ಪುತ್ತೂರು: ತುಂಬು ಗರ್ಭಿಣಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಹೃದಯವಿದ್ರಾವಕ ಘಟನೆ ನಗರದ ಚಿಕ್ಕಪುತ್ತೂರಿನಲ್ಲಿ ಜೂ. 15ರ ರಾತ್ರಿ ವರದಿಯಾಗಿದೆ. ಸುರತ್ಕಲ್ ಮೂಲದ ರೇಷ್ಮಾ ಅವರನ್ನು ನಾಲ್ಕು ವರ್ಷಗಳ ಹಿಂದೆ ಚಿಕ್ಕಪುತ್ತೂರಿನ ಚಿಂತನ್ ಅವರಿಗೆ ವಿವಾಹ ಮಾಡಿಕೊಡಲಾಗಿತ್ತು. ಈ ದಂಪತಿಗೆ ಓರ್ವ ಪುತ್ರಿಯಿದ್ದಾಳೆ. ಚಿಂತನ್, ರೇಷ್ಮಾ ಮತ್ತು ಅವರ ಪುತ್ರಿ
ಕಡಬ: ಕಡಬ ತಾಲೂಕು ಆಲಂಕಾರು ಗ್ರಾಮದ ಕಕ್ವೆ ಎಂಬಲ್ಲಿ ಮೇ 30ರಂದು ಸುರಿದ ಧಾರಕಾರ ಮಳೆಗೆ ರಸ್ತೆ ಕೊಚ್ಚಿ ಹೋಗಿ10 ಮನೆಗಳ ಬಾಹ್ಯ ಸಂಪರ್ಕ ಕಳೆದುಕೊಂಡಿದೆ. ಘಟನೆ ನಡೆದು ವಾರ ಕಳೆದರೂ ಸಮಸ್ಯೆ ಪರಿಹಾರವಾಗದೆ ಜನ ಪರದಾಡುತ್ತಿದ್ದಾರೆ. ಮೇ 30ರಂದು ಸಾಯಂಕಾಲದಿಂದ ತಡರಾತ್ರಿಯವರೆಗೆ ತಾಲೂಕಿನ ಕುಂತೂರು, ಆಲಂಕಾರು, ಸವಣೂರು, ಕೊಯಿಲ, ರಾಮಕುಂಜ, ಕಾಣಿಯೂರು ಮೊದಲಾದೆಡೆ ಎಡಬಿಡದೆ ಧಾರಕಾರ ಮಳೆಯಾಗಿತ್ತು. ಪರಿಣಾಮ ಬಹುತೇಕ
ಪುತ್ತೂರಿನ ನರಿಮೊಗರು ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಯ ವಿದ್ಯಾರ್ಥಿಸಮರ್ಥ್ ಶೆಟ್ಟಿ ಅವರು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625ರಲ್ಲಿ 550 ಅಂಕಗಳನ್ನು ಪಡೆದು ಡಿಸ್ಟಿಕ್ಷನ್‌ನಲ್ಲಿ ಉತ್ತೀರ್ಣರಾಗಿದ್ದಾರೆ. ಪುತ್ತೂರಿನ ಬೆಳ್ಳಾರೆ ನಿವಾಸಿಯಾಗಿರುವ ಪುಷ್ಪರಾಜ್ ಶೆಟ್ಟಿ ಮತ್ತು ಪ್ರಮೀಳಾ ಶೆಟ್ಟಿ ದಂಪತಿಯ ಸುಪುತ್ರನಾಗಿರುವ ಸಮರ್ಥ್ ಶೆಟ್ಟಿ ಅವರು ಎಸ್‌ಎಸ್‌ಎಲ್‌ಸಿ ಮಹತ್ತರ ಸಾಧನೆ ಮಾಡಿದ್ದಾರೆ. ಕನ್ನಡದಲ್ಲಿ 95,ಇಂಗ್ಲಿಷ್‌ನಲ್ಲಿ97, ಹಿಂದಿಯಲ್ಲಿ 92,
ಬನ್ನೂರು: ಕೃಷ್ಣ ನಗರದಲ್ಲಿ ಅಲುಂಬುಡದಲ್ಲಿ ಕಾರ್ಯಚರಿಸುತ್ತಿರುವ ಎವಿಜಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ದಿನಾಂಕ 16 ರಂದು ಬೇಸಿಗೆ ಶಿಬಿರ ಸಮಾರೋಪ ಸಮಾರಂಭ ಕಾರ್ಯಕ್ರಮವು ನಡೆಯಿತು. ನಗರಸಭಾ ಪೂರ್ವದ್ಯಕ್ಷರಾದ ಶ್ರೀ ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ ಇವರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅವರು ಮಾತನಾಡುತ್ತಾ ಪ್ರತಿಯೊಬ್ಬರ ಪ್ರಯತ್ನದ ಹಿಂದೆ ದೃಢ ನಿರ್ಧಾರ ಹಾಗೂ ಮುಂದೆ ಒಂದು ದೃಢವಾದ ಗುರಿ ಇರಬೇಕು. ಹಾಗಾದಾಗ ನಾವು ಜೀವನದಲ್ಲಿ ಮುಂದೆ ಬರಲು
ಶತಮಾನದ ಹೊಸ್ತಿಲಲ್ಲಿರುವ ಲಿಟ್ಲ್ ಫ್ಲವರ್ ಹಿ ಪ್ರಾ ಶಾಲೆ ದರ್ಬೆ ಪುತ್ತೂರು ಇಲ್ಲಿ ಶಾಲಾ ಸ್ಕೌಟ್, ಗೈಡ್ , ಕಬ್ ಮತ್ತು ಬುಲ್ ಬುಲ್ ವಾರ್ಷಿಕ ಮೇಳವು ಎರಡು ದಿನ ಅದ್ದೂರಿಯಾಗಿ ನೆರವೇರಿತು.ಮೊದಲ ದಿನ 9.00 ಗಂಟೆಗೆ ಶಾಲಾ ಸಂಚಾಲಕಿ ಭಗಿನಿ ಪ್ರಶಾಂತಿ ಬಿ. ಎಸ್ ಅಧ್ಯಕ್ಷತೆಯಲ್ಲಿ ಧ್ವಜಾರೋಹಣ ನೇರವೇರಿತು. ಶಾಲಾ ಸ್ಕೌಟ್, ಗೈಡ್ , ಕಬ್ ಮತ್ತು ಬುಲ್ ಬುಲ್ ದಳದಿಂದ 350 ಮಕ್ಕಳು ಭಾಗವಹಿಸಿದರು. ನಂತರ ನಡೆದ ಉದ್ಘಾಟನಾ ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯರಾಗಿರುವ
ನೆಲ್ಯಾಡಿ: ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಗುಂಡ್ಯ ಸಮೀಪದ ಅಡ್ಡಹೊಳೆ ಎಂಬಲ್ಲಿ ಚಲಿಸುತ್ತಿರುವ ಲಾರಿಯಿಂದ ಜಿಗಿದು ನಿರ್ವಾಹಕ ಸಾವನ್ನಪ್ಪಿದ ಘಟನೆ ಮಂಗಳವಾರ ಮುಂಜಾನೆ ನಡೆದಿದೆ. ಲಕ್ಷ್ಮಣನ್ ಸೆಂಗುತ್ತುವನ್(46) ಚಿನ್ನತೂಬುರ್ ನಾಗಪಟ್ಟಿನಮ್, ತಮಿಳುನಾಡಿನ ವ್ಯಕ್ತಿ ಎಂದು ಗುರುತಿಸಲಾಗಿದೆ. ತಮಿಳುನಾಡಿನ ಕೃಷ್ಣಗಿರಿಯಿಂದ ಕಲ್ಲಂಗಡಿಯನ್ನು ತುಂಬಿಕೊಂಡು ಮಂಗಳೂರಿಗೆ ಬರುತ್ತಿದ್ದ ಲಾರಿಯು ಗುಂಡ್ಯ ಸಮೀಪದ ಅಡ್ಡಹೊಳೆ ತಲುಪುತಿದ್ದಂತೆ ಏಕಾಏಕಿಯಾಗಿ
ಪುತ್ತೂರು: ಪುತ್ತೂರು ಉಪವಿಭಾಗದ ನೂತನ ಸಹಾಯಕ ಆಯುಕ್ತರಾಗಿ ಸ್ಟೆಲ್ಲಾ ವರ್ಗೀಸ್ ಆಗಮಿಸಲಿದ್ದಾರೆ. ಹಿರಿಯ ಸಹಾಯಕ ಆಯುಕ್ತರಾಗಿದ್ದ ಜುಬಿನ್ ಮೊಹಪಾತ್ರ ಅವರು ವರ್ಗಾವಣೆಗೊಂಡ ಬಳಿಕ ಶ್ರವಣ್ ಕುಮಾರ್ ಪ್ರೊಬೆಷನರಿ ಸಹಾಯಕ ಆಯುಕ್ತರಾಗಿದ್ದರು. ಇದೀಗ ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾಗಿರುವ ಕೆಎಎಸ್ ಕಿರಿಯ ಶ್ರೇಣಿಯ ಅಧಿಕಾರಿ ಸ್ಟೆಲ್ಲಾ ವರ್ಗೀಸ್ ಅವರನ್ನು ಪುತ್ತೂರು, ಸುಳ್ಯ, ಬೆಳ್ತಂಗಡಿ ಮತ್ತು ಕಡಬ ತಾಲೂಕುಗಳನ್ನು
