ಮೂಡುಬಿದಿರೆಯ ಸಮಾಜ ಮಂದಿರ ಸಭಾದಲ್ಲಿ ವಾಚ್ ಮೆನ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸುಕುಮಾರ್ ಹೆಗ್ಡೆ (56 ವ) ಅವರು ಬಿಪಿ ಹೈ ಆಗಿ ಸೋಮವಾರ ಬೆಳಿಗ್ಗೆ ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಕೊಕ್ರಾಡಿಯ ನಿವಾಸಿ ಸುಕುಮಾರ್ ಹೆಗ್ಡೆ ಅವರು ಕಳೆದ 5 ವರ್ಷಗಳಿಂದ ಸಮಾಜ ಮಂದಿರದಲ್ಲಿ ವಾಚ್ ಮೆನ್ ಆಗಿ ರಾತ್ರಿ ವೇಳೆ ಕರ್ತವ್ಯ ನಿರ್ವಹಿಸುತ್ತಿದ್ದು, ಹಗಲಿನಲ್ಲಿ ಬೇರೆ
ಬಂಟ್ವಾಳ : ಯುವಕನೋರ್ವ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಾಣಿ ಸಮೀಪದ ಬುಡೋಳಿ ಮಡಲ ಎಂಬಲ್ಲಿ ನಡೆದಿದೆ. ಬುಡೋಳಿ ಮಡಲ ನಿವಾಸಿ ಸುಶಾಂತ್ (25) ಮೃತ ಯುವಕ. ಸುಶಾಂತ್ ಮಿನಿ ಬಸ್ ಖರೀದಿಸಿ ಸ್ವಂತ ವಾಹನದಲ್ಲಿ ಚಾಲಕನಾಗಿ ದುಡಿಯುತ್ತಿದ್ದ. ಸಾಮಾಜಿಕವಾಗಿ ಸೇವಾಕಾರ್ಯಗಳನ್ನು ಸಂಘಟನೆಯ ಜೊತೆಗೆ ಮಾಡಿಕೊಂಡಿದ್ದು, ಉತ್ತಮ ಯುವಕನಾಗಿ ಗುರುತಿಸಿಕೊಂಡಿದ್ದ. ವಿಟ್ಲ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಆತ್ಮಹತ್ಯೆಗೆ
ವೈಯಕ್ತಿಕ ಸಮಸ್ಯೆಯಿಂದ ಮನನೊಂದ ವಿದ್ಯಾರ್ಥಿನಿಯೋರ್ವಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಪೆರ್ಡೂರಿನಲ್ಲಿ ಸಂಭವಿಸಿದೆ. ಮೃತರನ್ನು ಪೆರ್ಡೂರು ಗ್ರಾಮದ ಶೋಭಾ ಎಂಬವರ ಮಗಳು ನಯನ(17) ಎಂದು ಗುರುತಿಸಲಾಗಿದೆ. ಪೆರ್ಡೂರು ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದ ಇವರು, ತನ್ನ ವೈಯುಕ್ತಿಕ ಅಥವಾ ಇನ್ನಾವುದೋ ಕಾರಣದಿಂದ ಮಾನಸಿಕವಾಗಿ ನೊಂದು ಜೀವನದಲ್ಲಿ ಜಿಗುಪ್ಪೆ ಗೊಂಡು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು
ಪುತ್ತೂರು: ಸರ್ವೆ ಗೌರಿ ಹೊಳೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿದ್ದ ಕುದ್ಮಾರು ಗ್ರಾಮದ ತೆಕ್ಕಿತ್ತಡಿ ನಿವಾಸಿ ಸನ್ಮಿತ್ (21) ಮೃತದೇಹ ಪತ್ತೆಯಾಗಿದೆ.ಸರ್ವೆಯ ಗೌರಿ ಹೊಳೆಯ ಸೇತುವೆಯ ಬಳಿ ಮೃತದೇಹ ಪತ್ತೆಯಾಗಿದೆ. ಜು.19ರ ರಾತ್ರಿಯಿಂದ ಸನ್ಮಿತ್ ಕಾಣೆಯಾಗಿದ್ದು, ಆತನ ಸ್ಕೂಟರ್ ಮತ್ತಿತರ ವಸ್ತು ಸರ್ವೆ ಗೌರಿ ಹೊಳೆಯ ಸಮೀಪ ಪತ್ತೆಯಾಗಿತ್ತು. ಮೃತ ಸನ್ಮಿತ್ ತಂದೆ ಚಂದ್ರಗೌಡ ನೀಡಿದ ದೂರಿನಂತೆ ನಿನ್ನೆ ಬೆಳಿಗ್ಗಿನಿಂದಲೇ ಪೊಲೀಸರು ಮತ್ತು
