ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರು ನ. 25ರಂದು 75ನೇ ವಸಂತಕ್ಕೆ ಕಾಲಿಡಲಿದ್ದು, ತಮ್ಮ ನಿವಾಸದಲ್ಲಿ ಸರಳವಾಗಿ ಜನ್ಮದಿನಾಚರಣೆ ಆಚರಿಸಿಕೊಳ್ಳಲಿರುವರು. ಧರ್ಮಾಧಿಕಾರಿಗಳಾಗಿದ್ದ ಕೀರ್ತಿಶೇಷ ಡಿ. ರತ್ಮವರ್ಮ ಹೆಗ್ಗಡ ಮತ್ತು ರತ್ನಮ್ಮ ದಂಪತಿಯ ಹಿರಿಯ ಪುತ್ರನಾಗಿ 1948ರ ನ. 25ರಂದು ಜನಿಸಿದ ವೀರೇಂದ್ರ ಕುಮಾರ್ ಅವರು ಡಿ.
ಬೆಳ್ತಂಗಡಿ : ಬೈಕ್ ಸ್ಕಿಡ್ ಆಗಿ ಕಲ್ಲಿನಕಂಬಕ್ಕೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ಮುಂಡಾಜೆ ಗ್ರಾಮದ ದುರ್ಗಾಪರಮೇಶ್ವರೀ ದೇವಸ್ಥಾನದ ಪಕ್ಕದ ತಿರುವು ರಸ್ತೆಯಲ್ಲಿ ನಡೆದಿದೆ.ಅಣಿಯೂರಿನ ನೆರಿಯದ ಪ್ರದೀಪ ಗೌಡ (22) ಮೃತ ಯುವಕ.ಅಣಿಯೂರಿನ ನೋಣಯ್ಯ ಗೌಡ ಎಂಬವರ ಪುತ್ರರಾಗಿರುವ ಪ್ರದೀಪ ಅವರು ಸಂಬಂಧಿಗಳ ಮನೆಯಲ್ಲಿ ಇರುವ ಶುಭ ಕಾರ್ಯದ ನಿಮಿತ್ತ ವಸ್ತುವೊಂದನ್ನು ನೀಡಲು ತೆರಳುತ್ತಿದ್ದರು.ಈ ವೇಳೆ ಪ್ರದೀಪ್ ಚಲಾಯಿಸುತ್ತಿದ್ದ ಬೈಕ್ ನಿಯಂತ್ರಣ
ಬೆಳ್ತಂಗಡಿ ತಾಲೂಕಿನ ಮೇಲಂತಬೆಟ್ಟು ಗ್ರಾಮದ ಕಡಂಬು ಎಂಬಲ್ಲಿ ಯುವ ಉದ್ಯಮಿ ಶಶಿರಾಜ್ ಶೆಟ್ಟಿ ಅವರ ಮನೆಯ ಹಿಂಭಾಗ ಉಡವೊಂದನ್ನು ಬೇಟೆಯಾಡಿದ ಬೃಹತ್ ಗಾತ್ರದ ಕಾಳಿಂಗ ಸರ್ಪವೊಂದನ್ನು ಸೆರೆ ಹಿಡಿಯಲಾಯಿತು. ಉದ್ಯಮಿ ಶಶಿರಾಜ್ ಶೆಟ್ಟಿ ಯವರ ಮನೆಯ ಹಿಂಭಾಗದಲ್ಲಿ ದೊಡ್ಡ ಗಾತ್ರದ ಉಡವನ್ನು ಬೃಹತ್ ಗಾತ್ರದ ಕಾಳಿಂಗ ಸರ್ಪವೊಂದು ಬೇಟೆಯಾಡುವುದನ್ನು ಗಮನಿಸಿ ಸ್ನೇಕ್ ಅಶೋಕ್ ಕುಮಾರ್ ಲಾಯಿಲ ಅವರಿಗೆ ಮಾಹಿತಿ ನೀಡಿದರು. ತಕ್ಷಣ ಆಗಮಿಸಿದ ಸ್ನೇಕ್ ಅಶೋಕ್ ಕುಮಾರ್ ಅವರು
