ಸುಳ್ಯ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ 83ನೇ ಹುಟ್ಟುಹಬ್ಬ ಆಚರಣೆ – ಸರಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣುಹಂಪಲು ವಿತರಣೆ

ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ಖರ್ಗೆಯವರ 83ನೇ ವರ್ಷದ ಹುಟ್ಟು ಹಬ್ಬದ ಪ್ರಯುಕ್ತ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ತೆಕ್ಕಿಲ್ ಪ್ರತಿಷ್ಟಾನದ ಸ್ಥಾಪಕಧ್ಯಕ್ಷರಾದ ಟಿ. ಎಂ ಶಹೀದ್ ತೆಕ್ಕಿಲ್ ರವರ ನೇತೃತ್ವದಲ್ಲಿ ಸುಳ್ಯ ಕಾಂಗ್ರೆಸ್ ಮುಖಂಡರು ಇಂದು ಸುಳ್ಯದ ಸರ್ಕಾರಿ ತಾಲೂಕು ಆಸ್ಪತ್ರೆಯಲ್ಲಿನ ಬಡ ರೋಗಿಗಳಿಗೆ ಹಣ್ಣು ಹಂಪಲು ವಿತರಣಾ ಕಾರ್ಯಕ್ರಮ ನಡೆಸಲಾಯಿತು.

ಕಾರ್ಯಕ್ರಮದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಟಿ ಎಂ ಶಾಹಿದ್ ತೆಕ್ಕಿಲ್ ಮಾತನಾಡಿ ಎ ಐ ಸಿ ಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರು ಒಬ್ಬ ಸಾಮಾನ್ಯ ಕುಟುಂಬದಲ್ಲಿ ಜನಿಸಿ ತಮ್ಮ ಧೀಮಂತ ನಾಯಕತ್ವ ಮತ್ತು ಜನಪರ ಕೆಲಸಗಳಿಂದ ಇಂದು ಅತ್ಯುನ್ನತ ಸ್ಥಾನಕ್ಕೆ ಏರಿದ್ದಾರೆ. ಸಂವಿಧಾನಕ್ಕೆ ಅಪಾಯ ಎದುರಾಗುವ ಸನ್ನಿವೇಶ ಬಂದಾಗ, ಪರಿಶಿಷ್ಟರಿಗೆ ಹಿಂದುಳಿದವರಿಗೆ ಬಡವರಿಗೆ ಅನ್ಯಾಯವಾದ ಸಂದರ್ಭದಲ್ಲಿ, ಅಂಬೇಡ್ಕರ್ ತತ್ವವನ್ನು ಮೈಗೂಡಿಸಿಕೊಂಡು ದೇಶದ ಗಟ್ಟಿಧ್ವನಿಯಾಗಿ ನಮ್ಮೊಂದಿಗೆ ಇದ್ದಾರೆ. ರಾಜ್ಯ ಮತ್ತು ಕೇಂದ್ರ ಸಚಿವರಾಗಿ ಎಐಸಿಸಿ ಅಧ್ಯಕ್ಷರಾಗಿ ರಾಜ್ಯಸಭಾ ವಿರೋಧ ಪಕ್ಷದ ನಾಯಕರಾಗಿ ಅವರು ದೇಶಕ್ಕೆ ಮತ್ತು ಪಕ್ಷಕ್ಕೆ ಅಮೋಘ ಸೇವೆ ಸಲ್ಲಿಸಿದ್ದಾರೆ, ಅವರ ಹುಟ್ಟುಹಬ್ಬದ ಈ ಸಂದರ್ಭದಲ್ಲಿ ಅವರಿಗೆ ಹೆಚ್ಚಿನ ಅಧಿಕಾರ, ಆಯುರಾರೋಗ್ಯ ಭಾಗ್ಯ ಮತ್ತು ಸುಖ ಶಾಂತಿ ನೆಮ್ಮದಿಯನ್ನು ಆ ಭಗವಂತ ಕರುಣಿಸುವಂತೆ ಶುಭಹಾರೈಸಿದರು .

ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ನ ಕಾರ್ಯದರ್ಶಿ ರಾಧಾಕೃಷ್ಣ ಬೊಳ್ಳೂರು, ಸುಳ್ಯ ಬ್ಲಾಕ್ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿಗಳಾದ ಪಿ ಎಸ್ ಗಂಗಾಧರ ಈ ಸಂದರ್ಭದಲ್ಲಿ ಮಾತನಾಡಿ ಮಲ್ಲಿಕಾರ್ಜುನ ಖರ್ಗೆ ಯವರ ಹುಟ್ಟು ಹಬ್ಬಕ್ಕೆ ಶುಭ ಹಾರೈಸಿದರು. ಸುಳ್ಯ ಯುವ ಕಾಂಗ್ರೆಸ್ ನ ಅಧ್ಯಕ್ಷರಾದ ಚೇತನ್ ಕಜೆಗದ್ದೆ, ಸುಳ್ಯ ನಗರ ಕಾಂಗ್ರೆಸ್ ನ ಅಧ್ಯಕ್ಷರಾದ ಶಶಿಧರ ಎಂ ಜೆ, ಸುಳ್ಯ ತಾಲೂಕು ಗ್ಯಾರಂಟಿ ಅನುಷ್ಠಾನ ಯೋಜನೆಗಳ ಅನುಷ್ಠಾನ ಸಮಿತಿಯ ಸದಸ್ಯರಾದ ಭವಾನಿಶಂಕರ ಕಲ್ಮಡ್ಕ, ಸುಳ್ಯ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರಾದ ಗೋಕುಲ್ ದಾಸ್ ಸುಳ್ಯ, ಆರೋಗ್ಯ ರಕ್ಷಾ ಸಮಿತಿ ಸದಸ್ಯರುಗಳಾದ ಶಹೀದ್ ಪಾರೆ ಮತ್ತು ಅಬ್ದುಲ್ ರಜಾಕ್, ಜಿಲ್ಲಾ ಕಾಂಗ್ರೆಸ್ ಸಮಿತಿ ಸದಸ್ಯರು ಮತ್ತು ಬ್ಲಾಕ್ ಕಾಂಗ್ರೆಸ್ ವಕ್ತಾರರಾದ ನಂದರಾಜ ಸಂಕೇಶ್, ನಗರ ಪಂಚಾಯತ್ ಸದಸ್ಯರಾದ ಡೇವಿಡ್ ಧೀರಾ ಕ್ರಾಸ್ತಾ, ಬಾಲಸುಬ್ರಹ್ಮಣ್ಯ ಮೋಂಟಡ್ಕ, ಯುವ ಕಾಂಗ್ರೆಸ್ ಸದಸ್ಯರುಗಳಾದ ರಕ್ಷಿತ್ ಗೂನಡ್ಕ, ಮನೋಜ್ ಅಡ್ಯಡ್ಕ,ಇಬ್ರಾಹಿಂ ಜಯನಗರ, ಮಂಜುನಾಥ ಮಡ್ತಿಲ, ಶ್ರೀಮತಿ ಸರಸ್ವತಿ ಬೊಳಿಯಮಜಲು, ಹಾಜಿರ ಗಫೂರ್ ಕಲ್ಮಡ್ಕ ಮತ್ತಿತರರು ಉಪಸ್ಥಿತರಿದ್ದರು. ಆಸ್ಪತ್ರೆಯ ಸಿಬ್ಬಂದಿಗಳು ಹಣ್ಣುಹಂಪಲು ವಿತರಣೆಗೆ ಸಹಕರಿಸಿದರು.ಶಶಿಧರ್ ಎಂ ಜೆ ಸ್ವಾಗತಿಸಿ ನಂದರಾಜ್ ಸಂಕೇಶ್ ವಂದಿಸಿದರು. ಸುಳ್ಯ ತಾಲೂಕು ಆರೋಗ್ಯಾಧಿಕಾರಿಯಾಗಿದ್ದ ಡಾಕ್ಟರ್ ನಂದಕುಮಾರ್ ಅವರ ಪುತ್ರ ಆಸ್ತಿಕ್ ರಾಘವ್ ಬಾಳಿಕಳ ಅವರ ಅಕಾಲಿಕ ನಿಧನಕ್ಕೆ ಒಂದು ನಿಮಿಷ ಮೌನ ವೃತ ಆಚರಿಸಿ ಸಂತಾಪ ಸೂಚಿಸಲಾಯಿತು.

add - BDG

Related Posts

Leave a Reply

Your email address will not be published.