Home Posts tagged #puttur (Page 62)

ವಲ್ಡ್ ವಾಲಿಬಾಲ್ ಚಾಂಪಿಯನ್ ಶಿಪ್ ಗೆ ಆಯ್ಕೆ ಪ್ರಕ್ರಿಯೆ- ಇಬ್ರಾಹಿಂ ಗೋಳಿಕಟ್ಟೆ

ಪುತ್ತೂರು: ಫೆಡರೇಶನ್ ಆಫ್ ಇಂಟರ್‌ನ್ಯಾಶನಲ್ ವಾಲಿಬಾಲ್ ಇವರ ಆಶ್ರಯದಲ್ಲಿ ಆ. 24ರಿಂದ ಸೆ. 2ರವರೆಗೆ ಇರಾನಿನ ತೆಹ್ರಾನ್‌ನಲ್ಲಿ 19 ವರ್ಷ ವಯೋಮಿತಿಯ ಹುಡುಗರ ವರ್ಲ್ಡ್ ವಾಲಿಬಾಲ್ ಚಾಂಪಿಯನ್‌ಶಿಪ್ ನಡೆಯಲಿದೆ. ಇದರಲ್ಲಿ ಭಾಗವಹಿಸುವ ಭಾರತೀಯ ತಂಡವನ್ನು ಆಯ್ಕೆ ಮಾಡುವ ನಿಟ್ಟಿನಲ್ಲಿ ಒಡಿಸ್ಸಾದ ಭುವನೇಶ್ವರದ ಕಿಟ್ಟ್ ಯುನಿವರ್ಸಿಟಿಯಲ್ಲಿ ಜುಲೈ 22 ಮತ್ತು 23ರಂದು

ಪುತ್ತೂರು ಸರಕಾರಿ ಆಸ್ಪತ್ರೆಯ ವಠಾರದಲ್ಲಿ ಅಡ್ಡಾದಿಡ್ಡಿ ವಾಹನ ಪಾರ್ಕಿಂಗ್:ರೋಗಿಯನ್ನು ಕೊಂಡೊಯ್ಯುತ್ತಿದ್ದ ಆಂಬ್ಯುಲೆನ್ಸ್‌ಗೆ ಅಡ್ಡಿ

ಪುತ್ತೂರು: ಪುತ್ತೂರು ಸರಕಾರಿ ಆಸ್ಪತ್ರೆಯ ವಠಾರದಲ್ಲಿ ಅಡ್ಡಾದಿಡ್ಡಿ ವಾಹನ ಪಾರ್ಕ್ ಮಾಡಿದ ಹಿನ್ನಲೆಯಲ್ಲಿ ತುರ್ತಾಗಿ ಹೋಗುವ ಆಂಬ್ಯುಲೆನ್ಸ್‌ಗೆ ಅಡ್ಡಿಯಾದ ಘಟನೆ ನಡೆದಿದೆ. ಪುತ್ತೂರು ಸರಕಾರಿ ಆಸ್ಪತ್ರೆಯ ಬಳಿ ಒಂದು ಕಡೆ ಕೋವಿಡ್ ಲಸಿಕೆ ನೀಡಿಕೆ ಮತ್ತೊಂದು ಕಡೆ ಉತ್ತಮ ಸೇವೆ ಸಿಗುವ ಹಿನ್ನಲೆಯಲ್ಲಿ ಸರಕಾರಿ ಆಸ್ಪತ್ರೆಗೆ ದಿನದಿಂದ ದಿನಕ್ಕೆ ಸಾರ್ವಜನಿಕರ ಸಂಖ್ಯೆ ಹೆಚ್ಚಾಗುತ್ತಿದು, ಆಸ್ಪತ್ರೆಗೆ ಬರುವವರು ಆಸ್ಪತ್ರೆಯ ವಠಾರದ ದಾರಿಯಲ್ಲೆ ಅಡ್ಡಾದಿಡ್ಡಿ ವಾಹನ

ಪುತ್ತೂರಿನ ಬಹುಮುಖ ಸಾಧಕ ವಿದ್ವಾನ್ ಮಂಜುನಾಥ್‌ಗೆ ಇಂಡಿಯಾ ಮತ್ತು ಏಷ್ಯಾ ಬುಕ್ ಆಫ್ ರೆಕಾರ್ಡ್ ಪ್ರಮಾಣಪತ್ರ

