ಬೆಂಗ್ರೆ: ಬೇಂಗ್ರೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಮೂಲಭೂತ ಸೌಲಭ್ಯ ಕಲ್ಪಿಸಬೇಕೆಂದು ಎಸ್.ಐ.ಓ ದಕ್ಷಿಣ ಕನ್ನಡ ಜಿಲ್ಲೆಯ ವತಿಯಿಂದ ಬೆಂಗ್ರೆಯ ಶಾಲೆಯ ಮುಂದೆ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಪ್ರತಿಭಟನೆಯಲ್ಲಿ ಶಾಲೆಯ ಸುತ್ತಮುತ್ತಲಿನ ಜನರು ಮತ್ತು ಆ ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳ ಪೆÇೀಷಕರು ಭಾಗವಹಿಸಿ ತಮ್ಮ ಮಕ್ಕಳ ಶೈಕ್ಷಣಿಕ ಹಕ್ಕಿನ
ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಜರುಗಿದ ವೇದಮ್ ಶೈಕ್ಷಣಿಕ ಉತ್ಸವದಲ್ಲಿ ಕಣಚೂರು ವೈದ್ಯಕೀಯ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಟ್ರೆಶರ್ ಹಂಟ್, ಎಸ್ಕೆಪೀಡ್, ಪ್ಯಾಕ್ಮಾನ್, ವಿಭಾಗದಲ್ಲಿ ಹುಮೇರಾ ಆರಿಫ್, ಅಬ್ದುಲ್ ಕರೀಂ ಖತೀಜತುಲ್ ಮಕ್ಸೂದಾ, ರಿಫಾತ್ ಮರಿಯಮ್, ನೂಮನ್ ಷರೀಫ್, ಮುಸ್ಕಾನ್ ಮೊದಲನೇ ಹಾಗೂ ರಿಜ್ವಾನ್ ಮೊಹಮ್ಮದ್ ರಯಾನ್ ಮತ್ತು ಮೊಹಮ್ಮದ್ ಆರೀಫ್ ಎರಡನೇಯ ಪ್ರಶಸ್ತಿಯನ್ನು ಪಡೆದಿರುತ್ತಾರೆ.
ಯಕ್ಷಮಿತ್ರರು-ವಿಟ್ಲ ವಾಟ್ಸಾಪ್ ಬಳಗದವರ ಸಹಕಾರದೊಂದಿಗೆ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ವಿಟ್ಲ ಬಸವನಗುಡಿ ವಿಟ್ಠಲ್ ಜೇಸೀಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಜೇಸಿ ಪೆವಿಲಿಯನ್ ಸಭಾಂಗಣದಲ್ಲಿ ಆ.13ರಂದು ಮಧ್ಯಾಹ್ನ ಗಂಟೆ 1.30ರಿಂದ ರಾತ್ರಿ ಎರಡು ಗಂಟೆ ವರೆಗೆ ವಿಟ್ಲ ಯಕ್ಷೋತ್ಸವ ನಡೆಯಲಿದೆ ಎಂದು ಸಂಘಟಕ ಸುಬ್ರಹ್ಮಣ್ಯ ಮುರಾರಿ ಭಟ್ ಪಂಜಿಗದ್ದೆ ತಿಳಿಸಿದರು. ಅವರು ಸೋಮವಾರ ವಿಟ್ಲದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಧ್ಯಾಹ್ನ ಗಂಟೆ 1.30ಕ್ಕೆ ತೆಂಕು
