ಯಕ್ಷಗಾನ ತರಬೇತಿ ಕೇಂದ್ರ ಸ್ಥಾಪನೆ : ರಕ್ಷಿತ್ ಶಿವರಾಂ

ಉಜಿರೆ : ಶ್ರೀ ಕ್ಷೇತ್ರ ಗೆಜ್ಜೆಗಿರಿ ಶ್ರೀ ಆದಿ ಧೂಮಾವತಿ ,ದೇಯಿ ಬೈದೆತಿ ಅಮ್ಮನರ ಬೆಳಕಿನಗೆಜ್ಜೆ ಸೇವೆಯ ಶ್ರೀ ಗೆಜ್ಜೆಗಿರಿ ಯಕ್ಷಗಾನ ಮೇಳದ ಯಕ್ಷಗಾನ ಬಯಲಾಟ , ಯಕ್ಷಗಾನ ಕಲಾವಿದರಿಗೆ ಸನ್ಮಾನ ಕಾರ್ಯಕ್ರಮ ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಬಳಿ ಯಕ್ಷ ಬಳಗ ಬೆಳ್ತಂಗಡಿ ಬಳಗದ ನೇತೃತ್ವದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಯಕ್ಷ ಬಳಗ ಬೆಳ್ತಂಗಡಿ ಗೌರವ ಅಧ್ಯಕ್ಷರಾದ , ಬೆಸ್ಟ್ ಫೌಂಡೇಷನ್ ಅಧ್ಯಕ್ಷ ರಕ್ಷಿತ್ ಶಿವರಾಂ ರವರು ಯಕ್ಷಗಾನವನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಬೆಳ್ತಂಗಡಿ ತಾಲೂಕಿನಲ್ಲಿ ಯಕ್ಷಗಾನ ತರಬೇತಿ ಕೇಂದ್ರವನ್ನು ಸ್ಥಾಪಿಸಲಾಗುವುದು ಎಂದ ಅವರು ಯಕ್ಷಗಾನ ಪ್ರದರ್ಶನ ಮಾತ್ರವಲ್ಲದೆ ತಾಲೂಕಿನ ತೆರೆಮರೆಯ ಯಕ್ಷಗಾನ ಕಲಾವಿದರು ಸೇರಿದಂತೆ ಕಲಾ ಪೋಷಕರನ್ನು ಸನ್ಮಾನಿಸುವ ಯಕ್ಷ ಬಳಗ ಬೆಳ್ತಂಗಡಿ ಇದರ ಪ್ರಥಮ ಪ್ರಯತ್ನದಲ್ಲೇ ಅತ್ಯಂತ ಯಶಸ್ವಿ ಕಾರ್ಯಕ್ರಮ ನಡೆದಿದೆ ಎಂದರು.

ಹಿರಿಯ ಮುತ್ಸದಿ ಭುಜಬಲಿ ಧರ್ಮಸ್ಥಳ ಮಾತನಾಡಿ ಯಕ್ಷಗಾನ ಕಲಾವಿದರನ್ನು ಗೌರವಿಸುವ ಮೂಲಕ ಅವರ ಕಲಾ ಸೇವೆಯನ್ನು ಗುರುತಿಸುತ್ತಿರುವುದು ಶ್ಲಾಘನೀಯ. ನೂತನ ಗೆಜ್ಜೆಗಿರಿ ಯಕ್ಷಗಾನ ಮೇಳವು ಯಶಸ್ವಿಯಾಗಿ ನಡೆಯಲಿ ಎಂದು ಶುಭ ಹಾರೈಸಿದರು.

ಶ್ರೀ ನಾರಾಯಣ ಗುರು ವಿಚಾರ ವೇದಿಕೆಯ ರಾಜ್ಯಾಧ್ಯಕ್ಷ ಸತ್ಯಜಿತ್‌ ಸುರತ್ಕಲ್ ಮಾತನಾಡಿ . ಗೆಜ್ಜೆಗಿರಿ ಯಕ್ಷಗಾನ ಮೇಳದ ಮೂಲಕ ತುಳುನಾಡಿನ ವೀರ ಪುರುಷರಾದ ಕೋಟಿ ಚೆನ್ನಯ್ಯ , ದೇಯಿ ಬೈದೆತಿರವರ ಸಮಗ್ರ ಇತಿಹಾಸವನ್ನು ತಲುಪಿಸುವ ಕಾರ್ಯ ನಡೆಯುತ್ತಿದೆ. ರಕ್ಷಿತ್ ಶಿವರಾಂ ರವರು ಮೇಳದ ಮೊದಲ ಐದು ದಿನಗಳ ಬಯಲಾಟ ಪ್ರದರ್ಶಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಗೆಜ್ಜೆಗಿರಿ ಸಮಿತಿಯ ಅಧ್ಯಕ್ಷರಾದ ಪಿತಾಂಬರ ಹೇರಾಜೆ, ಯಕ್ಷ ಬಳಗ ಬೆಳ್ತಂಗಡಿ ಅಧ್ಯಕ್ಷ ಸಂತೋಷ್ ಗೌಡ ವಳಂಬ್ರ ,ಕಾರ್ಯದರ್ಶಿ ನಿತ್ಯಾನಂದ ನಾವರ , ಉಜಿರೆ ವಲಯ ಸಮಿತಿಯ ಅಧ್ಯಕ್ಷರಾದ ಶ್ರೀದರ ಪೂಜಾರಿ ,ಕಾರ್ಯದರ್ಶಿ ಪ್ರವೀಣ್ ವಿ.ಜಿ ಕೋಶಾದಿಕಾರಿ ಪ್ರವೀಣ್ ಉಜಿರೆ , ಸೇರಿದಂತೆ ಪ್ರಮುಖರಾದ ಮೋಹನ್ ಶೆಟ್ಟಿಗಾರ್ ,ಶ್ರೀಮತಿ ಲೋಕೇಶ್ವರಿ ವಿನಯಚಂದ್ರ ಗೌಡ , ಗೆಜ್ಜೆಗಿರಿ ಆಡಳಿತ ಮಂಡಳಿ ಸದಸ್ಯ ಉಲ್ಲಾಸ್ , ಯುವ ನ್ಯಾಯವಾದಿ ಮನೋಹರ್ ಕುಮಾರ್ ಇಳಂತಿಲ , ಗ್ರಾಮ ಪಂಚಾಯತ್ ಉಪಾಧ್ಯಕ್ಷ ರವಿಕುಮಾರ್ ಬರೆಮೇಲು , ಮೆರವಣಿಗೆ ಸಮಿತಿ ಸಂಚಾಲಕ ಮನೋಜ್ ಕುಂಜರ್ಪ ಹಾಗೂ ಸಮಿತಿಯ ಪದಾಧಿಕಾರಿಗಳು ಪ್ರಮುಖರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಯಕ್ಷಗಾನ ಹಿರಿಯ , ಕಿರಿಯ ಕಲಾವಿದರು ಸೇರಿದಂತೆ ಕಲಾ ಪೋಷಕರನ್ನು ಸನ್ಮಾನಿಸಲಾಯಿತು. ಸಾವಿರಾರು ಸಂಖ್ಯೆಯಲ್ಲಿ ಜನರು ನೆರೆದಿದ್ದರು.

Related Posts

Leave a Reply

Your email address will not be published.