ಪುತ್ತೂರು: ‘ದಾಲ ಪೊಡ್ಯೋರ್ಚಿ ಪೂರ ಕಮ್ಮಿ ಆಪುಂಡು ಹಹಹ’ ಎಂದೇ ಪುತ್ತೂರು ಸಹಿತ ಹತ್ತೂರಿನ ಜನಮನ ಗೆದ್ದ ನಗುಮೊಗದ ಕಂಪೌಂಡರ್ ಡಾಕ್ಟರ್ ಎಂದೇ ಖ್ಯಾತರಾದ ಹಾರಾಡಿ ನಿವಾಸಿ ಕಂಪೌಂಡರ್ ನರಸಿಂಹ ಭಟ್ (82ವ) ಅವರು ಫೆ.3 ರ ರಾತ್ರಿ ಅಸ್ತಂಗತರಾಗಿದ್ದಾರೆ. ತನ್ನ 16ನೇ ವಯಸ್ಸಿನಿಂದ ಪುತ್ತೂರಿನ ಚಿಕಿತ್ಸಾಲಯವೊಂದರಲ್ಲಿ ಕಾಂಪೌಂಡರ್ ಆಗಿ 68 ವರ್ಷ ಸೇವೆ ಸಲ್ಲಿಸಿದ ನರಸಿಂಹ ಭಟ್ ಅವರು ನಿವೃತ್ತಿಗೊಂಡು ಮನೆಯಲ್ಲಿದ್ದರು. ಮೃತರು ಪತ್ನಿ ಕಾವೇರಮ್ಮ,
ಉತ್ತರಾಖಂಡದ ಹರಿದ್ವಾರದಲ್ಲಿ ನಡೆಯಲಿರುವ 38ನೇ ನ್ಯಾಷನಲ್ ಗೇಮ್ಸ್ -2025 ರಲ್ಲಿ ರಾಷ್ಟ್ರೀಯ ಮಹಿಳೆಯರ ಕಬಡ್ಡಿ ಚಾಂಪಿಯನ್‌ಶಿಪ್ ನಲ್ಲಿ ಭಾಗವಹಿಸಲು ಕರ್ನಾಟಕ ತಂಡಕ್ಕೆ ಕಾಣಿಯೂರಿನ ಸೌಮ್ಯ ಪೂಜಾರಿ ರವರು ಆಯ್ಕೆ ಆಗಿರುತ್ತಾರೆ. ಇವರು ಕಾಣಿಯೂರು ಅಬೀರ ರಾಮಣ್ಣ ಪೂಜಾರಿ ಮತ್ತು ಲಲಿತಾ ದಂಪತಿಗಳ ಸುಪುತ್ರಿ ಹಾಗೂ ಸುರೇಶ್ ಅಬೀರ ಮತ್ತು ಪುತ್ತೂರಿನಲ್ಲಿ ಪೊಲೀಸ್ ಇಲಾಖೆಯ ಸಿಬ್ಬಂದಿಯಾಗಿರುವ ಸಂತೋಷ್ ಕುಮಾರ್ ರವರ ಸಹೋದರಿ. ಇವರು ಕಾಣಿಯೂರು ಸರಕಾರಿ ಹಿರಿಯ
ಪುತ್ತೂರು: ಎವಿಜಿ ಅಸೋಸಿಯೇಷನ್ ನ ಬೆಳ್ಳಿ ಹಬ್ಬದ ಪ್ರಯುಕ್ತ ಬನ್ನೂರಿನ ಎವಿಜಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜನವರಿ 19 ಆದಿತ್ಯವಾರದಂದು ತಾಲೂಕು ಮಟ್ಟದ ಚಿತ್ರೋತ್ಸವ ಸ್ಪರ್ಧೆಯು ನಡೆಯಿತು. ಸಮಾರೋಪ ಸಮಾರಂಭದ ಮೊದಲಿಗೆ ಒಂದು ಗಂಟೆಯ ಕಾಲಾವಧಿಯೊಂದಿಗೆ ವಿವಿಧ ಶಾಲೆಗಳಿಂದ ಪಾಲ್ಗೊಂಡಂತಹ ವಿದ್ಯಾರ್ಥಿ ವಿದ್ಯಾರ್ಥಿನಿಯರ 5 ವಿಭಾಗಗಳ ಚಿತ್ರರಚನಾ ಸ್ಪರ್ಧೆಯು ನಡೆಯಿತು. ಸ್ಪರ್ಧೆಯಲ್ಲಿ ಪೂರ್ವ ಪ್ರಾಥಮಿಕದಿಂದ 10 ನೇ ತರಗತಿವರೆಗಿನ 175 ಮಂದಿ ವಿದ್ಯಾರ್ಥಿ