Home Posts tagged #sulya (Page 5)

ಸುಳ್ಯ ಎಸ್‌ಐ ಆಗಿ ಈರಯ್ಯ ದೂಂತೂರು ಅಧಿಕಾರ ಸ್ವೀಕಾರ

ಸುಳ್ಯ: ಸುಳ್ಯ ಪೊಲೀಸ್ ಠಾಣಾ ಉಪ ನಿರೀಕ್ಷಕರಾಗಿ ಈರಯ್ಯ ದೂಂತೂರು ಅವರು ಅಧಿಕಾರ ವಹಿಸಿಕೊಂಡಿದ್ದಾರೆ. ಸೋಮವಾರ ಈರಯ್ಯ ದೂಂತೂರು ಅವರಿಗೆ ವರ್ಗಾವಣರಗೊಂಡ ಎಸ್‌ಐ ದಿಲೀಪ್ ಜಿ.ಆರ್ ಅಧಿಕಾರ ಹಸ್ತಾಂತರಿಸಿದರು. ಕಳೆದ ಎರಡು ವರ್ಷಗಳಿಂದ ಸುಳ್ಯ ಎಸ್ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ದಿಲೀಪ್ ಜಿ.ಆರ್. ಅವರಿಗೆ ವರ್ಗಾವಣೆಯಾಗಿದೆ. ಈರಯ್ಯ ದೂಂತೂರು ಅವರನ್ನು ಸುಳ್ಯ

ಕಡಬ ಸಮುದಾಯ ಆಸ್ಪತ್ರೆ – ಡಯಾಲಿಸಿಸ್ ಕೇಂದ್ರ ಶೀಘ್ರ ಆರಂಭಿಸುವ ಭರವಸೆ : ಭಾಗೀರಥಿ ಮುರುಳ್ಯ

ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರು ಕಡಬ ಸಮುದಾಯ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಆಸ್ಪತ್ರೆಯ ಸಿಬ್ಬಂದಿ ಕೊರತೆ ನೀಗಿಸಲು ಹಾಗೂ ಡಯಾಲಿಸಿಸ್ ಕೇಂದ್ರ ಆರಂಭಿಸಲು ಶೀರ್ಘ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ|ಸುಚಿತ್ರಾ ರಾವ್ ಆಸ್ಪತ್ರೆಯ ಸಿಬಂದಿ ಕೊರತೆ ಹಾಗೂ ಇತರ ಅಗತ್ಯತೆಗಳ ಕುರಿತು ಶಾಸಕಿಗೆ ಮಾಹಿತಿ ನೀಡಿದರು. ಆಸ್ಪತ್ರೆಗೆ ಹೊಸ ಡಿಜಿಟಲ್ ಎಕ್ಸ್‍ರೇ ಯಂತ್ರ ನೀಡಲಾಗಿದ್ದರೂ

ಸುಳ್ಯ ತಾಲೂಕು ಕಾರ್ಯನಿತ ಪತ್ರಕರ್ತರ ಸಂಘಕ್ಕೆ ಬೆಳ್ಳಿ ಹಬ್ಬದ ಸಂಭ್ರಮ

ಸುಳ್ಯ::ಸುಳ್ಯ ತಾಲೂಕು ಕಾರ್ಯನಿತ ಪತ್ರಕರ್ತರ ಸಂಘಕ್ಕೆ 25 ವರ್ಷಗಳು ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಜುಲೈ 19 ರಂದು ಬೆಳ್ಳಿ ಹಬ್ಬ ಕಾರ್ಯಕ್ರಮ ಆಚರಿಸಲು ನಿರ್ಧರಿಸಲಾಗಿದೆ. ಬೆಳ್ಳಿ ಹಬ್ಬ ಕಾರ್ಯಕ್ರಮದ ಅಂಗವಾಗಿ ಜು.19 ರಂದು ಮಾಧ್ಯಮ ವಿಚಾರ ಸಂಕಿರಣ, ಸುಳ್ಯ ಮೂಲದ ಪತ್ರಕರ್ತರ ಸಮ್ಮಿಲನ, ಮಾಜಿ ಅಧ್ಯಕ್ಷರುಗಳಿಗೆ ಸನ್ಮಾನ , ಸಾಂಸ್ಕೃತಿಕ ಕಾರ್ಯಕ್ರಮ ಸಹಿತ ದಿನ ಪೂರ್ತಿ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಧರಿಸಲಾಗಿದ್ದು, ವಿವಿಧ ಕ್ಷೇತ್ರಗಳ ಗಣ್ಯರು

