ಹೈಬ್ರಿಡ್ ಜಾನುವಾರುಗಳ ಹುಟ್ಟಿದ 3-4ದಿನಗಳ ಸುಮಾರು 10-12 ಗೋವಿನ ಗಂಡು ಕರುಗಳನ್ನು ಯರುಕೋಣೆ ಸಮೀಪದ ಆಲಗೆದ್ದಕೇರಿಯ ಕಲ್ಲುಕ್ವಾರಿ ಮಧ್ಯೆ ಬಿಟ್ಟು ಹೋದ ಘಟನೆ ನಡೆದಿದೆ. 2 ಕರುಗಳು ನೀರು ಆಹಾರ ಇಲ್ಲದೆ ಸತ್ತು ಹೋಗಿದೆ. ಕೆಲವು ಕರುಗಳು ಹಸಿವಿನಿಂದ ನಿತ್ರಾಣ ಗೊಂಡಿದ್ದು ಸ್ಥಳೀಯರು ನೀರು ಕುಡಿಸಿ, ಹುಲ್ಲು ನೀಡಿ ಉಪಚರಿಸಿದ್ದರು.ನಂತರ ಬೈಂದೂರು
ಮೂಡುಬಿದಿರೆಯ ಆದರ್ಶ ಗ್ರಾಮಾಭಿವೃದ್ಧಿ ಮತ್ತು ಸೇವಾ ಸಂಸ್ಥೆಯ ಆಶ್ರಯದಲ್ಲಿ ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನ ಶಿಬಿರವು ಸಮಾಜ ಮಂದಿರದಲ್ಲಿ ನಡೆಯಿತು. ಮಂಗಳೂರು ದಿಶಾ ಸೆಂಟರ್ ಫಾರ್ ಕ್ಯಾರಿಯರ್ ಕೌನ್ಸಿಲಿಂಗ್ ಆಂಡ್ ಟ್ರೈನಿಂಗ್ ನ ಸಂಪನ್ಮೂಲ ವ್ಯಕ್ತಿ ರಾಜೇಶ್ವರಿ ಶೆಟ್ಟಿ ಅವರು ವೃತ್ತಿ ಮಾರ್ಗದರ್ಶನದ ಕುರಿತು ಮಾತನಾಡಿ ಜೀವನದಲ್ಲಿ ವಿದ್ಯಾರ್ಥಿಗಳು ನಿರ್ದಿಷ್ಟವಾದ ಗುರಿಯನ್ನು ಹೊಂದಿರಬೇಕು. ಗುರಿಯನ್ನಿಟ್ಟುಕೊಂಡರೆ ಸಾಲದು ಅದನ್ನು ತಲುಪಲು ಸತತ
ಕರಾವಳಿ ಅಂದಾಕ್ಷಣ ನೆನಪಾಗೋದೇ ಕಡಲು. ಇಲ್ಲಿನ ಕಡಲಿನ ಮೀನುಗಾರಿಕೆಯಲ್ಲಿ ಕೋಟಿಗಟ್ಟಲೆ ಮೌಲ್ಯದ ಮೀನುಗಾರಿಕೆ ಪ್ರತೀ ವರ್ಷ ನಡೆಯುತ್ತಿದೆ. ಅದೆμÉ್ಟೂೀ ಮಂದಿ ಮೀನುಗಾರರು ಇದನ್ನೆ ನಂಬಿಕೊಂಡು ಭವಿಷ್ಯ ರೂಪಿಸಿಕೊಂಡಿದ್ದಾರೆ. ಮೀನುಗಾರಿಕೆಯೇ ಕರಾವಳಿಯ ಮುಖ್ಯ ಉದ್ಯಮ. ಇದೀಗ ಜೂನ್ 1ರಿಂದ ಜುಲೈ 31ರವರೆಗೆ ಅಂದ್ರೆ ಎರಡು ತಿಂಗಳುಗಳ ಕಾಲ ತಾತ್ಕಾಲಿಕವಾಗಿ ಮೀನುಗಾರಿಕೆಯನ್ನು ನಿಷೇಧಿಸಲಾಗಿದೆ. ಮೀನುಗಾರಿಕೆಯ ಖುತುಮಾನ ಅಂತ್ಯಗೊಳ್ಳಲಿದ್ದು, ಮೀನುಗಾರಿಕಾ ಬೋಟುಗಳು
