Home Posts tagged #belthangadi (Page 9)

ಧರ್ಮಸ್ಥಳ : ಅಮಿತ್ ಶಾ ಗೆ ಧರ್ಮಸ್ಥಳ ಪ್ರಸಾದ

ಬೆಳ್ತಂಗಡಿ : ಮಾಜಿ ಸಚಿವ ಈಶ್ವರಪ್ಪ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಫೆ.11 ರಂದು ಭೇಟಿ ಮಾಡಿ ಮಂಜುನಾಥ ದರ್ಶನ ಪಡೆದರು. ನಂತರ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆಯವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಈ ವೇಳೆ ಕೇಂದ್ರ ಗೃಹಸಚಿವ ಅಮಿತ್ ಶಾ ಗೆ ನೀಡಲಿರೋ ಪ್ರಸಾದ್‍ವನ್ನ ಮಾಜಿ ಸಚಿವ ಈಶ್ವರಪ್ಪಗೆ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ನೀಡಿದರು. ಇಂದು

ತುಳುನಾಡಿನಲ್ಲೊಂದು ಅಪರೂಪದ ನವಗುಳಿಗ ದೈವದ ಗಗ್ಗರ ಸೇವೆ…!

ಬೆಳ್ತಂಗಡಿ : ದೈವಸ್ಥಾನಗಳಲ್ಲಿಕ್ಷೇತ್ರಪಾಲ ದೈವವಾಗಿ ಒಂದು ಅಥವಾ ಎರಡು ಗುಳಿಗ ದೈವದ ಸಾನಿಧ್ಯವಿರುವುದು ಮಾಮೂಲಿ. ಗುಳಿಗ ನೀಚನೂ, ಉಗ್ರನೂ ಆದ ದೈವ. ಇಂತಹ ಗುಳಿಗನ ಕೋಲ ನೋಡಲೆಂದು ಭಾರೀ ಜನಸ್ತೋಮವೇ ಸೇರುತ್ತದೆ. ಆದರೆ ಇಲ್ಲೊಂದು ಕಡೆಗಳಲ್ಲಿ ಒಂಬತ್ತು ಗುಳಿಗ ದೈವಗಳಿಗೆ ಒಂದೇ ಬಾರೀ ಕೋಲ ನಡೆಯುತ್ತದೆ. ಏನಿದರ ವಿಶೇಷವೆಂದು ನೋಡಲು ಈ ಸ್ಟೋರಿ ನೋಡಿ ಹೌದು.. ದೇವಿಯ ದೂತನಾಗಿರುವ ಗುಳಿಗನಿಗೆ ದೇವಿ ಆಲಯಗಳಲ್ಲಿ ಪ್ರತ್ಯೇಕ ಸಾನಿಧ್ಯವಿರುತ್ತದೆ. ಆದರೆ ದಕ್ಷಿಣ

ಪರಿಸರಕ್ಕೆ ಪೂರಕವಾಗಿ ಅಭಿವೃದ್ಧಿ ನಡೆಯಬೇಕು: ಡಾ. ಜಗದೀಶ್ ಬಾಳ

ಉಜಿರೆ, : ಮುಂದಿನ ಪೀಳಿಗೆಯನ್ನು ಗಮನದಲ್ಲಿಟ್ಟುಕೊಂಡು ಮಾಡಿದ ಅಭಿವೃದ್ಧಿ ಮಾತ್ರ ಸುಸ್ಥಿರ ಅಭಿವೃದ್ಧಿ ಎಂದು ಪರಿಗಣಿಸಲ್ಪಡುತ್ತದೆ. ಪರಿಸರಕ್ಕೆ ಪೂರಕವಾಗಿ ಅಭಿವೃದ್ಧಿ ನಡೆಯಬೇಕು ಎಂದು ಬಲ್ಮಠದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲ ಡಾ. ಜಗದೀಶ್ ಬಾಳ ಹೇಳಿದರು. ಇಲ್ಲಿನ ಶ್ರೀ ಕೃಷ್ಣಾನುಗ್ರಹ ಸಭಾಭವನದ ಕುಂಬ್ಳೆ ಸುಂದರ ರಾವ್ ಪ್ರಾಂಗಣದ ಸಾರಾ ಅಬೂಬಕ್ಕರ್ ವೇದಿಕೆಯಲ್ಲಿ ನಡೆಯುತ್ತಿರುವ ಮೂರು ದಿನಗಳ ದ.ಕ. ಜಿಲ್ಲಾ 25ನೆಯ ಕನ್ನಡ ಸಾಹಿತ್ಯ