ಪುತ್ತೂರು: ಸಂಗೀತ, ನೃತ್ಯ, ಬರೆಹ, ಹಾಡುಗಾರಿಕೆ, ಕಥೆ, ಕವನ, ಯಕ್ಷಗಾನ ಹೀಗೆ ಬಹುಮುಖ ಪ್ರತಿಭೆಯಾಗಿರುವ ವಿದ್ವಾನ್ ಮಂಜುನಾಥ ಎನ್ ಪುತ್ತೂರು ಅವರ ಪ್ರತಿಭೆಯನ್ನು ಇಂಡಿಯಾ ಬುಕ್ ಆಫ್ ರೆಕಾರ್ಡ್ ಮತ್ತು ಏಷ್ಯಾ ಬುಕ್ ಆಫ್ ರೆಕಾರ್ಡ್ ದಾಖಲಿಸಿಕೊಂಡಿದೆ. ಭರತನಾಟ್ಯದಲ್ಲಿ ವಿಶಿಷ್ಟ ಆಸಕ್ತಿಯನ್ನು ಹೊಂದಿರುವ ಅವರು 23 ನಿಮಿಷದಲ್ಲಿ 20 ವಿಭಿನ್ನ ತಾಳ ಭರತನಾಟ್ಯದಲ್ಲಿ ಹಲವು ಪರಿಕಲ್ಪನೆಗಳನ್ನು ಇಟ್ಟುಕೊಂಡು ಮುನ್ನಡೆಯುತ್ತಿರುವ ಮಂಜುನಾಥ ಅವರು ಎರಡು ಕೈಗಳಿಂದ

ಪುತ್ತೂರಿನಲ್ಲಿ ಅಮರ್ ಜವಾನ್ ಜ್ಯೋತಿಗೆ ಹಾನಿ: ದೂರು ದಾಖಲು

ಪುತ್ತೂರು: ಪುತ್ತೂರಿನ ಕಿಲ್ಲೇ ಮೈದಾನದ ಬಳಿ ಇರುವ ಅಮರ್ ಜವಾನ್ ಜ್ಯೋತಿಗೆ ಹಾನಿ ಆಗಿರುವ ಘಟನೆ ಇಂದು ಬೆಳಿಗ್ಗೆ ಬೆಳಕಿಗೆ ಬಂದಿದೆ. ಪುತ್ತೂರಿನ ನಟ್ಟೋಜ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ಮುಂದಾಳತ್ವದ ಅಂಬಿಕಾ ವಿದ್ಯಾಲಯದ ಆಶ್ರಯದಲ್ಲಿ ಭಾರತೀಯ ವೀರ ಯೋಧರ ಸ್ಮರಣಾರ್ಥ 2017 ರಲ್ಲಿ ಲೋಕಾಪರ್ಣೆಗೊಂಡ ಅಮರ್ ಜವಾನ್ ಜ್ಯೋತಿಗೆ ಕಿಡಿಗೇಡಿಗಳು ಹಾನಿ ಮಾಡಿದ್ದಾರೆ. ಇಂದು ಬೆಳಿಗ್ಗೆ ಅಂಬಿಕಾ ವಿದ್ಯಾಸಂಸ್ಥೆಯ ಮೆನೇಜರ್ ರವೀಂದ್ರರವರು ಸ್ಮಾರಕದ ಶುಚಿತ್ವಕ್ಕೆ

ತೈಲ ಬಾಂಡ್ ಬಗ್ಗೆ ಸುಳ್ಳು ಪ್ರಚಾರದಿಂದ ಸಮಾಜಕ್ಕೆ ತಪ್ಪು ಸಂದೇಶ: ಕಾವು ಹೇಮನಾಥ ಶೆಟ್ಟಿ 

ಪುತ್ತೂರು: ಇಂಧನ ಬೆಲೆ ಏರಿಕೆಯ ಪ್ರಸ್ತುತ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣದಲ್ಲಿ ತೈಲ ಬಾಂಡ್ ಬಗ್ಗೆ ಸುಳ್ಳು ಹೇಳಿಕೆಯನ್ನು ಪ್ರಚಾರ ಪಡಿಸಿ ಸಮಾಜಕ್ಕೆ ತಪ್ಪು ಸಂದೇಶ ನೀಡುತ್ತಾ ಜನರಿಗೆ ತಪ್ಪು ದಾರಿಗೆ ಎಳೆಯುವ ಪ್ರಯತ್ನ ನಡೆಯುತ್ತಿದೆ ಎಂದು ಕೆಪಿಸಿಸಿ ಸಂಯೋಜಕರಾದ ಪುತ್ತೂರು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಆರೋಪಿಸಿದ್ದಾರೆ. ಅವರು ಪುತ್ತೂರಿನ ರೋಟರಿ ಸಭಾಂಗಣದಲ್ಲಿ ಪತ್ರಕರ್ತರೊಂದಿಗೆ ನಡೆದ `ಪೆಟ್ರೋಲ್ ಬೆಲೆ ಏರಿಕೆ-ಆಯಿಲ್

