Home Posts tagged #kadaba (Page 11)

ಧ್ವಜಾರೋಹಣದ ವೇಳೆ ಕುಸಿದು ಬಿದ್ದು ನಿವೃತ್ತ ಸೈನಿಕ ಮೃತ್ಯು!

ಕಡಬ: ಕುಟ್ರುಪಾಡಿ ಗ್ರಾ.ಪಂ. ವತಿಯಿಂದ ಹಳೆಸ್ಟೇಷನ್ ಅಮೃತ ಸರೋವರದ ಬಳಿ ನಡೆದ ಧ್ವಜಾರೋಹಣ ದ ವೇಳೆ ನಿವೃತ್ತ ಸೈನಿಕರೋರ್ವರು ಕುಸಿದು ಬಿದ್ದು ಅಸ್ವಸ್ಥಗೊಂಡು ಬಳಿಕ ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟ ಘಟನೆ ನಡೆದಿದೆ.ಧ್ವಜಾರೋಹಣವನ್ನು ಹೊಸಮಠ ಸಿ.ಎ.ಬ್ಯಾಂಕಿನ ಮಾಜಿ ಅಧ್ಯಕ್ಷ ಎನ್. ಕರುಣಾಕರ ಗೋಗಟೆ ಧ್ವಜಾರೋಹಣ ಮಾಡಲು ಸಿದ್ದತೆ ಮಾಡುತ್ತಿದ್ದಾಗ ಅವರಿಗೆ

ಸುಬ್ರಹ್ಮಣ್ಯ ಮೃತ ಮಕ್ಕಳ ಮನೆಗೆ ಉಸ್ತುವಾರಿ ಸಚಿವ ಸುನಿಲ್ ಕುಮಾರ್ ರವರು ಭೇಟಿ

ಸುಬ್ರಹ್ಮಣ್ಯದಲ್ಲಿ ದುರಂತ ಸಂಭವಿಸಿ ಮೃತಪಟ್ಟ ಮಕ್ಕಳ ಮನೆಗೆ ಉಸ್ತುವಾರಿ ಸಚಿವ ಸುನಿಲ್ ರವರು ಇಂದು ಭೇಟಿ ನೀಡಿದರು.ಮನೆಗಾಗಿ 95 ಸಾವಿರ ನೀಡಿದ್ದೇವೆ. ಇನ್ನು ಮನೆ ಕಟ್ಟುವುದಿದ್ರೆ 4 ಲಕ್ಷ ಕೊಡಲಾಗುವುದು, ಅಂಗಡಿಗಳಿಗೆ ನೀರು ನುಗ್ಗಿ ಹಾನಿ ಯಾಗಿದ್ರೆ ಹಣ ಕೊಡುವ ಪ್ರಾವಿಶನ್ ಇಲ್ಲ, ಆದ್ರೂ ಮುಖ್ಯ ಮಂತ್ರಿಗಳ ಗಮನಕ್ಕೆ ತಂದು ವಿಶೇಷ ಪ್ಯಾಕೇಜ್ ಘೋಷಣೆ ನೀಡಿ ಅಂಗಡಿಗಳಿಗೂ ಪರಿಹಾರ ನೀಡಲಿದ್ದೇವೆ ಎಂದು ಸುನಿಲ್‌ ಕುಮಾರ್ ತಿಳಿಸಿದ್ದಾರೆ. ಜಿಲ್ಲಾಧಿಕಾರಿ