ಸಮ್ಮೇಳನಕ್ಕೆ ಮೆರಗು ನೀಡಿದ ‘ಕಲಾವೈಭವ’

ಉಜಿರೆ, : ದಕ್ಷಿಣ ಕನ್ನಡ ಜಿಲ್ಲಾ 25ನೆಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಶನಿವಾರ ಸಂಜೆ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಎಸ್ ಡಿ ಎಂ ಕಾಲೇಜಿನ ಕಲಾಕೇಂದ್ರದ ವಿದ್ಯಾರ್ಥಿಗಳು ‘ಕಲಾವೈಭವ’ ನೃತ್ಯದ ಮೂಲಕ ಕಲಾರಾಧಕರನ್ನು ರಂಜಿಸಿದರು. ಕಲಾಕೇಂದ್ರದ ಒಟ್ಟು 200 ಮಂದಿ ವಿದ್ಯಾರ್ಥಿಗಳು ತಂಡೋಪತಂಡವಾಗಿ ಸಾಂಸ್ಕೃತಿಕ ಕಾರ್ಯಕ್ರಮ ಪ್ರಸ್ತುತಪಡಿಸಿದರು. ಕೇರಳ ಶೈಲಿಯ ಮೋಹಿನಿಯಾಟ್ಟಂ, ಶಿವತಾಂಡವ ನೃತ್ಯ, ಗುಜರಾತಿನ ಗರ್ಬಾ ದಾಂಡ್ಯ, ಕಥಕ್ ಹೀಗೆ ವಿವಿಧ ರೀತಿಯ

ಎಸ್‍ಡಿಪಿಐ ಕಾರ್ಯಕರ್ತರಿಂದ ಕಾಂಗ್ರೆಸ್ ವಿರುದ್ಧ ಅಪಪ್ರಚಾರ..!!!

ಎಸ್ಟಿಪಿಐ ಪಕ್ಷದ ಕಾರ್ಯಕರ್ತರು ಕಾಂಗ್ರೆಸ್ ನಿಂದ ಮುಸ್ಲಿಮರಿಗೆ ಯಾವುದೇ ಕೊಡುಗೆ ನೀಡಿಲ್ಲ ಎಂದು ಸುಳ್ಳು ಪ್ರಚಾರ ಮಾಡುತ್ತಿದ್ದಾರೆ ಎಂದು ಬೆಳ್ತಂಗಡಿ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾದ ಸಲೀಂ ಹೇಳಿದರು. ಅವರು ಬೆಳ್ತಂಗಡಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಡಿಕೆ ಶಿವಕುಮಾರ್ ರವರು ಪ್ರಜಾದ್ವನಿ ಎಂಬ ಬಸ್ ಯಾತ್ರೆ ಮೂಲಕ ಮಂಗಳೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರ

ಬೆಳ್ತಂಗಡಿಯ ಆನಾರು ದೇವಸ್ಥಾನದಲ್ಲಿ ಧಾರ್ಮಿಕ ಕಾರ್ಯಕ್ರಮ

ನಮ್ಮಲ್ಲಿರುವ ಒಳ್ಳೆ ಗುಣಗಳನ್ನು ಬೆಳೆಸಬೇಕು.ನಮ್ಮನ್ನು ನಾವು ಗುರುತಿಸಿ ಕೊಳ್ಳಬೇಕು ಎಂದು ಮೂಡಬಿದ್ರೆಯ ಎಕ್ಸಲೆಂಟ್ ಕಾಲೇಜಿನ ಅಧ್ಯಕ್ಷರಾದ ಯುವರಾಜ್ ಜೈನ್ ಹೇಳಿದರು. ಅವರು ಬೆಳ್ತಂಗಡಿ ತಾಲೂಕಿನ ಅನಾರು ದೇವಸ್ಥಾನದಲ್ಲಿ ಧಾರ್ಮಿಕ ಭಾಷಣದಲ್ಲಿ ಮಾತನಾಡಿ ದೇವರನ್ನು ನಾವು ನಮ್ಮ ಹೃದಯದಲ್ಲಿ ಕಾಣಬೇಕು. ಜೀವನದಲ್ಲಿ ದೇವರು ಮೆಚ್ಚುವಂತಹ ಒಳ್ಳೆಯ ಕೆಲಸ ಮಾಡಬೇಕು ಎಂದು ಹೇಳಿದರು. ನಂತರ ಉಳಿಯ ಬೀಡಿನ ನಿತೇಶ್ ಬಲ್ಲಾಳ್ ಮಾತನಾಡಿ ದೇವಸ್ಥಾನದ ಅಭಿವೃದ್ಧಿಗೆ ಸಹಕರಿಸಿದ

