ಮಂಗಳೂರು: ವಿಸ್ಡಮ್ ಎಡ್ ನ ನೂತನ ಕಚೇರಿಯ ಉದ್ಘಾಟನೆ

ನವರಾತ್ರಿಯ ಶುಭ ಸಂದರ್ಭದಲ್ಲಿ ವಿಸ್ಡಮ್ ಎಡ್‌ನ ನೂತನ ಕಚೇರಿಯು ಬಳ್ಳಾಲ್ ಬಾಗ್‌ನ ತಕ್ಷಶಿಲಾ ಬಿಲ್ಡಿಂಗ್‌ನಲ್ಲಿ ಶುಭಾರಂಭಗೊಂಡಿತು.
ವಿಸ್ಡಮ್ ಎಡ್ ಸಂಸ್ಥೆಯು ಉನ್ನತ ಶಿಕ್ಷಣ, ವಿದ್ಯಾರ್ಥಿವೇತ, ಜಾಗತಿಕ ವಿಶ್ವವಿದ್ಯಾಲಯದ ಪ್ರವೇಶಗಳು, ಶಿಕ್ಷಣ ಸಾಲ ಮಾರ್ಗದರ್ಶಿ, ಪರೀಕ್ಷಾ ತಯಾರಿ ತರಬೇತಿ ಸೇರಿದಂತೆ ಶಿಕ್ಷಣಕ್ಕೆ ಸಂಬಂಧಪಟ್ಟಂತೆ ಮಾರ್ಗದರ್ಶನವನ್ನು ನೀಡುವ ಸಂಸ್ಥೆಯಾಗಿದ್ದು, ಈಗಾಗಲೇ ದೇಶ ವಿದೇಶಗಳಿಗೆ ತೆರಳಿ ಉನ್ನತ ಹುದ್ದೆಯನ್ನು ಅಲಂಕರಿಸಿದ್ದಾರೆ. ಇದೀಗ ವಿಸ್ಡಮ್ ಎಡ್ ಸಂಸ್ಥೆಯು ನೂತನ ಕಚೇರಿಯನ್ನು ಕಚೇರಿಯು ಬಳ್ಳಾಲ್ ಬಾಗ್‌ನ ತಕ್ಷಶಿಲಾ ಬಿಲ್ಡಿಂಗ್‌ನಲ್ಲಿ ಆರಂಭಿಸಿದ್ದು, ಇದರ ಉದ್ಘಾಟನಾ ಕಾರ್ಯಕ್ರಮ ನಡೆಯಿತು.

ನೂತನ ಕಚೇರಿಯನ್ನು ವಿಸ್ಡಮ್ ಎಡ್‌ನ ಸಿಬ್ಬಂದಿಗಳು ಉದ್ಘಾಟಿಸಿದರು. ಸಂಸ್ಥೆಯ ಸಿಬ್ಬಂದಿಗಳಾದ ಶವಂತ್ ಸಾಲ್ಯಾನ್, ಕೌಶಿಕ್ ಗೌಡ, ಐನೀಶ್ ಎಲ್ವಿನ್ ಡಿಸೋಜಾ, ನಿವೇದಿತಾ, ಭರತ್ ವಾಲ್ತಾಜೆ ಅವರು ನೂತನ ಕಚೇರಿಗೆ ಶುಭ ಹಾರೈಸಿ, ವಿಸ್ಡಮ್ ಎಡ್ ಸಂಸ್ಥೆಯ ಪ್ರಯೋಜನವನ್ನು ಪಡೆದುಕೊಳ್ಳಿ ಎಂದರು.
ಇದೇ ವೇಳೆ ವಿಸ್ಡಮ್ ಎಡ್‌ನ ಮ್ಯಾನೆಜಿಂಗ್ ಡೈರೆಕ್ಟರ್ ಡಾ. ಪ್ರಾನ್ಸಿಸ್ಕಾ ತೇಜ್, ಸಿಎಒ ಡಾ. ಗುರುತೇಜ್, ಸಿಇಒ ಅಭಿಲಾಷ್ ಕ್ಷತ್ರೀಯ, ಪ್ರಾಂಚೈಸಿ ಪಾರ್ಟನರ್ ಅರುಣ್ ಕುಮಾರ್ ಮಣಿಪಾಲ್ ಕುಂದಾಪುರ, ದೀಪಕ್ ಬೊಳ್ವಾರ್ ಪುತ್ತೂರು, ಕೌಶಿಕ್ ಗೌಡ ಹಾಸನ, ಸಂಬಂಧಿಕರು, ಸ್ನೇಹಿತರು, ಹಿತೈಶಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.