ಮುಂಗಾರು ಮಳೆ ಎದುರಿಸಲು ದಕ್ಷಿಣ ಕನ್ನಡ ಜಿಲ್ಲಾಡಳಿತ ಸಜ್ಜಾಗಿದೆ. ಪ್ರಕೃತಿ ವಿಕೋಪ ಸಮರ್ಥವಾಗಿ ನಿರ್ವಹಿಸಲು ಬೇಕಾದ ಎಲ್ಲಾ ರೀತಿ ಸಿದ್ಧತೆಯನ್ನು ನಡೆಸಲಾಗಿದೆ ಎಂದು ಜಿಲ್ಲಾಧಿಕಾರಿ ರವಿ ಕುಮಾರ್ ಎಂ.ಆರ್ ಹೇಳಿದರು. ವಿ4ನ್ಯೂಸ್‍ನೊಂದಿಗೆ ಮಾತನಾಡಿದ ಅವರು, ಈಗಾಗಲೇ ಸ್ಪೀಕರ್ ಯು.ಟಿ.ಖಾದರ್ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಮಟ್ಟದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ಸಭೆಯನ್ನು ನಡೆಸಲಾಗಿದ್ದು, ಇದರಲ್ಲಿ ಸ್ಪೀಕರ್ ಅವರು ಕೆಲವೊಂದು
ಭಯೋತ್ಪಾದಕ ಕೃತ್ಯಕ್ಕೆ ಗಲ್ಫ್ ರಾಷ್ಟ್ರಗಳಿಂದ ಹವಾಲಾ ಹಣ ಬಳಕೆ ಆರೋಪದ ಮೇಲೆ ಬುಧವಾರ ಬೆಳಗ್ಗೆ ಬಂಟ್ವಾಳ, ಬೆಳ್ತಂಗಡಿ, ಪುತ್ತೂರು, ವೇಣೂರು ಸೇರಿ ಒಟ್ಟು 16 ಕಡೆ ಎನ್ ಐಎ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದ.ಕ ಜಿಲ್ಲೆಯ 16 ಕಡೆಗಳಲ್ಲಿ ಸ್ಥಳೀಯ ಪೊಲೀಸ್ ಆಧಿಕಾರಿಗಳ ನೆರವು ಪಡೆದು ಎನ್ ಐಎ ಅಧಿಕಾರಿಗಳು ದಾಳಿ ನಡೆಸಿ,ಮನೆ, ಕಚೇರಿ,ಹಾಗೂ ಆಸ್ಪತ್ರೆಗಳಲ್ಲಿ ಪರಿಶೀಲನೆ ನಡೆಸಿದ್ದಾರೆ.ಕಳೆದ ಕೆಲ ಸಮಯದಿಂದ ಎನ್ ಐಎ ದಕ್ಷಿಣ ಭಾರತದ ಪಿಎಫ್ ಐ ಹವಾಲಾ ಹಣ ಜಾಲ
ದೆಹಲಿಯಲ್ಲಿ ನಡೆದ ಕ್ರೀಡಾಪಟುಗಳ ಮೇಲಿನ ಪೊಲೀಸ್ ದೌರ್ಜನ್ಯ ಕರಾಳ ದಿನ. ಇದನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದು ಕಾಂಗ್ರೆಸ್ ಮುಖಂಡೆ, ಮಾಜಿ ಮೇಯರ್ ಕವಿತಾ ಸನಿಲ್ ಆಕ್ರೋಶ ವ್ಯಕ್ತಪಡಿಸಿದರು. ಅವರು ಮಂಗಳೂರು ನಗರದ ಮಲ್ಲಿಕಟ್ಟೆಯಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. ಮೋದಿ ಸರ್ಕಾರ ಹಾಗೂ ದೆಹಲಿ ರಾಜ್ಯ ಸರ್ಕಾರ ಕ್ರೀಡಾಪಟುಗಳ ಮೇಲೆ ದೌರ್ಜನ್ಯ ಮಾಡಿರುವುದು ಸರಿಯಲ್ಲ. ದೇಶವನ್ನು ಪ್ರತಿನಿಧಿಸುತ್ತಿರುವ ಕ್ರೀಡಾಪಟುಗಳ
ಕರಾವಳಿ ಸಿನಿಮಾಸ್ ಲಾಂಛನದಲ್ಲಿ ಎಚ್.ಡಿ .ಆರ್ಯ ನಿರ್ದೇಶನದಲ್ಲಿ ತಯಾರಾದ `ಪಿರ್ಕಿಲು’ ತುಳು ಸಿನಿಮಾ ಮೇ 26 ರಂದು ಕರಾವಳಿಯಾದ್ಯಂತ ಬಿಡುಗಡೆಯಾಗಲಿದೆ. ಸಿನಿಮಾದ ಪ್ರೀಮಿಯರ್ ಶೋ ನಗರದ ಭಾರತ್ ಸಿನಿಮಾಸ್‍ನಲ್ಲಿ ನಡೆಯಿತು. ಸತೀಶ್ ಪೆರ್ನೆ ಹಾಗೂ ಶಿವಪ್ರಸಾದ್ ಇಜ್ಜಾವು ನಿರ್ಮಾಣದಲ್ಲಿ ತಯಾರಾದ ಈ ಸಿನಿಮಾ ಹಾಸ್ಯಭರಿತ ಕೌಟುಂಬಿಕ ಕತೆಯ ಎಳೆಯನ್ನು ಹೊಂದಿದೆ. ಊರಿನ ಜನರಿಂದ ಪಿರ್ಕಿಲು ಕರೆಸಿಕೊಳ್ಳುವ ಹುಡುಗರು ಏನೆಲ್ಲ ಅವಾಂತರ ಸೃಷ್ಟಿಸುತ್ತಾರೆ