ಅತ್ಯಾಚಾರಿ , ಕೊಲೆಗಾರರ ಜೊತೆಗೆ ಶಾಸಕ ಹರೀಶ್ ಪೂಂಜಾರ ನಂಟು ಏನು: ಶೇಖರ್ ಲಾಯಿಲ ಪ್ರಶ್ನೆ

ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲು ಗ್ರಾಮದ ಅಪ್ರಾಪ್ತ ಬಾಲಕಿ ಮೇಲಿನ ಅತ್ಯಾಚಾರ , ಬಾಲ್ಯ ವಿವಾಹ , ಗರ್ಭಪಾತ ಸೇರಿದಂತೆ ಶಿಬಾಜೆಯ ದಲಿತ ಯುವಕನ ಕೊಲೆ , ತೋಟತ್ತಾಡಿಯ ಆತ್ಮಹತ್ಯೆ ಪ್ರೇರಣೆ ಪ್ರಕರಣದ ಆರೋಪಿಗಳೊಂದಿಗೆ ಶಾಸಕ ಹರೀಶ್ ಪೂಂಜಾರ ನಂಟು ಏನು ? ಬೆಂಗಳೂರಿನಲ್ಲಿ ನಡೆಯುವ ಹಲ್ಲೆ ಪ್ರಕರಣದ ಬಗ್ಗೆ ಮಾತನಾಡುವ ಶಾಸಕ ತನ್ನ ಕ್ಷೇತ್ರದ ಕ್ರಿಮಿನಲ್ ವ್ಯಕ್ತಿಗಳನ್ನು ರಕ್ಷಿಸುವ ಹಿನ್ನೆಲೆ ಏನು ಎಂದು ಸಿಪಿಐ(ಎಂ) ಮುಖಂಡ ಶೇಖರ್ ಲಾಯಿಲ ಪ್ರಶ್ನಿಸಿದ್ದಾರೆ ‌.

ಬೆಳ್ತಂಗಡಿಯ ಮುಗೇರಡ್ಕ ಎಂಬಲ್ಲಿ ಅಕ್ರಮ ಮರಳು ದಂಧೆ : ಮಾಜಿ ಶಾಸಕ ವಸಂತ ಬಂಗೇರ ಆರೋಪ

ಬೆಳ್ತಂಗಡಿ ತಾಲೂಕಿನ ಮೊಗ್ರೂ ಗ್ರಾಮದ ಮುಗೇರಡ್ಕ ಎಂಬಲ್ಲಿ ನಡೆಯುವ ಅಕ್ರಮ ಮರಳು ದಂಧೆ ಮತ್ತು ನೀರಾವರಿ ಕಾಮಗಾರಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ ಎಂದು ಬೆಳ್ತಂಗಡಿ ತಾಲೂಕಿನ ಮಾಜಿ ಶಾಸಕರಾದ ವಸಂತ ಬಂಗೇರ ಹೇಳಿದರು. ಅವರುಬೆಳ್ತಂಗಡಿಯಲ್ಲಿ ಮಾಧ್ಯಮದ ಜೊತೆ ಮಾತನಾಡಿ ಮುಗೇರಡ್ಕದಲ್ಲಿ ನಡೆಯುವ ಅಕ್ರಮ ಮರಳು ದಂಧೆ ಮತ್ತು 250 ಕೋಟಿಯ ಕಾಮಗಾರಿಯಲ್ಲಿ ಭ್ರಷ್ಟಾಚಾರ, ಅಕ್ರಮ ಸಕ್ರಮಗಳಲ್ಲಿ ವಿಳಂಬ ನೀತಿ, ಬಿಜೆಪಿ ಸರಕಾರದ 40% ಕಮಿಷನ್ ದಂಧೆ, ತಾಲೂಕು