ಬೆಳ್ತoಗಡಿತಾಲೂಕಿನಲ್ಲಿರಾಷ್ಟೀಯ ಹೆದ್ದಾರಿ 73ರಲ್ಲಿ ಗುರುವಾಯನಕೆರೆಯಿಂದ ಉಜಿರೆವರೆಗೆ ಹೊಂಡಮಯವಾಗಿರುವ ಸ್ಥಳಗಳಿಗೆ ಕಡೆಗೂ ತೇಪೆ ಕಾರ್ಯಕ್ಕೆ ಇಲಾಖೆ ಮುಂದಾಗಿದೆ.ಪೂoಜಾಲಕಟ್ಟೆಯಿoದ ಚಾರ್ಮಾಡಿ ವರೆಗಿನ ರಸ್ತೆಯಲ್ಲಿ ಅಲ್ಲಲ್ಲಿ ಹೊಂಡಗುAಡಿ ಸೃಷ್ಟಿಯಾಗಿದ್ದು, ವಾಹನ ಸವಾರರು ಹರಸಾಹಸ ಪಡುವಂತಾಗಿತ್ತು. ದುರಸ್ತಿಗೆ ಅನೇಕ ಬಾರಿ ಪ್ರತಿಭಟನೆಗಳು ನಡೆದರೂ ಮಳೆಯಿಂದಾಗಿ ದುರಸ್ತಿ ಕಾರ್ಯ ಮುಂದೂಡಲೇ ಹೋಗಿತ್ತು. ಇದೀಗ ಕಳೆದ ಕೆಲ ದಿನಗಳಿಂದ ಮಳೆ ನಿಂತಿರುವುದಿರAದ
ಬೆಳ್ತಂಗಡಿಯಲ್ಲಿ ವಿದ್ಯುತ್ ಬಿಲ್ ವಿಚಾರವಾಗಿ ಪವರ್ ಮ್ಯಾನ್ ಮೇಲೆ ಹಲ್ಲೆ ನಡೆದಿದೆ. ಬೆಳ್ತಂಗಡಿ ತಾಲೂಕಿನ ಹತ್ಯಡ್ಕ ಗ್ರಾಮದ ಅಡ್ಕಾಡಿ ಕಾಂತು ಪೂಜಾರಿ ಎಂಬವರು ಹಲವಾರು ತಿಂಗಳಿನಿಂದ ವಿದ್ಯುತ್ ಬಿಲ್ ಕಟ್ಟಿರಲಿಲ್ಲ. ಹಲವಾರು ಬಾರಿ ಮನವಿ ಮಾಡಿದರೂ ಬಿಲ್ ಕಟ್ಟದೆ ಇರುವುದರಿಂದ ಅಲ್ಲಿನ ಪವರ್ ಮ್ಯಾನ್ ಉಮೇಶ್ ಮೇಲಾಧಿಕಾರಿಗಳ ಆದೇಶದಂತೆ ಮನೆಯ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದರು ಇದೇ ಕಾರಣಕ್ಕಾಗಿ ಪವರ್ ಮ್ಯಾನ್ ಉಮೇಶ್ ಹಾಗೂ ದುಂಡಪ್ಪ ಎಂಬವರ ಮೇಲೆ
ದಕ್ಷಿಣಕನ್ನಡಈಶ್ವರ ಮಂಗಲ:ಸರಕಾರಿ ಬಸ್ ನಿರ್ವಾಹಕ ನಿಂದ ಅಮಾನುಷ ಹಲ್ಲೆ, ಕ್ರಮಕ್ಕೆ ಆಗ್ರಹಈಶ್ವರಮಂಗಲ :ಪುತ್ತೂರಿನಿಂದ ಈಶ್ವರಮಂಗಲ ಮಾರ್ಗವಾಗಿ ಸುಳ್ಯ ಪದವು ಕಡೆಗೆ ಸಂಜೆ ಬರುತ್ತಿದ್ದ ಸರಕಾರಿ ಬಸ್ ನಲ್ಲಿ ಪಾನ ಮತ್ತ ಪ್ರಯಾಣಿಕೋರ್ವನಿಗೆ ನಿರ್ವಾಹಕ ಕೈಯಿಂದ ಹಲ್ಲೆ ನಡೆಸಿ ಕಾಲಿನಿಂದ ದೂಡಿ ಹಾಕಿದ ಘಟನೆ ಇಂದು ಸಂಜೆ ಈಶ್ವರ ಮಂಗಲ ಪೇಟೆಯಲ್ಲಿ ನಡೆದಿದೆ. ಸಂಜೆ ಈಶ್ವರಮಂಗಲದಲ್ಲಿ ಬಸ್ಸಿಗಾಗಿ ಕಾಯುತ್ತಿದ್ದ ಪಡುವನ್ನೂರು ಗ್ರಾಮದ ಪದಡ್ಕದ ನಿವಾಸಿ ಕೃಷ್ಣಪ್ಪ
