ಮೂಡುಬಿದಿರೆಯ ವಕೀಲರ ಸಂಘದ ವತಿಯಿಂದ ರೂ 3 ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ವಕೀಲರ ಭವನದ ಕಾಮಗಾರಿ ಅಚ್ಚುಕಟ್ಟಾಗಿ ಒಳ್ಳೆಯ ರೀತಿಯಲ್ಲಿ ನಡೆದಿದೆ ನಿಮಗೆ ಅಭಿನಂದನೆಗಳು ಎಂದು ಕಟ್ಟಡ ನಿರ್ಮಾಣದ ಗುತ್ತಿಗೆದಾರ, ಬಿಮಲ್ ಕನ್ಟ್ರಕ್ಷನ್ ನ ಪ್ರವೀಣ್ ಅವರನ್ನು ಸುಪ್ರಿಂ ಕೋಟ್ ೯ನ ಮುಖ್ಯ ನ್ಯಾಯಾಧೀಶ ಅಬ್ದುಲ್ ನಝೀರ್ ಅವರು ಅಭಿನಂದಿಸಿದ ಘಟನೆ
ಮೂಡುಬಿದಿರೆ: ಹಿರಿಯ ಯಕ್ಷಗಾನ ಕಲಾವಿದ ಪ್ರಸಂಗಕರ್ತ ಇರುವೈಲು ಕಟ್ಟಣಿಗೆ ಸಂಜೀವ ಪ್ರಭು(83) ಅವರು ಅಲ್ಪ ಕಾಲದ ಅನಾರೋಗ್ಯದಿಂದ ಭಾನುವಾರ ನಿಧನರಾಗಿದ್ದಾರೆ. ಇರುವೈಲು ಮೇಳವನ್ನು ಯಶಸ್ವಿಯಾಗಿ ಮುನ್ನಡೆಸಿ, ಸೇವಾ ರೂಪದಲ್ಲಿ ಕಟೀಲು ಮತ್ತು ಸುರತ್ಕಲ್ ಮೇಳಗಳಲ್ಲಿ ಸೇವೆ ಸಲ್ಲಿಸಿದ್ದರು. ಇರುವೈಲು ಕ್ಷೇತ್ರ ಮಹಾತ್ಮೆ, ನಾಗಲಿಂಗೇಶ್ವರ ಮಹಿಮೆ, ರಕ್ತೇಶ್ವರಿ ಕಾರ್ಣಿಕ ಸೇರಿದಂತೆ ಹಲವು ಯಕ್ಷಗಾನ ಪ್ರಸಂಗಗಳನ್ನು ರಚಿಸಿದ್ದ ಸಂಜೀವ ಪ್ರಭು ಅವರು ವೃತ್ತಿಯಲ್ಲಿ
ವಿದ್ಯಾಗಿರಿ ಮೂಡುಬಿದಿರೆಯಲ್ಲಿ ನಡೆಯುತ್ತಿರುವ ಭಾರತ್ ಸ್ಕೌಟ್ಸ್ ಮತ್ತು ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿ 2022 ಕಾರ್ಯಕ್ರಮದಲ್ಲಿ ಆಳ್ವಾಸ್ ರಂಗ ಅಧ್ಯಯನ ಕೇಂದ್ರ ನಿರ್ದೇಶಕ ಜೀವನ್ ರಾಂ ಸುಳ್ಯ ಅವರ ಸಾರಥ್ಯದಲ್ಲಿ ಕಳೆದ ನಾಲ್ಕು ದಿನಗಳಿಂದ 5 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ರಂಗ ತರಬೇತಿ ಶಿಬಿರ ಆಯೋಜಿಸಲಾಗುತ್ತಿದೆ. ಶ್ರೀಲಂಕಾ , ಕೊರಿಯಾ, ಸೇರಿದಂತೆ ದೇಶ ವಿದೇಶಗಳಿಂದ ಆಗಮಿಸಿದ ವಿದ್ಯಾರ್ಥಿಗಳಿಗೆ ರಂಗ ವ್ಯಾಯಾಮ, ಗೀತಾಭಿನಯ , ರಂಗ ಚಾಲನೆ ,