ಯುವಕ ಮಂಡಲ ಇರಾ ಇದರ ಸುವರ್ಣ ಮಹೋತ್ಸವದ ಅಂಗವಾಗಿ ವನಮಹೋತ್ಸವ ಹಾಗು ಆಟಿದಕೂಟ ಇರಾ ಬಂಟರ ಭವನದಲ್ಲಿ ನಡೆಯಿತು. ವನಮಹೋತ್ಸವ ಕಾರ್ಯಕ್ರಮದಲ್ಲಿ ಪರಿಸರ ಪ್ರೇಮಿ ಮಾಧವ ಉಳ್ಳಾಲ ಅವರ ಮಾರ್ಗದರ್ಶನದಲ್ಲಿ ಸುವರ್ಣ ಮಹೋತ್ಸವ ಸಮಿತಿಯ ಅಧ್ಯಕ್ಷರಾದ ಜಯರಾಮ್ ಪೂಜಾರಿ ಹಾಗು ಗಣೇಶ್ ಕೊಟ್ಟಾರಿ ಗಿಡ ನಡುವ ಮೂಲಕ ಉದ್ಘಾಟಿಸಿದರು. ನಂತರ ಆಟಿದಕೂಟ ಕಾರ್ಯಕ್ರಮ ಉದ್ಘಾಟಿಸಿದ ಸೈಂಟ್ ಆಗ್ನೆಸ್ ಕಾಲೀಜಿನ ಪ್ರಾಧ್ಯಾಪಕರೂ, ಪ್ರಖರ ವಾಗ್ಮಿಯೂ ಆದ ಡಾ | ಅರುಣ್ ಉಳ್ಳಾಲ್ ತುಳು
ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಸಮಿತಿ ಹಾಗೂ ಸುರತ್ಕಲ್ ಬ್ಲಾಕ್ ಕಿಸಾನ್ ಘಟಕದ ವತಿಯಿಂದ ಸುರತ್ಕಲ್ ಪಡ್ರೆಯಲ್ಲಿ ಸೌಹಾರ್ದ ಆಟಿಕೂಟ, ಗ್ರಾಮೀಣ ಆಟೋಟ ಸ್ಪರ್ಧೆ ನಡೆಯಿತು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಆಲಿ ಅವರು ಸೌಹಾರ್ದ ಆಟಿಕೂಟಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಪರಿಸ್ಪರ ಅರಿತು ಬಾಳುವ, ಸೌಹಾರ್ದತೆಯಿಂದ ಬಾಂಧವ್ಯವನ್ನು ಬೆಳೆಸುವ ಮೂಲಕ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಹೇಳಿದರು. ಸುರತ್ಕಲ್ ಬ್ಲಕ್ ಕಾಂಗ್ರೆಸ್ ಅಧ್ಯಕ್ಷ
ಕಂದಾಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವವರು ಸಾರ್ವಜನಿಕರ ಅಹವಾಲುಗಳನ್ನು ತಾಳ್ಮೆಯಿಂದ ಆಲಿಸಿ ಹಸನ್ಮುಖಿ ಸೇವೆ ನೀಡಿದಾಗ ಮಾತ್ರ ನಾವು ಮಾಡುವ ಸೇವೆ ಸಾರ್ಥಕವಾಗುತ್ತದೆ ಎಂದು ಕಡಬದಿಂದ ಗುಂಡ್ಲುಪೇಟೆಗೆ ವರ್ಗಾವಣೆಗೊಂಡ ತಹಸೀಲ್ದಾರ್ ಟಿ.ರಮೇಶ್ ಬಾಬು ಹೇಳಿದರು. ಅವರು ಶನಿವಾರ ಕಡಬ ತಾಲೂಕು ಆಡಳಿತ ಸೌಧದಲ್ಲಿ ಇಲ್ಲಿ ಸಿಬ್ಬಂದಿಗಳು ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಕಂದಾಯ ಇಲಾಖೆಗೆ ಸಾರ್ವಜನಿಕರು ತಮ್ಮ
ಮಂಗಳೂರು ಪೊಲೀಸ್ ಕಮೀಷನರ್ ಕುಲದೀಪ್ ಕುಮಾರ್ ಜೈನ್ ಅವರು ಮಾಧ್ಯಮದವರೊಂದಿಗೆ ಮಾತನಾಡಿ , ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದನೆರೆ ಮನೆಯ ಬಚ್ಚಲು ಕೋಣೆಯಲ್ಲಿ ಮಹಿಳೆಯೊಬ್ಬರು ಸ್ನಾನ ಮಾಡುವುದನ್ನು ವೀಡಿಯೊ ಮಾಡಿದ ಪ್ರಕರಣಕ್ಕೆ ಬಗ್ಗೆ ಮಾತನಾಡಿ, ಪಕ್ಕದ ಮನೆಯ ಮಹಿಳೆಯು ರಾತ್ರಿ 11.30-12 ಗಂಟೆಯ ಸಮಯದಲ್ಲಿ ತನ್ನ ಮನೆಯ ಬಚ್ಚಲಿನಲ್ಲಿ ಸ್ನಾನ ಮಾಡುತಿದ್ದ ವೇಳೆ ಮೊಬೈಲ್ ಕ್ಯಾಮರಾ ಗಮನಿಸಿದ ಮಹಿಳೆ ಕಿರುಚಾಡಿದ್ದು, ಈ ವೇಳೆ ಸ್ಥಳೀಯರು ನೆರೆಮನೆಯ
ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸಿ ಬೆಳೆಸಬೇಕು ಎಂದು ಕೇವಲ ಭಾಷಣದಲ್ಲಿ ಬೀಗಿದರೆ ಸಾಲದು ಬದಲಾಗಿ ಸರಕಾರಿ ಶಾಲೆಗಳನ್ನು ಹೇಗೆ ಉಳಿಸಿ ಬೆಳೆಸಬಹುದು ಎಂಬ ಚಿಂತನೆಯೂ ಬೇಕು. ಅಂತಹ ಚಿಂತನೆಯೊಂದನ್ನು ಮಾಡಿ ಶಾಲೆಗಳಾಗಿ ಶಾಶ್ವತ ಯೋಜನೆಯನ್ನು ರೂಪಿಸಿ ಮಕ್ಕಳ ಮತ್ತು ಶಾಲಾಭಿಮಾನಿಗಳ ಮನಗೆದ್ದ ಜನಪ್ರತಿನಿಧಿ ಪಡುಮಾರ್ನಾಡು ಗ್ರಾ.ಪಂ. ಮಾಜಿ ಅಧ್ಯಕ್ಷ ಶ್ರೀನಾಥ್ ಸುವರ್ಣ ಅವರು. ಪಡುಮಾರ್ನಾಡು ಗ್ರಾ.ಪಂ. ವ್ಯಾಪ್ತಿಯ ಜಿ.ಪಂ.ಸರಕಾರಿ ಹಿರಿಯ ಪ್ರಾಥಮಿಕ ಶಾಲೆ
ಉಡುಪಿ ವಿಡಿಯೋ ಪ್ರಕರಣದ ಸಮಗ್ರ ತನಿಖೆಗೆ ಆಗ್ರಹಿಸಿ ವಿಶ್ವ ಹಿಂದೂ ಪರಿಷತ್ ಬಜರಂಗದ ವತಿಯಿಂದ ಉಡುಪಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನಾ ಸಭೆಯಲ್ಲಿ ಭಾಷಣ ಮಾಡಿದ ಶರಣ್ ಪಂಪ್‍ವೆಲ್ ಮತ್ತು ದಿನೇಶ್ ಮೆಂಡನ್ ಮೇಲೆ ಪೊಲೀಸರು ಸುಮೊಟೊ ಕೇಸ್ ದಾಖಲು ಮಾಡಿರುವುದು ಖಂಡನೀಯ ಎಂದು ಬಜರಂಗದಳದ ಪ್ರಾಂತ ಸಂಯೋಜಕ ಸುನಿಲ್ ಕೆ.ಆರ್ ಖಂಡಿಸಿದ್ದಾರೆ. ಅವರು ಉಡುಪಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಖಂಡನೆ ವ್ಯಕ್ತಪಡಿಸಿದರು. ಹಿಂದೂ ಸಮಾಜದ ಮೇಲೆ ಆಗುತ್ತಿರುವ
ಪುತ್ತೂರು : ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸಬೇಕು ಎನ್ನುವ ಒತ್ತಾಯಗಳು ಊರ್ಜಿತದಲ್ಲಿರುವ ಸಮಯದಲ್ಲಿ ತುಳು ಭಾಷೆ, ಲಿಪಿಯಲ್ಲಿ ಹಲವಾರು ಕೃತಿಗಳು ಬರಲಾರಂಭಿಸಿದೆ. ನೇಪತ್ಯಕ್ಕೆ ಸರಿದಿದ್ದ ತುಳು ಲಿಪಿಯನ್ನು ಮತ್ತೆ ಪರಿಚಯಿಸುವ ಕಾರ್ಯ ಈಗಾಗಲೇ ನಡೆದಿದ್ದು, ಈ ಸಾಲಿಗೆ ಇನ್ನೊಂದು ಹೊಸ ಪ್ರಯತ್ನ ಸೇರ್ಪಡೆಗೊಂಡಿದೆ. ಭಗವದ್ಧೀತೆಯ 18 ಶ್ಲೋಕ ಮತ್ತು ಸಾರವನ್ನು ತುಳು ಲಿಪಿಯಲ್ಲಿ ಮತ್ತು ಕನ್ನಡ ಲಿಪಿಯ ಮೂಲಕ ತುಳುವಿನಲ್ಲಿ ಬರೆಯಲಾಗಿದ್ದು,