ಮೂಡುಬಿದಿರೆ: ಕಳೆದ 25 ವರ್ಷಗಳಿಂದ ವಾಹನ ತರಬೇತುದಾರೆಯಾಗಿ ಕೆಲಸ ನಿರ್ವಹಿಸುತ್ತಿದ್ದ ಮಹಿಳೆಯೋರ್ವರು ತನ್ನ ಬಾಡಿಗೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ಮೂಡುಬಿದಿರೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಕೊಡಂಗಲ್ಲು ಹುಡ್ಕೋ ಕಾಲನಿ ನಿವಾಸಿ ಬೆನ್ನಿ ಡಿಸೋಜ ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಮೂಡುಬಿದಿರೆಯ ಪ್ರಸಿದ್ಧ ಮಂಜುಶ್ರೀ ಡ್ರೈವಿಂಗ್ ಸ್ಕೂಲ್ ನಲ್ಲಿ ಅವರು ವಾಹನ ತರಬೇತುದಾರೆಯಾಗಿದ್ದರು.ಪ್ರಾಂತ್ಯ ಹೈಸ್ಕೂಲ್ ನ ಎಂಟನೇ
ಬೈಂದೂರು:ಬೈಂದೂರು ತಾಲೂಕಿನ ಬಡಾಕೆರೆ ಗ್ರಾಮದ ಪೋಸ್ಟ್ ನಿವಾಸಿ ಕೃಷಿಕ ಮಂಜುನಾಥ ಶೇಟ್ (85) ಎಂಬುವವರು ತೆಂಗಿನ ತೋಟದಲ್ಲಿ ತೆಂಗಿನಕಾಯಿ ಹೆಕ್ಕಲು ಹೋದಂತಹ ಸಮಯದಲ್ಲಿ ಬಾವಿ ಬದಿಯಲ್ಲಿ ಬಿದ್ದಿರುವ ತೆಂಗಿನಕಾಯಿಯನ್ನು ಹೆಕ್ಕುವಾಗ ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಬುಧವಾರ ನಡೆದಿದೆ. ಮಂಜುನಾಥ ಶೇಟ್ ಅವರು ಬೆಳಗಿನ ಸಮಯದಲ್ಲಿ ತೆಂಗಿನ ತೋಟಕ್ಕೆ ಹೋಗಿ ತೋಟದಲ್ಲಿ ಬಿದ್ದಿರುವ ಕಾಯಿಯನ್ನು ಹೆಕ್ಕುವ ಅಭ್ಯಾಸವನ್ನು
ಉಳ್ಳಾಲ: ಉಳ್ಳಾಲ ಖಾಝಿ ಆಗಿ ಸೇವೆಯಲ್ಲಿದ್ದ ಫಝಲ್ ಕೋಯಮ್ಮ ತಂಙಳ್ (65) ಎಟ್ಟಿಕುಳದಲ್ಲಿ ಸೋಮವಾರ ವಿಧಿವಶರಾದರು.ಅವರ ತಂದೆ ಮರ್ಹೂಂ ತಾಜುಲ್ ಉಲಮಾ ಅವರು ಉಳ್ಳಾಲ ಖಾಝಿ ಸಯ್ಯದ್ ಅಬ್ದುಲ್ ರಹಿಮಾನ್ ಕುಂಞಿ ಕೋಯ ತಂಙಳ್ಆಗಿದ್ದ ಸಂದರ್ಭದಲ್ಲಿ ಸಹಾಯಕ ಖಾಝಿ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. 2014ರಲ್ಲಿ ತಾಜುಲ್ ಉಲಮಾ ಸಯ್ಯದ್ ಅಬ್ದುಲ್ ರಹಿಮಾನ್ ಕುಂಞಿ ಕೋಯ ತಂಙಳ್ ನಿಧನ ಹೊಂದಿದ್ದು, ಇದರ ಬಳಿಕ ಫಝಲ್ ಕೋಯಮ್ಮ ತಂಙಳ್ ಖಾಝಿ ಆಗಿ ಕಾರ್ಯ ನಿರ್ವಹಿಸುತ್ತಿದ್ದರು.
