ಮಂಗಳೂರಿನ ಶರವು ದೇವಸ್ಥಾನ ;ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾನೂನಿನ ನೆಪದಲ್ಲಿ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅಡ್ಡಿ ಪಡಿಸುವುದು ಅರ್ಧಕ್ಕೆ ನಿಲ್ಲಿಸಿರುವ ಘಟನೆಗಳು ನಡೆದಿದ್ದು ಈ ಹಿನ್ನೆಲೆಯಲ್ಲಿ ಇಂದು ಸಮಾಲೋಚನಾ ಸಭೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾನೂನಿನ ನೆಪದಲ್ಲಿ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅಡ್ಡಿ ಪಡಿಸುವುದು ಮಾತ್ರವಲ್ಲದೆ ಕೆಲವೊಂದು ಕಡೆ ಕಾರ್ಯಕ್ರಮಗಳನ್ನು ಅರ್ಧಕ್ಕೆ ನಿಲ್ಲಿಸಿರುವ ಘಟನೆಗಳು ನಡೆದಿದ್ದು ಈ ಹಿನ್ನೆಲೆಯಲ್ಲಿ ಇಂದು ಸಮಾಲೋಚನಾ ಸಭೆಯು ವಿಶ್ವ ಹಿಂದೂ ಪರಿಷತ್ ನೇತೃತ್ವದಲ್ಲಿ ಮಂಗಳೂರಿನ ಶರವು ದೇವಸ್ಥಾನ ಬಳಿ ಬಾಲಂಭಟ್ ರಾಧಾಕೃಷ್ಣ ಸಭಾಂಗಣದಲ್ಲಿ ನಡೆಯಿತು.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಮುಖರಾದ ಪಿ ಎಸ್ ಪ್ರಕಾಶ್, ವಿಶ್ವ ಹಿಂದೂ ಪರಿಷತ್ ಪ್ರಮುಖರಾದ ಡಾ ಎಂಬಿ ಪುರಾಣಿಕ್, ಶರಣ್ ಪಂಪ್ ವೆಲ್, ಎಚ್ ಕೆ ಪುರುಷೋತ್ತಮ, ಶಿವಾನಂದ ಮೆಂಡನ್, ರಂಗಭೂಮಿ /ಯಕ್ಷಗಾನ ಕಲಾವಿದರಾದ ಡಾ ದೇವದಾಸ್ ಕಾಪಿಕಾಡ್,ಎಲ್ ಎನ್ ಕಿಶೋರ್ ಡಿ ಶೆಟ್ಟಿ, ವಿಜಯ ಕುಮಾರ್ ಕೊಡಿಯಾಲ್ ಬೈಲ್, ಭೋಜರಾಜ್ ವಾಮಂಜೂರು, ಸತೀಶ್ ಶೆಟ್ಟಿ ಪಟ್ಲಾ, ತಮ್ಮ ಲಕ್ಷ್ಮಣ್ ಕುಮಾರ ಮಲ್ಲೂರು /ರವಿ ಅಲೆವುರಾಯ/ಕೃಷ್ಣ ಮಂಜೇಶ್ವರ .ದೈವ ಆರಾಧಕರಾದ ದಯಾನಂದ್ ಕತ್ತಲ್ ಸಾರ್, ಸೌಂಡ್ಸ್ ಮತ್ತು ಲೈಟಿಂಗ್ಸ್ ಸಂಸ್ಥೆಯ ಅದ್ಯಕ್ಷ ಧನರಾಜ್ .ಅಶೋಕ್ ಕುಮಾರ ಜೊತೆಗೆ ಹಲವಾರು ರಂಗಭೂಮಿ ಕಲಾವಿದರು. ಹಿಂದೂ ಸಂಘಟನೆ ಕಾರ್ಯಕರ್ತರು ಈ ಸಭೆಯಲ್ಲಿ ಪಾಲ್ಗೊಂಡು ಅಭಿಪ್ರಾಯ ತಿಳಿಸಿದರು. ಸಂಘಟನೆಯ ಪ್ರಮುಖರಾದ ಪ್ರಕಾಶ್ PS ಮತ್ತು ಎಂ ಬಿ ಪುರಾಣಿಕರು ಮಾರ್ಗದರ್ಶನ ನೀಡಿದರು .ಕೊನೆಗೆ ವಿವಿಧ ಬೇಡಿಕೆಗಳನ್ನು ಆಗ್ರಹಿಸಿ ಸೆಪ್ಟೆಂಬರ್ 9 ಮಂಗಳವಾರ ಬೃಹತ್ ಜನಾಗ್ರಹ ಸಭೆ ನಡೆಸಲು ತೀರ್ಮಾನಿಸಲಾಯಿತು.
