ನಂದಿಕೂರು ವ್ಯಕ್ತಿ ನೇಣಿಗೆ ಶರಣು
ಪಡುಬಿದ್ರಿ: ನಂದಿಕೂರಿನ ಮನೆಯೊಂದರಲ್ಲಿ ಏಕಾಂಗಿಯಾಗಿ ಜೀವಿಸುತ್ತಿದ್ದ ವ್ಯಕ್ತಿಯೋರ್ವರು ತಮ್ಮದೇ ಮನೆ ಜಗಲಿಯ ಮೇಲಿನ ಪಕ್ಕಾಸಿಗೆ ನೇಣು ಹಾಕಿಕೊಂಡು ಜೀವಾಂತ್ಯಗೊಳಿಸಿದ್ದಾರೆ.
ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ನಂದಿಕೂರು ಶೆಟ್ಟಿ ಬೆಟ್ಟು ಸಾಲ್ಯಾನ್ ನಿವಾಸದ ವಾಸಿ ಶೇಖರ್ ಪೂಜಾರಿ(67), ಹೆಂಡತಿ ಅನಾರೋಗ್ಯದ ಸಮಸ್ಯೆಯಿಂದ ತನ್ನ ತಾಯಿ ಮನೆ ಕಾರ್ಕಳದ ಕಲ್ಯಾ ನೆಲ್ಲಿಗುಡ್ಡೆಯಲ್ಲಿ ವಾಸವಾಗಿದ್ದು, ಮಕ್ಕಳು ಕೂಡಾ ತಾಯಿಯೊಂದಿಗಿದ್ದರು, ನಂದಿಕೂರಿನ ಮನೆಯಲ್ಲಿ ಏಕಾಂಗಿಯಾಗಿದ್ದ ತಂದೆಯನ್ನು ಕಾರ್ಕಳ ಮನೆಯಲ್ಲಿ ಉಳಿಯುವಂತೆ ಹೆಂಡತಿ ಮಕ್ಕಳು ಬಹಳಷ್ಟು ಬಾರಿ ಒತ್ತಾಯಿಸಿ ಕರೆದ್ಯೋದರೂ ಕೇಳದೆ ನಂದಿಕೂರಲ್ಲೇ ಏಕಾಂಗಿಯಾಗಿ ಜೀವಿಸುತ್ತಿದ್ದು ಉತ್ತಮ ಕೂಲಿ ಕೆಲಸಗಾರರಾಗಿದ್ದ ಇವರು ಕುಡಿತದ ಛಟಕ್ಕೆ ಬಿದ್ದು ತನ್ನ ಆರೋಗ್ಯವನ್ನೂ ಕೆಡಿಸಿಕೊಂಡಿದ್ದರು, ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಹಗಲು ಹೊತ್ತು ನಂದಿಕೂರಿನ ತನ್ನ ಎಳೆ ವಯಸ್ಸಿನ ಸಹಪಾಠಿಗಳನ್ನು ಮಾತನಾಡಿಸಿಕೊಂಡು ಬಂದಿದ್ದು ರಾತ್ರಿ ಆತ್ಮಹತ್ಯೆಗೆ ಶರಣಾಗಿದ್ದು ಸ್ಥಳಕ್ಕೆ ಬಂದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.


