ಮೂಡುಬಿದಿರೆ: ಹಲವು ವಿಶೇಷಗಳಿಗೆ ಮುನ್ನುಡಿ ಬರೆಯಲಿರುವ, ಶೂನ್ಯತ್ಯಾಜ್ಯದತ್ತ ಗಮನವಿರಿಸಿಕೊಂಡು ಶಾಸಕ ಉಮಾನಾಥ ಕೋಟ್ಯಾನ್ ಅವರ ನೇತೃತ್ವದಲ್ಲಿ ಒಂಟಿಕಟ್ಟೆಯ ಕಡಲಕೆರೆ ನಿಸರ್ಗಧಾಮ, ವೀರರಾಣಿ ಅಬ್ಬಕ್ಕ ಸಂಸ್ಕೃತಿ ಗ್ರಾಮದಲ್ಲಿ ನಡೆಯಲಿರುವ 20ನೇ ವರ್ಷದ ಮೂಡುಬಿದಿರೆಯ ಪ್ರತಿಷ್ಠಿತ ಹೊನಲು ಬೆಳಕಿನ ” ಕೋಟಿ-ಚೆನ್ನಯ” ಜೋಡುಕರೆ ಕಂಬಳವು ಶನಿವಾರ ಬೆಳಿಗ್ಗೆ ಆರಂಭಗೊಂಡಿತು.ಚೌಟರ ಅರಮನೆಯ ಕುಲದೀಪ್ ಎಂ ಅವರು ಮುಹೂರ್ತವನ್ನು ನಡೆಸಿಕೊಟ್ಟು,
ಮೂಡುಬಿದಿರೆ : ದೈವಗಳಿಗೆ ಹಾಕಿದ ಹೂವಿನ ಹಾರಗಳನ್ನು ಸಂಗ್ರಹಿಸಿ ಇಡಲು ಅಪೂರ್ವ ಕೆತ್ತನೆಯ ” ಪುಷ್ಪ ದಂಡಿಗೆ ” ಯನ್ನು ತೋಡಾರು ಕೊಡಮಣಿತ್ತಾಯ ದೈವಸ್ಥಾನಕ್ಕೆ ಯಕ್ಷಧ್ರುವ ಪಟ್ಲ ಫೌಂಡೇಶನ್ ನ ಮೂಡುಬಿದಿರೆ ಘಟಕದ ಸಂಚಾಲಕ ಕಾರಮೊಗರು ಗುತ್ತು ಪ್ರೇಮನಾಥ ಮಾರ್ಲರು ಶುಕ್ರವಾರ ಸೇವಾರೂಪವಾಗಿ ಸಮರ್ಪಿಸಿದರು. ಮೂಡುಬಿದಿರೆ ದೇವಕೀ ಲಕ್ಷ್ಮಿ ಮಿಲ್ ನ ಮಾಲಕರಾಗಿರುವ ಪ್ರೇಮನಾಥ ಮಾರ್ಲ ಅವರು ತಮ್ಮದೇ ಮಿಲ್ ನಲ್ಲಿ ನಿರ್ಮಿಸಿರುವ ಈ ಪುಷ್ಪ ದಂಡಿಗೆಯು
ಕರ್ನಾಟಕದ ಮೂಡುಬಿದಿರೆಯ ಆಳ್ವಾಸ್ ಕ್ಯಾಂಪಸ್‍ನಲ್ಲಿ ನಡೆಯುತ್ತಿರುವ ಸ್ಕೌಟ್ ಮತ್ತು ಗೈಡ್ಸ್ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಯನ್ನು ಸೌತ್ ಕೊರಿಯಾದಿಂದ ತಾಯಿ ಮಗ ಪ್ರತಿನಿಧಿಸಿದ್ದಾರೆ.ಒಟ್ಟು 7 ಜನ ಪ್ರತಿನಿಧಿಗಳು 2 ತಿಂಗಳ ಹಿಂದೆಯೇ ಕರ್ನಾಟಕಕ್ಕೆ ಬಂದಿರುವುದಾಗಿ ತಿಳಿಸಿದ ಚಾ ಸಾಂಗೋಕ್, ಇಲ್ಲಿ ನಡೆಯುತ್ತಿರುವ ಸ್ಕೌಟ್ಸ್ ಗೈಡ್ಸ್ ನ ಕಾರ್ಯಕ್ರಮ ಉತ್ತಮವಾಗಿ ನಡೆಯುತ್ತಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳು ಮನಸಿಗೆ ಹಿತವನ್ನು ನೀಡಿದೆ. ಊಟೋಪಚಾರದ