ಕಡಬ : ಕಾರು ಮತ್ತು ಖಾಸಗಿ ಬಸ್ ನಡುವೆ ಅಪಘಾತ

ಕಡಬ: ಇನ್ನೋವಾ ಹಾಗೂ ಖಾಸಗಿ ಬಸ್ ನಡುವೆ ಅಪಘಾತ ಸಂಭವಿಸಿದ ಘಟನೆ ಶನಿವಾರ ಬೆಳಿಗ್ಗೆ ಪಂಜ – ಕಡಬ ರಸ್ತೆಯ ಕೋಡಿಂಬಾಳದಲ್ಲಿ ನಡೆದಿದೆ.ಧರ್ಮಸ್ಥಳ ಮೂಲದವರಿದ್ದ ಇನ್ನೋವಾ ಕಾರು ಹಾಗೂ ಬೆಂಗಳೂರಿನಿಂದ ಪಂಜ ಮಾರ್ಗವಾಗಿ ಕಡಬಕ್ಕೆ ಬರುತ್ತಿದ್ದ ಸುಗಮ ಸಂಸ್ಥೆಗೆ ಸೇರಿದ ಖಾಸಗಿ ಬಸ್ ನಡುವೆ ಕೋಡಿಂಬಾಳ ತಿರುವಿನಲ್ಲಿ ಅಪಘಾತ ಸಂಭವಿಸಿದೆ. ಇನ್ನೋವಾ ಕಾರಿನಲ್ಲಿ ಮೂವರು ಪ್ರಯಾಣಿಸುತ್ತಿದ್ದು, ಪವಾಡಸದೃಶ ಅಪಾಯದಿಂದ ಪಾರಾಗಿದ್ದಾರೆ.

ಸವಣೂರಿನಲ್ಲಿ ಸಸಿ ಮತ್ತು ತರಕಾರಿ ಬೀಜ ವಿತರಣೆ : ಕೃಷಿ ಅರಣ್ಯ ರೈತ ಸಹಾಯಧನದ ಬಗ್ಗೆ ಮಾಹಿತಿ ಕಾರ್ಯಗಾರ

ಕಡಬ,ಸವಣೂರು : ಮಾತೃಭೂಮಿ ಸಾವಯವ ಕೃಷಿ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನ (ರಿ.) ಕಡಬ ,ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ,ಅರಣ್ಯ ಇಲಾಖೆ ಪುತ್ತೂರು ,ರಾಜ್ಯ ಪ್ರಶಸ್ತಿ ಪುರಸ್ಕೃತ ಸವಣೂರು ಯುವಕ ಮಂಡಲ ಇದರ ವತಿಯಿಂದ ಸವಣೂರು ಯುವಕ ಮಂಡಲದ ಯುವ ಸಭಾಭವನದಲ್ಲಿ ಸಸಿ ಮತ್ತು ತರಕಾರಿ ಬೀಜ ವಿತರಣೆ ಹಾಗೂ ಕೃಷಿ ಅರಣ್ಯ ರೈತ ಸಹಾಯಧನದ ಬಗ್ಗೆ ಮಾಹಿತಿ ಕಾರ್ಯಗಾರ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕಾರ್ಯಪ್ಪ ಮಾತನಾಡಿ,

ಕಡಬದಲ್ಲಿ ದಾರಿ ತಕರಾರು ಪರಿಶೀಲಿಸಿದ ಜಿಲ್ಲಾಧಿಕಾರಿ

ಕಡಬದಲ್ಲಿ ಜರಗಿದ ಡಿಸಿ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ ವಿ 45ಕ್ಕೂ ಹೆಚ್ಚು ಅರ್ಜಿಗಳನ್ನು ಪರಿಶೀಲಿಸಿದರು. ದಾರಿ ತಕರಾರುಗಳ ಅರ್ಜಿಗಳನ್ನು ಪರಿಶೀಲಿಸಿದ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸಮಸ್ಯೆಗಳನ್ನು ಕೂಡಲೇ ಬಗೆಹರಿಸುವಂತೆ ಸಂಬಂಧಪಟ್ಟ ಪಿಡಿಓಗಳು ಹಾಗೂ ಕಂದಾಯ ಅಧಿಕಾರಿಗಳಿಗೆ ಆದೇಶಿಸಿದರು. 11 ಇ ಅರ್ಜಿಗಳ ವಿಲೇವಾರಿಗೆ ವೇಗ ನೀಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದವರು ಆ