ಕರಾವಳಿ ಸಿನಿಮಾಸ್ ಲಾಂಛನದಲ್ಲಿ ಸತೀಶ್ ಪೆರ್ನೆ ಮತ್ತು ಶಿವಪ್ರಸಾದ್ ಇಜ್ಜಾವು ನಿರ್ಮಾಣದಲ್ಲಿ ತಯಾರಾದ ಪಿರ್ಕಿಲು ತುಳು ಸಿನಿಮಾ ಮೇ.26ರಂದು ಕರಾವಳಿ ಜಿಲ್ಲೆಯಾದ್ಯಂತ ತೆರಕಾಣಲಿದೆ ಎಂದು ನಿರ್ದೇಶಕ ಹೆಚ್.ಡಿ ಆರ್ಯ ಹೇಳಿದರು. ಅವರು ಮಂಗಳೂರಿನ ಪ್ರೆಸ್‍ಕ್ಲಬ್‍ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಾಸ್ಯ ಮತ್ತು ಕೌಟುಂಬಿಕ ಕಥಾ ಹಂದರ ಹೊಂದಿರುವ ಚಿತ್ರ ಇದ್ದಾಗಿದ್ದು, ಪಿರ್ಕಿಲು ಎಂದು ಊರಿನ ಜನರಿಂದ ಕರೆಸಿಕೊಳ್ಳುವ ಹುಡುಗರು ಏನೆಲ್ಲ
ಕರಾವಳಿ ಜಿಲ್ಲೆಯಲ್ಲಿ ಪಶ್ಚಿಮಘಟ್ಟದಿಂದ ಹರಿದು ಬರುವ50 ಕ್ಕೂ ಹೆಚ್ಚು ಜೀವ ನದಿಗಳಿಂದ ವರ್ಷದಿಂದ ವರ್ಷಕ್ಕೆ ನದಿ ತೀರದ ಭೂಮಿಗಳು ಮಳೆಗಾಲದಲ್ಲಿ ಬರುವ ಬಾರೀ ಪ್ರವಾಹದಿಂದ ನದಿ ತೀರದ ಭೂಮಿಗಳು ನದಿಯ ಒಡಲು ಸೇರಿ ಮಣ್ಣು ನಾಶವಾಗುತ್ತಿದೆ. ಉಡುಪಿ ಜಿಲ್ಲೆಯ ಬ್ರಹ್ಮಾವರ ಭಾಗದಲ್ಲಿ ಹರಿಯುವ 3 ನದಿಗಳಾದ ಸೀತಾ . ಸ್ವರ್ಣಾ ಮತ್ತು ಮಡಿ ಸಾಲು ನದಿಗಳಿಂದ ಕಳೆದ ಹಲವಾರು ವರ್ಷದಿಂದ ನದಿ ತೀರದ ಕೃಷಿ ಭೂಮಿ , ತೆಂಗಿನ ತೋಟ ನದಿಯ ಒಡಲು ಸೇರುತ್ತಿದೆ . ಸೀತಾ […]
ಯೋಧ ಮೋಷನ್ ಬ್ಯಾನರ್ ಅಡಿಯಲ್ಲಿ ಸಾಯಿ ಕೃಷ್ಣ ಕುಡ್ಲ ಅವರು ಬರೆದು ನಿರ್ದೇಶಿಸಿರುವ ತುಳು ಚಲನಚಿತ್ರ ‘ಗೋಸ್ಮರಿ ಫ್ಯಾಮಿಲಿ’ ತುಳು ಸಿನಿಮಾ ಮೇ 18ರಂದು ಕರಾವಳಿಯಾದ್ಯಂತ ಚಿತ್ರಮಂದಿರದಲ್ಲಿ ಬಿಡುಗಡೆಯಾಗಲಿದೆ. ತುಳುವಿನ ಬಹುನಿರೀಕ್ಷಿತ ಸಿನಿಮಾ ಗೋಸ್ಮರಿ ಫ್ಯಾಮಿಲಿ ಮೇ 18ರಂದು ತೆರೆ ಮೇಲೆ ಬರಲಿದೆ. ಇಷ್ಟು ದಿನ ಕಾತರದಿಂದ ಕಾಯುತ್ತಿದ್ದ ಸಿನಿ ಪ್ರೇಕ್ಷಕರು ಗೋಸ್ಮರಿ ಫ್ಯಾಮಿಲಿಯ ಸಿನಿಮಾವನು ಮೇ 18ರಿಂದ ವೀಕ್ಷಿಸಲಿದ್ದಾರೆ. ಶಕುಂತಲಾ ಆಂಚನ್