ಅದೊಂದು ಕಮ್ಮಾರಿಕೆಯ ಸ್ಟಾಲ್. ಅದರೊಳಗಡೆ ಮಲಗಿಕೊಂಡಿರುವ ಎರಡು ನಾಯಿಗಳು, ಇನ್ನೊಂದು ಕಡೆಯಲ್ಲಿ ಹುಡುಗಿಯೊಬ್ಬಳು ಕತ್ತಿಗಾಗಿ ಮರದ ಕೈಯನ್ನು ತಯಾರಿಸುತ್ತಿರುವುದು, ಇನ್ನೊಂದು ಕಡೆಯಲ್ಲಿ ಮಹಿಳೆಯೊಬ್ಬರು ಕಮ್ಮಾರಿಕೆಗೆ ಬೇಕಾದ ವಸ್ತುಗಳ ತಯಾರಿಕೆಯಲ್ಲಿ ನಿರತರಾಗಿರುವುದು ಮತ್ತೊಂದು ಕಡೆಯಲ್ಲಿ ಗಂಡಸು ಮತ್ತು ಮಗ ಸೇರಿಕೊಂಡು ಕತ್ತಿಯನ್ನು ರೆಡಿ ಮಾಡುತ್ತಿರುವ ದೃಶ್ಯವೊಂದು ಎಲ್ಲರ ಗಮನ ಸೆಳೆಯುತ್ತಿರುವುದು ಜಾಂಬೂರಿಯಲ್ಲಿ. ಹೀಗೆ ಕಮ್ಮಾರಿಕೆಯಲ್ಲಿ
ಮೂಡುಬಿದಿರೆ: ಸ್ವಾತಂತ್ರೋತ್ಸವ ಅಮೃತ ಮಹೋತ್ಸವದ ಸವಿ ನೆನಪಿಗಾಗಿ ಮಂಜೂರಾದ ರೂ.33.50 ಲಕ್ಷ ಅನುದಾನದಲ್ಲಿ ಮೂಡುಬಿದಿರೆಯ ಮುಖ್ಯ ರಸ್ತೆಯಲ್ಲಿ ಅಳವಡಿಸಲಾದ ದಾರಿದೀಪಗಳನ್ನು ಶಾಸಕ ಉಮಾನಾಥ ಎ.ಕೋಟ್ಯಾನ್ ಲೋಕಾರ್ಪಣೆಗೊಳಿಸಿದರು. ಪುರಸಭಾ ಅಧ್ಯಕ್ಷ ಪ್ರಸಾದ್ ಕುಮಾರ್, ಉಪಾಧ್ಯಕ್ಷೆ ಸುಜಾತ, ಸ್ಥಾಯಿ ಸಮಿತಿ ಅಧ್ಯಕ್ಷ ನಾಗರಾಜ ಪೂಜಾರಿ,ಪುರಸಭಾ ಸದಸ್ಯರಾದ ರಾಜೇಶ್ ನಾಯ್ಕ್, ದಿವ್ಯಾ ಜಗದೀಶ್, ಸ್ವಾತಿ ಪ್ರಭು, ಸೌಮ್ಯ ಶೆಟ್ಟಿ, ಎಂಸಿಎಸ್ ಬ್ಯಾಂಕಿನ ಅಧ್ಯಕ್ಷ
ವಿದ್ಯಾಗಿರಿಯ ಆಳ್ವಾಸ್ ನ ಕ್ಯಾಂಪಸ್ ನ ಆವರಣದಲ್ಲಿ ಅಂತರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿ ಆರಂಭಗೊಳ್ಳಲು ಇನ್ನು ಒಂದು ದಿನವಷ್ಟೇ ಬಾಕಿಯಿದೆ. ಆದರೆ ವಿವಿಧ ಜಾತಿಯ ಬಣ್ಣ ಬಣ್ಣದ ಹೂ-ಗಿಡಗಳಿಂದ ತುಂಬಿದ ಲೋಕವೊಂದು ಈಗಾಗಲೇ ಸೃಷ್ಟಿಯಾಗುವ ಮೂಲಕ ಕಣ್ಮನ ಸೆಳೆಯುತ್ತಿದೆ. ವಿವಿಧ ರಾಷ್ಟ್ರಗಳಿಂದ ಬರುವ ವಿದ್ಯಾರ್ಥಿಗಳು ತರಬೇತುದಾರರಿದ್ದಾರೆ. ಪ್ರದರ್ಶನಗೊಳ್ಳುವ ಕಲಾ ವೈಭವಗಳೂ ಅಷ್ಟೇ… ಅದೂ ಅಂತಾರಾಷ್ಟ್ರೀಯಕ್ಕೆ ಒತ್ತು ನೀಡಲಾಗಿದೆ. ಜೊತೆಗೆ ಇಲ್ಲಿರುವ
ಮೂಡುಬಿದಿರೆ: ವಲಯ ಮುಸ್ಲಿಂ ಸೌಹಾರ್ದ ಸಮಿತಿಯ ವತಿಯಿಂದ 20 ವಾಹನಗಳಲ್ಲಿ 5 ಲಕ್ಷ ಬೆಲೆಬಾಳುವ ಹೊರೆಕಾಣಿಕೆಯನ್ನು ದಫ್ ಕುಣಿತದ ಮೂಲಕ ಹೊರೆಕಾಣಿಕೆಯೊಂದಿಗೆ ಸಲ್ಲಿಸಲಾಯಿತು. ಸಮಿತಿಯ ಅಧ್ಯಕ್ಷ ಅಬ್ದುಲ್ ರಹಿಮಾನ್ ಕಾರ್ಯದರ್ಶಿ ಶಫಿ, ಜೈನುದ್ದೀನ್ ಸೇರಿದಂತೆ 1000 ಮಂದಿ ಭಾಗಿಯಾಗಿದ್ದಾರೆ.