ಕಡಬ :ಕೋಡಿಂಬಾಳ ಚರ್ಚಿನಲ್ಲಿ ಎಂಸಿಎ ದಿನಾಚರಣೆ ಮತ್ತು ಪರಿಸರ ದಿನಾಚರಣೆ

ಕಡಬ ಸಂತ ಜಾರ್ಜ್ ಮಲಂಕರ ಕ್ಯಾಥೋಲಿಕ್ ಚರ್ಚ್ ಕೋಡಿಂಬಾಳ ಇಲ್ಲಿನ ಎಂಸಿಎ ಘಟಕದ ನೇತೃತ್ವದಲ್ಲಿ ಎಂಸಿಎ ದಿನಾಚರಣೆ ಮತ್ತು ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ಎಂಸಿಎ ಕೋಡಿಂಬಾಳ ಘಟಕದ ಉಪಾಧ್ಯಕ್ಷ ಚಾಕೋ ವಿ.ಎಂ ಅವರು ಸಭಾಧ್ಯಕ್ಷತೆ ವಹಿಸಿದ ಕಾರ್ಯಕ್ರಮದಲ್ಲಿ ಕೋಡಿಂಬಾಳ ಚರ್ಚ್‌ ಧರ್ಮಗುರುಗಳಾದ ವಂ.ರೆ.ಫಾ. ಜಾರ್ಜ್ ವಡಕೇದಿಲ್, ಪುತ್ತೂರು ಧರ್ಮಪ್ರಾಂತ್ಯದ ಎಂಸಿಎ ಅಧ್ಯಕ್ಷರಾದ ಬೈಜು ಬೆಂಗಳೂರು, ಕಾರ್ಯದರ್ಶಿ ಪ್ರಕಾಶ್ ಕೆ.ವೈ. ನೆಲ್ಯಾಡಿ, ಸಿಸ್ಟರ್

ಕಡಬ ಪತ್ರಕರ್ತರಿಂದ ಶಾಸಕಿಗೆ ಅಭಿನಂದನೆ

ಕಡಬ: ಸೋಮವಾರ ಕಡಬಕ್ಕೆ ಆಗಮಿಸಿದ್ದ ಸುಳ್ಯ ವಿಧಾನ ಸಭಾ ಕ್ಷೇತ್ರದ ನೂತನ ಶಾಸಕಿ ಭಾಗೀರಥಿ ಮುರಳ್ಯ ಅವರನ್ನು ಕಡಬ ತಾಲೂಕು ಪತ್ರಕರ್ತರ ಸಂಘದ ವತಿಯಿಂದ ಅಭಿನಂದಿಸಲಾಯಿತು. ಕಡಬ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಕಡಬ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ನಾಗರಾಜ್ ಎನ್.ಕೆ ಅವರ ನೇತೃತ್ವದಲ್ಲಿ ಶಾಸಕರನ್ನು ಹೂಗುಚ್ಚ ನೀಡಿ ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಶಾಸಕರು ಕ್ಷೇತ್ರದ ಅಭಿವೃದ್ಧಿಗೆ ಪತ್ರಕರ್ತರ ಸಹಕಾರ ಕೋರಿದರು. ಈ ವೇಳೆ

ಸುಳ್ಯ ಪದವು:ಮರದ ದಿಮ್ಮಿ ಮೈಮೇಲೆ ಬಿದ್ದು ವ್ಯಕ್ತಿ ಮೃತ್ಯು

ಸುಳ್ಯಪದವು: ಮನೆಯ ಸಮೀಪ ಮರದದಿಮ್ಮಿಯನ್ನು ವಾಹನಕ್ಕೆ ಲೋಡ್ ಮಾಡುತ್ತಿರುವಾಗ ಮರದ ದಿಮ್ಮಿ ಮೈ ಮೇಲೆ ಬಿದ್ದು ಪಡುವನ್ನೂರು ಗ್ರಾಮದ ಸುಳ್ಯ ಪದವು ಬಟ್ಟ್ಯಂಗಳ ನಿವಾಸಿ ಗೋಪಾಲಕೃಷ್ಣ ಎಂಬವರು ಮೃತಪಟ್ಟ ಘಟನೆ ಇಂದು ಮುಂಜಾನೆ ನಡೆದಿದೆ. ತನ್ನ ಮನೆಯ ಸಮೀಪ ಇರುವ ಮಾವಿನ ಮರದ ದಿಮ್ಮಿಗಳನ್ನು ಜೆಸಿಬಿ ಮೂಲಕ ಟಿಪ್ಪರ್ ವಾಹನಕ್ಕೆ ಲೋಡ್ ಮಾಡಲಾಗಿತ್ತು. ಟಿಪ್ಪರ್ ವಾಹನದ ಹಿಂದಿನ ಬಾಗಿಲನ್ನು ಸರಿಪಡಿಸುವ ಸಂದರ್ಭದಲ್ಲಿ ಮರದ ದಿಮ್ಮಿ ಹಿಂದಕ್ಕೆ ಬಂದು ಮೈಮೇಲೆ ಬಿದ್ದು

