ಬಂಟ್ವಾಳ: ಯುವ ವಕೀಲ ಕುಲದೀಪ್ ಶೆಟ್ಟಿ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿ ದೌಜ್ಯನ್ಯ ನಡೆಸಿದ ಪುಂಜಾಲಕಟ್ಟೆ ಪೆÇಲೀಸರ ಅಮಾನತಿಗೆ ಆಗ್ರಹಿಸಿ ಜಿಲ್ಲಾಯದ್ಯಂತ ವಕೀಲರ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದ್ದರೆ ಯುವ ವಕೀಲನ ಉಪಟಳದಿಂದ ತುಂಬಾ ತೊಂದರೆಯಾಗಿದ್ದು ಮಾನಸಿಕವಾಗಿ ಕುಗ್ಗಿ ಹೋಗಿರುವುದಾಗಿ ದೂರುದಾರ ವಸಂತಗೌಡ ಅವರ ಪತ್ನಿ ಭವಾನಿ ಅಳಲು ತೋಡಿಕೊಂಡಿದ್ದಾರೆ.
ಬಂಟ್ವಾಳ ತಾಲೂಕಿನ ಅಜ್ಜಿಬೆಟ್ಟು ಗ್ರಾಮದ ಆಲದಪದವು ಅಕ್ಷರ ಭಾರತಿ ವಿದ್ಯಾಲಯದಲ್ಲಿ 22ನೇ ವರ್ಷದ ಸಂಭ್ರಮ “ಅಕ್ಷರ ಉತ್ಸವ” ವು ಡಿ.10ರಂದು ಶನಿವಾರ ನಡೆಯಲಿದೆ. ಬೆಳಿಗ್ಗೆ 9.30 ಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್ ಅಕ್ಷರ ಉತ್ಸವವನ್ನು ಉದ್ಘಾಟಿಸುವರು. ವಿವಿಧ ಕ್ಷೇತ್ರದ ಗಣ್ಯರ ಉಪಸ್ಥಿತಿಯಲ್ಲಿ ಬಹುಮಾನ ವಿತರಣೆ ನಡೆಯಲಿದೆ. ಸಂಜೆ 4 ಗಂಟೆಗೆ ಶಾಲಾ ಸಂಚಾಲಕ ಮೋಹನ್ ರೈ.ಕೆ. ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಲಿದ್ದು ಶಾಸಕ ರಾಜೇಶ್
ಬಂಟ್ವಾಳ: ಕಲಾವಿದರಿಗೆ ಸೂಕ್ತ ಅವಕಾಶ ಹಾಗೂ ಪ್ರೊತ್ಸಾಹಗಳು ಸಿಕ್ಕಾಗ ಅವರ ಪ್ರತಿಭೆ ಅನಾವರಣಗೊಳ್ಳಲು ಸಾಧ್ಯವಿದೆ. ಬಂಟ್ವಾಳದ ಉದಯೋನ್ಮುಖ ಚಿತ್ರಕಲಾವಿದನೋರ್ವನಿಗೆ ಆತನ ಚಿತ್ರಕಲಾ ಶಿಕ್ಷಕರು ನೀಡಿದ ಪ್ರೋತ್ಸಾಹ ಹಾಗೂ ಹಿತೈಷಿಗಳು ನೀಡಿದ ಅವಕಾಶದಿಂದ ಇಂದು ಯಶಸ್ವಿ ಚಿತ್ರಕಲಾಕಾರನಾಗಿ ಮೂಡಿ ಬರುತಿದ್ದಾನೆ. ತಾಲೂಕಿನ ಪಾಣಮಂಗಳೂರಿನಲ್ಲಿರುವ ನವರಂಗ್ ಸ್ಮರಣಿಕ ಕೇಂದ್ರ ಹಾಗೂ ಅಲ್ಲೇ ಪಕ್ಕದಲ್ಲಿರುವ ಪೋನಸ್ ಹಲಸಿನ ಅಂಗಡಿಗೆ ಭೇಟಿ ನೀಡಿದಾಗ ಅದರ ಗೋಡೆಗಳಲ್ಲಿ
ಬಂಟ್ವಾಳ: ಕತಾರ್ ಪಿಫಾ ವರ್ಲ್ಡ್ ಕಪ್ ಮೆಡಿಕಲ್ ಟೀಮಿಗೆ ಸೇವೆ ಸಲ್ಲಿಸಲು ತುಳುನಾಡಿನ ಮಹಿಳೆಯೊರ್ವರು ಆಯ್ಕೆಯಾಗಿದ್ದಾರೆ.ದ.ಕ.ಜಿಲ್ಲೆಯ ಬಂಟ್ವಾಳ ತಾಲೂಕಿನ ಕುಡಂಬೆಟ್ಟು ಗ್ರಾಮದ ದೋಟ ದರ್ಖಾಸು ನಿವಾಸಿ ನವೀನ್ ಪೂಜಾರಿಯವರ ಪತ್ನಿ ಪ್ರತಿಭಾ ಎನ್.ದರ್ಖಾಸು ಎಂಬವರು ಇದೀಗ ಕತಾರಿನ ವರ್ಲ್ಡ್ ಕಪ್ ಮೆಡಿಕಲ್ ಟೀಮಿನಲ್ಲಿ ಸೇವೆ ಸಲ್ಲಿಸಲು ಆಯ್ಕೆಯಾದವರು. ಈ ಮೂಲಕ ಇವರು ವರ್ಲ್ಡ್ ಕಪ್ ಮೆಡಿಕಲ್ ಟೀಮಿಗೆ ಆಯ್ಕೆಯಾದ ಕರ್ನಾಟಕದ ಏಕೈಕ ಮಹಿಳೆ ಎಂಬ ಗೌರವಕ್ಕೆ