ಆಕಸ್ಮಿಕ ಬೆಂಕಿ : ಸುಟ್ಟು ಹೋದ ಕಾರು

ಕಡಬ : ಆಲ್ಟೋ ಕಾರಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಕಾರು ಸಂಪೂರ್ಣ ಸುಟ್ಟು ಹೋದ ಘಟನೆ ಬುಧವಾರ ಸಂಜೆ ವೇಳೆ ಬಳ್ಪ ಸಮೀಪ ಸಂಭವಿಸಿದೆ. ಪಂಜ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕಡಬ ತಾಲೂಕಿನ ಬಳ್ಪ ಎಂಬಲ್ಲಿಯ ಪಾದೆ ಬಳಿ ಘಟನೆ ಸಂಭವಿಸಿದೆ. ಪಂಜದ ಕೃಷ್ಣನಗರ ಕೇಶವ ಆಚಾರಿ ಎಂಬವರು ತಮ್ಮ ಕಾರಿನಲ್ಲಿ ಏನೆಕಲ್ಲು ಕಡೆಯಿಂದ ಕೆಲಸ ಮುಗಿಸಿ ಬರುತ್ತಿರುವಾಗ ಪಾದೆ ಬಳಿ ಕಾರಿನಲ್ಲಿ ಹೊಗೆ ಕಾಣಿಸಿಕೊಂಡಿದೆ. ಕಾರಿನಿಂದ ಇಳಿದು ನೋಡಬೇಕು ಎನ್ನವ ಕ್ಷಣ ಮಾತ್ರದಲ್ಲಿ

ಗ್ರಾಮೀಣ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ಶ್ಲಾಘನೀಯ -ಡಾ.ಕುಮಾರ್

ಕಡಬ: ಗ್ರಾಮೀಣ ಭಾಗದ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ಪತ್ರಕರ್ತರ ಪ್ರಯತ್ನ ಶ್ಲಾಘನೀಯ ಎಂದು ದ.ಕ.ಜಿಲ್ಲಾ ಮುಖ್ಯ ಕಾರ್ಯ ನಿರ್ವಹ ಣಾಧಿಕಾರಿ ಡಾ.ಕುಮಾರ್ ತಿಳಿಸಿದ್ದಾರೆ. ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಕಡಬ ತಾಲೂಕು ಪತ್ರಕರ್ತರ ಸಂಘದ ಆಶ್ರಯದಲ್ಲಿ ಕೊಂಬಾರು ಗ್ರಾಮ ಪಂಚಾಯತ್ ಸಭಾಂಗಣದಲ್ಲಿಂದು ಪತ್ರಕರ್ತರು ಗ್ರಾಮ ವಾಸ್ತವ್ಯ ಮಾಡಿರುವ ಸಿರಿಬಾಗಿಲು-ಕೊಂಬಾರು ಗ್ರಾಮಗಳ ವ್ಯಾಪ್ತಿಗೊಳಪಟ್ಟ ನಾಲ್ಕು ಶಾಲೆಗಳ ಮಕ್ಕಳಿಗೆ ಕೆಐಓಸಿಲ್ ಸಿಎಸ್

ಕಡಬ: ಮದರಸದಿಂದ ಬರುತ್ತಿದ್ದ ಬಾಲಕನಿಗೆ ಹುಚ್ಚು ನಾಯಿ ಕಡಿತ

ಕಡಬ: ಹುಚ್ಚುನಾಯಿಯೊಂದು ಕಡಿದ ಪರಿಣಾಮ ವಿದ್ಯಾರ್ಥಿಯೋರ್ವ ಗಾಯಗೊಂಡ ಘಟನೆ ಕಡಬ ಪೇಟೆಯಲ್ಲಿ ನಡೆದಿದೆ. ಗಾಯಗೊಂಡ ಬಾಲಕನನ್ನು ಕಡಬ ನಿವಾಸಿ ಹಮೀದ್ ಎಂಬವರ ಪುತ್ರ ಅಫ್ನಾನ್ ಎಂದು ಗುರುತಿಸಲಾಗಿದೆ. ಎಂದಿನಂತೆ ಮದರಸ ಬಿಟ್ಟು ತೆರಳುತ್ತಿದ್ದ ಬಾಲಕನ ಮೇಲೆ ಹುಚ್ಚು ನಾಯಿ ಎರಗಿದ್ದು, ಕೈಗೆ ಕಚ್ಚಿದೆ ಎಂದು ತಿಳಿದುಬಂದಿದೆ. ಬಾಲಕನಿಗೆ ಕಡಬ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಕಡಬ: ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಕೆರೆಗೆ ಬಿದ್ದು ಮೃತ್ಯು