ಅಡಿಕೆಗೆ ಭವಿಷ್ಯವಿಲ್ಲ ಗೃಹ ಸಚಿವರ ಹೇಳಿಕೆಗೆ ಖಂಡನೆ : ಮಾಜಿ ಶಾಸಕ ವಸಂತ ಬಂಗೇರಾ ವಾಗ್ದಾಳಿ

ಅಡಿಕೆಯ ಬಗ್ಗೆ ಹಗುರವಾಗಿ ಮಾತನಾಡಿದ ಗೃಹ ಸಚಿವರ ವಿರುದ್ಧ ಗರಂ ಆದ ಬೆಳ್ತಂಗಡಿಯ ಮಾಜಿ ಶಾಸಕ ವಸಂತ ಬಂಗೇರ ಅವರು ಅವರ ಮಾತು ಖಂಡನಾರ್ಹ ಎಂದು ಹೇಳಿದರು. ಅವರು ಬೆಳ್ತಂಗಡಿಯಲ್ಲಿ ಮಾಧ್ಯಮದ ಜೊತೆ ಮಾತನಾಡಿ ಗೃಹ ಸಚಿವರು ಆ ರೀತಿ ಹೇಳಬಾರದಿತ್ತು ಅಡಿಕೆ ಬೆಳೆಗಾರರ ಬಗ್ಗೆ ಕೀಳಾಗಿ ಮಾತನಾಡಬಾರದು ಅಡಿಕೆ ಬೆಳೆಗಾರರು ಹೆದರುವಂಥ ಅವಶ್ಯಕತೆ ಇಲ್ಲ ಅಡಿಕೆಗೆ ಬೆಲೆ ಯಾವತ್ತೂ ಕಡಿಮೆಯಾಗುವುದಿಲ್ಲ ಎಂದು ಅಡಿಕೆ ಬೆಳೆಗಾರರಿಗೆ ಧೈರ್ಯ ಹೇಳಿದರು ಈ ಸಂದರ್ಭದಲ್ಲಿ ಮಾಜಿ ಸಚಿವ

ಉಪ ಅರಣ್ಯಾಧಿಕಾರಿ ಸಂಜೀವ ಪೂಜಾರಿ ರಕ್ಷಣೆಗೆ ಆಗ್ರಹಿಸಿ ಪ್ರತಿಭಟನೆ

ಬೆಳ್ತಂಗಡಿ : ಉಪ ಅರಣ್ಯಾಧಿಕಾರಿ ಸಂಜೀವ ಪೂಜಾರಿ ಅವರಿಗೆ ಸಂಘಪರಿವಾರಗಳ ಬೆದರಿಕೆ ಇರುವ ಕಾರಣ ಅವರಿಗೆ ರಕ್ಷಣೆಗೆ ಆಗ್ರಹಿಸಿ ಹಾಗೂ ಸಂಘಪರಿವಾರದ ಹಿಂದುತ್ವವಾದಿಗಳು ಜಾತ್ಯಾತೀತವಾದ ಹಿಂದು ಧರ್ಮದ ಮಾನ ತೆಗೆಯವುದರ ವಿರುದ್ದ, ಹಿಂದುಗಳ ದೇವರ ಸ್ಮರಣೆಯ ಭಾಗವಾದ ಭಜನೆಯನ್ನು ಗೇಲಿ ಮಾಡುವಂತೆ ಪೋಲೀಸ್ಟೇಶನ್ ಎದುರು ಭಜನೆ ನಡೆಸಿ ಹಿಂದುಗಳಿಗೆ ಅವಮಾನಿಸಿದ ಸಂಘಪರಿವಾರದ ವಿರುದ್ದ ಹಾಗೂ ಹಿಂದುಳಿದ , ದಲಿತ ವರ್ಗದವರ ಧ್ವನಿ ಅಡಗಿಸುವ ಕುತಂತ್ರ ನಡೆಸುವ