ಬಂಟ್ವಾಳ: ಎರಡು ದಿನಗಳ ಹಿಂದೆ ಮಂಗಳೂರಿನ ನಾಗುರಿಯಲ್ಲಿ ಆಟೋರಿಕ್ಷಾದಲ್ಲಿ ನಡೆದ ಕುಕ್ಕರ್ ಸ್ಪೋಟ ಪ್ರಕರಣವನ್ಬು ಸರಕಾರ ಗಂಭೀರವಾಗಿ ಪರಿಗಣಿಸಿ ಇದರ ಹಿಂದಿರುವ ವ್ಯವಸ್ಥಿತ ಜಾಲವನ್ನು ಪತ್ತೆ ಹಚ್ಚಿ ಭಯೋತ್ಪಾದಕ ಮೂಲವನ್ನು ಬೇಧಿಸಬೇಕು ಎಂದು ಆರ್ .ಎಸ್ .ಎಸ್ ಮುಖಂಡ ಕಲ್ಲಡ್ಕ ಡಾ. ಪ್ರಭಾಕರ್ ಭಟ್ ಅವರು ಒತ್ತಾಯಿಸಿದ್ದಾರೆ.ನಂದಾವರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದೊಗೆ ಮಾತನಾಡಿದ ಅವರು, ರಾಜ್ಯದ ದ.ಕ.ಜಿಲ್ಲೆ ಭಯೋತ್ಪಾದಕ ಸಂಘಟನೆಯ ತಾಣವಾಗುತ್ತಿರುವುದು ದುರ್ದೈವ
ಬಂಟ್ವಾಳ : ಸಿಡಿಲಿನ ಅಘಾತಕ್ಕೆ ಬಾಲಕನೋರ್ವ ಬಲಿಯಾದ ಘಟನೆ ಬಂಟ್ವಾಳ ಕರಿಯಂಗಳ ಗ್ರಾಮದಲ್ಲಿ ನಡೆದಿದೆ. ಸಾಣೂರುಪದವು ಗಣೇಶ್ ಆದಿದ್ರಾವಿಡ ಅವರ ಪುತ್ರ 16 ವರ್ಷದ ಕಾರ್ತಿಕ್ ಸಿಡಿಲು ಬಡಿದು ಮೃತಪಟ್ಟ ದುರ್ದೈವಿ.ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಭಾಗಗಳಲ್ಲಿ ನಿನ್ನೆ ರಾತ್ರಿ ಭಾರೀ ಮಳೆ ಸುರಿದಿದ್ದು ರಾತ್ರಿ ಮನೆಯಲ್ಲಿ ಇರುವ ಎಲ್ಲರೂ 9 ರ ಸುಮಾರಿಗೆ ಊಟ ಮುಗಿಸಿ ಮಲಗಿದ್ದು ಈ ವೇಳೆ ಸಿಡಿಲು ಸಹಿತ ಮಳೆ ಬಂದು, ಮಲಗಿದ್ದವರಿಗೆ ಕರೆಂಟ್ ಶಾಕ್ ಹೊಡೆದ
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿರುವ ಹಿನ್ನೆಲೆಯಲ್ಲಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಇಂದಿನಿಂದ 3 ದಿನ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಇಂದು ಕರಾವಳಿಯ ಹಲವು ಕಡೆ ಸಾಧಾರಣ ಮಳೆಯಾಗುವ ಸಾಧ್ಯತೆ ಇದ್ದು, ಉತ್ತರ ಒಳನಾಡಿನ ಕೆಲವು ಭಾಗಗಳಲ್ಲಿ ಮಳೆ ಹೆಚ್ಚು ಮಳೆಯಾಗಲಿದೆ. ಕರ್ನಾಟಕದ ಉತ್ತರ ಒಳನಾಡು, ಮಲೆನಾಡು, ಕರಾವಳಿ ಭಾಗಗಳಲ್ಲಿ ನ. 17ರವರೆಗೆ ಭಾರೀ ಮಳೆಯಾಗುವ ನಿರೀಕ್ಷೆಯಿದ್ದು, ರಾಜ್ಯದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಧಾರವಾಡ, ಗದಗ,