ವಿದ್ಯಾರ್ಥಿನಿಯೋರ್ವರು ಆಕಸ್ಮಿಕವಾಗಿ ಕೆರೆಗೆ ಬಿದ್ದು ಮೃತಪಟ್ಟ ಘಟನೆ ನೆಲ್ಯಾಡಿ ಸಮೀಪದ ಕೊಣಾಲು ಗ್ರಾಮದ ಅಂಬರ್ಜೆ ಎಂಬಲ್ಲಿ ನ.15ರಂದು ಬೆಳಿಗ್ಗೆ ನಡೆದಿದೆ. ಅಂಬರ್ಜೆ ನಿವಾಸಿ ಮೋಹನ ಹಾಗೂ ವಿನೋದ ದಂಪತಿಯ ಪುತ್ರಿ, ರಾಮಕುಂಜೇಶ್ವರ ಪ.ಪೂ.ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಶ್ರೇಯಾ(18ವ.)ಮೃತಪಟ್ಟ ದುರ್ದೈವಿ ವಿದ್ಯಾರ್ಥಿನಿಯಾಗಿದ್ದಾರೆ. ಈಕೆ ಬೆಳಿಗ್ಗೆ ತಮ್ಮ ಮನೆ ಸಮೀಪದ ಕೆರೆಗೆ ತಾವರೆ ಹೂವಿನ ಗಿಡ ಹಾಕಲೆಂದು ಹೋಗಿದ್ದ ವೇಳೆ ಆಕಸ್ಮಿಕವಾಗಿ

ಸೆಲ್ಫಿ ತೆಗೆಯಲು ನದಿಗೆ ಇಳಿದ ಯುವಕ ನೀರುಪಾಲು

ಕಡಬ: ವಾಹನ ನಿಲ್ಲಿಸಿ ನದಿಯ ಬಂಡೆಯಲ್ಲಿ ಸೆಲ್ಫೀ ತೆಗೆಯಲು ಮುಂದಾದ ಯುವಕನೋರ್ವ ನೀರಲ್ಲಿ ಮುಳುಗಿ ಕಣ್ಮರೆಯಾದ ಘಟನೆ ಕಡಬ ತಾಲೂಕಿನ ನೆಲ್ಯಾಡಿ, ಗುಂಡ್ಯ ಸಮೀಪದಲ್ಲಿ ನಡೆದಿದೆ. ಪ್ರಾಥಮಿಕ ಮಾಹಿತಿ ಪ್ರಕಾರ ನೀರಲ್ಲಿ ಮುಳುಗಿದ ಯುವಕನನ್ನು ರಾಜಸ್ಥಾನ ಮೂಲದ ಸೀತಾರಾಮ್ ಎಂದು ತಿಳಿದು ಬಂದಿದೆ.ಇಬ್ಬರು ಯುವಕರು ತಮ್ಮ ಆಟೋಮೊಬೈಲ್ ಸ್ಪೇರ್‍ಪಾಡ್ಸ್ ಪಾರ್ಸಲ್ ಸಾಗಾಟದಟೆಂಪೊವಾಹನವನ್ನು ರಾಷ್ಟ್ರೀಯ ಹೆದ್ದಾರಿ 75ರ ಬದಿಯಲ್ಲಿ ನಿಲ್ಲಿಸಿ ಗುಂಡ್ಯ ಹೊಳೆಯ ಬಂಡೆಯೊಂದರ ಮೇಲೆ