ಶಿವಪಾಡಿ ಶ್ರೀ ಉಮಾಮಹೇಶ್ವರ ಕ್ಷೇತ್ರದಲ್ಲಿ ಫೆಬ್ರವರಿ 22, 2023 ರ ಬುಧವಾರ ಬೆಳಿಗ್ಗೆ 06:30 ಕ್ಕೆ ‘ಅತಿರುದ್ರ ಮಹಾಯಾಗ’ದ ಮಹಾಸಂಕಲ್ಪದಿಂದ ಮೊದಲ್ಗೊಂಡು, 121 ಋತ್ವಿಜರಿಂದ ಮಹಾನ್ಯಾಸಪೂರ್ವಕ ಶ್ರೀ ರುದ್ರ ಪುರಶ್ಚರಣ ಪ್ರಾರಂಭಗೊಳ್ಳಲಿದೆ. ನಂತರ ದೇವಸ್ಥಾನದ ಪ್ರಾಂಗಣದಲ್ಲಿ ಶ್ರೀದೇವರಿಗೆ ನವಕಪ್ರಧಾನ ಹೋಮಪುರಸ್ಸರ ನವಕಲಶ ಅಭಿಷೇಕ, ಮಹಾಪೂಜೆ
ಶಿವಪಾಡಿಯ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಮಹೋತ್ಸವದ ಧಾರ್ಮಿಕ ಕಾರ್ಯಕ್ರಮವು ಪ್ರಾತಃಕಾಲ 06:30 ಕ್ಕೆ ರುದ್ರಾಭಿಷೇಕ, ಪಂಚಾಮೃತ ವಿಶೇಷ ಸೇವೆಗಳೊಂದಿಗೆ ಪ್ರಾರಂಭಗೊಂಡಿತು. ಸಹಸ್ರಾರು ಭಕ್ತಾಭಿಮಾನಿಗಳು ಸನ್ನಿಧಾನಕ್ಕೆ ಆಗಮಿಸಿ, ದೇವರ ಪ್ರಾರ್ಥನೆಗೈದು, ಫೆಬ್ರವರಿ 22 ರಿಂದ ಮಾರ್ಚ್ 05 ರವರೆಗೆ ನಡೆಯಲಿರುವ ಅತಿರುದ್ರ ಮಹಾಯಾಗಕ್ಕೆ ಯಾಗ ದ್ರವ್ಯಗಳನ್ನು ಸಮರ್ಪಣೆಗೈದು, ಆಂಧ್ರ ಪ್ರದೇಶದ ನೆಲ್ಲೂರು ಜಿಲ್ಲೆಯಿಂದ ಉಮಾಮಹೇಶ್ವರ ಸನ್ನಿಧಾನಕ್ಕೆ
ಹಿಮಾಲಯದಲ್ಲಿ ವಾಸಿಸುತ್ತಿರುವ ನಾಥ ಸಂಪ್ರದಾಯದ ಅವಧೂತ ಮಹಾಸಭಾದ ಬಾಬಾ ಶ್ರೀ ಸೋಮರನಾಥ ಬಾಬಜಿ ಇವರು ಶಿವಪಾಡಿಯ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ನಡೆಯುತ್ತಿರುವ ಅತಿರುದ್ರ ಮಹಾಯಾಗದ ಪೂರ್ವ ತಯಾರಿಯನ್ನು ನೋಡಿ ಈ ಮಹಾಕಾರ್ಯ ಆ ಶಿವನ ಪ್ರೇರಣೆ ಮತ್ತು ಅನುಗ್ರಹದಿಂದ ನೆರವೇರುತ್ತಿದೆ. ಶಿವನನ್ನು ಇಲ್ಲಿ ಭಜಿಸುವುದರಿಂದ ಈ ಪ್ರದೇಶ ಪಾವನ ತಾಣವಾಗಿ ಪರಿವರ್ತಿತವಾಗುತ್ತದೆ. ಅತಿರುದ್ರ ಮಹಾಯಾಗ ಯಶಸ್ವಿಯಾಗಲಿ, ಲೋಕ ಕಲ್ಯಾಣಾರ್ಥವಾಗಿ ನಡೆಯುತ್ತಿರುವ ಈ





