ಇಂಗ್ಲೀಷ್ ಮಾಧ್ಯಮ ಶಾಲೆಗಳ ಮೂಲಭೂತ ಸೌಲಭ್ಯ, ಶಿಕ್ಷಣ ಶೈಲಿಯಿಂದಾಗಿ ಹೆಚ್ಚಿನ ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸುತ್ತಾರೆ. ಇದು ಸರಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಗಣನೀಯ ಕುಸಿತಕ್ಕೂ ಕಾರಣವಾಗಿದೆ. ಆದರೆ ಇಲ್ಲೊಂದು ಸರಕಾರಿ ಶಾಲೆಯ ಹಳೆ ವಿದ್ಯಾರ್ಥಿಗಳು ಶಾಲೆಗೆ ಮಕ್ಕಳನ್ನು ಆಕರ್ಷಿಸಲು ಯೋಜನೆಯೊಂದನ್ನು ಹಾಕಿಕೊಂಡಿದ್ದಾರೆ. ಆ ಯೋಜನೆ ಏನು ಗೊತ್ತಾ? ನೀವೇ ನೋಡಿ. ಇದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ. ಬಂಟ್ವಾಳ ತಾಲೂಕಿನ ಗ್ರಾಮೀಣ
ಬಂಟ್ವಾಳ : ಆಟೋ ಚಾಲಕನೋರ್ವನನ್ನು ದುಷ್ಕರ್ಮಿಗಳು ಹತ್ಯೆ ಮಾಡಲು ಯತ್ನಿಸಿದ ಘಟನೆ ಬಂಟ್ವಾಳದ ವಿಟ್ಲದ ಬೋಳಂತೂರು ಸಮೀಪದ ನಾಡಾಜೆ ಎಂಬಲ್ಲಿ ನಡೆದಿದೆ. ಬೋಳಂತೂರು ಸಮೀಪದ ಗುಳಿ ನಿವಾಸಿಯಾಗಿರುವ ಅಬೂಬಕ್ಕರ್ ಎಂಬವರ ಪುತ್ರ ಆಟೋ ಚಾಲಕ ಶಾಕೀರ್ (30) ದುಷ್ಕರ್ಮಿಗಳಿಂದ ಹಲ್ಲೆಗೊಳಗಾದ ಯುವಕ. ನಿನ್ನೆ ರಾತ್ರಿ ಸುಮಾರು 2 ಗಂಟೆಯ ಸುಮಾರಿಗೆ ಕಬಡ್ಡಿ ಮ್ಯಾಚ್ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದ ಶಾಕೀರ್‍ನನ್ನು ಬೋಳಂತೂರು ಸಮೀಪದ ನಾಡಾಜೆ ರಸ್ತೆಯಲ್ಲಿ ತಡೆದು
ಎರಡು ದಿನಗಳ ಕಾಲ ನಡೆಯುವ ಬಂಟ್ವಾಳ ತಾಲೂಕು 22 ನೇ ಕನ್ನಡ ಸಾಹಿತ್ಯ ಸಮ್ಮೇಳನ ಶನಿವಾರದಂದು ಬಂಟ್ವಾಳ ತಾಲೂಕಿನ ಅಮ್ಮುಂಜೆ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉದ್ಘಾಟನೆಗೊಂಡಿತು. ನಿವೃತ್ತ ಪ್ರಾಂಶುಪಾಲ ಹಾಗೂ ಹಿರಿಯ ಪತ್ರಕರ್ತ ಪ್ರೊ.ಬಾಲಕೃಷ್ಣ ಗಟ್ಟಿ ಅವರು ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದಾರೆ. ಅಮ್ಮುಂಜೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಡರು ದಿನಗಳ ಕಾಲ ನಡೆಯುವ ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಶನಿವಾರ ಸಂಜೆ ಶಾಸಕ ರಾಜೇಶ್




























