೃಷ್ಣ ಫ್ರೆಂಡ್ಸ್ ಸರ್ಕಲ್ ನ ಸ್ಥಾಪಕ ಸದಸ್ಯರಾಗಿದ್ದ ಅವರು 20 ವರ್ಷಗಳ ಕಾಲ ಅಧ್ಯಕ್ಷರಾಗಿ ಹಾಗೂ

ಮೂಡುಬಿದಿರೆಯಲ್ಲಿ ಜೈನ ಬಾಂಧವರ ಹೊಸ ತೆನೆ ಹಬ್ಬ

ಮೂಡುಬಿದಿರೆ: ಜೈನ ಬಾಂಧವರು ಆಚರಿಸಿಕೊಂಡು ಬರುವ ಹೊಸ ತೆನೆ ಹಬ್ಬ(ಕುರಾಲ್ ಪರ್ಬ) ಜೈನ ಕಾಶಿ ಮೂಡುಬಿದಿರೆಯಲ್ಲಿ ರವಿವಾರ ಜರಗಿತು. ಬೆಟ್ಟೇರಿಯಲ್ಲಿರುವ, ಮಹಾವೀರ ಸಂಘ ದವರ ‘ಕೊರಲ್ ಕಟ್ಟೆ’ಯಲ್ಲಿ ಹೊಸ ತೆನೆರಾಶಿ ಹಾಕಿ 18 ಬಸದಿಗಳ ಇಂದ್ರರು ಪೂಜೆ ಸಲ್ಲಿಸಿದರು. ಶ್ರೀಮಠದಲ್ಲಿ ಪಪೂ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ಪಟ್ಟಾಚಾರ್ಯ ಸ್ವಾಮೀಜಿ ಪಾವನ ಸಾನ್ನಿಧ್ಯ ಮಾರ್ಗದರ್ಶನದಲ್ಲಿ 18ಬಸದಿಗಳ ದೇವಕಾರ್ಯ ನೆರವೇರಿಸಿ ಅರ್ಚಕರಿಗೆ

ಮೂಡುಬಿದಿರೆ: ಆಳ್ವಾಸ್ ಗೆ ನೂತನ ಫಾರ್ಮಸಿ ಪದವಿ ಕಾಲೇಜು ಸೇರ್ಪಡೆ

ಮೂಡುಬಿದಿರೆ: ಇಲ್ಲಿನ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ(ರಿ.)ದ 20 ವಿವಿಧ ಶಿಕ್ಷಣ ಸಂಸ್ಥೆಗಳ ಜೊತೆಗೆ ನೂತನ ಫಾರ್ಮಸಿ ಪದವಿ ಕಾಲೇಜು ಸೇರ್ಪಡೆಗೊಂಡಿದ್ದು ಈ ವರ್ಷದಿಂದಲೇ ಪ್ರಾರಂಭಿಸಲಾಗುತ್ತಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ವಿಜ್ಞಾನ ವಿಷಯದಲ್ಲಿ ಪದವಿಪೂರ್ವ ಶಿಕ್ಷಣ ಪಡೆದ ವಿದ್ಯಾರ್ಥಿಗಳಿಗೆ 4 ವರ್ಷಗಳ ಪದವಿ ಶಿಕ್ಷಣ ಇದಾಗಿದ್ದು 2024-25ನೇ ಶೈಕ್ಷಣಿಕ ವರ್ಷದಿಂದಲೇ

Big Breaking: ಭಾರತದ ಹೆಮ್ಮೆಯ ಉದ್ಯಮಿ ರತನ್‌ ಟಾಟಾ ಇನ್ನಿಲ್ಲ

ಭಾರತದ ಹೆಮ್ಮೆಯ ಹಾಗೂ ಮಧ್ಯಮ ವರ್ಗದ ಪ್ರೀತಿಯ ರತನ್‌ ಟಾಟಾ ಅವರು ಇನ್ನಿಲ್ಲ. ರತನ್‌ಟಾಟಾ ಅವರು ಬುಧವಾರ ತಡರಾತ್ರಿ ಮೃತಪಟ್ಟಿದ್ದಾರೆ. ಅವರ ಆರೋಗ್ಯ ಗಂಭೀರವಾಗಿದೆ ಎಂದು ಬುಧವಾರ ಸಂಜೆಯಷ್ಟೇ ಸುದ್ದಿಯಾಗಿತ್ತು. ರಾತ್ರಿ ವೇಳೆಗೆ ಅವರು ನಮ್ಮನ್ನೆಲ್ಲ ಅಗಲಿದ್ದಾರೆ. ದೇಶದ ಪ್ರಮುಖ ಉದ್ಯಮಗಳಲ್ಲಿ ಒಂದಾಗಿರುವ ಹಾಗೂ ಭಾರತೀಯರೊಂದಿಗೆ ಆತ್ಮೀಯ ಒಡನಾಟವನ್ನು ಹೊಂದಿರುವ ಟಾಟಾ ಸನ್ಸ್‌ನ ಅಧ್ಯಕ್ಷರಾದ ರತನ್ ಟಾಟಾ ಅವರ ಆರೋಗ್ಯ ಗಂಭೀರವಾಗಿದೆ ಎನ್ನುವ ಸುದ್ದಿಯನ್ನೇ