ಕುಂದಾಪುರದ ಗೇರುಕಟ್ಟೆ ಸಮೀಪ ಸಿಡಿಲು ಬಡಿದು ಮನೆಗೆ ಭಾಗಶಃ ಹಾನಿ

ಕುಂದಾಪುರ: ನಿನ್ನೆ ರಾತ್ರಿ ಬಡಿದ ಸಿಡಿಲಿಗೆ ಮನೆಯೊಂದು ಭಾಗಶಃ ಬಿರುಕು ಬಿಟ್ಟು ಮನೆ ಸಂಪೂರ್ಣವಾಗಿ ಹಾನಿಯಾದ ಘಟನೆ ಕುಂದಾಪುರ ತಾಲೂಕು ಸೇನಾಪುರ ಗ್ರಾಮದ ಗೇರುಕಟ್ಟೆ ಸಮೀಪ ನಡೆದಿದೆ.
ಗೇರುಕಟ್ಟೆ ನಿವಾಸಿ ಫಕೀರ ಸಾಹೇಬರ ವಠಾರದ ಅಬ್ದುಲ್ ಎಂಬವರ ಮನೆಗೆ ಸಿಡಿಲು ಬಡಿದ ಪರಿಣಾಮ ಮನೆಯ ಮೇಲ್ಚಾವಣಿ, ವಿದ್ಯುತ್ ಪರಿಕರಗಳು ಹಾಗೂ ಮನೆಯ ಕೆಲವು ಸಾಮಾಗ್ರಿಗಳು ಭಾಗಶಃ ಹಾನಿಯಾಗಿದೆ.
ಈ ಘಟನೆಯ ವೇಳೆ ಅಬ್ದುಲ್ ದಂಪತಿಗಳು ತಮ್ಮ ಮಗನ ಮನೆಯಲ್ಲಿ ಇದ್ದುದರಿಂದ ಅಪಾಯದಿಂದ ಪಾರಾಗಿದ್ದಾರೆ. ಸಿಡಿಲಿನ ರಭಸಕ್ಕೆ ಮನೆಯ ಗೋಡೆಗಳು ಸಂಪೂರ್ಣವಾಗಿ ಬಿರುಕು ಬಿಟ್ಟಿದ್ದು ಮನೆಯ ವಯರಿಂಗ್ ಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ.