ಸುಳ್ಯ. ಬೆಳ್ಳಾರೆ ಕಾಂಗ್ರೆಸ್ ವತಿಯಿಂದ ಬೆಳ್ಳಾರೆ ಯಲ್ಲಿ ವಿಜಯೋತ್ಸವ

ರಾಜ್ಯದಲ್ಲಿ ಇಂದು ಕಾಂಗ್ರೆಸ್ ಸರಕಾರದ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಮತ್ತು ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಹಾಗೂ ಎಂಟು ಜನ ಸಚಿವರಿಗೆ ಪ್ರಮಾಣವಚನ ವಿಜಯೋತ್ಸವ ಈ ಸಂದರ್ಭದಲ್ಲಿ ಸುನಿಲ್ ರೈ ಪುಡ್ಕಜೆ, ಹಮೀದ್ ಬೆಳ್ಳಾರೆ ಸಚಿನ್ ರಾಜ್ ಶೆಟ್ಟಿ ಪೆರುವಾಜೆ ಹಾಗೂ ಹಲವಾರು ಕಾಂಗ್ರೆಸ್ ಕಾರ್ಯಕರ್ತರು ಮುಖಂಡರು ಭಾಗಿಯಾಗಿದ್ದರು

ಬಿಜೆಪಿ ಅಭ್ಯರ್ಥಿ ಭಾಗೀರಥಿ ಮುರುಳ್ಯ, ಗುತ್ತಿಗಾರು ಪೇಟೆಯಲ್ಲಿ ಚುನಾವಣಾ ಪ್ರಚಾರ

ಭಾರತೀಯ ಜನತಾ ಪಾರ್ಟಿಯ ಚುನಾವಣಾ ಪ್ರಚಾರ ಪ್ರವಾಸದ ಸಲುವಾಗಿ ಸುಳ್ಯ ವಿಧಾನಸಭಾ ಕ್ಷೇತ್ರದ ಸುಳ್ಯ ತಾಲೂಕಿನ ಗುತ್ತಿಗಾರು ಮಹಾಶಕ್ತಿ ಕೇಂದ್ರ ವ್ಯಾಪ್ತಿಯ ಗುತ್ತಿಗಾರು ಪೇಟೆಯಲ್ಲಿ ಪಕ್ಷದ ಪ್ರಮುಖರು, ಕಾರ್ಯಕರ್ತರು, ಸ್ಥಳೀಯರೊಂದಿಗೆ ತೆರಳಿ ಬಹಿರಂಗ ಮತಯಾಚನೆ ಮಾಡಲಾಯಿತು. ಈ ಸಂದರ್ಭದಲ್ಲಿ ಪಕ್ಷದ ಹಿರಿಯರು, ಪ್ರಮುಖರು, ಕಾರ್ಯಕರ್ತರು, ಸ್ಥಳೀಯರು ಉಪಸ್ಥಿತರಿದ್ದರು.

ಅನಾರೋಗ್ಯ ಹಿನ್ನೆಲೆ ಆಸ್ಪತ್ರೆಗೆ ದಾಖಲಾದ ಸಚಿವ ಎಸ್. ಅಂಗಾರ

ಅನಾರೋಗ್ಯದಿಂದ ಬಳಲುತ್ತಿದ್ದ ಸಚಿವ ಅಂಗಾರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಜಠರದ ಅಲ್ಸರ್ ಕಾಯಿಲೆಯಿಂದ ಬಳಲುತ್ತಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದು, ಬುಧವಾರ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಅವರು ಆರೋಗ್ಯದಿಂದಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

ಹರಿವು ನಿಲ್ಲಿಸಿದ ಸುಳ್ಯದ ಜೀವನದಿ ಪಯಸ್ವಿನಿ

ಸುಳ್ಯ: ಸುಳ್ಯದ ಜೀವನದಿ ಪಯಸ್ವಿನಿಯು ಹರಿವು ನಿಲ್ಲಿಸಿದ್ದು ಇದೀಗ ಕಾಂತಮಂಗಲ, ದೊಡ್ಡೆರಿ ಹಾಗೂ ಬಸವನಪಾದೆಯ ಸುಮಾರು 125 ಮನೆಗಳಿಗೆ ಕಳೆದ ಕೆಲ ದಿನಗಳಿಂದ ನೀರು ವ್ಯತ್ಯಯವಾಗಿತ್ತು. ಇದನ್ನು ಸರಿ ಪಡಿಸಲು ಹಲವಾರು ವಿಧಗಳಲ್ಲಿ ಪ್ರಯತ್ನಿಸಿದ್ದರು ಅಷ್ಟರಲ್ಲಾಗಲೇ ಚುನಾವಣೆ ಘೋಷಣೆ ಆದ ಹಿನ್ನಲೆಯಲ್ಲಿ ಟ್ಯಾಂಕರ್ ಹಾಗೂ ಪಂಚಾಯತ್ ವಾಹನದಲ್ಲಿ ಕೆಲ ಮನೆಗಳಿಗೆ ನೀರು ಪೂರೈಕೆ ಮಾಡಲಾಗುತ್ತಿದ್ದು ಅದು ಕೂಡಾ ಕಷ್ಟಾ ಸಾಧ್ಯವಾದ ಹಿನ್ನಲೆಯಲ್ಲಿ ಗ್ರಾಮ ಪಂಚಾಯತ್