ಉಜಿರೆ: “ಕ್ರಿಯಾಶೀಲತೆ, ಧೈರ್ಯ, ಸಾಮರ್ಥ್ಯ ಮತ್ತು ಸಂವಹನ ಕೌಶಲಗಳು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗುತ್ತದೆ. ಸತತ ಪ್ರಯತ್ನ ಹಾಗೂ ಏಕಾಗ್ರತೆಯಿಂದ ಜೀವನದಲ್ಲಿ ಗೆಲುವು ಸಾಧಿಸಬಹುದು” ಎಂದು ಎಸ್.ಡಿ.ಎಂ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಎನ್ ದಿನೇಶ್ ಚೌಟಾ ಹೇಳಿದರು. ಅವರು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ವಿಜ್ಞಾನ ವಿಭಾಗವು ಆಯೋಜಿಸಿದ್ದ 2022ನೇ ಸಾಲಿನ ವಿಜ್ಞಾನಸಿಂಚನ ಎಂಬ ಅಂತರ್ ಕಾಲೇಜು
ಬೆಳ್ತಂಗಡಿ : ಮನೆಯಲ್ಲಿ ಒಬ್ಬಂಟಿಯಾಗಿದ್ದ ಅಜ್ಜಿಯನ್ನು ಕಟ್ಟಿಗೆಯಿಂದ ಹೊಡೆದು ಕೊಲೆ ಮಾಡಿ ಚಿನ್ನಾಭರಣ ಹಾಗೂ ಹಣ ದರೋಡೆ ಮಾಡಿರುವ ಘಟನೆ ಬೆಳ್ತಂಗಡಿ ತಾಲೂಕಿನ ಬೆಳಾಲು ಗ್ರಾಮದ ಕೆರೆಕೋಡಿ ಮನೆಯಲ್ಲಿ ನಡೆದಿದೆ. ಕಡಿರುದ್ಯಾವರ ಗ್ರಾಮದ ಕಾನರ್ಪ ಕುಮೇರು ನಿವಾಸಿ ಅಶೋಕ್ (28) ವೃದ್ಧೆಯನ್ನು ಕೊಲೆಗೈದ ಆರೋಪಿ. ಅಶೋಕ್ ಕೊಲೆಯಾದ ಅಕ್ಕು ಅವರ ಪುತ್ರ ಡೀಕಯ್ಯ ಅವರ ಪತ್ನಿಯ ಸಹೋದರಿಯ ಪುತ್ರನಾಗಿದ್ದ. ಈತ ಐಸ್ ಕ್ರೀಂ ವಾಹನದಲ್ಲಿ ಕೆಲಸ ಮಾಡುತ್ತಿದ್ದ.
ವಿಕಲ ಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಅಲಿಮ್ಕೊ ಸಂಸ್ತೆ ಬೆಂಗಳೂರು, ತಾಲೂಕು ಪಂಚಾಯತ್ ಬೆಳ್ತಂಗಡಿ,ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಬೆಳ್ತಂಗಡಿ ವತಿಯಿಂದ ವಿಕಲ ಚೇತನರ ಸಾಧನ ಸಲಕರಣೆ ವಿತರಣಾ ಕಾರ್ಯಕ್ರಮ ಬೆಳ್ತಂಗಡಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಲಾ ಭವನದಲ್ಲಿ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬೆಳ್ತಂಗಡಿ ತಾಲೂಕಿನ ಶಾಸಕರಾದ ಹರೀಶ್ ಪೂಂಜಾ ರವರು ವಿಕಲ ಚೇತನರ ಶ್ರೆಯಾಭಿವೃದ್ದಿ ದೃಷ್ಟಿಯಿಂದ ಅನೇಕ ಯೋಜನೆಗಳನ್ನು ಮ್ಮ