ಪುತ್ತೂರಿನ ನೈತ್ತಾಡಿಯ ಕಲ್ಲಗುಡ್ಡೆಯಲ್ಲಿ ಅಕ್ರಮ ಮದ್ಯ ಮಾರಾಟ: ಭಾರಿ ಪ್ರಮಾಣದ ಮದ್ಯ ವಶ 

ಪುತ್ತೂರು: ಮನೆಯ ಸಮೀಪದ ಗುಡ್ಡೆಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವ ಕುರಿತು ಖಚಿತ ಮಾಹಿತಿ ಮೇರೆಗೆ ಕೆಮ್ಮಿಂಜೆಯ ನೈತ್ತಾಡಿಯ ಕಲ್ಲಗುಡ್ಡೆ ಎಂಬಲ್ಲಿ ಪುತ್ತೂರು ನಗರ ಠಾಣಾ ಪೊಲೀಸರು ದಾಳಿ ನಡೆಸಿದ್ದು, ರೂ. 26,118 ಮೌಲ್ಯದ ಅಕ್ರಮ ಮದ್ಯವನ್ನು ವಶಕ್ಕೆ ಪಡೆದು, ಇಬ್ಬರು ಆರೋಪಿಗಳನ್ನು ಬಂಧಿಸಿರುವ ಘಟನೆ  ನಡೆದಿದೆ. ಕೆಮ್ಮಿಂಜೆ ಗ್ರಾಮದ ನೈತಾಡಿ ದಿ.ಬಟ್ಯಪ್ಪ ಪೂಜಾರಿ ಅವರ ಪುತ್ರ ಬಾಬು ಪೂಜಾರಿ(48ವ) ಮತ್ತು ಕಲ್ಲಗುಡ್ಡೆ ನಿವಾಸಿ ಚಲ್ಲ ಎಂಬವರ ಪುತ್ರ

ಸಂಪ್ಯದಲ್ಲಿ ನೇಗಿಲು ಹಿಡಿದು ಉಳುಮೆ ಮಾಡಿದ ಪುತ್ತೂರು ಶಾಸಕ ಸಂಜೀವ ಮಠಂದೂರು

ಪುತ್ತೂರು: ಪೊರ್ತು ಕಂತ್ಂಡ್ ಓ ಎರು ಮಗನೇ…ಇದು ಸಂಪ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ಪಕ್ಕದಲ್ಲೇ ಹಡೀಲು ಬಿದ್ದ ಗದ್ದೆಯಲ್ಲಿ ಭಾನುವಾರ ಕೇಳಿಬಂದ ಸಂಧಿಯ ಕೆಲವು ಸಾಲು.ಶಾಸಕ ಸಂಜೀವ ಮಠಂದೂರು ಅವರು ಉಟ್ಟಿದ್ದ ಪಂಚೆಯನ್ನು ಎತ್ತಿಕಟ್ಟಿ, ಗದ್ದೆಗೆ ಇಳಿದು, ಎತ್ತುಗಳನ್ನು ಕಟ್ಟಿದ್ದ ನೇಗಿಲನ್ನು ಕೈಗೆ ತೆಗೆದುಕೊಳ್ಳುತ್ತಿದ್ದಂತೆ, ಉಳುಮೆ ಮಾಡುತ್ತಿದ್ದ ಬೇಸಾಯಗಾರರ ಉತ್ಸಾಹ ನೂರ್ಮಡಿಗೊಂಡಿತು. ಸಂಧಿಯ ಸಾಲುಗಳು ಪುಂಖಾನು ಪುಂಖವಾಗಿ ಗದ್ದೆಯ ತುಂಬಾ

