ಮಂಗಳೂರು:ಕರಾವಳಿ ಕುರುಬ ಸಮಾಜ (ರಿ) ಮಂಗಳೂರು ವತಿಯಿಂದ ಐವನ್ ಡಿಸೋಜ ರವರಿಗೆ ಸನ್ಮಾನ

ಮಂಗಳೂರು: ಕುರುಬ ಸಮುದಾಯದ ವತಿಯಿಂದ ದ್ವಿತೀಯ ಬಾರಿಗೆ ವಿಧಾನ ಪರಿಷತ್ ಶಾಸಕರಾಗಿ ಆಯ್ಕೆಯಾದ ಶ್ರೀ ಐವನ್ ಡಿಸೋಜ ರವರಿಗೆ ಅಭಿನಂದಿಸಿ ಶುಭ ಕೊರಲಾಯಿತು.ಮೊದಲನೆಯ ಬಾರಿ ಶಾಸಕರಾಗಿದ್ದಾಗ ತಮ್ಮ ಸಮಾಜದ ಬೆಳವಣಿಗೆಗೆ ನೀಡಿದ ಸಹಕಾರದ ಬಗ್ಗೆ ಸ್ಮರಿಸಿ , ಮುಂದಿನ ದಿನಗಳಲ್ಲಿ ಕುರುಬ ಸಮುದಾಯದ ಜನರಿಗೆ ರೇಶನ್ ಕಾರ್ಡ್ ಶೈಕ್ಷಣಿಕವಾಗಿ ಸ್ಕಾಲರ್ಶಿಪ್ ನ ಹಾಗೂ ಇತರ ಸಮಸ್ಯೆಯ ಬಗ್ಗೆ ವಿವರಿಸಿದರು. ಈ ಬಗ್ಗೆ ಸರಕಾರದ ಗಮನ ಸೆಳೆಯಬೇಕೆಂದು ಕುರುಬ ಸಮಾಜದ ನಾಯಕರು ಹಾಗೂ ಗೌರವಾಧ್ಯಕ್ಷರು ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತರಾದ ಆನಂದ್ ರವರು ತಿಳಿಸಿದರು .
ಈ ಸಂದರ್ಭದಲ್ಲಿ ಕರಾವಳಿ ಕುರುಬ ಸಮುದಾಯದ ಅಧ್ಯಕ್ಷರು ಕೆ ಎನ್ ಬಸವರಾಜಪ್ಪ, ಗೌರವಾಧ್ಯಕ್ಷರು ಡಾಕ್ಟರ್ ಕೆ ಇ ಪ್ರಕಾಶ್ , ನಿರ್ದೇಶಕರು ಬೆಂಗಳೂರು ಶಿವಾನಂದ ಯರಝೆರಿ, ಕಾರ್ಯದರ್ಶಿ ನಿರಂಜನ್ , ಉಪಾಧ್ಯಕ್ಷ ಕೆಬಿ ನಾಗರಾಜ್, ಕೋಶಾಧಿಕಾರಿ ಮಹೇಶ್ ಕಲ್ಲ ಹೊಲದ, ಸಂಘಟನಾ ಕಾರ್ಯದರ್ಶಿ ನಾರಾಯಣ ಪಾಟೇಲ್ ಹಾಗೂ ಸಂಘದ ಸದಸ್ಯರುಗಳಾದ ಶರಣಪ್ಪ ಹಳ್ಳಿ ಕೆರೆ ,ಪರುಶುರಾಮ ಕಡೂರು, ಕರಿಯಪ್ಪ ಗೌಡರ, ಟಿಎಸ್ ಲೋಕೇಶ್, ಬಿ.ಎಚ್ . ಗದ್ದನಕೇರಿ, ಬರಮಪ್ಪ ಮುಂತಾದವರು ಉಪಸ್ಥಿತರಿದ್ದರು.