34 ನೆಕ್ಕಿಲಾಡಿ ಗ್ರಾಮದ ಶಾಂತಿನಗರ ಸಮೀಪದ ಬೇರಿಕೆ ನಿವಾಸಿ ಶ್ರೀಧರ ರಾವ್ ಅವರಿಗೆ ಬೆಳಿಗ್ಗೆ ತೀವ್ರ ಎದೆ ನೋವು ಕಾಣಿಸಿಕೊಂಡಿದ್ದು ಪುತ್ತೂರಿನ ಮಹಾವೀರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ. ಪತ್ನಿ ಮತ್ತು ಮೂವರು ಗಂಡು ಮಕ್ಕಳು ಹಾಗೂ ಅಪಾರ ಬಂಧು ಬಳಗ ಹಾಗೂ ಕಲಾಭಿಮಾನಿಗಳನ್ನು ಅಗಲಿದ್ದಾರೆ. 1948ರಲ್ಲಿ ಕಾಸರಗೋಡು ಜಿಲ್ಲೆಯ ಕುಂಬ್ಳೆಯಲ್ಲಿ ಮಹಾಲಿಂಗ ಮತ್ತು ಕಾವೇರಿ ದಂಪತಿಯ ಪುತ್ರರಾಗಿ ಜನಿಸಿದ ಶ್ರೀಧರ ರಾವ್ ರವರು 34
ಉಳ್ಳಾಲ: ಟಿಪ್ಪರ್ ಹಾಗೂ ಸ್ಕೂಟರ್ ನಡುವೆ ಸಂಭವಿಸಿದ ಅಪಘಾತದಲ್ಲಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಪಾವೂರು ಮಲಾರು ಅಕ್ಷರನಗರ ನಿವಾಸಿ ವಿಶ್ವನಾಥ್ ಆಚಾರ್ಯ ಎಂಬವರ ಪುತ್ರ ಗಣೇಶ್ ಆಚಾರ್ಯ ( 27) ಇಂದು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಫಸ್ಟ್ ನ್ಯುರೋ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯಲು ಸಹಕರಿಸಿದ ಹಿತೈಷಿಗಳ,ಸಂಬಂಧಿಕರ, ಸ್ನೇಹಿತರ ಪ್ರಾರ್ಥನೆ ಕೊನೆಗೂ ಈಡೇರಲಿಲ್ಲ.ಜೂ.28 ರಂದು ಗಣೇಶ ಪಾವೂರು
ಸುರತ್ಕಲ್: ಸ್ಕೂಟರ್ ಗೆ ದನ ಅಡ್ಡ ಬಂದ ಪರಿಣಾಮ ಸ್ಕೂಟರ್ ಸ್ಕಿಡ್ ಆಗಿ ಯುವಕ ರಸ್ತೆಗೆಸೆಯಲ್ಪಟ್ಟು ದಾರುಣ ಸಾವನ್ನಪ್ಪಿದ ಘಟನೆ ಆದಿತ್ಯವಾರ ಸಂಜೆ ಪಣಂಬೂರು ಬಳಿಯ ರಾಷ್ಟೀಯ ಹೆದ್ದಾರಿಯಲ್ಲಿ ನಡೆದಿದೆ. ಕುಳಾಯಿ ನಿವಾಸಿ ಉಜ್ವಲ್(26) ಸಾವನ್ನಪ್ಪಿದ ದುರ್ದೈವಿ.ಮಂಗಳೂರು ಉತ್ತರ ಸಂಚಾರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.




