ಪುತ್ತೂರಿನ ಸರ್ಕಾರಿ ಆಸ್ಪತ್ರೆಗೆ ಆಮ್ಲಜನಕ ಕಾನ್ಸಂಟ್ರೇಟರ್, ವಿಟಿಂ ಕಿಟ್ ಹಸ್ತಾಂತರ

ಪುತ್ತೂರು: ಬೆಂಗಳೂರಿನ ಭಟ್ ಬಯೋಟೆಕ್ ಹಾಗೂ ತಾಲೂಕಿನ ಶಾಂತಿಗೋಡು ಗ್ರಾಮದ ನವಚೇತನ ರಿಟೈರ್‌ಮೆಂಟ್ ಟೌನ್‌ಶಿಪ್ ವತಿಯಿಂದ ಇಲ್ಲಿಯ ಸಾರ್ವಜನಿಕ ಸರಕಾರಿ ಆಸ್ಪತ್ರೆಗೆ ಐದು ಆಮ್ಲಜನಕ ಕಾನ್ಸಂಟ್ರೇಟರ್ ಹಾಗೂ ಎರಡು ಸಾವಿರ ವಿಟಿಎಂ ಕಿಟ್‌ಗಳನ್ನು ಕೊಡುಗೆಯಾಗಿ ನೀಡಲಾಯಿತು.ಸರಳ ಕಾರ್ಯಕ್ರಮದಲ್ಲಿ ಭಟ್ ಬಯೋಟೆಕ್ ಸಂಸ್ಥೆಯ ಡಾ.ಶ್ಯಾಮ್ ಭಟ್ ಶಾಸಕ ಸಂಜೀವ ಮಠಂದೂರು ಅವರಿಗೆ ಆಮ್ಲಜನಕ ಕಾನ್ಸಂಟ್ರೇಟರ್‌ನ್ನು ಹಸ್ತಾಂತರಿಸಿದರು. ಬಳಿಕ ಮಾತನಾಡಿದ ಶಾಸಕ ಸಂಜೀವ ಮಠಂದೂರು,

ಪುತ್ತೂರಿನಲ್ಲಿ ಗಾಂಧಿ ಪ್ರತಿಮೆಗೆ ಅವಮಾನ

ಪುತ್ತೂರು: ಪುತ್ತೂರಿನ ಹೃದಯಭಾಗದಲ್ಲಿರುವ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿಯಿರುವ ಗಾಂಧಿ ಪ್ರತಿಮೆಯನ್ನು ವಿಕೃತಗೊಳಿಸಿರುವ ಘಟನೆ ಜು.೧ರಂದು ಬೆಳಕಿಗೆ ಬಂದಿದೆ. ಕಿಡಿಗೇಡಿಗಳು ಗಾಂಧಿ ಪ್ರತಿಮೆಯ ಕನ್ನಡಕ ತೆಗೆದು ಪ್ರತಿಮೆಯ ತಲೆಗೆ ಇಟ್ಟು ಹಾಗೂ ಪ್ರತಿಮೆಯ ತಲೆಗೆ ಟೀ ಶರ್ಟ್‌ನ್ನು ಇಟ್ಟು ಗಾಂಧೀಜಿಯನ್ನು ಅವಮಾನಗೊಳಿಸಿದ್ದಾರೆ. ಪುತ್ತೂರಿನ ಗಾಂಧಿ ಕಟ್ಟೆ ಸಮಿತಿಯವರು ಪುತ್ತೂರು ನಗರ ಪೊಲೀಸ್ ಠಾಣೆಗೆ ಘಟನೆಯ ಬಗ್ಗೆ ಸಂಬಂಧಿಸಿದಂತೆ ದೂರು ನೀಡಿದ್ದಾರೆ.

ಸಂಸದ ನಳಿನ್ ಕುಮಾರ್ ಸಹೋದರ ನವೀನ್ ಅನಾರೋಗ್ಯದಿಂದ ನಿಧನ

ಪುತ್ತೂರು: ಬಿಜೆಪಿ ರಾಜ್ಯಾಧ್ಯಕ್ಷರಾದ ದ.ಕ. ಸಂಸದ ನಳಿನ್‌ ಕುಮಾರ್‌ ಕಟಿಲ್‌ ರವರ ಸಹೋದರ, ಪಾಲ್ತಾಡಿ ಗ್ರಾಮದ ಕುಂಜಾಡಿ ನಿವಾಸಿ ನವಿನ್‌ ಕುಮಾರ್‌(57 ) ಜೂ.28 ರಂದು ಸಂಜೆ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧರಾದರು. ಇವರು ಕೃಷಿಕರು ಹಾಗೂ ಸಾಮಾಜಿಕ ಕಾರ್ಯಕರ್ತರಾಗಿದ್ದರು.ಮೃತರು ತಾಯಿ ಸುಶೀಲಾವತಿ, ಪತ್ನಿ ಗೀತಾ, ಪುತ್ರಿ ಸಮೃದ್ಧಿ, ಸಹೋದರ ನಳಿನ್‌ ಕುಮಾರ್‌ ಕಟೀಲ್‌, ಸಹೋದರಿ ನಂದಿನಿರವರನ್ನು ಅಗಲಿದ್ದಾರೆ.